ನನಗೆ ವಿರೋಧ ಪಕ್ಷದ ಸರ್ಟಿಫಿಕೆಟ್ ಬೇಕಿಲ್ಲ, ಜವಾಬ್ದಾರಿ ಇದೆ
ರಾಜಕೀಯ ಬೇಡ ಅಂದರೂ ಘಟನೆ ಬಗ್ಗೆ ರಾಜಕೀಯ ಮಾಡ್ತಿದ್ದಾರೆ
ನಾಗಮಂಗಲದಲ್ಲಿ ಪರಿಸ್ಥಿತಿ ಹೇಗಿದೆ ಎಂದು ಸಚಿವರಿಂದ ಮಾಹಿತಿ
ಬೆಂಗಳೂರು: ಮಂಡ್ಯದ ನಾಗಮಂಗಲ ಘಟನೆಯನ್ನ ರಾಜಕೀಯ ಮಾಡಬೇಡಿ ಎಂದಿದ್ದರೂ ವಿಪಕ್ಷದವರು ರಾಜಕೀಯ ಮಾಡ್ತಿದ್ದಾರೆ. ಮಾಡಲಿ, ಅದನ್ನು ಹ್ಯಾಂಡಲ್ ಮಾಡೋದು ನಮ್ಗೂ ಗೊತ್ತಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಕಿಡಿಕಾರಿದ್ದಾರೆ.
ನಾಗಮಂಗಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು.. ವರದಿ ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಹಿರಿಯ ಅಧಿಕಾರಿಗಳು, ಡಿಜಿಯವರು, ಎಡಿಜಿ ಲಾ ಅಂಡ್ ಆರ್ಡರ್ ಇವರೆಲ್ಲ ಸೇರಿ ಸಭೆ ಮಾಡಿ ಸೂಚನೆ ಕೊಟ್ಟಿರುತ್ತಾರೆ. ಸರ್ಕಾರದಿಂದ ನಾವು ಕೂಡ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಸೂಚಿಸಿರುತ್ತೇವೆ. ನಾಗಮಂಗಲದಲ್ಲಿ ಕೆಎಸ್ಆರ್ಪಿ ವ್ಯಾನ್ ಸಮೇತ ಇದ್ದರು. ಘಟನೆ ನಡೆದು ಅರ್ಧ ಗಂಟೆಯಲ್ಲಿ ಎಸ್ಪಿ, ಐಜಿಯವರು ಸ್ಥಳಕ್ಕೆ ಬಂದು ತಕ್ಷಣ ಗಲಾಟೆ ನಿಲ್ಲಿಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದ್ದು ವರದಿ ಕೊಡಿ ಎಂದು ಕೇಳಿದ್ದೇವೆ ಎಂದರು.
ಇದನ್ನೂ ಓದಿ: ಮಗ ಜೈಲಿಗೆ.. ನಡು ರಸ್ತೆಯಲ್ಲಿ ಕುಸಿದುಬಿದ್ದ ತಾಯಿ.. ನಾಗಮಂಗಲದಲ್ಲಿ ಕುಟುಂಬಸ್ಥರ ಕಣ್ಣೀರು, ಹೈಡ್ರಾಮಾ..!
ನಾಗಮಂಗಲ ಈಗ ಕಂಟ್ರೋಲ್ನಲ್ಲಿದ್ದು ಮಾನಿಟರ್ ಮಾಡ್ತಿದ್ದಾರೆ. ಪೊಲೀಸರು ಅಲ್ಲಿ ಕ್ಯಾಂಪ್ ಮಾಡಿದ್ದಾರೆ. ಶಾಂತಿಯಿಂದ ಇದ್ದು ಶಾಂತಿ ಸಭೆ ಕೂಡ ಮಾಡ್ತಿದ್ದಾರೆ. ವರದಿ ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸ್ ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಲಾಗಿದೆ. ಘಟನೆಗೆ ಕಾರಣಗಳೇನು ಎಂಬುದರ ಕುರಿತು ವರದಿ ನೀಡುವಂತೆ ಈಗಾಗಲೇ ಸೂಚಿಸಿದ್ದೇನೆ. ವರದಿ ಬಂದ ನಂತರ ಕಾನೂನು ಚೌಕಟ್ಟಿನಲ್ಲಿ ಮುಲಾಜಿಲ್ಲದೇ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ. ಕಾನೂನಿಗಿಂತ ಯಾರು ದೊಡ್ಡವರಲ್ಲ. ಗಣೇಶನ ಹಬ್ಬ ಸೇರಿದಂತೆ ಬೇರೆ ಹಬ್ಬಗಳಲ್ಲಿ ಗೊಂದಲ ಸೃಷ್ಟಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಂತವರನ್ನು ಬಿಡಲ್ಲ. ಕಾನೂನು ಪ್ರಕಾರ ಅವರ ಮೇಲೆ ಕಟ್ಟುನಿಟ್ಟಾಗಿ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.
ಆಕಸ್ಮಿಕವಾಗಿ ಗೃಹಸಚಿವರಾಗಿ ಆಯ್ಕೆಯಾಗಿದ್ದಾರೆ ಎನ್ನುವ ಬಿಜೆಪಿ ನಾಕಯಕ ಹೇಳಿಕೆಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಗರಂ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಶಬ್ಧಗಳನ್ನು ಟ್ವಿಸ್ಟ್ ಮಾಡಿ ಹೇಳುವುದಕ್ಕೆ ಬರಲ್ಲ. ನಿಮಗೆ ಬೇಕಾದಂಗೆ ಟ್ವಸ್ಟ್ ಮಾಡಿಕೊಂಡರೆ ಏನು ಮಾಡೋಕೆ ಆಗಲ್ಲ. ನಮಗೆ ಜವಾಬ್ದಾರಿ ಇದೆ. ರಾಜ್ಯದಲ್ಲಿ ಜಾವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಇವರ ಸರ್ಟಿಫಿಕೆಟ್ ಬೇಕಾಗಿಲ್ಲ. ಘಟನೆಯನ್ನ ಯಾರಾದರೂ ಸಮರ್ಥನೆ ಮಾಡುತ್ತಾರಾ?. ಈಗಾಗಲೇ 52 ಜನರನ್ನು ಬಂಧಿಸಲಾಗಿದೆ. ಕನ್ನಡ ಭಾಷೆಯನ್ನು ಟ್ವಿಸ್ಟ್ ಮಾಡಿ, ಟರ್ನ್ ಮಾಡಿ, ಸಣ್ಣದು ಅಂದ್ರು, ದೊಡ್ಡದು ಅಂದ್ರು ವಿಪಕ್ಷದವರು ಹೇಳಲಿ. ನನಗೂ ಮಾತನಾಡೋಕೆ ಬರುತ್ತೆ, ನನಗು ಗೊತ್ತಿದೆ. ವಿರೋಧ ಪಕ್ಷದವರು ಇದರಲ್ಲಿ ರಾಜಕೀಯ ಮಾಡಬೇಡಿ ಎಂದು ಈಗಾಗಲೇ ಹೇಳಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ