newsfirstkannada.com

‘ಎಸ್.ಟಿ ಸೋಮಶೇಖರ್​ ಒಳ್ಳೇ ಕೆಲಸ ಮಾಡಿದ್ದಾರೆ.. ಆ ಪಕ್ಷದಲ್ಲಿ ಅವರಿಗೆ ಬೇಸರವಾಗಿದೆ’ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆ

Share :

17-08-2023

    ರಾಜಕೀಯದಲ್ಲಿ ಎಲ್ಲವೂ ಸಾಧ್ಯವಾಗಲಿದೆ

    ನಮ್ಮ ಪಕ್ಷದಲ್ಲಿ ಮೂರು ಬಾರಿ ಶಾಸಕರಾಗಿದ್ದರು

    ಬರಬಾರದು ಅಂತಾ ನಾವು ಅಡತಡೆ ಮಾಡಲ್ಲ

ಒಳ್ಳೆಯ ಕೆಲಸ ಮಾಡಿದ್ದಾರೆ

ಗೃಹ ಸಚಿವ ಜಿ.ಪರಮೇಶ್ವರ್ ಅವರು ಎಸ್.ಟಿ ಸೋಮಶೇಖರ್ ಕಾಂಗ್ರೆಸ್​​ ಸೇರುವ ವಿಚಾರವಾಗಿ ಮಾತನಾಡಿದ್ದಾರೆ. ನಾನು ಅವರನ್ನ ಸಂಪರ್ಕ ಮಾಡಿಲ್ಲ. ಅವರು ಕಾಂಗ್ರೆಸ್‌ ಗೆ ದುಡಿದಂತವರು. ನಾನು ಪಕ್ಷದ ಅಧ್ಯಕ್ಷನಾಗಿದ್ದಾಗ ಅವರನ್ನ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದೆ. ಒಳ್ಳೆಯ ಕೆಲಸ ಮಾಡಿದ್ದಾರೆ. ಅವರನ್ನ ಪಕ್ಷವು ಅದೇ ರೀತಿಯಲ್ಲಿ ನೋಡಿಕೊಂಡಿತ್ತು ಎಂದು ಹೇಳಿದ್ದಾರೆ.

ಅವರಿಗೆ ಆ ಪಕ್ಷದಲ್ಲಿ ಬೇಸರವಾಗಿದೆ

ಎಸ್.ಟಿ ಸೋಮಶೇಖರ್ ಕಾಂಗ್ರೆಸ್‌ ಪರ ಸಾಫ್ಟ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವರು, ಅವರು ನಮ್ಮ ಪಕ್ಷದಲ್ಲಿ ಮೂರು ಬಾರಿ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮುಂದೆ ಅವರು ಕಾಂಗ್ರೆಸ್‌ ಪಕ್ಷದಲ್ಲಿಯೇ ಉಳಿದಿದ್ರೆ ಅವರಿಗೂ ಈಗಾ ಸಚಿವ ಸ್ಥಾನ ಸಿಗಬಹುದಿತ್ತೇನೊ. ಈಗ ಅವರಿಗೆ ಆ ಪಕ್ಷದಲ್ಲಿ ಬೇಸರವಾಗಿದೆ ಎಂದು ಹೇಳಿದ್ದಾರೆ.

ರಾಜಕೀಯದಲ್ಲಿ ಎಲ್ಲವೂ ಸಾಧ್ಯವಾಗಲಿದೆ

ಬಳಿಕ ಮಾತನಾಡಿದ ಜಿ.ಪರಮೇಶ್ವರ್, ಅವರು ಪಕ್ಷಕ್ಕೆ ವಾಪಸ್ ಬರುತ್ತೇನೆಂದು ನಮ್ಮ ನಾಯಕರ ಜೊತೆ ಮಾತಾಡಿದ್ರೆ ನಾವೆಲ್ಲ ಒಪ್ಪುತ್ತೇವೆ. ಬರಬಾರದು ಅಂತಾ ನಾವು ಅಡತಡೆ ಮಾಡೋಕೆ ಹೋಗೋದಿಲ್ಲ. ಪಕ್ಷಕ್ಕೆ ಸ್ಥಾನವನ್ನ ನೋಡಿ ಬರ್ತಿನಿ ಎಂದು ಹೇಳಿಲ್ಲ. ನಮ್ಮ ಪಕ್ಷದ ಸಿದ್ದಾಂತ ಪಕ್ಷದ ನಾಯಕತ್ವದ ಮೇಲೆ ವಿಶ್ವಾಸವಿಟ್ಟು ಅವರು ಬರುತ್ತಾರೆ. ರಾಜಕೀಯದಲ್ಲಿ ಎಲ್ಲವೂ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಎಸ್.ಟಿ ಸೋಮಶೇಖರ್​ ಒಳ್ಳೇ ಕೆಲಸ ಮಾಡಿದ್ದಾರೆ.. ಆ ಪಕ್ಷದಲ್ಲಿ ಅವರಿಗೆ ಬೇಸರವಾಗಿದೆ’ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆ

https://newsfirstlive.com/wp-content/uploads/2023/08/G-Parameshwar.jpg

Load More