ಹಿಂದೂ ಧರ್ಮವನ್ನ ಕೆಣಕಿ ಬದಲಾದ್ರಾ ಗೃಹ ಸಚಿವ ಪರಮೇಶ್ವರ್!?
ಭಾಷಣದಲ್ಲಿ ಕೃಷ್ಣನ ಅವತಾರಗಳ ಬಗ್ಗೆ ಮನಬಿಚ್ಚಿದ್ದ ಗೃಹ ಸಚಿವ
ಪೇಚಿಗೆ ಸಿಲುಕಿದ್ದ ಗೃಹ ಸಚಿವರಿಂದ ಹೋದಲ್ಲೆಲ್ಲಾ ಮಂತ್ರ ಪಠಣ?
ರಾಜಕೀಯದಲ್ಲಿ ಧರ್ಮ ದಂಗಲ್ ತಾರಕಕ್ಕೇರಿ, ಮೌನಕ್ಕೆ ಜಾರಿದೆ. ಉದಯನಿಧಿ ಆರಂಭಿಸಿದ ಸನಾತನ ಕದನ ಹಿಡಿದೂ, ಪರಮೇಶ್ವರ್ ಎತ್ತಿದ ಹಿಂದೂ ಧರ್ಮದ ಹುಟ್ಟಿನ ಪ್ರಶ್ನೆ ವಾಗ್ಯುದ್ಧಕ್ಕೆ ಕಾರಣಕ್ಕೆ ಆಗಿತ್ತು. ಈಗ ಪರಮೇಶ್ವರ್ ದಿಢೀರ್ ವರಸೆಯನ್ನೇ ಬದಲಿಸಿದ್ದಾರೆ. ಅವರ ನಡೆ-ನುಡಿಗಳು ಅವರ ಹಿಂಬಾಲಕರು, ಅಭಿಮಾನಿಗಳನ್ನೆ ದಿಗಿಲು ಬಡಿಸಿದೆ.
ಹಿಂದೂ ಧರ್ಮದ ಬಗ್ಗೆ ಕ್ವಶ್ಚನ್ ಮಾರ್ಕ್ ಹಾಗೆಯೇ ಇದೆ. ಅಷ್ಟಕ್ಕೂ ಹಿಂದೂ ಧರ್ಮ ಯಾವಾಗ ಹುಟ್ಟಿತು? ಹಿಂದೂ ಧರ್ಮವನ್ನ ಹುಟ್ಟಿಸಿದ್ಯಾರು? ಈ ಪ್ರಶ್ನಾರ್ಥಕ ಚಿಹ್ನೆಯೇ ಬಿದ್ದಿದೆ, ಪ್ರಶ್ನಾರ್ಥಕ ಚಿಹ್ನೆ ತೆಗೆದಿಲ್ಲ. ಅವತ್ತು ಸೆಪ್ಟೆಂಬರ್ 5, ಶಿಕ್ಷಕರ ದಿನಾಚರಣೆ ಗುರುವಿಗೆ ಗುರುವಂದನೆ ಸಲ್ಲಿಸಬೇಕಿದ್ದ ಸಭೆಯಲ್ಲಿ ಗೃಹ ಸಚಿವ ಪರಂ ಎತ್ತಿದ ಪ್ರಶ್ನೆಗಳು. ಈ ಪ್ರಶ್ನೆಗಳೇ ಸನಾತನ ಧರ್ಮದ ಪರಂಪರೆಯನ್ನ ಅಣಕಿಸಿತ್ತು. ಅದಾದ ಬಳಿಕ ನಡೆದಿದ್ದು ಅಚ್ಚರಿ, ವಿಸ್ಮಯ.
ಪ್ರತಿ ಕಾರ್ಯಕ್ರಮದಲ್ಲಿ ಮಂತ್ರಗಳು, ಶ್ಲೋಕಗಳ ಪಠಣ!
ಇದೇ ವೈರುದ್ಯ.. ಈ ದಿಢೀರ್ ನಡೆ-ನುಡಿ ಎಲ್ಲರನ್ನ ಬೆಚ್ಚಿ ಬೀಳಿಸ್ತಿದೆ. ವಿವಾದದ ಬಳಿ ಪರಂ ಆಡಿದ ಈ ಮಾತುಗಳ ಕುತೂಹಲಕ್ಕೆ ಕಾರಣ ಆಗ್ತಿದೆ. ಉದಯನಿಧಿ ಬೆನ್ನಿಗೆ ನಿಲ್ಲಲು ಹೋಗಿ ಪರಂ ದಾಟಿದ ಪರಂಪರೆಗೆ ಹಿಂದೂ ಬಳಗ ಕೆರಳಿ ನಿಂತಿತ್ತು. ಈಗ ಸಂಪೂರ್ಣ ವ್ಯತಿರಿಕ್ತ ಪರಮೇಶ್ವರ್.
ಹಿಂದೂ ಧರ್ಮದ ‘ಮೂಲ’ದ ಬಗ್ಗೆ ಪರಮೇಶ್ವರ್ ವಿವಾದ
ಮೂಲ ಕೆದಕಿ ಕೆಟ್ಟ ಪರಮೇಶ್ವರ್, ನಾಗವಲ್ಲಿ ರೀತಿಯಲ್ಲಿ ಬದಲಾದ ದೃಶ್ಯಗಳಿವು. ಪ್ರತಿ ವೇದಿಕೆಯಲ್ಲೂ ತಮ್ಮ ಭಾಷಣಕ್ಕೂ ಮೊದಲು ಹಿಂದೂ ಧರ್ಮದ ಶ್ಲೋಕಗಳು, ಗೃಹ ಸಚಿವ ಪರಮೇಶ್ವರ್ ಕಂಠದಿಂದ ಹೊರಹೊಮ್ತಿವೆ. ಹೀಗೆ ಹೊರಳ್ತಿರುವ ಅವರ ಮಾತುಗಳು ಕಾರ್ಯಕರ್ತರು ಅಭಿಮಾನಿಗಳಿಗೂ ಅಚ್ಚರಿಗೆ ಕೆಡವಿದೆ.
ಶನಿಶ್ವರನ ಮಂತ್ರ ಹೇಳಿ ಭಾಷಣ ಶುರು ಮಾಡಿದ ಪರಂ!
ಪಾವಗಡದ ಕಾರ್ಯಕ್ರಮವೊಂದರಲ್ಲೂ ಶನಿಶ್ವರನ ಮಂತ್ರ ಹೇಳಿ ಪರಮೇಶ್ವರ್ ಭಾಷಣ ಶುರು ಮಾಡಿದ್ದಾರೆ. ನಾನಿವತ್ತು ಪಾವಗಡಕ್ಕೆ ಬಂದಾಗ ಮೂರುನಾಮ ಹಾಕಿಕೊಂಡು ಜನರು ನಿಂತಿದ್ರು. ಯಾತಕ್ಕೆ ಅಂತ ಕೇಳಿದೆ. ಇವತ್ತು ಶ್ರಾವಣ ಶನಿವಾರ ಅದ್ಕೆ ಶನಿ ಮಹಾತ್ಮ ದೇವಸ್ಥಾನಕ್ಕೆ ಬಂದಿದ್ದೇವೆ ಎಂದ್ರು. ಅದ್ಕೆ ಶನಿ ಮಹಾತ್ಮ ನಮಿಸಿ ನನ್ನ ಮಾತು ಶುರು ಮಾಡ್ತೇನೆ ಅಂತ ಮಂತ್ರ ಪಠಿಸಿ ಅದರ ವಿವರಣೆಯನ್ನೂ ನೀಡಿದ್ರು.
ಮಧುಗಿರಿಯಲ್ಲಿ ಭಗವದ್ಗೀತೆ ಶ್ಲೋಕ ಪಠಿಸಿದ ಗೃಹ ಸಚಿವರು
ಇದಕ್ಕೂ ಮುನ್ನ ಮಧುಗಿರಿಯ ಕ್ಷೀರಭಾಗ್ಯ ಯೋಜನೆ ದಶಮಾನೋತ್ಸವ ಕಾರ್ಯಕ್ರಮದಲ್ಲೂ ತಮ್ಮ ಭಾಷಣಕ್ಕೂ ಮೊದಲು ಭಗವದ್ಗೀತೆ ಶ್ಲೋಕವನ್ನ ಹೇಳಿದ್ದಲ್ಲದೇ ಅದರ ಅರ್ಥವನ್ನ ಬಿಡಿಸಿದ್ದರು. ಯಾವಾಗೆಲ್ಲ ಪ್ರಪಂಚದಲ್ಲಿ ಅನ್ಯಾಯ, ಅಧರ್ಮ ನಡೆಯುತ್ತೋ ಆಗೆಲ್ಲ, ನಾನು ಮತ್ತೆ ಜನಿಸ್ತೇನೆ ಅಂತ ಕೃಷ್ಣ ಅವತಾರ ಕುರಿತು ಪ್ರಸ್ತಾಪಿಸಿದ್ರು.
ಗಣಪತಿ ಶ್ಲೋಕ ಪಠಿಸಿ ಬಿಜೆಪಿ ನಾಯಕರಿಗೆ ಸವಾಲ್
ಬೆಳಗ್ಗೆ ಎದ್ದಾಗ ಗಣಪತಿ, ಲಕ್ಷ್ಮಿ ಶ್ಲೋಕ ಮತ್ತು ಮಲಗುವಾಗ ಹನುಮಾನ್ ಶ್ಲೋಕ ಹೇಳ್ತೇನೆ ಅಂತ ಶ್ಲೋಕಗಳ ಪಠಣೆ ಮಾಡ್ತಿದ್ದಾರೆ.. ಅಲ್ಲೆ, ಬಿಜೆಪಿ ನಾಯಕರಿಗೆ ಶ್ಲೋಕ ಸವಾಲು ಹಾಕಿದ್ದರು.
ನಾನು ಬೆಳಗ್ಗೆ ಎದ್ದಾಗ ಶ್ಲೋಕಗಳನ್ನು ಹೇಳುತ್ತೇನೆ. ಬಿಜೆಪಿಯವರು ಇಂತಹ ಶ್ಲೋಕಗಳನ್ನು ಹೇಳುತ್ತಾರಾ ಕೇಳಿ.
ಡಾ.ಜಿ.ಪರಮೇಶ್ವರ್, ಗೃಹ ಸಚಿವ
ಹೀಗೆ ಹಿಂದೂ ಧರ್ಮದ ಹೇಳಿಕೆ ಬಳಿಕ ಪ್ರತಿ ವೇದಿಕೆಯಲ್ಲೂ ಪರಮೇಶ್ವರ್ ಮಂತ್ರ, ಶ್ಲೋಕಗಳನ್ನ ಹೇಳಲು ಆರಂಭಿಸಿದ್ದಾರೆ. ಅಷ್ಟಕ್ಕೂ ಪರಮೇಶ್ವರ್ ಈ ಇಬ್ಬಗೆಯ ನಡೆ ಯಾಕೆ? ಪರಂ ಸಾಧಿಸಲು ಹೊರಟಿರೋದೇನು? ಗೃಹ ಸಚಿವರ ಈ ನಡೆ ಬೆಂಬಲಿಗರನ್ನ ಗೊಂದಲಕ್ಕೆ ತಳ್ಳಿದೆ. ಪರಂ ಹೇಳಿದ ಹಿಂದೂ ಧರ್ಮದ ಹುಟ್ಟಿನ ಪ್ರಶ್ನೆಯನ್ನ ಹಿಂಬಾಲಿಸಬೇಕೆ? ಅಥವಾ ಈಗ ಹೇಳ್ತಿರುವ ಮಂತ್ರವನ್ನ ಪಠಿಸಬೇಕೆ ಎನ್ನುವ ಪ್ರಶ್ನೆಗಳು ತಲೆಯಲ್ಲಿ ಓಡಾಡ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ