newsfirstkannada.com

ಸಿಸಿಟಿವಿ ಕ್ಯಾಮೆರಾ ಒಡೆದು ಮನೆ ಕಳ್ಳತನಕ್ಕೆ ಯತ್ನ; ಖದೀಮನನ್ನು ಪೊಲೀಸರಿಗೆ ಹಿಡಿದು ಕೊಟ್ಟ ಜನ

Share :

02-07-2023

    ಸಿಸಿಟಿವಿ ಕ್ಯಾಮರಾ ಒಡೆದು ಮನೆಗೆ ನುಗ್ಗಲು ಯತ್ನಿಸಿದ ಕಳ್ಳ

    ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು!

    ಐದಾರು ಮನೆಗಳಿಗೆ ನುಗ್ಗಿ 25 ಸಾವಿರ ದೋಚಿದ್ದ ಕಳ್ಳರ ಗ್ಯಾಂಗ್​​

ಹುಬ್ಬಳ್ಳಿ: ಸಿಸಿಟಿವಿ ಕ್ಯಾಮೆರಾ ಒಡೆದು ಖದೀಮನೋರ್ವ ಮನೆ ಕಳ್ಳತನಕ್ಕೆ ಯತ್ನಿಸಿರೋ ಘಟನೆ ಹುಬ್ಬಳ್ಳಿಯ ಇಟಗಿ ಮಾರುತಿ ಗಲ್ಲಿಯಲ್ಲಿ ನಡೆದಿದೆ. ಕಳೆದ ಕೆಲ ದಿನಗಳಿಂದ ಇದೇ ಪ್ರದೇಶದಲ್ಲಿ ಕೆಲ ಖದೀಮರು ಐದಾರು ಮನೆಗಳಿಗೆ ಕನ್ನ ಹಾಕಿ 25 ಸಾವಿರ ನಗದು ಸೇರಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಈ ಕಳ್ಳರ ಕಾಟದಿಂದ ನಾಗರೀಕರು ಬೇಸತ್ತು ಹೋಗಿದ್ದರು. ಇದೀಗ ಇದೇ ಪ್ರದೇಶದಲ್ಲಿ ಕಳ್ಳತನಕ್ಕೆಂದು ಬಂದಿದ್ದ ಖದೀಮನೊರ್ವ ಸಿಸಿ ಕ್ಯಾಮರಾ ಒಡೆದು ಮನೆಗೆ ಕನ್ನ ಹಾಕಲು ಯತ್ನಿಸಿದ್ದಾನೆ. ಈ ಶಬ್ದ ಕೇಳಿ ಎಚ್ಚತ್ತ ನಾಗರೀಕರು ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಲೇ ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಓರ್ವ ಕಳ್ಳನನ್ನು ಅರೆಸ್ಟ್​ ಮಾಡಿ ವಿಚಾರಣೆ ನಡೆಸಿದ್ದಾರೆ. ಮಂಗಳವಾರಪೇಟೆ, ವೀರಾಪುರ ಓಣಿ ಮತ್ತಿತರ ಕಡೆ ಕಳ್ಳತನ ಮಾಡಿದ್ದಾರೆ ಎಂಬ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಸಿಟಿವಿ ಕ್ಯಾಮೆರಾ ಒಡೆದು ಮನೆ ಕಳ್ಳತನಕ್ಕೆ ಯತ್ನ; ಖದೀಮನನ್ನು ಪೊಲೀಸರಿಗೆ ಹಿಡಿದು ಕೊಟ್ಟ ಜನ

https://newsfirstlive.com/wp-content/uploads/2023/07/thife-2.jpg

Load More