newsfirstkannada.com

ಚಿನ್ನಾಭರಣ, ಹಣದ ಬ್ಯಾಗ್​ ಹಿಂತಿರುಗಿಸಿದ ಹೂವಿನ ವ್ಯಾಪಾರಿ; ಪ್ರಾಮಾಣಿಕತೆ ಮೆರೆದವನಿಗೆ ಪೊಲೀಸರಿಂದ ಸನ್ಮಾನ

Share :

19-08-2023

    ಹೂವಿನ ಅಂಗಡಿಯಲ್ಲಿ ಹಣ, ಚಿನ್ನದ ಬ್ಯಾಗ್ ಬಿಟ್ಟು ಹೋಗಿದ್ದ ಗ್ರಾಹಕ

    ಕಂತೆ, ಕಂತೆ ದುಡ್ಡು, ಚಿನ್ನಾಭರಣಗಳನ್ನು ನೋಡಿ ಶಾಕ್ ಆದ ವ್ಯಾಪಾರಿ

    ಹೂವಿನ ವ್ಯಾಪಾರಿ ಪ್ರಾಮಾಣಿಕತೆ‌ಗೆ ಮೆಚ್ಚಿದ ಗಜೇಂದ್ರಗಡ ಪೊಲೀಸರು

ಗದಗ: ಹೂವಿನ ಅಂಗಡಿಯಲ್ಲಿ ಗ್ರಾಹಕರೊಬ್ಬರು ಬಿಟ್ಟು ಹೋಗಿದ್ದ ಚಿನ್ನಾಭರಣದ ಬ್ಯಾಗ್​ವೊಂದನ್ನು ವ್ಯಾಪಾರಿಯೊಬ್ಬರು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಹೂವಿನ ವ್ಯಾಪಾರಿ ಮುರ್ತುಜಾ ಎಂಬುವವರು ಪ್ರಾಮಾಣಿಕತೆ ಪ್ರದರ್ಶಿಸಿ ಮೆಚ್ಚುಗೆಗಳಿಸಿದ್ದಾರೆ.

ಗ್ರಾಹಕರಿಗೆ ಚಿನ್ನಾಭರಣದ ಬ್ಯಾಗ್​ ಹಿಂತಿರುಗಿಸುತ್ತಿರುವ ಫೋಟೋ

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಮುರ್ತುಜಾ ದಿಂಡವಾಡ ಎಂಬುವವರು ಹೂವಿನ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರಿ ಮುರ್ತುಜಾ ದಿಂಡವಾಡ ಅವರ ಅಂಗಡಿಗೆ ಬಂದ ಮುತ್ತಪ್ಪ ಹಿರೇಕೊಪ್ಪ ಎಂಬುವವರು ಕೆಲಸದ ತರಾತುರಿಯಲ್ಲಿ ತಮ್ಮ ಚಿನ್ನಾಭರಣದ ಬ್ಯಾಗ್​​ ಅನ್ನು ಅಲ್ಲಿಯೇ ಬಿಟ್ಟು ಊರಿಗೆ ತೆರಳಿದ್ದರು. ಈ ವೇಳೆ ಬ್ಯಾಗ್​ ಅನ್ನು ಗಮನಿಸಿದ ಹೂವಿನ ವ್ಯಾಪಾರಿ ಮುರ್ತುಜಾ ನೇರವಾಗಿ ಗಜೇಂದ್ರಗಡ ಪೊಲೀಸ್​ ಠಾಣೆಗೆ ಹೋಗಿದ್ದಾರೆ. ಬಳಿಕ ಬ್ಯಾಗ್​ನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣವನ್ನು ಪೊಲೀಸರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಹೂವಿನ ವ್ಯಾಪಾರಿಯ ಪ್ರಾಮಾಣಿಕತೆ‌ಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಅವರಿಗೆ ಸನ್ಮಾನವನ್ನೂ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿನ್ನಾಭರಣ, ಹಣದ ಬ್ಯಾಗ್​ ಹಿಂತಿರುಗಿಸಿದ ಹೂವಿನ ವ್ಯಾಪಾರಿ; ಪ್ರಾಮಾಣಿಕತೆ ಮೆರೆದವನಿಗೆ ಪೊಲೀಸರಿಂದ ಸನ್ಮಾನ

https://newsfirstlive.com/wp-content/uploads/2023/08/gadag.jpg

Load More