newsfirstkannada.com

ಜೇನುತುಪ್ಪ ಆರೋಗ್ಯಕ್ಕೆ ಒಳ್ಳೆಯದು.. ಹಾಗಾದ್ರೇ ಇದು ದೇಹಕ್ಕೆ ಉಪಕಾರಿ ಜತೆಗೆ ಹೇಗೆ ಹಾನಿಕಾರಕ?

Share :

18-06-2023

  ಬೇಸಿಗೆಯಲ್ಲಿ ಜೇನುತುಪ್ಪ ಸೇವಿಸುವುದರಿಂದ ದೇಹಕ್ಕೆ ಏನಾಗುತ್ತದೆ..?

  ಜೇನಿನಲ್ಲಿ ವಿಟಮಿನ್- ಬಿ, ಕ್ಯಾಲ್ಸಿಯಂ, ಮಿನರಲ್ಸ್​ಗಳು ಹೇರಳವಾಗಿವೆ

  ಬೊಜ್ಜು ಸುಲಭವಾಗಿ ಕರಗಿಸಲು ಜೇನನ್ನು ಇದರ ಜೊತೆ ಬೆರೆಸಿ ಸೇವಿಸಿ

ಈಗಿನ ಮಕ್ಕಳಿಗೆ ಜೇನು ಎಂದರೇ ಅಷ್ಟಕ್ಕೆ ಅಷ್ಟೇ ಗೊತ್ತು ಎನಿಸುತ್ತದೆ. ಅಂಗಡಿಗಳಿಗೆ ಬಾಟಲಿನಲ್ಲಿ ಬರುವ ಜೇನುತುಪ್ಪ ಖರೀದಿಸಿ ಸವಿದಿರುವುದೇ ಅವರಿಗೆ ರುಚಿ ಎನಿಸಿರುತ್ತದೆ. ಆದ್ರೆ ನಿಜವಾದ ಜೇನುತುಪ್ಪದ ಸವಿ ಜೇನು ಹುಳುಗಳನ್ನು ಓಡಿಸಿ, ಅವುಗಳಿಂದ ಕಡಿಸಿಕೊಂಡು ಜೇನು ಸವಿದಾಗ ಇರುವ ಆ ತೃಪ್ತಿನೇ ಬೇರೆ ಇರುತ್ತದೆ. ಒಂದು ಕಡೆ ಹುಳು ಕಡಿದ ನೋವಿದ್ರೆ, ಇನ್ನೊಂದು ಕಡೆ ಜೇನುತುಪ್ಪದ ರುಚಿ ಬಾಯಲ್ಲಿ ಅಮೃತದ ಸವಿಯನ್ನೇ ಉಂಟು ಮಾಡಿರುತ್ತದೆ. ಈಗ ಜೇನುತುಪ್ಪದ ಬಗ್ಗೆ ಇಷ್ಟು ಏಕೆ ಹೇಳುತ್ತಿದ್ದೇವೆ ಎಂದರೆ.. ಜೇನಿನಿಂದ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಉಪಯೋಗವಿದೆ. ಆ ಬಗ್ಗೆ ಏನೇನು ಎನ್ನುವುದನ್ನು ಇಲ್ಲಿ ಚರ್ಚೆ ಮಾಡೋಣ..

ಜೇನುತುಪ್ಪವು ನೈಸರ್ಗಿಕ, ಪ್ರಕೃತಿದತ್ತವಾದ ಒಂದು ವಿಶೇಷವಾದ ಖಾದ್ಯವೇ ಎನ್ನಬಹುದು. ಬೆಲ್ಲ, ಸಕ್ಕರೆ, ಹಲ್ವಾಗಿಂತ ಮನಮೋಹಕವಾದ ರುಚಿಯನ್ನು ಜೇನು ಹೊಂದಿರುತ್ತದೆ. ಹೀಗಾಗಿಯೇ ಇದನ್ನು ಮೊದಲಿನ ಕಾಲದಿಂದಲೂ ಔಷಧಗಳಲ್ಲಿ ಬಳಕೆ ಮಾಡುತ್ತಾ ಬಂದಿದ್ದಾರೆ. ಈಗೀಗ ಅರಣ್ಯ ಪ್ರದೇಶ ಕಡಿಮೆ ಆಗುತ್ತಿರುವ ಕಾರಣ ಜೇನು ಸಿಗುವುದು ಕಷ್ಟವಾಗಿದೆ. ಆದರೂ ಜೇನು ಸಾಕಾಣಿಕೆಯನ್ನು ಕೆಲ ಜನರು ಮೈಗೂಡಿಸಿಕೊಂಡಿದ್ದಕ್ಕೆ ಬಾಟಲ್​ಗಳಲ್ಲಿ ಜೇನುತುಪ್ಪ ಮಾರಾಟ ಮಾಡಲಾಗುತ್ತಿದೆ. ಏನೇ ಆಗಲಿ ಜೇನು ನೈಸರ್ಗಿಕವಾಗಿ ಹೇಗೆ ಸಿಗುತ್ತದೆಯೋ ಹಾಗೇ ಸೇವನೆ ಮಾಡಿದ್ರೆ ನಮಗೆ ಉತ್ತಮ.

 • ಇನ್ನು ಜೇನುತುಪ್ಪದಲ್ಲಿ ಸಕ್ಕರೆಯ ಅಂಶ ಇರುತ್ತದೆ. ಇದು ಆರೋಗ್ಯಕ್ಕೆ ಬಹಳ ಉತ್ತಮ. ಜೇನಿನಲ್ಲಿ ವಿಟಮಿನ್ ಬಿ ಹಾಗೂ ಕ್ಯಾಲ್ಸಿಯಂ, ಮಿನರಲ್ಸ್​ಗಳು ಹೇರಳವಾಗಿವುದರಿಂದ ದೇಹದ ಮೇಲೆ ಜೇನು ಧನಾತ್ಮಕ ಪರಿಣಾಮ ಉಂಟುಮಾಡುತ್ತದೆ. ಇತಿಹಾಸ ಕಾಲದಿಂದಲೂ ಜೇನನ್ನು ಆರೋಗ್ಯದ ವಿಷಯದಲ್ಲಿ ಬಳಕೆ ಮಾಡುತ್ತಲೇ ಬಂದಿದ್ದಾರೆ.
 • ಜೇನುತುಪ್ಪವು ಕಾರ್ಬೋಹೈಡ್ರೇಟ್‌ಗಳು, ನಿಯಾಸಿನ್, ರೈಬೋಫ್ಲಾವಿನ್, ಫ್ರಕ್ಟೋಸ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ 6, ಕ್ಯಾಲ್ಸಿಯಂ, ಕ್ಯಾಲೋರಿಗಳು, ಕಬ್ಬಿಣ, ಮೆಗ್ನೀಸಿಯಮ್, ಸೋಡಿಯಂ, ಸೇರಿದಂತೆ ವಿವಿಧ ಪೋಷಕಾಂಶಗಳನ್ನು ಒಳಗೊಂಡಿದೆ.
 • ತಣ್ಣೀರಿಗೆ ಒಂದೆರಡು ಸ್ಫೂನ್ ಜೇನು ಹನಿ ಬೆರೆಸಿ ದಿನಲೂ ಸೇವಿಸಿದರೆ ಬೊಜ್ಜು ಸುಲಭವಾಗಿ ಕರಗಿ ಹೋಗುತ್ತದೆ.
 • ಬಾಯಾರಿಕೆ ಬೇಸಿಗೆಯಲ್ಲಿ ಆಗುವುದು ಸಾಮಾನ್ಯ. ಆದರೇ ಕೆಲವರಿಗೆ ಎಲ್ಲ ಕಾಲದಲ್ಲೂ ಬಾಯಾರಿಕೆ ಆಗುತ್ತಿರುತ್ತದೆ. ಅಂತವರು ಜೇನುತುಪ್ಪ ತಿಂದರೆ ಆ ಸಮಸ್ಯೆ ಮಾಯವಾಗುತ್ತದೆ.
 • ಜೇನಿಗೆ ಗಾಯಗಳನ್ನು ಗುಣಪಡಿಸುವ ಶಕ್ತಿ ಇದೆ. ಇದರಿಂದ ಬಾಯಿ ಹುಣ್ಣು ಆಗಿದ್ದಾಗ 4 ಚಮಚ ಜೇನು ತುಪ್ಪವನ್ನು ಬಾಯಿಯಲ್ಲಿ ಹಾಕಿ ಇಟ್ಟುಕೊಂಡರೆ ಬಾಯಿ ಹುಣ್ಣು ವಾಸಿಯಾಗುತ್ತದೆ.
 • ಚರ್ಮಕ್ಕೆ ಯಾವುದೇ ಕಾಯಿಲೆ ಬರದಂತೆ ಜೇನು ಮಾಡುತ್ತದೆ. ಜೇನು ಸೇವನೆಯಿಂದ ಚರ್ಮದ ರಕ್ಷಣೆ ಜೊತೆಗೆ ಒಳ್ಳೆಯ ಕಾಂತಿಯನ್ನು ಒದಗಿಸುತ್ತದೆ. ಇದರಿಂದ ಮುಖವು ಅಂದವಾಗಿ ಕಾಣಿಸುತ್ತದೆ.

ಜೇನುತುಪ್ಪದ ಸೇವನೆಯು ಕೆಲವು ಸಂದರ್ಭದಲ್ಲಿ ಆರೋಗ್ಯಕ್ಕೆ ಹಾನಿಕಾರಕ..

 • ಅಡುಗೆ ಎಣ್ಣೆ, ಕೊಬ್ಬಿನ ವಸ್ತುಗಳು, ತುಪ್ಪ, ಬಿಸಿ ನೀರು ಸೇರಿದಂತೆ ಇತರ ಯಾವುದೇ ಪಾನೀಯ ಮತ್ತು ದ್ರಾಕ್ಷಿ ಜೊತೆ ಜೇನುತುಪ್ಪದ ಸೇರಿಸಬಾರದು. ಈ ರೀತಿ ಮಾಡುವುದರಿಂದ ನಿಮ್ಮ ಆರೋಗ್ಯ ಕೆಡಬಹುದು.
 • ಜೇನುತುಪ್ಪದಲ್ಲಿ ಫ್ರಕ್ಟೋಸ್ ಅಂಶವು ಸಣ್ಣಕರುಳು ಪೋಷಕಾಂಶಗಳನ್ನು ಹೀರಿಕೊಳ್ಳುವ ಪ್ರಕ್ರಿಯೆಗೆ ಅಡ್ಡಿ ಮಾಡುತ್ತೆ.
 • ಜೇನುತುಪ್ಪ ಸಿಹಿಯಾಗಿರುವುದರಿಂದ ಇದು ಸಕ್ಕರೆಯ ಒಂದು ರೂಪ. ಇದನ್ನು ಹೆಚ್ಚಾಗಿ ಸೇವಿಸಿದರೆ ದೇಹದಲ್ಲಿ ಇನ್ಸುಲಿನ್ ಪ್ರಮಾಣದ ಏರುಪೇರಾಗಬಹುದು. ಮಧುಮೇಹಿಗಳು ಇದರಿಂದ ದೂರ ಇರುವುದು ಒಳ್ಳೆಯದು.
 • ಇದನ್ನು ನಿತ್ಯ 6 ಟೀ ಚಮಚದಷ್ಟು ಒಳಗೆ ಸೇವನೆ ಮಡಬೇಕು. ಅದಕ್ಕಿಂತ ಹೆಚ್ಚಿಗೆ ಸೇವಿಸಿದರೆ ಆರೋಗ್ಯಕ್ಕೆ ಹಾನಿಯಾಗಬಹುದು.
 • ಜೇನುತುಪ್ಪ ವನ್ನು ಬೇಸಿಗೆ ಕಾಲದಲ್ಲಿ ಸೇವನೆ ಮಾಡುತ್ತಿದ್ದರೇ ನಿಮ್ಮ ದೇಹದ ಉಷ್ಣತೆಯು ಹೆಚ್ಚಿ ಪ್ರತಿಕೂಲ ಪರಿಣಾಮ ಬೀರಬಹುದು.

ವಿಶೇಷ ವರದಿಭೀಮಪ್ಪ. ನ್ಯೂಸ್​ಫಸ್ಟ್​ ಡಿಜಿಟಲ್ ಡೆಸ್ಕ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೇನುತುಪ್ಪ ಆರೋಗ್ಯಕ್ಕೆ ಒಳ್ಳೆಯದು.. ಹಾಗಾದ್ರೇ ಇದು ದೇಹಕ್ಕೆ ಉಪಕಾರಿ ಜತೆಗೆ ಹೇಗೆ ಹಾನಿಕಾರಕ?

https://newsfirstlive.com/wp-content/uploads/2023/06/HEALTH_HOMEY_4.jpg

Load More