11 ವರ್ಷ ಸಂಸಾರ ನಡೆಸಿದ ಹನಿ ಸಿಂಗ್ ಹಾಗೂ ಶಾಲಿನಿ ತಲ್ವಾರ್
2021ರಲ್ಲಿ ಹನಿ ಸಿಂಗ್ ಮೇಲೆ ಆರೋಪ ಮಾಡಿದ್ದ ಪತ್ನಿ ಶಾಲಿನಿ
ತಾನು ಭಯದಿಂದ ಬದುಕುತ್ತಿದ್ದೇನೆ ಎಂದು ಹೇಳಿದ್ದ ಸಿಂಗರ್ ಪತ್ನಿ
ಖ್ಯಾತ ಹಾಡುಗಾರ ಹನಿ ಸಿಂಗ್ ಹಾಗೂ ಪತ್ನಿ ಶಾಲಿನಿ ತಲ್ವಾರ್ರವರ 11 ವರ್ಷದ ಜೀವನ ಡಿವೋರ್ಸ್ ಮೂಲಕ ಕೊನೆಗೊಂಡಿದೆ. ದೆಹಲಿ ಕೋರ್ಟ್ ಈ ಇಬ್ಬರಿಗೂ ವಿಚ್ಛೇದನ ನೀಡಿದೆ.
ಹನಿ ಸಿಂಗ್ ಅವರಿಗೆ ನವೆಂಬರ್ 7ರಂದು ದೆಹಲಿ ಕೋರ್ಡ್ ವಿಚ್ಚೇದನ ನೀಡಿದೆ. ನ್ಯಾಯಾಧೀಶರಾದ ಪರಮ್ಜಿತ್ ಸಿಂಗ್ ಹನಿಸಿಂಗ್ ಮತ್ತು ಅವರ ಪತ್ನಿ ನಡುವಿನ ಎರಡೂವರೆ ವರ್ಷದ ವ್ಯಾಜ್ಯವನ್ನು ಕೊನೆಗೊಳಿಸುವ ಮೂಲಕ ವಿಚ್ಛೇದನ ನೀಡಿದ್ದಾರೆ.
ಹನಿ ಸಿಂಗ್ ಮೇಲೆ ಆರೋಪ
ಖ್ಯಾತ ಸಿಂಗ್ ಪತ್ನಿ ಶಾಲಿನಿ ತಲ್ವಾರ್ 2021ರಲ್ಲಿ ಕೌಟುಂಬಿಕ ಹಿಂಸಾಚಾರ ವಿಚಾರವಾಗಿ ಆರೋಪ ಮಾಡಿದ್ದರು. ಅಷ್ಟು ಮಾತ್ರವಲ್ಲದೆ ತಾನು ಭಯದಿಂದ ಬದುಕುತ್ತಿದ್ದೇನೆ ಎಂದು ಹೇಳಿದ್ದರು. ಮಾನಸಿಕ, ದೈಹಿಕ, ಭಾವನಾತ್ಮಕ, ಲೈಂಗಿಕ, ಆರ್ಥಿಕವಾಗಿಯೂ ನೊಂದಿದ್ದೇನೆ ಎಂದು ಹೇಳಿದ್ದರು.
2022ರಲ್ಲಿ ಈ ಜೋಡಿ ದೂರವಾದರು. ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋದರು. ಇದೀಗ ನ್ಯಾಯಾಧೀಶರ ಸಮ್ಮುಖದಲ್ಲಿ ಹನಿ ಸಿಂಗ್ ತನ್ನ ಮಡದಿಗೆ 1 ಕೋಟಿ ರೂಪಾಯಿ ಜೀವನಾಂಶ ನೀಡಬೇಕಿದೆ.
View this post on Instagram
ಹನಿಸಿಂಗ್ ಕೂಡ ಪತ್ನಿ ತನ್ನ ಮೇಲೆ ಮಾಡಿರುವ ಆರೋಪದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದೀಗ ಮತ್ತೆ ಆ ವಿಚಾರ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ