newsfirstkannada.com

×

ಸಿನಿಮಾ ಹೆಸರಲ್ಲಿ ಹನಿಟ್ರ್ಯಾಪ್​​; ಬರೋಬ್ಬರಿ 40 ಲಕ್ಷ ಪೀಕಿದ ಕ್ಯಾಂಗ್​​ ಮತ್ತು ಗ್ಯಾಂಗ್​ ವಿರುದ್ಧ FIR

Share :

Published September 19, 2024 at 4:44pm

Update September 19, 2024 at 4:49pm

    ಕಾವ್ಯ, ದಿಲೀಪ್, ರವಿಕುಮಾರ್ ಎಂಬುವವರ ವಿರುದ್ದ ದೂರು ದಾಖಲು

    ಸೋಷಿಯಲ್ ಮೀಡಿಯಾ ಌಪ್​ ಮೂಲಕ ಪರಿಚಿತವಾಗಿದ್ದ ಕಾವ್ಯ

    MG ರಸ್ತೆಯಲ್ಲಿ ಲೈಟ್ ಆರ್ಟ್ ಸ್ಟುಡಿಯೋ ಹೊಂದಿರುವ ಉದ್ಯಮಿ ಗಣೇಶ್

ಬೆಂಗಳೂರು: ಸಿನಿಮಾ ಮಾಡುವ ಹೆಸರಿನಲ್ಲಿ ಉದ್ಯಮಿಯಿಂದ ಹಣ ಪಡೆದು ವಂಚನೆ ಮಾಡಿರೋ ಆರೋಪ ಕೇಳಿ ಬಂದಿದೆ. ಉದ್ಯಮಿ ಗಣೇಶ್ ನೀಡಿದ ದೂರಿನ ಆಧಾರದ ಮೇಲೆ ಕಾವ್ಯ, ದಿಲೀಪ್, ರವಿಕುಮಾರ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಉದ್ಯಮಿ ಗಣೇಶ್ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಲೈಟ್ ಆರ್ಟ್ ಸ್ಟುಡಿಯೋ ಹೊಂದಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ ಹನಿಟ್ರ್ಯಾಪ್ ಜಾಲ.. ಯುವತಿಯರ ಕಣ್ಣೀರು; ಅಧಿಕಾರಿಗಳು, ಉದ್ಯಮಿಗಳಿಂದ ಲಕ್ಷ, ಲಕ್ಷ ವಸೂಲಿ!

ಗಣೇಶ್​ ಅವರಿಗೆ ಕುಟುಂಬ ಎಂಬ ಸೋಷಿಯಲ್ ಮೀಡಿಯಾ ಌಪ್​ನಲ್ಲಿ ಕಾವ್ಯ ಎಂಬಾಕೆ ಪರಿಚಿತಳಾಗಿದ್ದಾಳೆ. ಈ ಕಾವ್ಯ ನಾಲ್ಕು ವರ್ಷಗಳ ಹಿಂದೆ ಸಿನಿಮಾ ಮಾಡುತ್ತಿರೋದಾಗಿ ಪರಿಚಿತಳಾಗಿದ್ದಳಂತೆ. ನಿರ್ದೇಶಕ ಎಸ್.ಆರ್.ಪಾಟೀಲ್ ಎಂಬುವವರಿಗೆ 4.25 ಲಕ್ಷ ಹಣ ವರ್ಗಾಯಿಸಿಕೊಂಡಿದ್ದಳಂತೆ. ಕೊಟ್ಟ ಹಣ ವಾಪಸ್ಸು ಕೇಳಿದಾಗ ಕಾವ್ಯ ಗೊಟ್ಟಿಗೆರೆ ಬಳಿ ಗಣೇಶ್​ರನ್ನು ಕರೆಸಿಕೊಂಡಿದ್ದಳಂತೆ.

ಈ ವೇಳೆ ಗಣೇಶ್​ರಿಗೆ ಲೈಂಗಿಕ ಕ್ರಿಯೆಗೆ ಪ್ರಚೋದಿಸಿ ವಿಡಿಯೋ ‍ಚಿತ್ರೀಕರಿಸಿಕೊಂಡಿದ್ದಳಂತೆ. ನಂತರ ವಿಡಿಯೋ ತೋರಿಸಿ ದೂರು ದಾಖಲು ಮಾಡಿ, ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದಾಳಂತೆ. ಅಲ್ಲದೇ ಗಣೇಶ್​ರಿಂದ ಡಿಯೋ ಬೈಕ್ ಖರೀದಿಸಿಕೊಂಡು EMI ಕಟ್ಟಿಸಿದ್ದಲ್ಲದೇ, ವಿಡಿಯೋ ಹರಿಬಿಡೋದಾಗಿ ಬೆದರಿಸಿ ಚಿನ್ನದ ಸರ, ಬ್ರಾಸ್ ಲೈಟ್ ಪಡೆದುಕೊಂಡಿದ್ದಾಳೆ. ಹಂತ ಹಂತವಾಗಿ 40 ಲಕ್ಷ ಹಣ, ನಂತರ 20 ಲಕ್ಷದ ಕಾರು ಕೊಡಿಸು ಅಂತ ಡಿಮ್ಯಾಂಡ್ ಮಾಡಿದ್ದಳಂತೆ. ಹೀಗಾಗಿ ಉದ್ಯಮಿ ಗಣೇಶ್ ನೀಡಿದ ದೂರಿದ ಆಧಾರದ ಮೇಲೆ ಕಾವ್ಯ ಹಾಗೂ ಆಕೆಯ ಗೆಳೆಯರಾದ ದಿಲೀಪ್ ರವಿಕುಮಾರ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿನಿಮಾ ಹೆಸರಲ್ಲಿ ಹನಿಟ್ರ್ಯಾಪ್​​; ಬರೋಬ್ಬರಿ 40 ಲಕ್ಷ ಪೀಕಿದ ಕ್ಯಾಂಗ್​​ ಮತ್ತು ಗ್ಯಾಂಗ್​ ವಿರುದ್ಧ FIR

https://newsfirstlive.com/wp-content/uploads/2024/09/honey-trap1.jpg

Load More