newsfirstkannada.com

ಖಾಸಗಿ ಫೋಟೋ ತೋರಿಸಿ ಬರೋಬ್ಬರಿ 82 ಲಕ್ಷ ಪೀಕಿದ ಗ್ಯಾಂಗ್​; ನೀವು ಓದಲೇಬೇಕಾದ ಸ್ಟೋರಿ!

Share :

16-08-2023

    ಸಾರ್ವಜನಿಕರೇ ಹನಿ ಟ್ರ್ಯಾಪ್​​ ಬಗ್ಗೆ ಎಚ್ಚರವಿರಲಿ!

    ಮೋಸ ಮಾಡೋ ಮಹಿಳೆಯರ ಬಲೆಗೆ ಬೀಳಬೇಡಿ

    ಇಂತವ್ರ ಸಹವಾಸ ಮಾಡಿದ್ರೆ ನಿಮಗೂ ಇದೇ ಗತಿ..!

ಬೆಂಗಳೂರು: ಇದು ಅಣ್ಣಮ್ಮನ ಕತೆ. ನೀವು ಅಂದುಕೊಂಡಿರೋ ಹಾಗೇ ಬೆಂಗಳೂರು ನಗರ ದೇವತೆ ಅಣ್ಣಮ್ಮ ದೇವಿಯ ಕಥೆ ಅಲ್ಲ. ಹನಿ ಜಾಲದಲ್ಲಿ ದುಡ್ಡು ಮಾಡಿಕೊಂಡ ಕಳ್ಳಿಯ ಕಥೆ. ದೇವರ ಹೆಸರಿಟ್ಟುಕೊಂಡು ಈಕೆ ಮಾಡಿರೋ ಕೆಲಸ ಎಂಥಾದ್ದು ಎಂದರೆ ಇಡೀ ಸಮಾಜ ತಲೆ ತಗ್ಗಿಸುವಂತದ್ದು.

ಈಕೆ ಹೆಸರು ಅಣ್ಣಮ್ಮ, ಇವರ ರೈಟ್​​ ಹ್ಯಾಂಡ್​ ಹೆಸರು ಸ್ನೇಹ. ಇಬ್ಬರ ಸಹಚರ ಲೋಕೇಶ್​ ಸೇರಿ ಸದ್ಯ ಮೂವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ನಿವೃತ್ತ ಸರ್ಕಾರಿ ಅಧಿಕಾರಿ ಸುಧೀಂದ್ರ ಎಂಬುವರ ಬಳಿ ಕಷ್ಟ ಎಂದು 5,000 ಪಡೆದಿದ್ದ ಅಣ್ಣಮ್ಮ ಕೊನೆಗೆ ಖಾಸಗಿ ಫೋಟೋ ಹಿಡಿದು ಬ್ಲಾಕ್ ಮೇಲ್ ಮೂಲಕ ಹಂತ ಹಂತವಾಗಿ 82 ಲಕ್ಷ ರೂ. ಪೀಕಿದ್ದಾಳೆ.

ಹಣ ಕೊಟ್ರೂ ಬ್ಲಾಕ್ ಮೇಲ್‌ ಮಾಡಿದ್ದರಿಂದ ಕಾಟ ಸಹಿಸಲಾಗದೇ ಜಯನಗರ ಪೊಲೀಸ್ ಠಾಣೆಗೆ ನಿವೃತ್ತ ಸರ್ಕಾರಿ ಅಧಿಕಾರಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಜಯನಗರ ಪೊಲೀಸ್ರು ಸದ್ಯ ಆರೋಪಿಗಳನ್ನ ಬಂಧಿಸಿ‌ ವಿಚಾರಣೆ ನಡೆಸುತ್ತಿದ್ದಾರೆ.

ಹನಿ ಟ್ರ್ಯಾಪ್​​ ಬಗ್ಗೆ ಎಚ್ಚರವಿರಲಿ!

ಹೀಗೆ ಕಷ್ಟ ಎಂದು ಹೇಳಿಕೊಂಡು ಹಣ ಇರೋರನ್ನೇ ಟಾರ್ಗೆಟ್​ ಮಾಡಿ ಹನಿ ಟ್ರ್ಯಾಪ್​​ ಮಾಡೋ ಎಷ್ಟೋ ಪ್ರಕರಣಗಳು ನಿತ್ಯ ಬೆಳಕಿಗೆ ಬರುತ್ತಲೇ ಇವೆ. ಜನ ಇಂತಹ ಹನಿ ಟ್ರ್ಯಾಪ್​ ಮಾಡೋ ಮಂದಿಯಿಂದ ಎಚ್ಚೆತ್ತುಕೊಂಡು ದೂರ ಇರಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖಾಸಗಿ ಫೋಟೋ ತೋರಿಸಿ ಬರೋಬ್ಬರಿ 82 ಲಕ್ಷ ಪೀಕಿದ ಗ್ಯಾಂಗ್​; ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2023/08/Crime_1.jpg

Load More