ವೀಡಿಯೋ ಕಾಲ್ನಲ್ಲಿ ಮಹಿಳೆ ಅಸಲಿ ಮುಖ ಕಂಡು ಸಂಸದ ಶಾಕ್
ಕಳೆದ 20ನೇ ತಾರೀಖಿನಂದು ಜಿ.ಎಂ. ಸಿದ್ದೇಶ್ವರ್ಗೆ ಬೀಸಿದ್ದ ಬಲೆ
ಅಪರಿಚಿತ ಮಹಿಳೆ ಮೆಸೇಜ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಸಂಸದ
ದಾವಣಗೆರೆ: ಇತ್ತೀಚೆಗೆ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹುಡುಗಿಯರು ದೊಡ್ಡ ದೊಡ್ಡ ಕುಳಗಳನ್ನ ಮತ್ತು ವಯಸ್ಸಾದವರನ್ನ ಟಾರ್ಗೆಟ್ ಮಾಡಿ ತಮ್ಮ ಮೋಹದ ಬಲೆಯಲ್ಲಿ ಬೀಳಿಸಿಕೊಳ್ಳಲು ಯತ್ನಿಸ್ತಾರೆ. ಅದೇ ರೀತಿ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಅವರನ್ನು ಹನಿಟ್ರ್ಯಾಪ್ ಮಾಡಲು ಪ್ರಯತ್ನ ನಡೆದಿತ್ತು ಅನ್ನೋ ಆರೋಪ ಕೇಳಿಬಂದಿದೆ.
ವಾರದ ಹಿಂದೆ ಜುಲೈ 20ನೇ ತಾರೀಖಿನಂದು ಸಂಸದ ಜಿ.ಎಂ. ಸಿದ್ದೇಶ್ವರ್ಗೆ ಬಲೆ ಬೀಸಿದ್ದ ಹನಿಟ್ರ್ಯಾಪ್ ಗ್ಯಾಂಗ್, ಮೊದಲು ಮೆಸೇಜ್ ಮಾಡಿದ್ದಾರೆ. ನಂತರ ಬೆತ್ತಲೆ ವಿಡಿಯೋ ಕಾಲ್ ಮಾಡಿದ್ದಾರೆ ಎನ್ನಲಾಗಿದೆ. ರಾತ್ರಿ 10.16ಕ್ಕೆ ಅಪರಿಚಿತ ನಂಬರ್ನಿಂದ ಮಹಿಳೆಯೊಬ್ಬರು ಮೆಸೇಜ್ ಮಾಡಿದ್ದಾರೆ. Hi How Are You…? ಅಂತ ಮೆಸೇಜ್ ಬಂದಿದ್ದನ್ನ ನೋಡಿ ಸಿದ್ದೇಶ್ವರ್ ಅದನ್ನ ತಿರಸ್ಕರಿಸಿದ್ದರು. ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಅಷ್ಟಕ್ಕೇ ಸುಮ್ಮನಾಗದ ಮಹಿಳೆ ಮತ್ತೆ 10.22ಕ್ಕೆ ದಿಢೀರ್ ಅಂತ ವಿಡಿಯೋ ಕಾಲ್ ಮಾಡಿದ್ದಾಳೆ ಎನ್ನಲಾಗಿದೆ.
ವೀಡಿಯೋ ಕಾಲ್ನಲ್ಲಿ ಬೆತ್ತಲೆಯಾಗಿದ್ದ ಮಹಿಳೆ ಕಂಡು ಸಂಸದರು ಶಾಕ್ ಆಗಿದ್ದಾರೆ. ಬೆಂಗಳೂರಿನ ಕಿಂಗ್ ಫಿಷರ್ ಟವರ್ಸ್ನಲ್ಲಿದ್ದಾಗ ಕರೆ ಮಾಡಿದ್ದ ಲೇಡಿ ಕೊಟ್ಟ ಕ್ವಾಟ್ಲೆಗೆ ಸಂಸದರು ದೂರು ದಾಖಲಿಸಿದ್ದಾರೆ. ಕೂಡಲೇ ಈ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ FIR ದಾಖಲಾಗಿದ್ದು, ಪೊಲೀಸರು ನಂಬರ್ ಪಡೆದು ತನಿಖೆ ನಡೆಸುತ್ತಿದ್ದಾರೆ. ಅದು ಏನೇ ಇರಲಿ ಸಾಮಾನ್ಯ ಜನರಿಗೆ ಮಾತ್ರ ಬರ್ತಿದ್ದ ಇಂತಹ ಕರೆ ಮತ್ತು ಮೆಸೇಜ್ಗಳು ಈಗ ಸಂಸದ ಮೊಬೈಲ್ ಬಾಗಿಲು ತಟ್ಟಿದ್ದು ಪೊಲೀಸರನ್ನ ಬಡಿದೆಬ್ಬಿಸುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ