ವಿಚ್ಛೇದಿತ ಮಹಿಳೆ ಪತಿಯಿಂದ ಜೀವನಾಂಶ ಕೇಳುವುದು ತಪ್ಪೇನಲ್ಲ
ಮಹಿಳೆ ಪತಿಯಿಂದ ಜೀವನಾಂಶ ಕೇಳುವುದು ಕಾನೂನುಬದ್ಧ ಹಕ್ಕು!
ಕಾನೂನನ್ನೇ ದುರ್ಬಳಕೆ ಮಾಡಿಕೊಂಡ ಮಹಿಳೆಗೆ ಕೋರ್ಟ್ ಛೀಮಾರಿ
ವಿಚ್ಛೇದಿತ ಮಹಿಳೆ ಪತಿಯಿಂದ ಜೀವನಾಂಶ ಕೇಳುವುದು ತಪ್ಪೇನಲ್ಲ. ಸಿಆರ್ಪಿಸಿಯ ಸೆಕ್ಷನ್ 125ರ ಅಡಿಯಲ್ಲಿ ಮಹಿಳೆ ತನ್ನ ಪತಿಯಿಂದ ಜೀವನಾಂಶವನ್ನು ಕೇಳಬಹುದು ಎಂದು ಈ ಹಿಂದೆಯೇ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದರೆ, ಈ ಕಾನೂನನ್ನೇ ದುರ್ಬಳಕೆ ಮಾಡಿಕೊಂಡ ಮಹಿಳೆ ಒಬ್ಬರು ಕರ್ನಾಟಕ ಹೈಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.
ಗಂಡನಿಂದ ತಿಂಗಳಿಗೆ ಬರೋಬ್ಬರಿ 6,16,300 ರೂ. ಜೀವನಾಂಶ ಕೇಳಿದ ಮಹಿಳೆಗೆ ಕೋರ್ಟ್ ಛೀಮಾರಿ ಹಾಕಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಜನರಲ್ಲಿ ಕಾನೂನಿನ ಅರಿವು ಮೂಡಿಸಲು ಕೋರ್ಟ್ನಿಂದಲೇ ಈ ವಿಡಿಯೋ ರಿಲೀಸ್ ಮಾಡಲಾಗಿದೆ.
ವಿಡಿಯೋದಲ್ಲೇನಿದೆ..?
ವಕೀಲರು ಒಬ್ಬರು ಮಹಿಳೆಗೆ ಗಂಡ ತಿಂಗಳಿಗೆ 6,16,300 ರೂ. ಜೀವನಾಂಶ ನೀಡಬೇಕು ಎಂದು ಕೋರ್ಟ್ನಲ್ಲಿ ವಾದ ಮಾಡಿದ್ರು. ಈ ಕೂಡಲೇ ಸಿಟ್ಟಿಗೆದ್ದ ಹೈಕೋರ್ಟ್ ಮಹಿಳಾ ನ್ಯಾಯಮೂರ್ತಿಗಳು, ಈ ರೀತಿಯ ಬೇಡಿಕೆ ಇಡುವುದು ಎಷ್ಟು ಸರಿ? ಇದು ಕಾನೂನಿಕ ದುರ್ಬಳಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
A Must watch for all Men & Women.
Wife asked 6,16,300/ month as Maintenance, Honorable Judge said that this is exploitation & beyond tolerance. pic.twitter.com/TFjpJ61MHA
— Joker of India (@JokerOf_India) August 21, 2024
ಗಂಡ ಹೆಂಡತಿಗೆ ಜೀವನಾಂಶ ನೀಡಬೇಕು ನಿಜ. ಆದರೆ, ಮಹಿಳೆ ತಿಂಗಳಿಗೆ ಇಷ್ಟು ದುಡ್ಡು ಹೇಗೆ ಖರ್ಚು ಮಾಡುತ್ತಾರೆ. ಯಾರಾದ್ರೂ ಇಷ್ಟು ತಿಂಗಳಿಗೆ ಜೀವನಾಂಶ ನೀಡಲು ಸಾಧ್ಯವೇ? ಕಾನೂನು ಇರುವುದು ಸಹಾಯ ಮಾಡಲು. ಅದನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಒಂದು ವೇಳೆ ಆಕೆಗೆ ಅಷ್ಟು ದುಡ್ಡು ಬೇಕಿದ್ದರೆ ಮೈ ಬಗ್ಗಿಸಿ ದುಡಿಯಲಿ. ಹೀಗೆ ಬೇಕಾಬಿಟ್ಟಿ ಜೀವನಾಂಶ ಕೇಳುವುದಲ್ಲ ಎಂದು ಮಹಿಳಾ ನ್ಯಾಯಮೂರ್ತಿಗಳು ಛೀಮಾರಿ ಹಾಕಿದ್ದಲ್ಲದೆ, ವಕೀಲರನ್ನು ತರಾಟೆಗೆ ತೆಗೆದುಕೊಂಡರು. ಈಗ ನ್ಯಾಯಮೂರ್ತಿಗಳ ದಿಟ್ಟ ನಡೆಗೆ ಸಾರ್ವಜನಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಆಪ್ತನಿಗೆ ಮೋಸ ಮಾಡಿದ ಕ್ಯಾಪ್ಟನ್ ರೋಹಿತ್.. ಸ್ಟಾರ್ ಆಟಗಾರನಿಗೆ ಮಣೆ ಹಾಕಿದ್ದೇಕೆ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ