newsfirstkannada.com

ಯಾದಗಿರಿಯಲ್ಲಿ ವಿಶೇಷ ಬರ್ತ್ ಡೇ ಸೆಲೆಬ್ರೆಷನ್.. ತನ್ನ ನೆಚ್ಚಿನ ಹೋರಿಯ ಹುಟ್ಟುಹಬ್ಬ ಆಚರಿಸಿದ ವ್ಯಕ್ತಿ.!

Share :

13-08-2023

    ಮೊದಲ ವರ್ಷದ ಹುಟ್ಟುಹಬ್ಬ ಹಿನ್ನೆಲೆ ಹೋರಿಯ ಸಿಂಗಾರ

    ಹೋರಿಯ ಹುಟ್ಟುಹಬ್ಬಕ್ಕೆ ಗ್ರಾಮಸ್ಥರಿಗೆ ಆಹ್ವಾನ ನೀಡಿದ್ದ ವ್ಯಕ್ತಿ

    ಹೂವಿನ ಹಾರ ಹಾಕಿ, ಹೋರಿ ಮುಂದೆಯೇ ಕೇಕ್​ ಕಟ್ಟಿಂಗ್​..!

ಯಾದಗಿರಿ: ಸಿನಿಮಾ ತಾರೆಯರಿಂದ ಹಿಡಿದು ಜನ ಸಾಮಾನ್ಯವರೆಗೂ ಬರ್ತ್​ಡೇ ಸೆಲೆಬ್ರೆಷನ್​ ಇತ್ತೀಚೆಗೆ ಸಖತ್ ಟ್ರೆಂಡ್​ ಪಡೆಯುತ್ತಿದೆ. ಒಬ್ಬೊಬ್ಬರು ಒಂದೊಂದು ವಿಶೇಷ ರೀತಿಯಲ್ಲಿ ಆಚರಣೆ ಮಾಡುವುದನ್ನು ನಾವು ನೋಡುತ್ತಿರುತ್ತೇವೆ. ಅಲ್ಲದೇ ಈಗೀಗ ತಮ್ಮ ಮುದ್ದಿನ ಪ್ರಾಣಿಗಳ ಬರ್ತ್​ಡೇ ಕೂಡ ಸಂಭ್ರಮದಿಂದ ಆಚರಿಸೋದು ಕಾಣುತ್ತಿದ್ದೇವೆ. ಅದರಂತೆ ಯಾದಗಿರಿಯಲ್ಲೊಬ್ರು ತನ್ನ ಪ್ರೀತಿಯ ಹೋರಿಯ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮುಡಬೂಳ ಗ್ರಾಮದ ನಿವಾಸಿ ಶಿವಮೂರ್ತಿ ತಟ್ಟಿಮನಿ ಎನ್ನುವರು ತನ್ನ ಮುದ್ದಿನ ಹೋರಿ (ರಾಮು) ಯ ಮೊದಲ ವರ್ಷದ ಬರ್ತ್​ಡೇಯನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ರಾಮುವಿನ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸಿಂಗಾರ ಮಾಡಲಾಗಿತ್ತು. ಕೊರಳಲ್ಲಿ ಹೂವಿನ ಹಾರಗಳನ್ನು ಹಾಕಿ, ಊರಿನ ಎಲ್ಲರ ಮುಂದೆ ಕೇಕ್​ ಕಟ್​ ಮಾಡುವ ಮೂಲಕ ಹ್ಯಾಪಿ ಬರ್ಡ್​ ಡೇ ಟೂ ಯು ಎಂದು ವಿಶ್ ಮಾಡಿ ರಾಮುಗೆ ಕೇಕ್ ತಿನ್ನಿಸಲಾಯಿತು. ಗ್ರಾಮದ ಬಹುತೇಕ ಜನರು ರಾಮುವಿನ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಖುಷಿ ವ್ಯಕ್ತಪಡಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಾದಗಿರಿಯಲ್ಲಿ ವಿಶೇಷ ಬರ್ತ್ ಡೇ ಸೆಲೆಬ್ರೆಷನ್.. ತನ್ನ ನೆಚ್ಚಿನ ಹೋರಿಯ ಹುಟ್ಟುಹಬ್ಬ ಆಚರಿಸಿದ ವ್ಯಕ್ತಿ.!

https://newsfirstlive.com/wp-content/uploads/2023/08/YDR_HORI.jpg

Load More