ಸಾಂಸಾರಿಕ ಜೀವನದಲ್ಲಿ ತುಂಬಾ ಆತಂಕ ಇರಲಿದೆ
ಮಾನಸಿಕವಾದ ಕಿರಿಕಿರಿಯಿಂದ ಬೇಸರವಾಗಲಿದೆ..!
ಯಾವುದೇ ರೀತಿ ದೃಢ ನಿರ್ಧಾರಗಳನ್ನು ಮಾಡಲಾಗುತ್ತಿಲ್ಲ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಉತ್ತರಭಾದ್ರ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
- ಬುದ್ಧಿವಂತರ ಜನರ ಸಹವಾಸ ಮಾಡಬಹುದು
- ಯಾವುದೇ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬೇಡಿ
- ಯಾರ ಜೊತೆಯಲ್ಲಿಯೂ ಜಗಳ ಬೇಡ
- ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಿ
- ಇಂದು ಪ್ರೇಮಿಗಳಿಗೆ ಅಶುಭವಿದೆ
- ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆಯಿರಲಿ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ವೃಷಭ
- ವ್ಯವಹಾರಕ್ಕೆ ಮೊದಲು ಸರಿಯಾಗಿ ಪರಾಮರ್ಶೆಯನ್ನು ಮಾಡಿ
- ಜನರ ಸಹಾಯಕ್ಕೆ ಮುಂದಾಗುತ್ತೀರಿ
- ಅವಕಾಶ ಸಿಕ್ಕಾಗ ಜನರಿಂದ ವಂಚನೆಗೆ ಒಳಗಾಗಬಹುದು
- ಮಾತಿನಿಂದ ಜನರನ್ನು ಗೆಲ್ಲುತ್ತೀರಿ
- ಭೂ ವ್ಯಾಪಾರಸ್ಥರಿಗೆ ಈ ದಿನ ಚೆನ್ನಾಗಿಲ್ಲ
- ನಿಮ್ಮ ಕೆಲಸದ ಬಗ್ಗೆ ತುಂಬಾ ಗಮನವಿರಲಿ
- ಭೂವರಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ಇಂದು ಕಾರ್ಯನಿಮಿತ್ತವಾಗಿ ಪ್ರಯಾಣ ಮಾಡುವ ಅನಿವಾರ್ಯತೆ ಇದೆ
- ಕೆಲಸದ ಸ್ಥಳದಲ್ಲಿ ಪ್ರಶಂಸೆಗೆ ಒಳಗಾಗುತ್ತೀರಿ
- ಕುಟುಂಬದಲ್ಲಿ ನಿಮ್ಮ ಮಾತು ನಿರ್ಲಕ್ಷ್ಯವಾಗಬಹುದು
- ಮಾನಸಿಕವಾಗಿ ಕುಗ್ಗಿ ಹೋಗುವ ಸಾಧ್ಯತೆ ಇದೆ
- ಯಾರನ್ನು ನಂಬದೇ ಇರುವ ಪರಿಸ್ಥಿತಿ ಉಂಟಾಗಬಹುದು
- ಹಲವಾರು ದಿವಸಗಳ ಯೋಜನೆ ಹಾಗೆ ಉಳಿಯಲಿದೆ
- ಕುಲದೇವತಾ ಆರಾಧನೆ ಮಾಡಿ
ಕಟಕ
- ವ್ಯಾವಹಾರಿಕವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತೀರಿ
- ಅತಿಯಾದ ಆಲೋಚನೆಗಳಿಂದ ಕೆಲಸ ಹಾಳಾಗಬಹುದು
- ಮಕ್ಕಳ ಜೊತೆ ಹೊಂದಾಣಿಕೆಯಿರಲಿ
- ಹವಾಮಾನ ವೈಪರೀತ್ಯದಿಂದ ಆರೋಗ್ಯದ ಸಮಸ್ಯೆ ಎದುರಿಸಬೇಕಾಗಲಿದೆ
- ನಿಮ್ಮ ವಿರೋಧಿಗಳ ಸಂಖ್ಯೆ ಹೆಚ್ಚಾಗಬಹುದು
- ನಿಮ್ಮ ಶಿಸ್ತು ಬದ್ಧವಾದ ನಿರ್ಧಾರ ನಿಮಗೆ ಒಳ್ಳೆಯದನ್ನು ಮಾಡಲಿದೆ
- ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಸಿಂಹ
- ಅತಿಯಾದ ರಕ್ತದೊತ್ತಡ ಇರುವವರಿಗೆ ಸಮಸ್ಯೆಯಾಗಬಹುದು
- ಮನಸ್ಸು ಅಸಂತೋಷದಿಂದ ಕೂಡಿರುತ್ತದೆ
- ಸಹೋದ್ಯೋಗಿಗಳನ್ನು ನಿರ್ಲಿಕ್ಷಿಸದಿರಿ
- ಸಾಂಸಾರಿಕವಾಗಿ ವಾದ-ವಿವಾದಗಳಿರಲಿದೆ
- ವಿದ್ಯಾರ್ಥಿಗಳು ಅಧ್ಯಯನದಿಂದ ವಿಚಲಿತರಾಗಬಾರದು
- ಇಂದು ದೂರ ಪ್ರಯಾಣ ಬೇಡ ಸಮಸ್ಯೆಯಾಗಬಹುದು
- ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ನಿಮ್ಮ ಆಲೋಚನೆಗಳನ್ನು ಬೇರೆಯವರ ಮೇಲೆ ಹೇರಬೇಡಿ
- ವ್ಯಾಪಾರದಿಂದ ಲಾಭಗಳಿಸುವ ಸಾಧ್ಯತೆಯಿದೆ
- ಕುಟುಂಬದಲ್ಲಿ ಹೊಂದಾಣಿಕೆಯಿರಬೇಕು
- ವಾಹನ ಖರೀದಿಗೆ ಅವಕಾಶಗಳಿವೆ
- ಸುಖ ಜೀವನಕ್ಕೆ ಯೋಗವಿಲ್ಲ
- ಕೇವಲ ಬೇರೆಯವರ ಚಿಂತೆಯಲ್ಲಿಯೇ ಕಾಲ ಕಳೆಯುತ್ತೀರಿ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಸ್ನೇಹಿತರ ಸಹಾಯದಿಂದ ವ್ಯಾವಹಾರಿಕವಾಗಿ ಶುಭ ಮತ್ತು ಲಾಭವಿದೆ
- ಹೊಸ ಆದಾಯದ ಮೂಲಗಳು ತೆರೆಯಲಿದೆ
- ವಿರೋಧಿಗಳ ಮೇಲೆ ನಿಮ್ಮ ಪ್ರಭಾವ ಹೆಚ್ಚಾಗಬಹುದು
- ಇಂದು ನಿಮ್ಮ ಗೌರವ ಹೆಚ್ಚಾಗಲಿದೆ
- ಪೋಷಕರ ಆಶೀರ್ವಾದ ಪಡೆಯಲು ಮರೆಯಬೇಡಿ
- ಮಕ್ಕಳಿಂದ ಉತ್ತಮ ಕೀರ್ತಿ ನಿಮ್ಮದಾಗಲಿದೆ
- ದುರ್ಗಾರಾಧನೆ ಮಾಡಿ
ವೃಶ್ಚಿಕ
- ಮನೆಯಲ್ಲಿ ಕೆಲವು ಬದಲಾವಣೆಗಳಿಗೆ ಅವಕಾಶವಿದೆ
- ಸಾಂಸಾರಿಕವಾಗಿ ಪ್ರೀತಿ ಹೆಚ್ಚಾಗಲಿದೆ
- ಕೆಲಸದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು
- ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸಮಸ್ಯೆಯಾಗಬಹುದು
- ಅಧಿಕಾರಿ ವರ್ಗದಿಂದ ಅಸಮಾಧಾನ
- ಮಾನಸಿಕವಾದ ಸಮಸ್ಯೆಗಳನ್ನು ಎದುರಿಸಬೇಕಾಗಲಿದೆ
- ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ
ಧನಸ್ಸು
- ವ್ಯಾವಹಾರಿಕವಾಗಿ ಪ್ರಭಾವಿ ವ್ಯಕ್ತಿಗಳ ಸಂಪರ್ಕವನ್ನು ಹೊಂದಲು ಅವಕಾಶವಿದೆ
- ಬಹುದಿನಗಳ ಸಮಸ್ಯೆ ಪರಿಹಾರವಾಗಲಿದೆ
- ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ತೋರಿಕೆಯ ಯಾವ ಕೆಲಸವನ್ನು ಮಾಡಬೇಡಿ
- ಶ್ರೀಮಂತಿಕೆ, ಹಣದ ಬಗ್ಗೆ ಸ್ವಲ್ಪ ಎಚ್ಚರಿಕೆಯಿರಲಿ
- ನಂಬಿದ ವ್ಯಕ್ತಿಗಳು ತೊಂದರೆ ಮಾಡುತ್ತಾರೆ
- ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಮಕರ
- ಸಾಂಸಾರಿಕ ಜೀವನದಲ್ಲಿ ತುಂಬಾ ಆತಂಕ ಇರಲಿದೆ
- ಸಹೋದ್ಯೋಗಿಗಳಿಂದ ಜಾಗರೂಕರಾಗಿರಬೇಕು
- ಹಣ ಹೂಡಿಕೆಯಿಂದ ನಷ್ಟ ಹೆಚ್ಚಾಗಬಹುದು
- ಮಾನಸಿಕವಾದ ಕಿರಿಕಿರಿಯಿಂದ ಬೇಸರವಾಗಲಿದೆ
- ಯಾವುದೇ ರೀತಿಯ ದೃಢ ನಿರ್ಧಾರಗಳನ್ನು ಮಾಡಲಾಗುತ್ತಿಲ್ಲ
- ಪ್ರಯಾಣದಲ್ಲಿ ಹೆಚ್ಚು ಸಮಯ ವ್ಯರ್ಥವಾಗಲಿದೆ
- ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಕುಂಭ
- ಕಾನೂನಾತ್ಮಕ ಹೋರಾಟದಲ್ಲಿ ಜಯಗಳಿಸುತ್ತೀರಿ
- ಬೇರೆಯವರ ಸಲಹೆ ಬಹಳ ಮುಖ್ಯವಾಗಲಿದೆ
- ಮಕ್ಕಳ ವಿಚಾರದಲ್ಲಿ ರಾಜೀ ಬೇಡ ಅವರಿಗೆ ಬುದ್ಧಿ ಹೇಳಿ
- ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಿ
- ಸಮಾಜದಲ್ಲಿ ಅಪಹಾಸ್ಯಕ್ಕೆ ಒಳಗಾಗಬೇಡಿ
- ಮನೆಯಲ್ಲಿ ವಾದ-ಪ್ರತಿವಾದಗಳಲ್ಲಿ ಹಿನ್ನಡೆಯಾಗಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮೀನ
- ಹೊಸ ಕೆಲಸವನ್ನು ಆರಂಭಿಸಲು ಉತ್ತಮ ದಿನ
- ಪ್ರೇಮಿಗಳಲ್ಲಿ ಪರಸ್ಪರ ಜಗಳದ ಸಾಧ್ಯತೆಯಿದೆ
- ಸ್ವಂತ ಉದ್ಯೋಗದವರಿಗೆ ಲಾಭವಿದೆ
- ಹಿಂದೆ ಮಾಡಿದ ಪ್ರಯತ್ನಗಳು ಉತ್ತಮ ಫಲ ನೀಡಲಿದೆ
- ಮಕ್ಕಳಿಂದ ಮೊಮ್ಮಕ್ಕಳಿಂದ ಸಂತೋಷ ಆಗಲಿದೆ
- ನಿಮ್ಮ ಪ್ರಾಮಾಣಿಕತೆಯೆ ನಿಮಗೆ ಮಾರ್ಗದರ್ಶಿ
- ಈಶ್ವರನ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ