ಕಾರ್ಯಕ್ಷೇತ್ರದಲ್ಲಿ ಅತಿಯಾದ ಒತ್ತಡ ಇರಲಿದೆ
ಮಹಿಳೆಯರಿಗೆ ಆರೋಗ್ಯದ ಸಮಸ್ಯೆ ಕಾಡಬಹುದು
ಕೆಲವು ದಿನಗಳಿಂದ ಇದ್ದ ಚಿಂತೆ ಇಂದು ದೂರ ಆಗಲಿದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ಕಾರ್ಯಕ್ಷೇತ್ರದಲ್ಲಿ ಅತಿಯಾದ ಒತ್ತಡ ಇರಲಿದೆ
- ಮಹಿಳೆಯರಿಗೆ ಆರೋಗ್ಯದ ಸಮಸ್ಯೆ ಕಾಡಬಹುದು
- ಇಂದು ಯಾರಿಗೂ ಸಾಲವನ್ನು ಕೊಡಬೇಡಿ
- ವೈವಾಹಿಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಿ
- ಬೇರೆಯವರು ನಿಮ್ಮನ್ನು ಅಪಹಾಸ್ಯ ಮಾಡಬಹುದು
- ಮನೆಯಲ್ಲಿ ಶಾಂತಿಯ ವಾತಾವರಣ
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ವೃಷಭ
- ಸಾಂಸಾರಿಕವಾಗಿ ಹೊಂದಾಣಿಕೆ ಇರಲಿ
- ಕೆಲವು ದಿನಗಳಿಂದ ಇದ್ದ ಚಿಂತೆ ಇಂದು ದೂರ ಆಗಲಿದೆ
- ಕೆಲವು ನಿರ್ದಿಷ್ಟವಾದ ಪರಿಹಾರಗಳು ದೊರೆಯಬಹುದು
- ಇರುವ ವ್ಯವಸ್ಥೆಯನ್ನು ಸರಿಯಾಗಿ ಬಳಸಿಕೊಳ್ಳಿ
- ನ್ಯಾಯಾಲಯದಲ್ಲಿ ಜಯವನ್ನು ಸಾಧಿಸುತ್ತೀರಿ
- ನಿಮ್ಮ ಪ್ರಯತ್ನ ಸಫಲವಾಗಲಿದೆ
- ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ
ಮಿಥುನ
- ಇಂದು ಮಹತ್ವಾಕಾಂಕ್ಷೆಗಳು ಈಡೇರಬಹುದು
- ಸಾಲ ಹಿಂದಿರುಗಿಸುವಲ್ಲಿ ಯಶಸ್ವಿಯಾಗುತ್ತೀರಿ
- ಕೌಟುಂಬಿಕವಾಗಿ ಸಂತೋಷದಿಂದ ಇರುತ್ತೀರಿ
- ಹೊಸ ವ್ಯವಹಾರದ ಚಿಂತನೆ ಇರಲಿದೆ
- ಆಲೋಚನೆಗಳು ಧನಾತ್ಮಕವಾಗಿರಲಿ
- ದೂರದ ಆಲೋಚನೆಗಳನ್ನು ಮನಸ್ಸಲ್ಲಿಟ್ಟುಕೊಂಡು ಕೆಲಸ ಮಾಡಿ
- ಶ್ರೀರಾಮ ಚಂದ್ರನನ್ನು ಪ್ರಾರ್ಥನೆ ಮಾಡಿ
ಕಟಕ
- ಭಾವನಾತ್ಮಕವಾದ ನಿರ್ಧಾರಗಳು ಬೇಡ
- ಆರೋಗ್ಯದಲ್ಲಿ ವ್ಯತ್ಯಯ ಆಗಬಹುದು
- ಕ್ಲಿಷ್ಟಕರವಾದ ಸಮಸ್ಯೆಗಳು ಬಗೆಹರಿಯಲಿದೆ
- ಮಂಗಳ ಕಾರ್ಯದ ಬಗ್ಗೆ ಚರ್ಚೆ ಮಾಡುತ್ತೀರಿ
- ಸ್ನೇಹಿತರ ಭೇಟಿಯಿಂದ ಸಂತೋಷ ಆಗಲಿದೆ
- ಹಲವಾರು ದಿನಗಳ ಬೇಡಿಕೆ ಇಂದು ಈಡೇರಬಹುದು
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ನಿಮ್ಮೆಲ್ಲ ಕೆಲಸಗಳಿಗೆ ಕುಟುಂಬದವರ ಬೆಂಬಲ ಸಿಗಲಿದೆ
- ಸಾರ್ವಜನಿಕರ ರಂಗದಲ್ಲಿ ಕೆಲಸ ಮಾಡುತ್ತೀರಿ
- ದಾಂಪತ್ಯ ಜೀವನ ಮಧುರವಾಗಿರಲಿದೆ
- ಇಂದು ಖರ್ಚನ್ನು ನಿಯಂತ್ರಿಸಿ
- ಕಾರ್ಯಕ್ಷೇತ್ರದ ಬದಲಾವಣೆಗೆ ಪ್ರಯತ್ನ ಮಾಡುತ್ತೀರಿ ಆದರೆ ಸಾಧ್ಯ ಆಗುವುದಿಲ್ಲ
- ಅನುಮಾನದಿಂದ ಹಿನ್ನಡೆಯಾಗಬಹುದು
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಗುರಿ ಸಾಧನೆ ಮಾಡಲು ಕಷ್ಟ ಪಡುತ್ತೀರಿ
- ವ್ಯರ್ಥವಾದ ಪ್ರಯಾಣ ಮಾಡಬೇಡಿ
- ಕುಟುಂಬದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಇರಲಿದೆ
- ಹಣದ ವಿಚಾರದಲ್ಲಿ ಜಗಳ ಆಗಬಹುದು
- ಮಕ್ಕಳಿಂದ ಏನನ್ನು ನಿರೀಕ್ಷಿಸಬೇಡಿ
- ಹೆಚ್ಚಿನ ಜವಾಬ್ದಾರಿಯಿಂದ ಹೊರಗಡೆ ಉಳಿಯುತ್ತೀರಿ
- ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಮಾನಸಿಕವಾಗಿ ತೃಪ್ತಿ ಸಿಗುವ ದಿನ
- ಆಲೋಚನೆಗಳನ್ನು ಆತ್ಮೀಯರ ಜೊತೆ ಹಂಚಿಕೊಳ್ಳಿ
- ಸಂಬಂಧಿಕರು ಭೇಟಿಯಾಗಬಹುದು
- ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಹೊಂದುತ್ತೀರಿ
- ಆಸಕ್ತಿಗೆ ತಕ್ಕ ಕೆಲಸಗಳನ್ನು ಮಾಡಿ ಜಯವಿದೆ
- ನ್ಯಾಯಾಂಗ ವಿಚಾರದಲ್ಲಿ ಯಶಸ್ಸು ಸಿಗಲಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಿ
- ಸವಾಲುಗಳನ್ನು ಸ್ವೀಕರಿಸಲು ಸಿದ್ಧವಾಗಿರಿ
- ಅನಿರೀಕ್ಷಿತ ಸಮಸ್ಯೆಗಳು ಎದುರಾಗಬಹುದು
- ಇಂದು ಪ್ರೇಮಿಗಳಿಗೆ ಸಮಸ್ಯೆಯಾಗಬಹುದು
- ಗುಪ್ತರೋಗಗಳಿಂದ ಸಮಸ್ಯೆಯಾಗಬಹುದು
- ಜವಾಬ್ದಾರಿಯ ಬಗ್ಗೆ ಗಮನಕೊಡಿ
- ನವಗ್ರಹರನ್ನು ಆರಾಧನೆ ಮಾಡಿ
ಧನುಸ್ಸು
- ನಿರೀಕ್ಷಿತ ಕೆಲಸಗಳಿಗೆ ಅಡ್ಡಿಯಾಗಬಹುದು
- ಸ್ಪರ್ಧಾತ್ಮಕ ಪರೀಕ್ಷೆಗಳು ಸವಾಲಾಗಲಿದೆ
- ಉದ್ಯೋಗದಲ್ಲಿ ಸ್ವಲ್ಪ ಸಮಾಧಾನ
- ಹಣಕಾಸಿನ ವಿಚಾರ ತೃಪ್ತಿ ಕೊಡಲಿದೆ
- ಮಕ್ಕಳ ವರ್ತನೆ ಸಂತಸವನ್ನು ಕೊಡಲಿದೆ
- ಸಹೋದ್ಯೋಗಿಗಳ ಕಲಹ ನಿಮಗೆ ತೊಂದರೆಯಾಗಬಹುದು
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಕರ
- ವೃತ್ತಿ ಜೀವನದಲ್ಲಿ ಮುನ್ನಡೆಯನ್ನು ಕಾಣುತ್ತೀರಿ
- ಇಂದು ವಿದ್ಯಾರ್ಥಿಗಳಿಗೆ ಅನುಕೂಲವಿದೆ
- ಬಲವಾದ ಲಾಭದ ಮಾರ್ಗವನ್ನು ಹುಡುಕುತ್ತೀರಿ
- ಒತ್ತಡ ಅನಾರೋಗ್ಯ ಒಟ್ಟಿಗೆ ಕಾಡಬಹುದು
- ವಾಹನ ಚಲನೆಯಲ್ಲಿ ಎಚ್ಚರವಹಿಸಿ
- ನಿಮ್ಮ ದೌರ್ಬಲ್ಯಗಳನ್ನು ತಿಳಿದುಕೊಳ್ಳಬೇಕು
- ಶ್ರೀರಾಮ ಚಂದ್ರನನ್ನು ಪ್ರಾರ್ಥನೆ ಮಾಡಿ
ಕುಂಭ
- ಹೆಚ್ಚು ಉತ್ಸಾಹದಿಂದ ಮಾಡಿದ ಕೆಲಸಗಳು ನಿರಾಸೆ ಆಗಲಿದೆ
- ಅದೃಷ್ಟವಿಲ್ಲ ಅನ್ನುವಂತಹ ಬೇಸರದ ಮಾತನ್ನು ಆಡುತ್ತೀರಿ
- ಇಂದು ಹೆಚ್ಚು ಖರ್ಚು ಮಾಡುತ್ತೀರಿ
- ಮಕ್ಕಳಿಂದ ಹಣದ ಸಹಾಯ ಸಿಗಲಿದೆ
- ಸ್ನೇಹಿತರ ಟೀಕೆಗೆ ಗುರಿಯಾಗುತ್ತೀರಿ
- ಅಕ್ಕಪಕ್ಕದವರ ಜೊತೆ ವಿಶ್ವಾಸವಾಗಿರಿ
- ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ
ಮೀನಾ
- ನಿಮ್ಮ ವಿರೋಧಿಗಳು ನಿಮ್ಮ ಜೊತೆ ರಾಜಿ ಮಾಡಿಕೊಳ್ಳಲು ಕಾಯ್ತಾ ಇರ್ತಾರೆ
- ಕೋರ್ಟ್ ಕೇಸ್ ಗಳಲ್ಲಿ ಜಯ ಸಿಗಲಿದೆ
- ಭೂ ಸಂಬಂಧವಾದ ವಿಚಾರದಲ್ಲಿ ಪ್ರಗತಿ ಇರಲಿದೆ
- ಮನೆ ಕಟ್ಟುವ ವಿಚಾರದಲ್ಲಿ ಸಂತೋಷ ಆಗಲಿದೆ
- ಮಹಿಳೆಯರಿಗೆ ಕೆಲವು ಸಮಸ್ಯೆಯಾಗಬಹುದು
- ಅನ್ಯೋನತೆ ಅಥವಾ ಹೊಂದಾಣಿಕೆ ಅತಿ ಮುಖ್ಯ ಆಗಲಿದೆ
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ