newsfirstkannada.com

×

Accident: ಭೀಕರ ಅಪಘಾತ.. ಬೈಕ್ ಸವಾರ ದಾರುಣ ಸಾವು; ಬೆಚ್ಚಿ ಬೀಳಿಸಿದೆ ಕೊನೆ ಕ್ಷಣದ ವಿಡಿಯೋ

Share :

Published September 20, 2024 at 2:27pm

Update September 20, 2024 at 2:29pm

    ವೇಗವಾಗಿ ಬೈಕ್‌ ಚಲಾಯಿಸುವಾಗ ಅಡ್ಡ ಬಂದ ಕಾರು ಭಯಾನಕ ಡಿಕ್ಕಿ

    ಜೊತೆಯಲ್ಲಿದ್ದ ಸ್ನೇಹಿತನ ಕ್ಯಾಮೆರಾದಲ್ಲಿ ಬೈಕ್ ಸವಾರನ ಕೊನೆ ಕ್ಷಣದ ದೃಶ್ಯ

    ಅನಾಹುತಕ್ಕೆ ಕಾರಣವಾದ ಕಾರು ಚಾಲಕ ಬಂಧನ ಬಳಿಕ ಬಿಡುಗಡೆ

ನವದೆಹಲಿ: 23 ವರ್ಷದ ಬೈಕ್ ಸವಾರ ಭೀಕರ ಅಪಘಾತಕ್ಕೆ ತುತ್ತಾದ ಭಯಾನಕ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ. ಕಾರಿಗೆ ಬೈಕ್ ಗುದ್ದಿದ ಕೊನೆ ಕ್ಷಣದ ವಿಡಿಯೋ ಆತನ ಸ್ನೇಹಿತನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತದ ಭಯಾನಕ ದೃಶ್ಯ ಬೆಚ್ಚಿ ಬೀಳಿಸುವಂತಿದೆ.

ಕಳೆದ ಸೆಪ್ಟೆಂಬರ್ 15ರಂದು ಗುರುಗ್ರಾಮ್‌ನ ಗಾಲ್ಫ್ ಕೋರ್ಸ್‌ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಅಕ್ಷತ್ ಗಾರ್ಗ್ ಎಂಬ ಯುವಕ ವೇಗವಾಗಿ ಬೈಕ್‌ ಚಲಾಯಿಸುವಾಗ SUV ಕಾರು ರಾಂಗ್‌ ಸೈಡ್‌ನಿಂದ ಬಂದು ಗುದ್ದಿದೆ. ಕಾರಿಗೆ ಡಿಕ್ಕಿಯಾದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಹೆದ್ದಾರಿಯಲ್ಲಿ ಸತ್ತು ಬಿದ್ದಿದ್ದ ನಾಯಿಯನ್ನು ಎತ್ತಲು ಹೋಗಿ ಅಪಘಾತ.. ಓರ್ವ ಸಾವು, ಮತ್ತೋರ್ವ ಗಂಭೀರ 

23 ವರ್ಷದ ಅಕ್ಷತ್ ಗಾರ್ಗ್ ದೆಹಲಿಯ ದ್ವಾರಕ ನಿವಾಸಿ. ಕಳೆದ ಭಾನುವಾರ ಅಕ್ಷತ್ ಹಾಗೂ ಸ್ನೇಹಿತರು ರಸ್ತೆಯಲ್ಲಿ ಬೈಕ್ ರೈಡಿಂಗ್ ಹೋಗಿದ್ದಾರೆ. ಈ ವೇಳೆ ವೇಗವಾಗಿ ಹೋಗುತ್ತಿದ್ದ ಅಕ್ಷತ್‌ಗೆ ರಾಂಗ್‌ ಸೈಡ್‌ನಿಂದ ಬಂದ ಮಹೀಂದ್ರಾ XUV 3XO ಕಾರು ಡಿಕ್ಕಿಯಾಗಿದೆ. ಕೂಡಲೇ ಯುವಕನನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಭೀಕರ ಅಪಘಾತದಲ್ಲಿ ಅಕ್ಷತ್ ಗಾರ್ಗ್‌ ಸಾವನ್ನಪ್ಪಿದ್ದ ಲೈವ್‌ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಜೊತೆಗೆ ಅಪಘಾತಕ್ಕೆ ಕಾರಣವಾದ ಕಾರು ಚಾಲಕನ ಮೇಲೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಅನಾಹುತಕ್ಕೆ ಕಾರಣವಾದ ಕಾರು ಚಾಲಕ ಕುಲ್ದೀಪ್ ಠಾಕೂರ್‌ ಮೇಲೆ FIR ದಾಖಲಿಸಿದ ಪೊಲೀಸರು ಬಂಧಿಸಿದ್ದರು. ಆದರೆ ಜಾಮೀನಿನ ಮೇಲೆ ಕಾರು ಚಾಲಕನನ್ನು ರಿಲೀಸ್ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Accident: ಭೀಕರ ಅಪಘಾತ.. ಬೈಕ್ ಸವಾರ ದಾರುಣ ಸಾವು; ಬೆಚ್ಚಿ ಬೀಳಿಸಿದೆ ಕೊನೆ ಕ್ಷಣದ ವಿಡಿಯೋ

https://newsfirstlive.com/wp-content/uploads/2024/09/Mumbai-Road-Accident.jpg

Load More