newsfirstkannada.com

ಹೋಟೆಲ್​ ಗ್ರಾಹಕರಿಗೂ ತಟ್ಟಿದ ಬೆಲೆ ಏರಿಕೆ ಬಿಸಿ; ಮುಂದಿನ ತಿಂಗಳಿಂದ ತಿಂಡಿ ತಿನಿಸು ದುಬಾರಿ

Share :

24-07-2023

    ಹೋಟೆಲ್​ ಗ್ರಾಹಕರಿಗೂ ತಟ್ಟಿದ ಬೆಲೆ ಏರಿಕೆ ಬಿಸಿ..!

    ಆ. 1ರಿಂದ ಹೋಟೆಲ್​​ ಊಟ, ತಿಂಡಿ ಬೆಲೆ ದುಬಾರಿ

    ಬೆಂಗಳೂರಿಗರ ಗಾಯದ ಮೇಲೆ ಬರೆ ಎಳೆದ ಬೆಲೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ತರಕಾರಿ ಹಾಗೂ ಹಾಲಿನ ಬೆಲೆ ಏರಿಕೆಯಾಗಿದ ಬೆನ್ನಲ್ಲೇ ಹೋಟೆಲ್​ಗಳಲ್ಲಿ ತಿಂಡಿ-ತಿನಿಸುಗಳ ಬೆಲೆ ಕೂಡ ಹೆಚ್ಚಾಗಲಿದೆ. ಈ ಮೂಲಕ ಹೋಟೆಲ್​ ಅನ್ನೇ ಅವಲಂಬಿತರಾಗಿರುವ ಗ್ರಾಹಕರ ಜೇಬಿಗೆ ಮತ್ತಷ್ಟು ಬೇಸರ ತಂದಿದೆ. ಅಗತ್ಯ ವಸ್ತುಗಳ ಬಳಿಕ ಹೋಟೆಲ್ ಫುಡ್ ಕೂಡ ಶೇಕಡ 10ರಷ್ಟು ದರ ಏರಿಕೆ ಮಾಡೋಕೆ ಹೋಟೆಲ್ ಅಸೋಸಿಯೇಷನ್ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಗ್ಯಾಸ್, ದಿನಸಿ, ತರಕಾರಿಯ ಬೆಲೆಗಳು ಗಗನಕ್ಕೆ ಏರಿವೆ. ಕಾಫಿ ಪೌಡರ್, ಹಾಲಿನ ದರಗಳಲ್ಲೂ ಹೆಚ್ಚಳವಾಗಿವೆ. ಹೀಗಾಗಿ ಹೋಟೆಲ್​ಗಳಲ್ಲೂ ದರ ಏರಿಕೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ. ರೈಸ್ ಬಾತ್​ ಸದ್ಯ 40 ರಿಂದ 50 ರೂಪಾಯಿ ಬೆಲೆ ಇದ್ದು, 44-55 ಏರಿಕೆಯಾಗಲಿದೆ. ಎರಡು ಇಡ್ಲಿಗೆ 30 ರಿಂದ 40 ರೂಪಾಯಿ ಇದ್ದು, 50 ರೂಪಾಯಿಗೆ ಏರಿಕೆ‌ಯಾಗುವ ಸಾಧ್ಯತೆಗಳಿದೆ. ಸೆಟ್ ದೋಸೆ ಸದ್ಯದ ದರ‌‌‌‌‌‌‌ 60 ರಿಂದ 65 ರೂಪಾಯಿ ಇದ್ದು, 65 ರಿಂದ 70 ಏರಿಕೆ‌ ಸಾಧ್ಯತೆಗಳಿದೆ.

ಇನ್ನು, ಬೆಣ್ಣೆ ಮಸಾಲೆ ದೋಸೆಗೆ ಸದ್ಯ ‌‌‌‌70 ರೂಪಾಯಿ ಇದ್ದು, 80 ರೂಪಾಯಿ ಹೆಚ್ಚಾಗಬಹುದು. ಇತ್ತ ಚೌಚೌ ಬಾತ್​ಗೆ 40 ರಿಂದ 50ರೂಪಾಯಿ ಇದ್ದು, 50ರಿಂದ 60ಕ್ಕೆ ಹೆಚ್ಚಾಗಬಹುದು. ಬಿಸಿಬಿಸಿ ಪೂರಿಗೆ 50-60ಗೆ ಸಿಕ್ತಿದ್ರೆ ಮುಂದಿನ ದಿನಗಳಲ್ಲಿ 55 ರಿಂದ 65 ರೂಪಾಯಿ ಹೆಚ್ಚಾಗಬಹುದು. ಇನ್ನು ಮಿನಿ ಮಿಲ್ಸ್ ವಿಷ್ಯಕ್ಕೆ ಬಂದ್ರೆ ಸದ್ಯ 60 ರಿಂದ 65 ರೂಪಾಯಿ ಇರೋದು ಮುಂದೆ 70 ರಿಂದ 75 ಏರಿಕೆ‌ ಸಾಧ್ಯತೆಗಳಿದೆ. 40 ರಿಂದ 50 ರೂಪಾಯಿ ಬೆಲೆ ಇರೋ ರೈಸ್ – ಸಂಬಾರ್​ 50ರಿಂದ 60 ಆಗಬಹುದು. 12 ರಿಂದ15 ರೂಪಾಯಿ ಇರೋ ಕಾಫಿ-ಟೀ15-18 ರೂಪಾಯಿ ಹೆಚ್ಚಾಗಬಹುದು. ಕರ್ಡ್ ರೈಸ್ ಸದ್ಯಕ್ಕೆ 40-50 ಸಿಗುತ್ತಿದ್ದು, 45-55 ಹೆಚ್ಚಾಗಬಹುದು.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರೋ ಜನ ಸಾಮಾನ್ಯರಿಗೆ ಹೋಟೆಲ್​ ಫುಡ್​ ಬೆಲೆ ಏರಿಕೆ ಆಘಾತ ತಂದಿದೆ. ದರ ಹೆಚ್ಚಳ ನಿರ್ಧಾರದ ವಿರುದ್ಧ ಸಿಡಿದೆದ್ದಿರೋ ಹೋಟೆಲ್​ ಗ್ರಾಹಕರು ಆಕ್ರೋಶ ಹೊರ ಹಾಕ್ತಿದ್ದಾರೆ. ಆಗಸ್ಟ್ 1ರಿಂದ ಅಧಿಕೃತವಾಗಿ ದರಗಳ ಏರಿಕೆಗೆ ಹೋಟೆಲ್ ಅಸೋಸಿಯೇಷನ್ ತಯಾರಿ ನಡೆಸುತ್ತಿದೆ. ಮಂಗಳವಾರ ದರ ಏರಿಕೆಯ ಕುರಿತಂತೆ ಸಭೆ ನಡೆಯಲಿದೆ. ಕೆಲ ಹೋಟೆಲ್​ಗಳು ಶೇಕಡಾ 20ರಷ್ಟು ದರ ಏರಿಕೆಗೆ ನಿರ್ಧಾರ ಮಾಡಿದೆ. ಆದ್ರೆ ಸದ್ಯಕ್ಕೆ ಶೇಕಡಾ 10ರಷ್ಟು ದರ ಏರಿಕೆ ಮಾಡುವುದಕ್ಕಷ್ಟೇ ಚಿಂತನೆ ನಡೆಸಿದೆ ಎನ್ನಲಾಗ್ತಿದೆ. ಮಾಲೀಕರ ಅಸೋಸಿಯೇಷನ್ ಸಭೆಯಲ್ಲಿ ಎಲ್ಲವೂ ಫೈನಲ್ ಆಗಲಿದೆ. ಬೇರೆ ಬೇರೆ ಊರು, ರಾಜ್ಯಗಳಿಂದ ವಲಸೆ ಬಂದಿರೋ ವಿದ್ಯಾರ್ಥಿಗಳು, ಬ್ಯಾಚುಲರ್ಸ್​​, ಹೋಟೆಲ್​ ಊಟವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಈಗಾಗಲೇ ತರಕಾರಿ, ಅಡುಗೆ ಮನೆ ಅಗತ್ಯ ಪದಾರ್ಥಗಳ ಬೆಲೆ ಏರಿಕೆಯಿಂದ ಬೇಸತ್ತಿರೋ ಜನ ಹಿಡಿಹಿಡಿ ಶಾಪ ಹಾಕ್ತಿದ್ದಾರೆ. ಇದರ ಜೊತೆಗೆ ಹೋಟೆಲ್​ ಫುಡ್​ ಬೆಲೆ ಕೂಡ ಏರಿಕೆಯಾದರೆ ಬಡವರ ಜೇಬಿಗೆ ಕತ್ತರಿ ಹಾಕಿದಂತಾಗುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೋಟೆಲ್​ ಗ್ರಾಹಕರಿಗೂ ತಟ್ಟಿದ ಬೆಲೆ ಏರಿಕೆ ಬಿಸಿ; ಮುಂದಿನ ತಿಂಗಳಿಂದ ತಿಂಡಿ ತಿನಿಸು ದುಬಾರಿ

https://newsfirstlive.com/wp-content/uploads/2023/07/food-rate-1.jpg

Load More