ತರಕಾರಿ, ದಿನಸಿ ಸಾಮಾನು ಆಯ್ತು
ಹಾಲಿನ ಬೆಲೆ ಕೂಡ ಏರಿಕೆ ಆಯ್ತು
ಈಗ ಹೋಟೆಲ್ ಊಟದ ಸರದಿ..!
ಬೆಂಗಳೂರು: ಟೊಮ್ಯಾಟೋ ಆಯ್ತು, ತರಕಾರಿ ಆಯ್ತು, ಬೇಳೆ ಕಾಳು, ಕಾಫಿ ಪೌಡರ್ ಆಯ್ತು, ಮೊಟ್ಟೆ- ಮಾಂಸ ಎಲ್ಲವೂ ತನ್ನ ಬೆಲೆಯನ್ನ ಏರಿಕೊಂಡಿದ್ದಾಯ್ತು. ಇಷ್ಟೇ ಇನ್ಮುಂದೆ ನಮ್ಮ ಜೇಬಲ್ಲಿರೋ ದುಡ್ಡು ಫುಲ್ ಖಾಲಿ ಅಂದಿದ್ದೆವು. ಈ ಮಧ್ಯೆ ಸ್ವಲ್ಪ ತಡೆಯಿರಿ ನಾವು ಚೂರು ಬೆಲೆ ಏರಿಕೆ ಮಾಡ್ತೀವಿ ಎಂದು ಹೋಟೆಲ್ ಮಾಲೀಕರು ಮುಂದಾಗಿದ್ದಾರೆ. ಇಂದಿನಿಂದ ಹೋಟೆಲ್ನಲ್ಲಿ ಊಟ, ತಿಂಡಿ ದುಬಾರಿ ಆಗಿದೆ.
ಹೌದು, ಬೆಲೆ ಏರಿಕೆ ಪಟ್ಟಿಗೆ ಇಂದಿನಿಂದ ಹೋಟೆಲ್ ಫುಡ್ ದರವೂ ಸೇರ್ಪಡೆಯಾಗಲಿದೆ. ತಿಂಡಿಗಳ ಬೆಲೆಯನ್ನ ಶೇಕಡಾ 10ರಷ್ಟು ಏರಿಕೆ ಮಾಡಲು ಹೋಟೆಲ್ ಅಸೋಸಿಯೇಷನ್ ನಿರ್ಧಾರ ಮಾಡಿದೆ. ಸದ್ಯ ಗ್ಯಾಸ್, ದಿನಸಿ, ತರಕಾರಿ ಬೆಲೆ ಗಗನಕ್ಕೇರಿದೆ. ಹೀಗಾಗಿ ಕಾಫಿ-ಟೀ, ಊಟ- ತಿಂಡಿಗಳ ದರವನ್ನು ಹೆಚ್ಚಿಸಲಾಗುತ್ತದೆ.
ಇನ್ಮುಂದೆ ಹೋಟೆಲ್ ಫುಡ್ ದುಬಾರಿ
ರೈಸ್ ಬಾತ್- 44-55 ರೂ.
ಇಡ್ಲಿ- 35-45 ರೂ.
ಸೆಟ್ ದೋಸೆ- 65-70 ರೂ.
ಬೆಣ್ಣೆ ಮಸಾಲೆ- 80 ರೂ.
ಚೌಚೌ ಬಾತ್- 45-55 ರೂ.
ಪೂರಿ- 55-65 ರೂ.
ಮಿನಿ ಮೀಲ್ಸ್-75 – 80 ರೂ.
ರೈಸ್ – ಸಾಂಬಾರ್- 45-55 ರೂ.
ಕಾಫಿ-ಟೀ- 15-18 ರೂ.
ಚಪಾತಿ (ಎರಡಕ್ಕೆ)- 45-65 ರೂ.
ಬರೀ ಫುಡ್ ಅಷ್ಟೇ ಅಲ್ಲ, ಇಂದಿನಿಂದ ನಂದಿನ ಹಾಲಿನ ದರ ಕೂಡ ಹೆಚ್ಚಳವಾಗಲಿದೆ. ನಂದಿನಿ ಹಾಲಿನ ದರವನ್ನ ಪ್ರತಿ ಲೀಟರ್‌ಗೆ 3ರಷ್ಟು ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ. ಜುಲೈ 21ರಂದು ನಡೆದ ಸಭೆಯಲ್ಲಿಯೇ ಈ ಬಗ್ಗೆ ನಿರ್ಧರಿಸಿ ಸಿಎಂ ಸಿದ್ದರಾಮಯ್ಯ ಆಗಸ್ಟ್ 1 ರಿಂದ ಅಧಿಕೃತವಾಗಿ ಜಾರಿಗೆ ಬರುವಂತೆ ಸೂಚನೆ ನೀಡಿದ್ರು.
ಒಟ್ನಲ್ಲಿ ಗ್ಯಾರಂಟಿ ಖುಷಿಯಲ್ಲಿ ತೇಲಾಡುತ್ತಿದ್ದವರಿಗೆ ಬೆಲೆ ಏರಿಕೆ ಶಾಕ್ ತಟ್ಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಹುನ್ನಾರ ಎಂದು ಸಿಟಿ ಮಂದಿ ಗರಂ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ