ಅಕ್ಟೋಬರ್ 15 ರಂದು ನಡೆಯುವ ವಿಶ್ವಕಪ್ ಪಂದ್ಯ
ಐಷರಾಮಿ ಹೋಟೆಲ್ಗಳ ಬಾಡಿಗೆ 10 ಪಟ್ಟು ಹೆಚ್ಚಳ
ಎಷ್ಟು ಮಂದಿ ರೂಮ್ಸ್ ಬುಕ್ ಮಾಡುವ ನಿರೀಕ್ಷೆ ಇದೆ?
ವಿಶ್ವಕಪ್ನ ಹೈ-ವೋಲ್ಟೇಜ್ ಕದನಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್ 15 ರಂದು ಭಾರತ-ಪಾಕಿಸ್ತಾನ ತಂಡಗಳು ಗುಜರಾತ್ನ ಅಹ್ಮದಾಬಾದ್ನಲ್ಲಿ ಸೆಣಸಾಟ ನಡೆಸಲಿವೆ. ಅದಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಟಿಕೆಟ್ ಖರೀದಿಸಲು ಅಭಿಮಾನಿಗಳು ಕಾದು ಕೂತಿದ್ದಾರೆ.
ಇದೆಲ್ಲದರ ಮಧ್ಯೆ ಅಹ್ಮದಾಬಾದ್ನಲ್ಲಿರುವ ಹೋಟೆಲ್ಗಳಿಗೆ ಭಾರೀ ಬೇಡಿಕೆ ಬಂದಿದೆ. ಅಕ್ಟೋಬರ್ 15 ರಂದು ನಡೆಯುವ ಪಂದ್ಯ ವೀಕ್ಷಣೆಗಾಗಿ ಈಗಾಲೇ ಹೋಟೆಲ್ ಬುಕ್ಕಿಂಗ್ ಶುರುವಾಗಿದೆ. ಪರಿಣಾಮ ಹೋಟೆಲ್ ರೂಮ್ಗಳ ರೇಟ್, ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. ವರದಿಗಳ ಪ್ರಕರ ಸುಮಾರು 10 ಪಟ್ಟು ಹೋಟೆಲ್ ರೂಮ್ ರೇಟ್ ಹೆಚ್ಚಾಗಿದೆ.
ಕೆಲವು ಐಷರಾಮಿ ಹೋಟೆಲ್ಗಳು ಸುಮಾರು 50 ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೆ ಏರಿಸಿವೆ. ಈ ಎಲ್ಲಾ ಲಕ್ಸುರಿ ಹೋಟೆಲ್ಗಳು ಸಾಮಾನ್ಯ ದಿನಗಳಲ್ಲಿ 5000 ಇಂದ 8000 ರೂಪಾಯಿವರೆಗೆ ಶುಲ್ಕ ವಿಧಿಸುತ್ತಿದ್ದವು. ಅಹ್ಮದಾಬಾದ್ನಲ್ಲಿ ಒಟ್ಟು 5 ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಪಂದ್ಯ ಸೇರಿ ಫೈನಲ್ ಪಂದ್ಯ ಕೂಡ ಇಲ್ಲಿಯೇ ನಡೆಯಲಿದೆ. ಅಹ್ಮದಾಬಾದ್ ನಗರವು ಇದೇ ಮೊದಲ ಬಾರಿಗೆ ಬಿಗ್ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುತ್ತಿದೆ.
ಒಂದು ಮಾಹಿತಿ ಪ್ರಕಾರ ನಿಗಧಿತ ಹೋಟೆಲ್ಗಳಲ್ಲಿ ಒಟ್ಟು 10,000 ರೂಮ್ಗಳಿವೆ. ಭಾರತ-ಪಾಕ್ ಪಂದ್ಯದ ವೇಳೆ 40,000 ಅಭಿಮಾನಿಗಳು ಬುಕ್ ಮಾಡುವ ನಿರೀಕ್ಷೆ ಇದೆ. ಇನ್ನು, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಒಂದು ಲಕ್ಷ ಮಂದಿ ಕೂತು ಪಂದ್ಯವನ್ನು ವೀಕ್ಷಣೆ ಮಾಡಬಹುದಾಗಿದೆ.
ಐಷಾರಾಮಿ ಹೋಟೆಲ್ಗಳು ವಿಶ್ವಕಪ್ ಪಂದ್ಯಗಳ ಅವಧಿಯಲ್ಲಿ ಬಾಡಿಗೆ ದರವನ್ನು ಹೆಚ್ಚಿಸಿವೆ. ಜೊತೆಗೆ ವಿವಿಧ ಕೋಟಾದಡಿ ನೀಡುತ್ತಿದ್ದ ಬುಕ್ಕಿಂಗ್ ವ್ಯವಸ್ಥೆಯನ್ನೂ ಬಂದ್ ಮಾಡಲಾಗಿದೆ ಎಂದು ಗುಜರಾತ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ನ ಅಧ್ಯಕ್ಷ ನರೇಂದ್ರ ಸೋಮನಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ