newsfirstkannada.com

×

ಬಾಡಿಗೆದಾರರೇ ಎಚ್ಚರ.. ಬೆಡ್‌ರೂಮ್, ಟಾಯ್ಲೆಟ್‌ನಲ್ಲಿ ಕ್ಯಾಮೆರಾ ಇಟ್ಟಿದ್ದ ಮನೆ ಮಾಲೀಕ; ತಪ್ಪದೇ ಈ ಸ್ಟೋರಿ ಓದಿ!

Share :

Published September 25, 2024 at 6:20am

    ಯುಪಿಎಸ್​ಸಿ ಆಕಾಂಕ್ಷಿ ಯುವತಿಗೆ ಮನೆ ಬಾಡಿಗೆ ನೀಡಿದ್ದ ಕಿರಾತಕ

    ಮಲಗುವ ಕೋಣೆ, ಸ್ನಾನದ ಕೋಣೆ, ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ

    ಸಣ್ಣ ಪುಟ್ಟ ರಿಪೇರಿ ನೆಪದಲ್ಲಿ ಆ ಯುವತಿಯ ಮನೆಗೆ ಹೋಗುತ್ತಿದ್ದ

ನವದೆಹಲಿ: ಡಿಜಿಟಲ್ ತಂತ್ರಜ್ಞಾನ ಹೆಚ್ಚು ಹೆಚ್ಚು ಜನಪ್ರಿಯವಾದಂತೆ ಅದರ ದುರುಪಯೋಗವೂ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಿಡನ್ ಕ್ಯಾಮೆರಾಗಳ ಬಳಕೆ ಹೆಚ್ಚುತ್ತಿದೆ. ಹಿಡನ್ ಕ್ಯಾಮೆರಾಗಳನ್ನು ಸ್ಪೈ ಕ್ಯಾಮೆರಾ ಅಂತ ಕರೆಯಲಾಗುತ್ತದೆ.

ಕೆಲವೊಮ್ಮೆ ಒಳ್ಳೆ ಉದ್ದೇಶಕ್ಕೆ, ಹಲವು ಬಾರಿ ಕೆಟ್ಟ ಉದ್ದೇಶಕ್ಕೆ ಹಿಡನ್ ಕ್ಯಾಮೆರಾ ಬಳಕೆ ಹೆಚ್ಚುತ್ತಿದೆ. ಹೋಟೆಲ್ ರೂಮ್, ಸಾರ್ವಜನಿಕ ವಿಶ್ರಾಂತಿ ಸ್ಥಳದಲ್ಲಿ ಇವುಗಳನ್ನು ಬಳಸುವ ದುಷ್ಟರೂ ಇದ್ದಾರೆ. ಇಂತಹ ವಿಚಾರಗಳಲ್ಲಿ ಕೆಲವೊಮ್ಮೆ ನಂಬಿಕಸ್ಥರಿಂದಲೇ ದ್ರೋಹವಾಗುತ್ತಿದೆ. ಈ ವಿಚಾರದಲ್ಲಿ ಹೆಣ್ಣು ಮಕ್ಕಳು ಎಷ್ಟು ಎಚ್ಚರಿಕೆ ವಹಿಸಿದರೂ ಕಡಿಮೆಯೇ.

ಇದನ್ನೂ ಓದಿ: ರಸ್ತೆ ಗುಂಡಿಯಲ್ಲಿ ಹೆಂಡತಿ ಬಿದ್ದಿದ್ದಕ್ಕೆ ಗಂಡನ ಮೇಲೆ ಕೇಸ್‌ ಹಾಕಿದ ಪೊಲೀಸರು; ಆಮೇಲೇನಾಯ್ತು? 

ದೆಹಲಿಯಲ್ಲಿ ಮನೆ ಬಾಡಿಗೆಗೆ ನೀಡಿದ್ದ ಮಾಲೀಕನೊಬ್ಬ ಮನೆಯಲ್ಲಿ ಸ್ಪೈ ಕ್ಯಾಮೆರಾ ಬಳಸಿ ಸಿಕ್ಕಿಬಿದ್ದಿದ್ದಾನೆ. ಅದೂ ಯುಪಿಎಸ್​ಸಿ ಆಕಾಂಕ್ಷಿ ಯುವತಿಗೆ ಮನೆ ಬಾಡಿಗೆ ನೀಡಿದ್ದ ಕಿರಾತಕ ಅವರಿಗೆ ಗೊತ್ತಿಲ್ಲದಂತೆ ಹಿಡನ್ ಕ್ಯಾಮೆರಾ ಬಳಸಿದ್ದಾನೆ.

ಬಾಡಿಗೆಗೆ ಇದ್ದ ಯುವತಿ ಊರಿಗೆ ಹೋಗಬೇಕಾದ ಸಂದರ್ಭದಲ್ಲಿ ಮನೆ ಕೀ ಮನೆ ಮಾಲೀಕನಿಗೆ ಕೊಟ್ಟು ಹೋಗುತ್ತಿದ್ದಳು. ಆ ಯುವತಿಯ ನಂಬಿಕೆಯನ್ನೇ ದುರುಪಯೋಗಪಡಿಸಿಕೊಂಡ ಮಾಲೀಕ ಆಕೆಯ ಮಲಗುವ ಕೋಣೆ, ಸ್ನಾನದ ಕೋಣೆ, ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿದ್ದಾನೆ.

ಕ್ಯಾಮೆರಾ ಇಟ್ಟ ಮನೆ ಮಾಲೀಕ ಆ ಮನೆಯಲ್ಲಿ ಸಣ್ಣ ಪುಟ್ಟ ರಿಪೇರಿ ನೆಪದಲ್ಲಿ ಆ ಯುವತಿಯ ಮನೆಗೆ ಹೋಗಿ ಕ್ಯಾಮೆರಾದ ಡೇಟಾವನ್ನೂ ಹೊರ ತೆಗೆದಿದ್ದಾನೆ. ಇದೇ ರೀತಿ ಪದೇ ಪದೇ ಮನೆ ಕೀಗಾಗಿ ಯುವತಿ ಮೇಲೆ ಒತ್ತಡ ಹೇರಿದ್ದಕ್ಕೆ ಅನುಮಾನಗೊಂಡ ಯುವತಿ ತನ್ನ ಮನೆಯನ್ನು ಪರಿಶೀಲಿಸಿದ್ದಾಳೆ. ಆಗ ಬಲ್ಬ್​​ನ ಹೋಲ್ಡರ್​ನಲ್ಲಿ ಕ್ಯಾಮೆರಾ ಇಟ್ಟಿರುವುದು ಪತ್ತೆಯಾಗಿದೆ.

ಇದನ್ನೂ ಓದಿ: 3 ಸಿಸಿಟಿವಿ, 3 ಬಾಡಿ ವೋರ್ನ್ ಕ್ಯಾಮೆರಾ; ಅಬ್ಬಾಬ್ಬ..! ದರ್ಶನ್ ಮೇಲೆ 24 ಗಂಟೆ ನಿಗಾ ಇಡಲು ಏನೆಲ್ಲ ವ್ಯವಸ್ಥೆ ಗೊತ್ತಾ? 

ತಕ್ಷಣವೇ ಆಕೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು 30 ವರ್ಷದ ಮನೆ ಮಾಲೀಕ ಕರಣ್​​ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪರಿಶೀಲನೆ ವೇಳೆ 3 ಹಿಡನ್ ಕ್ಯಾಮೆರಾ ಪತ್ತೆಯಾಗಿದ್ದು, ಯಾವುದೇ ಕ್ಯಾಮೆರಾ ನೆಟವರ್ಕ್​ಗೆ ಅಳವಡಿಸಿರಲಿಲ್ಲ. ಬದಲಿಗೆ ಮೆಮೋರಿ ಕಾರ್ಡ್​​ನಲ್ಲಿ ಡೇಟಾ ಸಂಗ್ರಹಿಸಲಾಗುತ್ತಿತ್ತು. ಹಿಡನ್ ಕ್ಯಾಮೆರಾ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಡಿಗೆದಾರರೇ ಎಚ್ಚರ.. ಬೆಡ್‌ರೂಮ್, ಟಾಯ್ಲೆಟ್‌ನಲ್ಲಿ ಕ್ಯಾಮೆರಾ ಇಟ್ಟಿದ್ದ ಮನೆ ಮಾಲೀಕ; ತಪ್ಪದೇ ಈ ಸ್ಟೋರಿ ಓದಿ!

https://newsfirstlive.com/wp-content/uploads/2024/09/Hidden-Camera.jpg

Load More