newsfirstkannada.com

×

ಬೆಂಗಳೂರಲ್ಲಿ ಬಾಡಿಗೆದಾರರಿಗೂ ಇಂಟರ್ವ್ಯೂ; ಪಾಸ್​ ಆದ್ರೆ ಮಾತ್ರ ಸಿಗುತ್ತೆ ಮನೆ!

Share :

Published July 18, 2023 at 6:19am

Update July 18, 2023 at 6:23am

    ಬೆಂಗಳೂರಿನಲ್ಲಿ ಮನೆ ಬಾಡಿಗೆ ಪಡೆಯುವುದೇ ದೊಡ್ಡ ತಲೆ‌ ನೋವು

    ಬಾಡಿಗೆ ಮನೆ ಪಡೆಯಲು ಮಾಲೀಕರಿಗೆ ಕೋಡಬೇಕು ಸಂದರ್ಶನ

    ಟ್ವೀಟ್ ಮಾಡುವ ಮೂಲಕ ತನ್ನ ನೋವನ್ನು ಹಂಚಿಕೊಂಡ ಟೆಕ್ಕಿ..!

ಬೆಂಗಳೂರು: ಸರ್ಕಾರಿ‌ ಬಸ್​ನಲ್ಲಿ ಸೀಟು. ಹೊಟೇಲ್​ನಲ್ಲಿ ಟೊಮ್ಯಾಟೊ ಬಾತು. ಬೆಂಗಳೂರು ನಗರದಲ್ಲಿ ಬಾಡಿಗೆ ಮನೆ. ಸಿಗೋದು ಅಷ್ಟು ಸುಲಭವಿಲ್ಲ. ಸಿಲಿಕನ್ ಸಿಟಿಯಲ್ಲಿ ಈಗ ಎಲ್ಲವೂ ಕಷ್ಟ. ಅದರಲ್ಲೂ ಮನೆ ಬೇಕು ಅಂದ್ರೆ ಹಣ‌‌ ಮಾತ್ರವಲ್ಲ. ಓನರ್‌ ನಡೆಸುವ ಇಂಟರ್ವ್ಯೂ ಕೂಡ ಪಾಸ್​ ಆಗಬೇಕು.

ಕೆಲಸಕ್ಕಾಗಿ ಊರು ಬಿಟ್ಟು ಸಿಲಿಕಾನ್ ​ಸಿಟಿಗೆ ಎಂಟ್ರಿಕೊಟ್ಟು ಹಾಗೋ ಹೀಗೋ ಇಂಟರ್​ವ್ಯೂವ್​​ ಪಾಸ್​ ಆದ್ರೂ ಉಳಿಗಾಲ ಇಲ್ಲ. ಬೆಂಗಳೂರಿನಲ್ಲಿ ಮನೆ ಬಾಡಿಗೆ ಪಡೆಯಲೂ‌ ಕೂಡ ಮನೆ ಮಾಲೀಕರು ಸಂದರ್ಶನ ನಡೆಸುತ್ತಾರೆ. ಈ ಬಗ್ಗೆ ಟ್ವೀಟರ್‌ನಲ್ಲಿ ಇಂಟರ್ವ್ಯೂ ಅಟೆಂಡ್‌ ಮಾಡಿದ ಟೆಕ್ಕಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ. ಟೆಕ್ಕಿ ನೀರಜ್‌ ಮೆಂಟಾ ತಮ್ಮ ಸಂದರ್ಶನದ ಅನುಭವ‌ವನ್ನ ಹಂಚಿಕೊಂಡಿದ್ದಾರೆ. ಓನರ್ ಕೇಳುವ ಪ್ರಶ್ನೆ ಯಾವುದೋ ಒಂದು ಕಂಪನಿಯ ಉದ್ಯೋಗಕ್ಕಾಗಿ ನಡೆಸುವ ಸಂದರ್ಶನಕ್ಕಿಂತ ಹೆಚ್ಚಾಗಿದೆ ಅಂತ ಟ್ವೀಟ್​ ಮಾಡಿದ್ದಾರೆ.‌

ಬೆಂಗಳೂರಿಗೆ ಬಾಡಿಗೆಗೆ ಪ್ಲಾಟ್ ಹುಡುಕುತ್ತಿದ್ದ ಟೆಕ್ಕಿ ನೀರಜ್‌ ಮೆಂಟಾ, ಬ್ರೋಕರ್ ಜೊತೆ ಒಂದು ಪ್ಲಾಟ್​ಗೆ ಹೋಗಿದ್ದರು. ಅಲ್ಲಿ ಮನೆ ಮಾಲೀಕ ಪೂರ್ವಭಾವಿ ಸಂದರ್ಶನ ನಡೆಸಿದ್ದಾರಂತೆ. ನೀರಜ್​ ಹಾಗೂ ಅವನ ಪತ್ನಿ ಲಿಂಕಡ್​ಇನ್​ ಪ್ರೊಫೈಲ್ ಶೇರ್ ಮಾಡಲು ಕೂಡ ತಿಳಿಸಿದ್ರಂತೆ. ಅಲ್ಲದೆ ಆತನ‌ ಹಿನ್ನೆಲೆ, ಕುಟುಂಬದ ಸದಸ್ಯರ‌ ಹಿನ್ನಲೆ ಸೇರಿ ಇತರೆ‌ ಮಾಹಿತಿ ಕೇಳಿದ್ರಂತೆ.‌ ಅಲ್ಲದೆ ಬಿಸಿನೆಸ್ ಬಗ್ಗೆಯೂ ಕೂಡ ಒನರ್ ಮಾಹಿತಿಯನ್ನು ಪಡೆದುಕೊಂಡಿದ್ರಂತೆ.‌ ಎಲ್ಲ ಆದ ನಂತರ ಕೊನೆಗೆ ಶಾರ್ಟ್ ಲಿಸ್ಟ್ ಮಾಡಿ ನಿಮಗೆ ತಿಳಿಸುತ್ತೇವೆ ಅಂತ ಕಳಿಸಿದ್ರಂತೆ ಮನೆ ಮಾಲೀಕ.

ಕೆಲ ದಿನಗಳ ಬಳಿಕ ಆ ಮನೆಯನ್ನು ಬಾಡಿಗೆಗೆ ಪಡೆಯಲು ಇಚ್ಚಿಸುವವರನ್ನು ಕರೆಸಿ, ಕೊನೆಯ ಹಂತದ ಸಂದರ್ಶನ ನಡೆಸಿ ನಂತರ ಮನೆ ಬಾಡಿಗೆಗೆ ನೀಡಿದ್ದಾರೆ. ನಾನು ಆ ಸಂದರ್ಶನಕ್ಕೆ ಹೋಗಿ ಬಂದೆ, ನನ್ನ ಹೆಂಡತಿ ಹೇಗಾಯಿತು ಸಂದರ್ಶನ? ಏನಾಗಬಹುದು ಎಂದು ಕೇಳುತ್ತಿದ್ದಳು. ನಾನು ಚೆನ್ನಾಗಿ ಆಗಿದೆ ಎಂದು ಹೇಳಿದೆ ಎಂದಿದ್ದಾರೆ ಟೆಕ್ಕಿ ನೀರಜ್‌ ಮೆಂಟಾ.

ಯಾವಾಗ ನೀರಜ್ ಈ ವಿಚಾರ ಟ್ವೀಟ್ ಮಾಡಿ‌ ಹಂಚಿಕೊಂಡರು ಜನರು ಸಾಲು‌ ಸಾಲು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಒಟ್ಟಾರೆ ಬೆಂಗಳೂರಿನಲ್ಲಿ ಮನೆ ಬಾಡಿಗೆ ಪಡೆಯುವುದೇ ದೊಡ್ಡ ತಲೆ‌ ನೋವಾಗಿದೆ. ವರ್ಷದಿಂದ ವರ್ಷಕ್ಕೆ ಏರ್ತಿರುವ ಬಾಡಿಗೆ ಹಣದ ಜೊತೆಗೆ ಮನೆ ಮಾಲೀಕರು ಮಾಡ್ತಿರುವ ರೂಲ್ಸ್ ಇಕ್ಕಟಿಗೆ ಸಿಲುಕಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಬಾಡಿಗೆದಾರರಿಗೂ ಇಂಟರ್ವ್ಯೂ; ಪಾಸ್​ ಆದ್ರೆ ಮಾತ್ರ ಸಿಗುತ್ತೆ ಮನೆ!

https://newsfirstlive.com/wp-content/uploads/2023/07/home.jpg

Load More