newsfirstkannada.com

ಮನೆ ಕೆಲಸವನ್ನು ಗಂಡ-ಹೆಂಡತಿ ಸಮಾನವಾಗಿ ಹಂಚಿಕೊಳ್ಳಬೇಕು; ಬಾಂಬೆ ಹೈಕೋರ್ಟ್​

Share :

15-09-2023

    ಮನೆ ಕೆಲಸದ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳ

    ವಿಚ್ಛೇದನ ಬಯಸಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಗಂಡ-ಹೆಂಡತಿ

    ಡಿವೋರ್ಸ್​ಗಾಗಿ 2018ರಲ್ಲೇ ಕೋರ್ಟ್​ ಮೊರೆ ಹೋಗಿದ್ದರು ದಂಪತಿ

ಪತಿ ಮತ್ತು ಪತ್ನಿ ಮನೆಯ ಜವಾಬ್ದಾರಿ ಸಮಾನವಾಗಿ ತೆಗೆದುಕೊಳ್ಳಬೇಕು ಎಂದು ಬಾಂಬೆ ಹೈಕೋರ್ಟ್​​ ಗುರುವಾರ ಹೇಳಿದೆ. ಗಂಡ -ಹೆಂತಿ ವಿಚ್ಛೇದನ ಕೋರಿ ಸಲ್ಲಿಸಿದ ಅರ್ಜಿ ವಿಚಾರವಾಗಿ ಕೋರ್ಟ್​ ಈ ಹೇಳಿಕೆ ನೀಡಿದೆ.

ಪತಿ ಮತ್ತು ಪತ್ನಿ ಇಬ್ಬರು 13 ವರ್ಷದ ದಾಂಪತ್ಯವನ್ನು ಅಂತ್ಯಗೊಳಿಸಲು ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದರು. 2018ರಲ್ಲೇ ಈ ಬಗ್ಗೆ ಕೋರ್ಟ್​ ಮೊರೆ ಹೋಗಿದ್ದರು. ಮನೆ ಕೆಲಸದ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳವಾಗಿ ಕೊನೆಗೆ ವಿಚ್ಛೇದನಕ್ಕೆ ಬಯಸಿ ಅರ್ಜಿ ಸಲ್ಲಿಸಿದ್ದರು.

ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್,​ ಗಂಡ ಹೆಂಡತಿ ಇಬ್ಬರು ಮನೆ ಕೆಲಸವನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಹೇಳಿದೆ. ಮಹಿಳೆ ಮಾತ್ರ ಮನೆಯ ಕೆಲಸವನ್ನು ಮಾಡಬೇಕು ಎಂಬ ಹಳೆಯ ಮನಸ್ಥಿತಿಯನ್ನು ಬದಲಾಯಿಸುವ ಅಗತ್ಯವಿದೆ ಎಂದು ಹೇಳಿದೆ.

ಇನ್ನು ಗಂಡ -ಹೆಂಡತಿ ಇಬ್ಬರು 2010ರಲ್ಲಿ ಮಗುವನ್ನು ಹೊಂದುವ ಮೂಲಕ ಪೋಷಕರಾದರು. ಆ ಬಳಿಕ ಹೆಂಡತಿ ನಿರಂತರವಾಗಿ ಫೋನ್​​ನಲ್ಲಿ ಮಾತನಾಡುತ್ತಿರುತ್ತಾಳೆ. ಮನೆಯ ಕೆಲಸವನ್ನು ಮಾಡಲು ಹಿಂದೇಟು ಹಾಕುತ್ತಾಳೆ ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದನು.

ಇದನ್ನು ಓದಿ: ನಾಟಕ ಪ್ರದರ್ಶನದ ವೇಳೆ ಹೃದಯಾಘಾತ.. ವೀಕ್ಷಕರೆದುರೇ ಕುಸಿದು ಬಿದ್ದು ಪೋಸ್ಟ್​ಮ್ಯಾನ್​​ ಸಾವು

ಅತ್ತ ಹೆಂಡತಿ ನಾನು ಕೆಲಸದಿಂದ ಬಂದ ನಂತರ ಮನೆ ಕೆಲಸವನ್ನು ನನಗೆ ಮಾಡಲು ಹೇಳುತ್ತಾರೆ. ಅವರ ಕುಟುಂಬದವರಿಗೆ ಹೇಳಿದಾಗ ಅವರು ಸಹ ನನಗೆ ಮನೆ ಕೆಲಸ ಮಾಡುವಂತೆ ಒತ್ತಾಯಿಸುತ್ತಾರೆ. ನಾನು ಸಹ ಪತಿಯಿಂದ ದೈಹಿಕ ಕಿರುಕುಳ ಅನುಭವಿಸಿದ್ದೇನೆ ಎಂದು ಆರೋಪಿಸಿದ್ದಾಳೆ.

ಇನ್ನು ಗಂಡ-ಹೆಂಡತಿ ಇಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕದಿಂದ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದು, ನ್ಯಾಯಾಲಯ ಮಾತ್ರ ವಿಚ್ಛೇದನ ನೀಡಲು ನಿರಾಕರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆ ಕೆಲಸವನ್ನು ಗಂಡ-ಹೆಂಡತಿ ಸಮಾನವಾಗಿ ಹಂಚಿಕೊಳ್ಳಬೇಕು; ಬಾಂಬೆ ಹೈಕೋರ್ಟ್​

https://newsfirstlive.com/wp-content/uploads/2023/09/baby.jpg

Load More