ಮೂತ್ರ ವಿಸರ್ಜನೆ ಘಟನೆ ಬೆನ್ನಲ್ಲೇ ಮತ್ತೊಂದು ಅಮಾನವೀಯ ಕೃತ್ಯ
ಇಬ್ಬರು ದಲಿತ ಯುವಕರಿಗೆ ಮಲ ತಿನ್ನಿಸಿದ ಕ್ರೂರಿಗಳು ಅರೆಸ್ಟ್
ಆ ಒಂದು ಕಾರಣಕ್ಕೆ ಇಷ್ಟು ಕೀಳುಮಟ್ಟಕ್ಕೆ ಇಳಿದ ಪಾಪಿಗಳು
ಭೋಪಾಲ್ನಲ್ಲಿ ಬಿಜೆಪಿ ಮುಖಂಡನೋರ್ವ ಬುಡಕಟ್ಟು ಸಮುದಾಯದ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ಘಟನೆಯ ಬೆನ್ನಲ್ಲೇ ಮೊತ್ತೊಂದು ಅಮಾನವೀಯ ಕೃತ್ಯವೊಂದು ಬೆಳಕಿಗೆ ಬಂದಿದೆ. ದಲಿತ ಸಮುದಾಯದ ಯುವಕರಿಗೆ ಮಲ ತಿನ್ನಿಸಿದ ಘಟನೆಯೊಂದು ಮುನ್ನಲೆಗೆ ಬಂದಿದೆ. ಈ ಘಟನೆಯ ಸಂಬಂಧ ಒಂದೇ ಕುಟುಂಬದ ಏಳು ಜನರನ್ನು ಬಂಧಿಸಲಾಗಿದೆ.
7 ಜನರಿಂದ ಕೃತ್ಯ
ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ವರ್ಖಾಡಿ ಗ್ರಾಮದಲ್ಲಿ ಜೂನ್ 30ರಂದು ಈ ಘಟನೆ ನಡೆದಿದೆ. ಒಂದೇ ಕುಟುಂಬದ 7 ಮಂದಿ ಇಬ್ಬರು ದಲಿತ ಯುವಕರಿಗೆ ಬಲವಂತವಾಗಿ ಮಲ ತಿನ್ನಿಸಿದ್ದಾರೆ. ಈ ದೃಶ್ಯ ವೈರಲ್ ಆದ ಬೆನ್ನಲ್ಲೇ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.
ಯುವತಿ ಜೊತೆಗೆ ಮಾತು
23 ಮತ್ತು 24 ವರ್ಷದ ಯುವಕರಿಬ್ಬರು ಆರೋಪಿಯ ಕುಟುಂಬಕ್ಕೆ ಸೇರಿದ್ದ ಯುವತಿಯ ಜೊತೆ ಫೋನ್ ಕಾಲ್ನಲ್ಲಿ ಮಾತನಾಡುತ್ತಿದ್ದರು. 26 ವರ್ಷದ ಯುವತಿ ಜೊತೆ ಮಾತನಾಡುತ್ತಿದ್ದ ಇಬ್ಬರು ದಲಿತ ಯುವಕರ ವಿಚಾರ ತಿಳಿದ ಆಕೆಯ ಕುಟುಂಬಸ್ಥರು ಮನೆಗೆ ಕರೆಸಿಕೊಂಡಿದ್ದಾರೆ. ಬಳಿಕ ಅವರಿಗೆ ಮನಬಂದಂತೆ ಥಳಿಸಿದ್ದಾರೆ.
ಚಪ್ಪಳಿ ಹಾರ ಹಾಕಿ ಮೆರವಣಿಗೆ
ಯುವಕರಿಗೆ ಸರಿಯಾಗಿ ಥಳಿಸಿದ ಬಳಿಕ ಮುಖಕ್ಕೆ ಮಸಿ ಬಳಿದು, ಮಲ ತಿನ್ನುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಅಂದಹಾಗೆಯೇ ಈ ದೃಶ್ಯವೆಲ್ಲಾ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆದ ಬೆನ್ನಲ್ಲೇ ಘಟನೆ ಬೆಳಕಿಗೆ ಬಂದಿದೆ. ಸದ್ಯ ದಲಿತ ಯುವಕರಿಗೆ ಮಲ ತಿನ್ನಿಸಿದ ವಿಚಾರವಾಗಿ ಒಂದೇ ಕುಟುಂಬದ 7 ಜನರನ್ನು ಅರಸ್ಟ್ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ