newsfirstkannada.com

ದುಬೈನಲ್ಲಿದ್ದು ಫಂಡಿಂಗ್ ಮಾಡಿದ್ದೇ A2 ಜುನೇದ್; ಬೆಂಗಳೂರಲ್ಲಿ ಉಗ್ರರ ಗ್ಯಾಂಗ್‌ ಸಿಕ್ಕಿಬಿದ್ದಿದ್ದೇ ರಣರೋಚಕ

Share :

19-07-2023

    A2 ಜುನೇದ್ ಎಲ್ಲರೂ ಪೊಲೀಸರಿಗೆ ಸಿಕ್ಕಿ ಬೀಳುವಂತೆ ಮಾಡಿದ

    ಬೆಂಗಳೂರಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಶಂಕಿತ ಉಗ್ರ ಸುಹೈಲ್

    ಬೆಂಗಳೂರು ಪೊಲೀಸರಿಗೆ ಶಂಕಿತ ಉಗ್ರರು ಸಿಕ್ಕಿಬಿದ್ದಿದ್ದು ಹೇಗೆ?

ಬೆಂಗಳೂರು: ಶಂಕಿತ ಉಗ್ರರ ಭಯಾನಕ ಸ್ಕೆಚ್‌ನಿಂದ ಸಿಲಿಕಾನ್ ಸಿಟಿ ನಮ್ಮ ಬೆಂಗಳೂರು ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಸಿಸಿಬಿ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಐವರು ಶಂಕಿತ ಉಗ್ರರು ಸಿಕ್ಕಿಬಿದ್ದಿದ್ದಾರೆ. ಈ ಮೂಲಕ ಉಗ್ರನ ಜೊತೆ ಸೇರಿ ಪಾಪಿಗಳು ನಡೆಸಲು ಉದ್ದೇಶಿಸಿದ್ದ ಭಯಾನಕ ವಿಧ್ವಂಸಕ ಕೃತ್ಯವೊಂದು ವಿಫಲವಾಗಿದೆ. ಬೆಂಗಳೂರು ಪೊಲೀಸರಿಗೆ ಶಂಕಿತ ಉಗ್ರರು ಸಿಕ್ಕಿಬಿದ್ದಿದ್ದು ನಿಜಕ್ಕೂ ರೋಚಕವಾಗಿದೆ.

ಶಂಕಿತ ಉಗ್ರರು ಸಿಕ್ಕಿಬಿದ್ದಿದ್ದು ಹೇಗೆ?
ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯಲ್ಲಿ ಈ ಐವರು ಶಂಕಿತ ಉಗ್ರರು ವಾಸವಾಗಿದ್ದರು. ಈ ಪ್ರಕರಣದ A2 ಜುನೇದ್ ಎಲ್ಲರೂ ಸಿಸಿಬಿ ಪೊಲೀಸರಿಗೆ ಸಿಕ್ಕಿ ಬೀಳುವಂತೆ ಮಾಡಿದ್ದಾನೆ. ಜುನೇದ್ ದುಬೈನಲ್ಲಿದ್ದು ಫಂಡಿಂಗ್ ಮಾಡಿಸ್ತಾ ಇದ್ದ. ಅಲ್ಲಿನ ಶ್ರೀಮಂತರ ಮೂಲಕ ಬೆಂಗಳೂರಿನಲ್ಲಿದ್ದ ಓರ್ವ ಆರೋಪಿಗೆ ಫಂಡಿಂಗ್ ಮಾಡಿಸಿದ್ದಾನೆ. ಗುಪ್ತಚರ ದಳ ಈ ದುಬೈ ಹವಾಲಾ ಹಣದ ಹಿಂದೆ ಬಿದ್ದಿದ್ದು, ಪರಿಶೀಲನೆ ನಡೆಸಿದಾಗ ಜೈಲಿನಲ್ಲಿದ್ದ ಆರೋಪಿ ಫಂಡ್ ಪಡೆಯುತ್ತಿದ್ದ ವಿಷಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ವಿಧ್ವಂಸಕ ಕೃತ್ಯಕ್ಕೆ ಭಯಾನಕ ಸ್ಕೆಚ್‌; ಕಮಿಷನರ್‌ ಬಿಚ್ಚಿಟ್ರು ಶಂಕಿತ ಉಗ್ರರ ಸ್ಫೋಟಕ ಮಾಹಿತಿ

ಜೈಲಿನಲ್ಲಿದ್ದ ಆರೋಪಿ ನಾಸೀರ್ ಗ್ರೂಪ್‌ಗೆ ದುಬೈನಿಂದ ಹಣ ಬಂದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಅವನ ಆ್ಯಕ್ಟಿವಿಟಿ ಗಮನಿಸಿದಾಗ ಶಂಕಿತ ಉಗ್ರರ ಟೀಮ್‌ ಬಿಲ್ಡ್ ಆಗಿತ್ತು. ಅದರಂತೆ ಆ ಟೀಮ್‌ ಬಗ್ಗೆ ಸಿಸಿಬಿಗೆ ಮಾಹಿತಿ ರವಾನೆಯಾಗಿದೆ. ಗುಪ್ತಚರ ಇಲಾಖೆಯ ಮಾಹಿತಿ‌ ಮೇರೆಗೆ ಸಿಸಿಬಿ ಟೀಮ್‌ ಹುಡುಕಾಟ ನಡೆಸಿದ್ದು, ಆರೋಪಿಗಳ ಚಲನವಲನಗಳ ಆಧಾರದಲ್ಲಿ ಐವರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ.

ಮತ್ತೊಬ್ಬ ಶಂಕಿತ ಉಗ್ರ ಸುಹೈಲ್ ಬೆಂಗಳೂರಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಇಬ್ಬರು ಮಕ್ಕಳು, ಒಂದು ಗಂಡು, ಒಂದು ಹೆಣ್ಣು ಇವನಿಗಿದ್ದರು. ದುಬೈನಲ್ಲಿದ್ದ ಪ್ರಮುಖ ಆರೋಪಿ ಜುನೈದ್, ಸರಣಿ ಬಾಂಬ್ ಸ್ಫೋಟದ ಆರೋಪಿ ನಜೀರ್‌ನೊಂದಿಗೆ ಸಂಪರ್ಕ ಹೊಂದಿದ್ದ. ಜೈಲಿನಲ್ಲಿ ನಜೀರ್‌ನೊಂದಿಗೆ ಉಗ್ರ ಚಟುವಟಿಕೆಗಳ ಬಗ್ಗೆ ಚರ್ಚೆ ಮಾಡಿದ್ದನು. ನಾಜೀರ್ ಕೊಟ್ಟಿರುವ ಐಡಿಯಾಗಳ ಆಧಾರದ ಮೇಲೆ ಜುನೈದ್ ಇತರರಿಗೆ ಸಂದೇಶ ಕಳುಹಿಸುತ್ತಿದ್ದ ಎನ್ನಲಾಗಿದೆ. ವಿದೇಶದಿಂದ ಹಣ ಫಂಡಿಂಗ್ ಆಗಿದ್ದೇ ಬೆಂಗಳೂರಲ್ಲಿ ಶಂಕಿತ ಉಗ್ರರ ಬಂಧನಕ್ಕೆ ಪ್ರಮುಖ ಕಾರಣವಾಗಿದೆ. ಇನ್ನು, ಈ ಐವರನ್ನ ಹೊರತು ಪಡಿಸಿ ಬೇರೆಯಾರಾದ್ರೂ ಸಂಪರ್ಕದಲ್ಲಿದ್ದಾರಾ ಎನ್ನುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುಬೈನಲ್ಲಿದ್ದು ಫಂಡಿಂಗ್ ಮಾಡಿದ್ದೇ A2 ಜುನೇದ್; ಬೆಂಗಳೂರಲ್ಲಿ ಉಗ್ರರ ಗ್ಯಾಂಗ್‌ ಸಿಕ್ಕಿಬಿದ್ದಿದ್ದೇ ರಣರೋಚಕ

https://newsfirstlive.com/wp-content/uploads/2023/07/Bangalore-Terror.jpg

Load More