newsfirstkannada.com

×

ಪೀಸ್, ಪೀಸ್​​​​ ಮಾಡಿ ಫ್ರಿಡ್ಜ್​​ನಲ್ಲಿಟ್ಟು ಹೋಗಿದ್ದ ಹಂತಕ.. ಮಹಾಲಕ್ಷ್ಮಿ ಮರ್ಡ*ರ್ ಬಯಲಾಗಿದ್ದೇ ರೋಚಕ!

Share :

Published September 21, 2024 at 10:50pm

    ತುಂಡು ತುಂಡಾದ ದೇಹದ ಪೀಸ್ ಅ​ನ್ನ ಫ್ರಿಡ್ಜ್​​ನಲ್ಲಿಟ್ಟಿದ್ದ ಹಂತಕ

    ವಾಸನೆಯ ಹಿಂದೆ ಹೋದವರ ಕಣ್ಣಿಗೆ ಬಿದ್ದಿದ್ದು 165ಲೀಟರ್​ನ ಫ್ರಿಡ್ಜ್​!

    ಕೊಳೆತು ಹೋದ ಮೃತದೇಹ ಹೇಳ್ತಿದೆ ಕ್ರೌರ್ಯದ ಇಂಚಿಂಚೂ ಕಥೆ

ಬೆಂಗಳೂರು: ವೈಯಾಲಿಕಾವಲ್‌ ಮಹಾಲಕ್ಷ್ಮಿ ಹ*ತ್ಯೆ ಕೇಸ್‌ಗೆ ಏರಿಯಾಗೆ ಏರಿಯಾನೆ ಆಘಾತಕ್ಕೀಡಾಗಿದೆ. ನಗರಕ್ಕೆ ನಗರವೇ ನಡುಗಿ ಹೋಗಿದೆ. ಸಂಜೆ ಹೊತ್ತಲ್ಲಿಯೇ ಹೊರ ಬಿದ್ದ ಭೀಕರ ಕೊಲೆಯ ಸುದ್ದಿ ಕೇಳಿ ಬೆಂಗಳೂರಿನಂತಹ ಬೆಂಗಳೂರೇ ಬೆಚ್ಚಿ ಬಿದ್ದಿದೆ.

ಒಂದು ಮನೆ, 26 ವರ್ಷದ ಮಹಿಳೆ, 32 ಪೀಸ್ ಪೀಸ್
ತುಂಡು ತುಂಡಾದ ದೇಹದ ಪೀಸ್​ನ್ನ ಫ್ರಿಡ್ಜ್​​ನಲ್ಲಿಟ್ಟ ಹಂತಕ
ದೇಶವನ್ನೇ ದಂಗು ಬಡಿಸಿದ್ದ ದೆಹಲಿಯ ಶ್ರದ್ಧಾ ಕೊಲೆ ಕೇಸ್​​ ಜನ ಮಾನಸದಿಂದ ಮಾಸುವ ಮುನ್ನವೇ ನಗರದಲ್ಲಿ ಅಂತಹದ್ದೇ ಡೆಡ್ಲಿ ಮರ್ಡರ್ ನಡೆದಿದೆ. 2022ರ ಮೇ.18ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂತಹದ್ದೇ ಹತ್ಯೆ ನಡೆದಿತ್ತು. ಶ್ರದ್ಧಾ ಅನ್ನೋ 26 ವರ್ಷದ ಯುವತಿಯನ್ನ ಪ್ರಿಯಕರ ಅಫ್ತಾಬ್‌ ಭೀಕರವಾಗಿ ಕೊಂದು ಮೃತದೇಹವನ್ನ ಫ್ರಿಡ್ಜ್​ನಲ್ಲಿಟ್ಟಿದ್ದ. ನಂತರ ಶ್ರದ್ಧಾಳ ದೇಹದ ಪೀಸ್‌ಗಳನ್ನ ದೆಹಲಿ ಬೀದಿ,ಅರಣ್ಯೊದೊಳಗೆ ಎಸೆದು ಬಿಟ್ಟಿದ್ದ. ಅಫ್ತಾಬ್ ಅಟ್ಟಹಾಸ ಕಂಡು ಇಡೀ ದೇಶವೇ ನಡುಗಿ ಹೋಗಿತ್ತು. ಥೂ ಇವನೂ ಮನುಷ್ಯನ ಎಂದು ಹಿಡಿ ಶಾಪ ಹಾಕಿದ್ರು. ರಾಷ್ಟ್ರ ರಾಜಧಾನಿಯ ಶ್ರದ್ಧಾ ಕೊಲೆ ಕೇಸ್​ ಮಾಸುವ ಮುನ್ನವೇ ರಾಜ್ಯ ರಾಜಧಾನಿಯಲ್ಲಿ ಅಂತಹದ್ದೇ ಭೀಕರ ಕೊಲೆ ನಡೆದು ಹೋಗಿದೆ. 26 ವರ್ಷದ ಯುವತಿ 32 ಪೀಸ್​ ಆಗಿ ಹೋಗಿದ್ದಾಳೆ.

ಇದನ್ನೂ ಓದಿ: 32 ಪೀಸ್.. ವೈಯಾಲಿಕಾವಲ್ ಮಹಿಳೆ ಕೇಸ್‌ಗೆ ಹೊಸ ಟ್ವಿಸ್ಟ್‌; ಕೊ*ಲೆಗಾರ ಯಾರು? ಸ್ಫೋಟಕ ಸುಳಿವು ಪತ್ತೆ! 

ವೈಯಾಲಿಕಾವಲ್​ ಪೊಲೀಸ್​ ಠಾಣಾ ಸರಹದ್ದು. ಮುನೇಶ್ವರ ಬ್ಲಾಕ್​ನ ಮನೆಯ ಮೊದಲ ಮಹಡಿಯ, ಇದೇ, ಇದೇ ಮನೆಯಲ್ಲಿ 26 ವರ್ಷದ ಮಹಾಲಕ್ಷ್ಮಿ ವಾಸ ಮಾಡುತ್ತಿದ್ದಳು. ಮಹಾಲಕ್ಷ್ಮೀಯ ಗಂಡ ಹೇಮಂತ್​ ದಾಸ್​​ ನೆಲಮಂಗಲ ಬಸವಣ್ಣ ದೇವರ ಮಠದಲ್ಲಿ ಕೆಲಸ ಮಾಡ್ತಿದ್ದ. ಗಂಡನಿಂದ ಮಹಾಲಕ್ಷ್ಮಿ ಅಂತರ ಕಾಯ್ದುಕೊಂಡಿದ್ಲು. ಮಗು, ತನ್ನ ತಂದೆಯ ಜೊತೆ ವಾಸ ಮಾಡ್ತಿತ್ತು. ಒಂಟಿಯಾಗಿದ್ದ ಮಹಾಲಕ್ಷ್ಮಿ ಇದೇ ಮನೆಯಲ್ಲಿ ಒಂಟಿಯಾಗಿ ಮಾಸ ಮಾಡ್ತಿದ್ಲು. ಒಂಟಿ ಮಹಿಳೆಗೆ ಜಂಟಿಯಾಗಲು ಅದ್ಯಾರೋ ಎಂಟ್ರಿ ಕೊಟ್ರೋ ಗೊತ್ತಿಲ್ಲ.

ಸೆಪ್ಟೆಂಬರ್​ 02: ಸೋಮವಾರ
ಮಹಿಳೆಯ ಮೊಬೈಲ್ ಸ್ವಿಚ್ ಆಫ್

ಅದು ಸೆಪ್ಟೆಂಬರ್​ 2ರ ಸೋಮವಾರ. ಮಹಾಲಕ್ಷ್ಮೀಯ ಮೊಬೈಲ್​ ಸ್ವಿಚ್ ಆಫ್ ಆಗಿದೆ. ಕುಟುಂಬಸ್ಥರು ಕೂಡ ಟ್ರೈ ಮಾಡಿದ್ದಾರೆ. ಬಟ್ ನೋ ಯೂಸ್. ದಿನಗಳು ವಾರಗಳಾಗಿ ಬದ್ಲಾಗಿದೆ. ಬಟ್ ಮಹಾಲಕ್ಷ್ಮಿಯ ಮೊಬೈಲ್​ ಆನ್​ ಆಗಿಯೇ ಇಲ್ಲ. 18 ದಿನವಾದ್ರೂ ಮಹಾಲಕ್ಷ್ಮಿಯದ್ದು ಪತ್ತೇನೇ ಇರ್ಲಿಲ್ಲ. ನಿಧಾನವಾಗಿ ಮನೆಯಿಂದ ವಾಸನೆ ಬರಲು ಶುರುವಾಗಿದೆ. ಇದೇ ವಾಸನೆ ನೆರೆಹೊರೆಯವರಲ್ಲಿ ಅನುಮಾನ ಹುಟ್ಟು ಹಾಕಿದೆ. ಕೂಡಲೇ ಮಹಿಳೆಯ ಸಂಬಂಧಿಕರಿಗೆ ವಿಚಾರ ಮುಟ್ಟಿಸಿದ್ದಾರೆ.

ಮನೆಯ ಡೋರ್​ ಓಪನ್​ ಮಾಡ್ತಿದ್ದಂಗೆ ಗಬ್ಬೆದ್ದು ಬಂದಿತ್ತು ವಾಸನೆ
ವಾಸನೆಯ ಹಿಂದೆ ಹೋದವರ ಕಣ್ಣಿಗೆ ಬಿದ್ದಿದ್ದು 165ಲೀಟರ್​ನ ಫ್ರಿಡ್ಜ್​
ಇಲ್ಲೇ ನೋಡಿ ಮನೆಯಂತರಾಳದಲ್ಲಿ ಮಡುವುಗಟ್ಟಿ ನಿಂತಿದ್ದ ಕ್ರೌರ್ಯದ ಘೋರ ರಹಸ್ಯ ಹೊರ ಬಂದಿದ್ದು. ಮಹಾಲಕ್ಷ್ಮಿಯನ್ನ ಹುಡುಕಿ ಮನೆಯತ್ರ ಕುಟುಂಬಸ್ಥರ ಕಣ್ಣಿಗೆ, ಮನೆಗೆ ಬೀಗ ಹಾಕಿರೋ ದೃಶ್ಯ ಬಿದ್ದಿದೆ. ಆದ್ರೆ ಅನುಮಾನ ಮೂಡಿಸಿದ್ದು ಗಬ್ಬೆದ್ದು ಬರ್ತಿದ್ದ ವಾಸನೆ. ಮನೆಹತ್ರ ಹೋಗ್ತಿದ್ದಂಗೆ ವಾಸನೆಯ ಗಬ್ಬು, ಕೆಮ್ಮಲಾಗದ ಪರಿಸ್ಥಿತಿ ನಿರ್ಮಾಣ ಮಾಡಿತ್ತು. ಇದೇ ಅನುಮಾನ ಮೇರೆಗೆ ಮನೆಗೆ ಎಂಟ್ರಿ ಕೊಟ್ಟ ಈಕೆಯ ಕುಟುಂಬಸ್ಥರು, ಗಬ್ಬೆದ್ದು ಬರ್ತಿದ್ದ ಫ್ರಿಡ್ಜ್​ನತ್ತ ಹೋಗಿದ್ದಾರೆ. ಫ್ರಿಡ್ಜ್​ ಡೋರ್​ ಓಪನ್ ಮಾಡಿದ್ದಾರೆ. ಅಷ್ಟೇ ನೋಡಿ. ಡೆಡ್ಲಿ ದೃಶ್ಯ ಕಣ್ಣಿಗೆ ಬಿದ್ದಿದೆ.

165 ಲೀಟರ್​​ನ ಫ್ರಿಡ್ಜ್ ನಲ್ಲಿತ್ತು ದೇಹದ 32 ಪೀಸ್​..!
ಕೊಳೆತು ಹೋದ ಮೃತದೇಹ ಹೇಳ್ತಿದೆ ಕ್ರೌರ್ಯದ ಕಥೆಯನ್ನ
ಬರೋಬ್ಬರಿ 165 ಲೀಟರ್​​ನ ಫ್ರಿಡ್ಜ್ ಓಪನ್​ ಮಾಡ್ತಿದ್ದಂಗೆ ಹುಳ ಬಿದ್ದ ಮೃತದೇಹ ಪತ್ತೆಯಾಗಿದೆ. ಒಂದಲ್ಲ, ಎರಡಲ್ಲ,ಮಹಿಳೆಯ ದೇಹದ ಬರೋಬ್ಬರಿ 32 ಪೀಸ್​ಗಳು ಪತ್ತೆಯಾಗಿವೆ. ಕೊಳೆತು ನಾರ್ತಿದ್ದ ಮಹಾಲಕ್ಷ್ಮಿಯ ಮೃತ ದೇಹದ ಪೀಸ್​​ಗಳು ಕಣ್ಣಿಗೆ ಬೀಳ್ತಿದ್ದಂಗೆ ಕುಟುಂಬಸ್ಥರು ಕಂಗಲಾಗಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.

ದೇಹದ ವಾಸನೆ ಬಂದಿದ್ದು ಹೇಗೆ?
ಮೃತ ಮಹಾಲಕ್ಷ್ಮಿಯನ್ನು ಫ್ರಿಡ್ಜ್‌ಗೆ ಹಾಕಿ ನೀಟ್ ಆಗಿ ಬಂದ್ ಮಾಡಲಾಗಿತ್ತು. ಇಷ್ಟು ದಿನ ಆದರೂ ಫ್ರಿಡ್ಜ್ ಆನ್ ಆಗಿದ್ದರಿಂದ ದೇಹದ ಪೀಸ್‌ಗಳು ಕೊಳೆತಿರಲಿಲ್ಲ. ಹೀಗಾಗಿ ದೇಹದ ವಾಸನೆ ಕೂಡ ಹೊರ ಬಂದಿರಲಿಲ್ಲ. ಆದರೆ ಕರೆಂಟ್ ಹೋದಂತಹ ಸಂದರ್ಭದಲ್ಲಿ ಒಂದಷ್ಟು ರಕ್ತ ಫ್ರಿಡ್ಜ್‌ನಿಂದ ಕೆಳಗೆ ಬಿದ್ದಿತ್ತು. ಅದರಲ್ಲಿ ಹುಳ ಆಗಿ ವಾಸನೆ ಬರೋಕೆ ಶುರು ಆಗಿತ್ತು. ಸದ್ಯ ಪೊಲೀಸರು ಹಾಗೂ FSL ತಂಡ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುತ್ತಿದೆ. FSL ತಂಡದ ಪರಿಶೀಲನೆ ಬಳಿಕ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಾಳೆ ಮರಣೋತ್ತರ ಪರೀಕ್ಷೆ ಮುಗಿದ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗುತ್ತಿದೆ.

ಪೊಲೀಸರ ಪ್ರೈಮರಿ ಇನ್​ವೆಸ್ಟಿಗೇಷನ್​​ನಲ್ಲಿ ಕೊಲೆ ನಡೆದು 18 ದಿನಗಳು ನಡೆದು ಹೋಗಿರುವ ವಿಚಾರ ಹೊರ ಬಿದ್ದಿದೆ. ಮಹಿಳೆಯ ಮೊಬೈಲ್​ ಸೆಪ್ಟೆಂಬರ್ ​​2ರಂದೇ ಸ್ವಿಚ್ ಆಫ್ ಆಗಿದ್ದು, ಅದೇ ದಿನ ಹ*ತ್ಯೆಯಾಗಿರುವ ಶಂಕೆ ಇದೆ. ಇದೇ ಕಾರಣಕ್ಕೆ ಪೊಲೀಸರು ಕೂಡ ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಯುವತಿಯ ಕಾಲ್ ಡಿಟೇಲ್ಸ್ ಕಲೆ ಹಾಕ್ತಿರುವ ಪೊಲೀಸರು, ಇನ್​ಕಮಿಂಗ್​ ಹಾಗೂ ಔಟ್​ ಗೋಯಿಂಗ್ ಕರೆಗಳ ಮಾಹಿತಿ ಕಲೆ ಹಾಕ್ತಿದ್ದಾರೆ.

ಅಷ್ಟೇ ಅಲ್ಲ, ಈ ರಣಭೀಕರ ಕೊಲೆಯ ಸುತ್ತಾ ಒಂದೊಂದೇ ವಿಚಾರಗಳು ಹೊರ ಬರುತ್ತಿದೆ. ಮಾನವಿಯತೆಯೇ ನಾಚುವಂತೆ, ಮನುಷತ್ವವೇ ಮತ್ತೊಂದು ಮಗ್ಗಲಿಗೆ ಹೊರಳುವಂತೆ, ಕ್ರೌರ್ಯ ಎಸಗಿದ ಪಾಪಿ, ನಂತರ ತನ್ನ ಕೃತ್ಯವನ್ನ ಮುಚ್ಚಿ ಹಾಕಲು ಕೂಡ ಅಂತಹದ್ದೇ ಖತರ್ನಾಕ್ ಪ್ಲ್ಯಾನ್ ಮಾಡಿದ್ದ. ಮೃತದೇಹವನ್ನ 32 ಪೀಸ್​ ಮಾಡಿದವ, ನಂತರ ತಪ್ಪಿಸಿಕೊಳ್ಳಲು ಕೂಡ ಭಯಾನಕ ಸ್ಕೆಚ್ ಹೆಣೆದಿದ್ದ. ಈ ವಿಚಾರಗಳು ಇದೀಗ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಅಷ್ಟೇ ಅಲ್ಲ.. ಈ ಭಯಾನಕ ಮರ್ಡರ್‌ಗೆ ನೆಲಮಂಗಲದ ಮಠದಿಂದ ಹಿಡಿದು ಕಟ್ಟಿಂಗ್​ ಶಾಪ್​ ಲಿಂಕ್​ ಕೂಡ ಪಡೆದುಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೀಸ್, ಪೀಸ್​​​​ ಮಾಡಿ ಫ್ರಿಡ್ಜ್​​ನಲ್ಲಿಟ್ಟು ಹೋಗಿದ್ದ ಹಂತಕ.. ಮಹಾಲಕ್ಷ್ಮಿ ಮರ್ಡ*ರ್ ಬಯಲಾಗಿದ್ದೇ ರೋಚಕ!

https://newsfirstlive.com/wp-content/uploads/2024/09/Vyalikaval-lady-Death-2.jpg

Load More