newsfirstkannada.com

ಜೈಲಲ್ಲೇ ಬಿಂದಾಸ್‌ ಲೈಫ್‌.. ರಾಜಾತಿಥ್ಯಕ್ಕಾಗಿ ರಾಜಕಾರಣಿಗಳ ಪ್ರಭಾವ ಬಳಸಿದ್ರಾ ಆರೋಪಿ ದರ್ಶನ್?

Share :

Published August 26, 2024 at 9:07pm

    ಜೈಲಲ್ಲಿ ಐಷಾರಾಮಿ ಬದುಕಿಗೆ ದರ್ಶನ್ ಪರ ರಾಜಕೀಯ ಲಾಬಿ ನಡೆದಿದೆಯಾ?

    ಸೆರೆಮನೆಯಲ್ಲಿಯೂ ಅಷ್ಟೂ ಸಲೀಸಾಗಿ ಸೌಲಭ್ಯಗಳು ಸಿಕ್ಕಿದ್ದಾದ್ರೂ ಹೇಗೆ?

    ಕಂಬಿಯ ಹಿಂದೆಯೂ ತಮ್ಮ ಜನಪ್ರಿಯತೆಯ ಪ್ರಭಾವ ದರ್ಶನ್​ಗೆ ಕೈ ಹಿಡೀತಾ?

ಬೆಂಗಳೂರು: ದರ್ಶನ್ ಬದುಕೇ ಒಂದು ರಂಗು ರಂಗಿನ ಕ್ಯಾಂಪಸ್, ಅಲ್ಲಿ ಮದ್ಯವಿದೆ. ಸಿಗರೇಟ್ ಇದೆ, ಮಾನಿನಿಯೂ ಇದ್ದಾಳೆ. ಸದಾ ವಿವಾದಗಳ ಸುತ್ತಲೇ ಹುತ್ತಗಟ್ಟಿರುವ ಬದುಕು ದರ್ಶನ್​​ರದ್ದು. ಈಗ ಕೊಲೆಯಂತಹ ಕೊಲೆಯ ಆರೋಪವೇ ಬೆನ್ನಿಗೆ ಬಿದ್ದಿದೆ. ಮಾಡಿದ ತಪ್ಪಿಗೆ ಪಶ್ಚಾತ್ತಾಪದ ಬೆಂಕಿಯಲ್ಲಿ ಬೇಯಲಿ ಎಂದೇ ಜೈಲಿನಂತಾ ನಾಲ್ಕು ಗೋಡೆಯ ನಡುವೆ, ಸೌಲಭ್ಯಗಳಾಚೆ ಸ್ವಾತಂತ್ರ್ಯದಾಚೆಯ ಅವರನ್ನು ನೂಕಲಾಗುತ್ತಿದೆ. ಆದ್ರೆ ದರ್ಶನ್ ವಿಚಾರದಲ್ಲಿ ಈ ಕೆಲವು ಫೋಟೋಗಳನ್ನು ನೋಡಿದ್ರೆ ಅವೆಲ್ಲವೂ ಮಿಥ್ಯೆಯೇ ಅನಿಸುವಂತಿದೆ.

ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ ಪಾರ್ಟಿ.. ವಿಲ್ಸನ್ ಗಾರ್ಡನ್ ನಾಗ ಧರಿಸಿದ ಟೀ ಶರ್ಟ್ ಬೆಲೆ ಎಷ್ಟು ಗೊತ್ತಾ? ಶಾಕ್ ಆಗ್ತೀರಾ! 

ಸಿಗರೇಟ್ ಸೇದುವ ಫೋಟೋ, ವಿಡಿಯೋ ಕಾಲ್‌ ಮಾಡೋ ವಿಡಿಯೋ, ಬೆಡ್‌ ಮೇಲೆ ಕೂತು ಧಮ್ ಹೊಡೆಯೋ ಫೋಟೋ ಈ ಮೂರು ಬಾಂಬ್ ಸ್ಫೋಟಗೊಂಡ ಬಳಿಕ ದರ್ಶನ್‌ ಕೇಸ್‌ನಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಬಹುಮುಖ್ಯವಾಗಿ ಜೈಲಿನಲ್ಲಿ ದರ್ಶನ್‌ಗೆ ಫೈವ್‌ ಸ್ಟಾರ್ ಹೋಟೆಲ್‌ ರೀತಿಯ ಟ್ರೀಟ್‌ಮೆಂಟ್ ಸಿಗ್ತಿದ್ಯಾ ಎಂಬ ಶಂಕೆ ಶುರುವಾಗುವಂತೆ ಮಾಡಿದೆ. ಮತ್ತು, ದರ್ಶನ್‌ಗೆ ಸಿಗರೇಟ್ ಕೊಟ್ಟವರು ಯಾರು ಎಂಬ ಪ್ರಶ್ನೆ ಹುಟ್ಟಿದೆ.

ಆರೋಪಿ ದರ್ಶನ್ ಪರ ರಾಜಕಾರಣಿಗಳ ಲಾಬಿ ನಡೆದಿತ್ತಾ?
ರೇಣುಕಾಸ್ವಾಮಿ ಕೊಲೆ ಕೇಸ್‌ನಿಂದ ದರ್ಶನ್‌ರನ್ನು ಬಿಡಿಸೋದಕ್ಕೆ ಕೆಲ ಪ್ರಭಾವಿ ರಾಜಕೀಯ ನಾಯಕರು ಕಂಡ ಕಂಡ ಮಾರ್ಗದಲ್ಲಿ ಪ್ರಭಾವ ಬೀರಲು ಮುಂದಾಗಿದ್ದರೆಂಬ ಮಾಹಿತಿಗಳಿದ್ವು. ಈಗ, ದರ್ಶನ್‌ಗೆ ಜೈಲಿನಲ್ಲಿ ಮೋಜು, ಮಸ್ತಿಗೆ ರಾಜಕೀಯ ನಾಯಕರ ಒತ್ತಡವೇ ಕಾರಣವಾಯ್ತಾ ಎಂಬ ಗುಮಾನಿ ಶುರುವಾಗಿದೆ. ಕೆಲ ಪ್ರಭಾವಿ ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಜೈಲು ಅಧಿಕಾರಿಗಳೇ ದರ್ಶನ್ ಮೋಜು ಮಸ್ತಿಗೆ ಅವಕಾಶ ಮಾಡಿಕೊಟ್ರಾ ಎಂಬ ಪ್ರಶ್ನೆ ಕೂಡ ಭುಗಿಲೆದ್ದಿದೆ.

ಇದನ್ನೂ ಓದಿ: ದರ್ಶನ್ & ಗ್ಯಾಂಗ್‌ ಬೇರೆ ಜೈಲಿಗೆ ಶಿಫ್ಟ್‌? ಎಲ್ಲಿಗೆ ಹೋಗ್ತಾರೆ? ಆ ಕತ್ತಲ ಕೋಣೆಯಲ್ಲಿ ಲಾಕ್‌ ಆಗ್ತಾರಾ?

ಒಂದೊಮ್ಮೆ, ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ ಬಿಂದಾಸ್ ಲೈಫ್‌ಗೆ ಕೆಲ ರಾಜಕೀಯ ನಾಯಕರ ಪ್ರಭಾವವೇ ಕಾರಣವಾಗಿದೆ ಎಂಬುದು ನಿಜವಾಗಿದ್ದೇ ಆದ್ರೆ.. ಅವರು ಯಾರು ಎಂಬ ಪ್ರಶ್ನೆ ಮೂಡಲೇ ಇರದು. ಇದರಲ್ಲಿ, ರಾಜಕೀಯ ನಾಯಕರ ಕೈವಾಡ ಇದೆಯಾ? ತನಿಖೆಯಲ್ಲಿ ಬಯಲಿಗೆ ಬರಲಿದ್ಯಾ ಕಾದು ನೋಡ್ಬೇಕಿದೆ.

ಐಷಾರಾಮಿ ಬದುಕಿಗೆ ತಮ್ಮದೇ ಪ್ರಭಾವ ಬಳಸಿದ್ರಾ ದರ್ಶನ್?

ದರ್ಶನ್ ರಾಜ್ಯ ಕಂಡ ಅತಿದೊಡ್ಡ ಸ್ಟಾರ್, ಕರ್ನಾಟಕದ ಮೂಲೆ ಮೂಲೆಯಲ್ಲೂ ದರ್ಶನ್‌ಗೆ ಅಭಿಮಾನಿಗಳಿದ್ದಾರೆ. ದರ್ಶನ್‌ ಕೇಳಿದ್ದನ್ನು ಮಾಡುವ ಜನರಿದ್ದಾರೆ. ಹಾಗಾಗಿ, ತನ್ನದೇ ಪ್ರಭಾವ ಬಳಸಿಕೊಂಡು ಯಾರಿಗೂ ತಿಳಿಯದಂತೆ ಸಿಗರೇಟ್, ಮದ್ಯ ತಮಗೆ ಬೇಕೆಂದ ವಸ್ತುಗಳನ್ನ ತರಿಸಿಕೊಳ್ತಿದ್ರಾ ಎಂಬುದೂ ಕೂಡ ಸದ್ಯದ ಅತಿದೊಡ್ಡ ಡೌಟ್!

ಇದನ್ನೂ ಓದಿ: ನಟ ದರ್ಶನ್ ಮೇಲೆ ಮತ್ತೊಂದು FIR; ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿಯಿಂದ ಸ್ಫೋಟಕ ಮಾಹಿತಿ ಬಹಿರಂಗ

ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ ಸಿಗರೇಟ್ ಸೇದುತ್ತಾ. ರೌಡಿಯೊಟ್ಟಿಗೆ ಹರಟುತ್ತಾ ಕೂತಿರೋ ದೃಶ್ಯ ನಿಜಕ್ಕೂ ಆಘಾತ ಹುಟ್ಟಿಸಿದೆ. ಜೈಲಲ್ಲಿ ಹೀಗೆಲ್ಲಾ ರಾಜಾತಿಥ್ಯ ಸಿಗುತ್ತೆ ಅಂದ್ರೆ ಜೈಲಿಗೆ ಹೋಗೋಕೆ ಯಾರೂ ಭಯಪಡದಂತಾ ಸನ್ನಿವೇಶ ನಿರ್ಮಾಣವಾಗಿಬಿಡೋ ಆತಂಕವಿದೆ. ಈ ಸಂಬಂಧಪಟ್ಟಂತೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಬೇಕು ಅನ್ನೋದು ಜನಾಕ್ರೋಶದ ಮಾತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಜೈಲಲ್ಲೇ ಬಿಂದಾಸ್‌ ಲೈಫ್‌.. ರಾಜಾತಿಥ್ಯಕ್ಕಾಗಿ ರಾಜಕಾರಣಿಗಳ ಪ್ರಭಾವ ಬಳಸಿದ್ರಾ ಆರೋಪಿ ದರ್ಶನ್?

https://newsfirstlive.com/wp-content/uploads/2024/08/darshan4.jpg

Load More