ನವ್ಯಾ ನವಿಲು ನಾಚುವಂತೆ ಡ್ಯಾನ್ಸ್ ಮಾಡೋ ಕೋರಿಯೋಗ್ರಾಫರ್!
ಅಂದವಾಗಿದ್ದ ಚೆಲುವೆ ಕಾರು ಚಾಲಕನ ಪ್ರೀತಿಯ ಬಲೆಗೆ ಬಿದ್ದಿದ್ದೇಗೆ?
ಮುದ್ದಾದ ಮಗಳನ್ನು ಕಳೆದುಕೊಂಡ ಪೋಷಕರು ಹೇಳಿದ್ದೇನು?
ಪ್ರೀತಿಗೆ ಸಾವಿಲ್ಲ ಅನ್ನೋ ಮಾತಿದೆ. ಯಾಕಂದ್ರೆ ಈ ಜಗತ್ತಿನಲ್ಲಿ ಪ್ರೇಮ ಶಾಶ್ವತ ಅಂತಾರೆ. ಆದ್ರೆ ಕೆಲವೊಂದು ಸಾರಿ ಕುರುಡು ಪ್ರೀತಿಯಲ್ಲಿ ಜಗತ್ತು ಕಾಣೋದೆ ಇಲ್ಲ. ಜೋಡಿ ಕಣ್ಣುಗಳಿಗೆ ಪ್ರೀತಿ ಕೂಡಿ ಮದುವೆಯಾಗಿತ್ತು. ಆದ್ರೆ ನಿರ್ಮಲ ತಿಳಿಯದ ಕಣ್ಣಿಗೆ, ಕಲ್ಮಶ ತಿಳಿಯದ ಮನಸ್ಸಿಗೆ ಸಂಚಿನ ಹುಸಿ ನಗೆ ಕಾಣಲೇ ಇಲ್ಲ. ಕಣ್ಣ ನೋಟದ ಆಳದಲ್ಲಿ ಪ್ರೇಮವ ಕೊಲ್ಲುವ ಚೂರಿಯನ್ನ ಇಟ್ಕೊಂಡಿದ್ದ ಪಾಪಿ ಮರೆಯಲ್ಲೇ ಬಂದು ಚುಚ್ಚಿ ಹೋಗಿದ್ದ. ಆ ಸಾವಂತೆ ಕಿರಾತಕನ ವೇಷ ಬಯಲಾಗಿತ್ತು. ಪ್ರೀತಿ ಅನ್ನೋ ಮುಖವಾಡ ಕಳಚಿ ಬಿದ್ದಿತ್ತು. ಮಲಗಿದ್ದಲ್ಲೇ ಚೆಲುವೆಯ ನೆತ್ತರು ಹರಿದು ಹೋಗಿತ್ತು.
ಇದನ್ನೂ ಓದಿ: ಜೀನ್ಸ್ ಪ್ಯಾಂಟ್, PUMA ಟೀ-ಶರ್ಟ್, ಕತ್ತಲ್ಲಿ ಕೂಲಿಂಗ್ ಗ್ಲಾಸ್.. ಬಳ್ಳಾರಿಗೆ ಬಂದ ಭಲೇ ಭೂಪತಿ ಹೊಸ ವಿವಾದ..!
ಗಂಡನ ಕೈಯಿಂದಲೇ ಹತ್ಯೆಯಾದ ಯುವತಿ ಹೆಸರು ನವ್ಯಾಶ್ರೀ. ಈಕೆಯನ್ನು ಕೊಲೆ ಮಾಡಿದ ಗಂಡನ ಹೆಸರು ಕಿರಣ್. ನವ್ಯಾ ಮತ್ತು ಕಿರಣ್ ಪ್ರೀತಿಸಿಯೇ ಮದುವೆಯಾಗಿದ್ರು. ಆದ್ರೆ ಕೆಲ ಮನಸ್ತಾಪಗಳಿಂದ ನವ್ಯಾ ಕಿರಣ್ನಿಂದ ದೂರ ಇದ್ದಳು. ಇದೇ ಕಾರಣಕ್ಕೆ ಮಂಗಳವಾರ ನವ್ಯಾ ತನ್ನ ಸ್ನೇಹಿತೆಯೊಬ್ಬಳನ್ನ ಕರ್ಕೊಂಡು ಬಂದು ಮನೆಯಲ್ಲಿ ಮಲಗಿದ್ದಳು. ಆದ್ರೆ ಬೆಳಗಿನ ಜಾವದ ಹೊತ್ತಿಗೆ ನವ್ಯಾ ಗೆಳತಿಗೆ ಮಲಗಿದ್ದ ಬೆಡ್ ಒದ್ದೆಯಾದಂತೆ ಕಂಡಿದೆ. ನೋಡಿದ್ರೆ ಪಕ್ಕದಲ್ಲಿದ್ದ ಗೆಳತಿ ದೇಹ ರಕ್ತ ಸಿಕ್ತವಾಗಿತ್ತು. ರಾತ್ರಿ ಗೆಳತಿ ಜೊತೆಯಲ್ಲಿ ಆರಾಮಾಗಿಯೇ ಮಲಗಿದ್ದ ನವ್ಯಶ್ರೀ ಕತ್ತು ಸೀಳಿ ಹೋಗಿತ್ತು. ತಣ್ಣಗೆ ಮಲಗಿದ್ದ ಬೆಡ್ ರಕ್ತಮಯವಾಗಿತ್ತು. ಬೆಳಗಿನ ಜಾವ ಎಚ್ಚರವಾಗಿದ್ದ ನವ್ಯಾ ಗೆಳತಿಗೆ ನವ್ಯಶ್ರೀ ಕತ್ತು ಕೊಯ್ದು ಕೊಲೆ ಮಾಡಿರುವುದು ಕಂಡುಬಂದಿದೆ. ನವ್ಯಶ್ರೀ ಗೆಳತಿ ಭಯದಿಂದ ಕಿರುಚಿ, ಅಕ್ಕಪಕ್ಕದವರನ್ನು ಕರೆದಿದ್ದಾರೆ. ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಕೊಲೆಯಾದ ಬಗ್ಗೆ ತಿಳಿಸಿದ್ದಾರೆ. ಆಗಲೇ ನೋಡಿ ಕೊಲೆಯ ಸತ್ಯ ಗೊತ್ತಾಗಿದ್ದು. ಯಾಕಂದ್ರೆ ನವ್ಯಾಶ್ರೀಯನ್ನ ತಾಳಿ ಕಟ್ಟಿದ್ದ ಗಂಡನೇ ಮರೆಯಲ್ಲಿ ಬಂದು ಕೊಂದು ಹಾಕಿದ್ದ. ಗಾಡ ನಿದ್ದೆಯಲ್ಲಿದ್ದ ನವ್ಯಾ ಕತ್ತಿಗೆ ಚೂರಿ ಹಾಕಿ ಉಸಿರು ನಿಲ್ಲಿಸಿದ್ದ.
ಹೆಸರಿಗೆ ತಕ್ಕಂತೆ ನವ್ಯಾ ನವಿಲು ನಾಚುವಂತೆ ಡ್ಯಾನ್ಸ್ ಮಾಡೋ ಕೋರಿಯೋಗ್ರಾಫರ್. ಇತ್ತ ಕಿರಣ್ ಕ್ಯಾಬ್ ಚಾಲಕ. ಈ ಚೆಂದುಳ್ಳಿಗೂ ಕ್ಯಾಬ್ ಡ್ರೈವರ್ಗೂ ಪ್ರೀತಿ ಅದೇಗೆ ಪ್ರೀತಿ ಮೂಡ್ತೋ ಗೊತ್ತಿಲ್ಲ. ಆದ್ರೆ ಇಬ್ಬರು ಒಲವಿನ ಮಹಲು ಅಡಿಪಾಯ ಹಾಕಿತ್ತು. ಕಳೆದ ಮೂರು ವರ್ಷಗಳ ಹಿಂದೆ ಜೋಡಿ ಕಣ್ಣುಗಳಿಗೆ ಪ್ರೀತಿ ಕೂಡಿ ಮದುವೆಯಾಗಿತ್ತು. ಒಪ್ಪಿದ ಮನಸ್ಸಿನಿಂದಲೇ ಕಿರಣ್ ಮತ್ತು ನವ್ಯಾ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಆದ್ರೆ ಮದುವೆಯಾದ್ಮೇಲೆ ಈ ಕಿರಣ್ ತಲೆಗೆ ಅನುಮಾನದ ಭೂತ ಹೊಕ್ಕಿದೆ. ಅಲ್ಲಿಂದ ನವ್ಯಾ ಸಂಸಾರದ ದೋಣಿ ಡೋಲಾಯಮಾನವಾಗಿದೆ. ಮನುಷ್ಯನ ತಲೆಗೆ ಅನುಮಾನ ಹುಳ ಹೊಕ್ರೆ ತುಂಬಾ ಡೇಂಜರ್. ಕಿರಣ್ ನವ್ಯಾಳನ್ನ ಪ್ರೀತಿಸಿಯೇ ಮದುವೆಯಾಗಿದ್ದ. ಆದ್ರೆ ಅದ್ಯಾಕೋ ಏನೋ ಗೊತ್ತಿಲ್ಲ ಎರಡು ವರ್ಷಗಳ ಹಿಂದೆ ಈ ಕಿರಣ್ ನವ್ಯಾಳ ಶೀಲವನ್ನು ಶಂಕಿಸೋದಕ್ಕೆ ಶುರು ಮಾಡಿದ್ದ. ಅನುಮಾನ ಪಟ್ಟು ಆಕೆಗೆ ಚಿತ್ರಹಿಂಸೆ ಕೊಡೋದಕ್ಕೆ ಶುರು ಮಾಡಿದ್ದ. ಮನೆಯಲ್ಲಿ ನಿತ್ಯ ಗಲಾಟೆ ಜಗಳ ನವ್ಯಾಗೆ ಸಾಕಾಗಿ ಹೋಗಿತ್ತು. ಅನುಮಾನದ ಭೂತಕ್ಕೆ ಬಲಿಯಾಗಿದ್ದ ಕಿರಣ್ ನವ್ಯಾಳನ್ನ ಕುರ್ಚಿಗೆ ಕಟ್ಟಿ ಹೊಡೆದು ಚಿತ್ರಹಿಂಸೆ ಕೊಟ್ಟಿದ್ದನಂತೆ. ಆದ್ರೂ ನವ್ಯಾ ಅದನ್ನು ಸಹಿಸಿಕೊಂಡಿದ್ದಳು.
ಇದನ್ನೂ ಓದಿ: ಕೂಲಿಂಗ್ ಗ್ಲಾಸ್, ಹ್ಯಾಂಡ್ ಶೇಕ್ ಮಾಡಿ ಜೈಲಿಗೆ ಎಂಟ್ರಿ; ಕರ್ಕೊಂಡು ಬಂದ ಸಿಬ್ಬಂದಿಗೆ ಸಂಕಷ್ಟ ತಂದಿಟ್ಟ ದರ್ಶನ್..!
ಒಂದು ಹೆಣ್ಣು ಏನನ್ನಾದರೂ ಬೇಕಾದ್ರೂ ಸಹಿಸಿಕೊಳ್ತಾಳೆ. ಆದ್ರೆ ತನ್ನ ಕ್ಯಾರೆಕ್ಟರ್ ಬಗ್ಗೆ ಮಾತಾಡಿದಾಗ ಅದು ಕೋಪಕ್ಕೆ ಕಾರಣವಾಗುತ್ತೆ. ಇದೇ ವಿಚಾರ ನವ್ಯಾಗೂ ಬೇಸರ ತರಿಸಿತ್ತು. ಆದ್ರೂ ಗಂಡ ಅನ್ನೋ ಕಾರಣಕ್ಕೆ ನವ್ಯಾ ತಾಳ್ಮೆಯಿಂದಲೇ ಇದ್ಳು. ಆದ್ರೆ ಗಂಡ ಯಾವಾಗಾ ಏನ್ ಮಾಡ್ತಾನೋ ಅನ್ನೋ ಆತಂಕ ನವ್ಯಾಗೆ ಕಾಡ್ತಾನೆ ಇತ್ತು. ಅದೇ ಕಾರಣಕ್ಕೆ ತನ್ನ ನೋವನ್ನ ಗೆಳತಿ ಜೊತೆಯಲ್ಲಿ ಹೇಳಿಕೊಂಡಿದ್ಳು ಕೂಡ. ಅದ್ರಂತೆ ಮಂಗಳವಾರ ಕೂಡ ನವ್ಯಾ ಗಂಡ ಕೊಡ್ತಿದ್ದ ಹಿಂಸೆಯನ್ನ ತಡೆಯೋಕೆ ಆಗದೇ ಸ್ನೇಹಿತೆಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಳು. ತನಗೆ ಮನೆಯಲ್ಲೂ ನೆಮ್ಮದಿ ಇಲ್ಲ. ಹೊರಗಡೆಯೂ ನೆಮ್ಮದಿ ಇಲ್ಲ ಅಂತ ಗೆಳತಿ ಮುಂದೆ ಹೇಳಿಕೊಂಡಿದ್ದಳು.
ಬಳಿಕ ನವ್ಯಾ ಆಕೆಯ ಇನೋರ್ವ ಗೆಳೆಯನಿಗೆ ಕರೆ ಮಾಡಿದ್ದಾಳೆ. ನನಗೆ ಮನೆಯಲ್ಲಿ ಸೇಫ್ ಇಲ್ಲ ಅನ್ನೋ ಫೀಲ್ ಆಗುತ್ತಿದೆ ಎಂದು ಆತನಿಗೂ ಭೇಟಿಯಾಗುವಂತೆ ಹೇಳಿದ್ದಾಳೆ. ನವ್ಯಾಳನ್ನ ಭೇಟಿಯಾದ ಮೂವರು ಸ್ನೇಹಿತರು ಆರ್.ಆರ್ ನಗರಕ್ಕೆ ಕಾರಿನಲ್ಲಿ ಹೋಗಿದ್ದಾರೆ. ಆಗ ನವ್ಯಶ್ರೀ ಗೆಳೆಯ ನೀನು ನಿನ್ನ ಗಂಡನ ಮೇಲೆ ಕಂಪ್ಲೇಂಟ್ ಕೊಡುವಂತೆ ಹೇಳಿದ್ದಾನೆ. ಕೊನೆಗೆ ಗೆಳೆಯನನ್ನು ಆತನ ಮನೆಗೆ ಡ್ರಾಪ್ ಮಾಡಿದ್ದ ನವ್ಯಶ್ರೀ ಮತ್ತು ಆಕೆಯ ಗೆಳತಿ ಇಬ್ಬರ ವಾಪಸ್ ಮನೆಗೆ ಬಂದು ಮಲಗಿದ್ದಾರೆ. ಆದ್ರೆ ಬುಧವಾರ ಬೆಳಗಿನ ಜಾವದ ಹೊತ್ತಿಗೆ ಎದ್ದು ನೋಡಿದ್ದ ನವ್ಯಾ ಗೆಳತಿಗೆ ಕಂಡಿದ್ದು ರಕ್ತ ಸಿಕ್ತ ದೇಹ. ನವ್ಯಾ ಭಯದಲ್ಲಿದ್ದಾಳೆ ಅನ್ನೋ ಕಾರಣ ನವ್ಯಾ ಗೆಳತಿ ಆಕೆ ಮನೆಯಲ್ಲೇ ಉಳಿದುಕೊಂಡಿದ್ಳು. ರಾತ್ರಿ ಗಾಢ ನಿದ್ರೆಗೆ ಹೋಗಿದ್ದ ನವ್ಯಶ್ರೀಯ ಗೆಳತಿಗೆ ಬೆಳಗ್ಗೆ ಎಚ್ಚರವಾಗಿದೆ. ಆಗ ತನ್ನ ಬಟ್ಟೆ ಒದ್ದೆಯಾಗಿರುವ ಆದ ಅನುಭವ ಆಗಿದೆ. ಎಚ್ಚರಗೊಂಡು ನೋಡಿದ್ರೆ ನವ್ಯಾ ಕತ್ತಿನಿಂದ ರಕ್ತ ಸುರಿಯುತ್ತಿದೆ.
ಪೊಲೀಸರನ್ನ ನೋಡ್ತಿದ್ದಂತೆ ನವ್ಯಾ ಗೆಳತಿ ಐಶ್ವರ್ಯ ಶಾಕ್ ಆಗಿದ್ದಾಳೆ. ಯಾಕಂದರೆ ಜೋಡಿ ಕಣ್ಣುಗಳಿಗೆ ಪ್ರೀತಿ ಕೂಡಿ ಮದುವೆಯಾಗಿತ್ತು. ಆದ್ರೆ ನಿರ್ಮಲ ತಿಳಿಯದ ಕಣ್ಣಿಗೆ, ಕಲ್ಮಶ ತಿಳಿಯದ ನವ್ಯ ಮನಸ್ಸಿಗೆ ಗಂಡನ ಸಂಚಿನ ಹುಸಿ ನಗೆ ಕಾಣಲೇ ಇಲ್ಲ. ಕಣ್ಣ ನೋಟದ ಆಳದಲ್ಲಿ ಪ್ರೇಮವ ಕೊಲ್ಲುವ ಚೂರಿಯನ್ನ ಇಟ್ಕೊಂಡಿದ್ದ ಪಾಪಿ ಕಿರಣ್ ಮರೆಯಲ್ಲೇ ಬಂದು ನವ್ಯಾ ಕತ್ತಿಗೆ ಚಾಕು ಚುಚ್ಚಿ ಹೋಗಿದ್ದ. ಆ ಸಾವಂತೆ ಕಿರಾತಕನ ವೇಷ ಬಯಲಾಗಿತ್ತು. ಪ್ರೀತಿ ಅನ್ನೋ ಮುಖವಾಡ ಕಳಚಿ ಬಿದ್ದಿತ್ತು. ಮಲಗಿದ್ದಲ್ಲೇ ಚೆಲುವೆಯ ನೆತ್ತರು ಹರಿದು ಹೋಗಿತ್ತು. ಅಸಲಿಗೆ ಈ ನವ್ಯಾಗೂ ಕ್ಯಾಬ್ ಚಾಲಕ ಕಿರಣ್ಗೂ ಪರಿಚವಾಗಿದ್ದು ಕೂಡ ಒಂದು ಮೋಸದ ಕಥೆ. ಆ ಮೋಸದ ಆಟಕ್ಕೆ ಬಿದ್ದು ನವ್ಯಾ ಕಿರಣ್ ಪ್ರೇಮದ ಬಲೆಯಲ್ಲಿ ಬಂಧಿಯಾಗಿದ್ಳು. ಆದ್ರೀಗ ಅದೇ ಮೋಸಗಾರ ನವ್ಯಾ ಜೀವ ಬಲಿ ಪಡೆದು ಅಟ್ಟಹಾಸ ತೋರಿದ್ದಾನೆ. ಕೊಲೆಗಾರ ಕಿರಣ್ ಮೋಸದ ಕತೆ ಕೇಳಿದ್ರೆ ನೀವು ಶಾಕ್ ಆಗೋದ್ರಲ್ಲಿ ಅನುಮಾನವೇ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ