ಇದು ಬ್ಯಾಟ್ಸ್ಮನ್ ಸಚಿನ್ ಕಥೆಯಲ್ಲ, ಬೌಲರ್ ತೆಂಡೂಲ್ಕರ್ ಕಥೆ
ಅಂದು ಬೌಲರ್ ಆಗಬೇಕು ಅನ್ನೋ ಸಚಿನ್ ಆಸೆ ನುಚ್ಚು ನೂರಾಯ್ತು
ಅಂದು ರಿಜೆಕ್ಟ್ ಆಗಿದ್ದ ಸಚಿನ್ ತೆಂಡೂಲ್ಕರ್ ಇಮದು ಕ್ರಿಕೆಟ್ಗೆ ದೇವರು
ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಆಟವನ್ನ ಸಂಭ್ರಮಿಸಿದವರು, ಆರಾಧಿಸಿದವರು ಇಡೀ ವಿಶ್ವದ ತುಂಬಾ ಇದ್ದಾರೆ. ಮಾಸ್ಟರ್ ಬ್ಲಾಸ್ಟರ್ ಆಟಕ್ಕೆ ತಲೆದೂಗದ ಕ್ರಿಕೆಟ್ ಪ್ರೇಮಿಯೇ ಇಲ್ಲ. ಆದ್ರೆ, ಸಚಿನ್ ಕ್ರಿಕೆಟರ್ ಆಗಬೇಕು ಅನ್ನೋ ಕನಸು ಕಂಡಾಗ ಆಗಿದ್ದು ರಿಜೆಕ್ಟ್.! ಇದು ಬ್ಯಾಟ್ಸ್ಮನ್ ಸಚಿನ್ ಕಥೆಯಲ್ಲ. ಬೌಲರ್ ಸಚಿನ್ ಕಥೆ.
ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಆಟಕ್ಕೆ ಇಡೀ ವಿಶ್ವವೇ ತಲೆ ಬಾಗಿದೆ. ಮಾಂತ್ರಿಕ ಬ್ಯಾಟಿಂಗ್ಗೆ ದಿಗ್ಗಜರು ದಂಗಾದ್ರೆ, ಅಭಿಮಾನಿಗಳು ಮಂತ್ರಮುಗ್ಧರಾಗಿದ್ದಾರೆ. 24 ವರ್ಷಗಳ ಕ್ರಿಕೆಟ್ ಕರಿಯರ್ನಲ್ಲಿ ಮಾಸ್ಟರ್ ಬ್ಲಾಸ್ಟರ್ ಮಾಡದ ಸಾಧನೆಯಿಲ್ಲ. ಬರೆಯದ ದಾಖಲೆಗಳಿಲ್ಲ. ಕ್ರಿಕೆಟ್ ಲೋಕಕ್ಕೆ ಗುಡ್ ಬೈ ಹೇಳಿ 10 ವರ್ಷಗಳೇ ಕಳೆದ್ರೂ ಇಂದಿಗೂ ಹಲ ದಾಖಲೆಗಳಿಗೆ ಸಚಿನ್ ಒಡೆಯ.
ಕ್ರಿಕೆಟ್ ಲೋಕದಲ್ಲಿ ಅಸಾಧ್ಯವಾದುದನ್ನ ಸಾಧಿಸಿರುವ ಈ ಸಚಿನ್ ತೆಂಡುಲ್ಕರ್ರ ಕ್ರಿಕೆಟ್ ಕರಿಯರ್ ಆರಂಭವಾದ ಕಥೆಯೇ ವಿಚಿತ್ರವಾಗಿದೆ. ಆರಂಭಿಕ ದಿನಗಳಲ್ಲಿ ಕ್ರಿಕೆಟರ್ ಆಗೋ ಕನಸು ಕಂಡಿದ್ದ ಸಚಿನ್ಗಿದ್ದಿದ್ದು ಬೌಲರ್ ಆಗಬೇಕು ಅನ್ನೋ ಆಸೆ. ಈ ನಿಟ್ಟಿಯಲ್ಲಿ ಪರಿಶ್ರಮ ಪಡ್ತಿದ್ದ ತೆಂಡುಲ್ಕರ್, 1987ರಲ್ಲಿ ಬೌಲಿಂಗ್ ಪಟ್ಟುಗಳನ್ನ ಕಲಿಯಲು MRF ಪೇಸ್ ಪೌಂಡೇಶನ್ನ ಕದ ತಟ್ಟಿದ್ರಂತೆ. ಆದ್ರೆ ಅಲ್ಲಿ ಆಗಿದ್ದು ನಿರಾಸೆ. ಟ್ರಯಲ್ಸ್ನಲ್ಲಿ ಸಚಿನ್ ರನ್ನ ಪೇಸ್ ಪೌಂಡೇಶನ್ ರಿಜೆಕ್ಟ್ ಮಾಡಿತ್ತು. ಆಗಲೇ ಬೌಲಿಂಗ್ನಿಂದ ಬ್ಯಾಟಿಂಗ್ ನಡೆಗೆ ಸಚಿನ್ ಸ್ವಿಚ್ ಆಗಿದ್ದು. ಆಮೇಲೆ ಏನಾಯ್ತು ಅನ್ನೋದನ್ನ ನಾವ್ ಬಿಡಿಸಿಹೇಳಬೇಕಾ.? ರಿಜೆಕ್ಟ್ ಆಗಿದ್ದ ಪುಟ್ಟ ಸಚಿನ್, ಈಗ ಕ್ರಿಕೆಟ್ಗೆ ದೇವರು..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ