newsfirstkannada.com

ವಿಕ್ರಮ್‌ನಿಂದ ಪ್ರಗ್ಯಾನ್ ರೋವರ್ ಎಷ್ಟು ದೂರ ಹೋಯ್ತು.. ಶಿವಶಕ್ತಿ ಪಾಯಿಂಟ್‌ನ ಲೇಟೆಸ್ಟ್‌ ಮಾಹಿತಿ ಇಲ್ಲಿದೆ

Share :

Published August 26, 2023 at 5:22pm

Update August 26, 2023 at 5:28pm

    ವಿಕ್ರಮ್ ಲ್ಯಾಂಡರ್‌ನಿಂದ ದೂರ ಹೋಗುತ್ತಿರುವ ಪ್ರಗ್ಯಾನ್ ರೋವರ್!

    ಪ್ರಗ್ಯಾನ್ ರೋವರ್‌ ಸಾಗುವ ಲೇಟೆಸ್ಟ್ ವಿಡಿಯೋ ಹಂಚಿಕೊಂಡ ಇಸ್ರೋ

    ಆಗಸ್ಟ್ 25ಕ್ಕೆ ಲ್ಯಾಂಡರ್‌ನಿಂದ 8 ಮೀಟರ್ ದೂರ ಸಾಗಿರುವ ಪ್ರಗ್ಯಾನ್

ವಿಕ್ರಮ್ ಲ್ಯಾಂಡರ್‌ನಿಂದ ಕಂಬಳಿ ಹುಳುವಿನಂತೆ ಕೆಳಗಿಳಿದ ಪ್ರಗ್ಯಾನ್ ರೋವರ್ ಎಷ್ಟು ದೂರ ಹೋಗಿದೆ? ಲ್ಯಾಂಡರ್‌ನ ಸನಿಹದಲ್ಲಿರುವ ಪ್ರಗ್ಯಾನ್ ರೋವರ್ ಈಗ ಏನು ಮಾಡುತ್ತಿದೆ. ಈ ಕುತೂಹಲಕ್ಕೂ ಇಸ್ರೋ ಅಧಿಕೃತ ಮಾಹಿತಿ ನೀಡಿದೆ. ಪ್ರಗ್ಯಾನ್ ರೋವರ್‌ನ ಲೇಟೆಸ್ಟ್ ವಿಡಿಯೋವನ್ನು ಇಸ್ರೋ ಹಂಚಿಕೊಂಡಿದ್ದು, ಆ ವಿಡಿಯೋದಲ್ಲಿ ಪ್ರಗ್ಯಾನ್ ಚಲನವಲನವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ. ಚಂದ್ರಯಾನ-3 ಯಶಸ್ವಿಯಾದ ಬಳಿಕ ಇಸ್ರೋ ವಿಜ್ಞಾನಿಗಳು ಮತ್ತಷ್ಟು ಸಾಹಸಮಯ ಕಾರ್ಯಕ್ಕೆ ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಚಂದ್ರನ ಮೇಲೆ ಚಲಿಸುತ್ತಿರುವ ಪ್ರಗ್ಯಾನ್ ರೋವರ್ ಸಕಾರತ್ಮವಾಗಿ ಸ್ಪಂದಿಸುತ್ತಿದೆ.

ಇದನ್ನೂ ಓದಿ: ಹೆಮ್ಮೆಯ ಇಸ್ರೋಗೆ ರಾಜ್ಯದ ಬಡಕುಟುಂಬದಿಂದಲೂ ಅಭಿನಂದನೆ; ಇಬ್ಬರು ಮಕ್ಕಳಿಗೆ ವಿಕ್ರಂ, ಪ್ರಗ್ಯಾನ್ ಎಂದು ನಾಮಕರಣ

ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಇಸ್ರೋ ನಿನ್ನೆಯಷ್ಟೇ ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್‌ನಿಂದ ಪ್ರಗ್ಯಾನ್ ರೋವರ್ ಕೆಳಗಿಳಿದ ವಿಡಿಯೋ ಹಂಚಿಕೊಂಡಿತ್ತು. ಇದೀಗ ಪ್ರಗ್ಯಾನ್ ರೋವರ್‌ನ ಮತ್ತೊಂದು ವಿಡಿಯೋ ಕೂಡ ಬಿಡುಗಡೆ ಮಾಡಲಾಗಿದೆ. ಚಂದ್ರನ ಮೇಲೆ ಪ್ರಗ್ಯಾನ್​ ರೋವರ್ ಇಳಿದ ಮೇಲೆ ಲ್ಯಾಂಡರ್‌ನಿಂದ ಸ್ವಲ್ಪ ದೂರಕ್ಕೆ ಚಲಿಸಿದೆ. ಚಂದ್ರನ ಮೇಲೆ ಪ್ರಗ್ಯಾನ್ ರೋವರ್ ಓಡಾಡುತ್ತಾ ಕಾರ್ಯಾಚರಣೆ ನಡೆಸುತ್ತಿರುವ ದೃಶ್ಯ ಇದಾಗಿದೆ.

8-10 ಮೀಟರ್ ಸಾಗಿರುವ ಪ್ರಗ್ಯಾನ್ ರೋವರ್‌!

ಚಂದ್ರಯಾನ-3ರ ಮಿಷನ್‌ನಲ್ಲಿ ವಿಕ್ರಮ್ ಲ್ಯಾಂಡರ್‌ ಇದೇ ಆಗಸ್ಟ್ 23ರಂದು ಸೇಫ್ ಲ್ಯಾಂಡ್ ಆಯ್ತು. ಇದಾದ ಕೆಲವೇ ಗಂಟೆಯಲ್ಲಿ ಪ್ರಗ್ಯಾನ್ ರೋವರ್ ವಿಕ್ರಮ್ ಲ್ಯಾಂಡರ್‌ನಿಂದ ಹೊರ ಬಂದಿದೆ. ಒಂದು ಗಂಟೆಗೆ ಒಂದು ಸೆಂಟಿ ಮೀಟರ್ ಚಲಿಸುವ ಪ್ರಗ್ಯಾನ್ ರೋವರ್ ಆಗಸ್ಟ್ 25ಕ್ಕೆ 8 ಮೀಟರ್ ದೂರ ಸಾಗಿದೆ. ವಿಕ್ರಮ್ ಲ್ಯಾಂಡರ್‌ನಿಂದ ಇಲ್ಲಿವರೆಗೂ ಪ್ರಗ್ಯಾನ್ ರೋವರ್ 10 ಮೀಟರ್ ದೂರ ಸಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥನ್ ತಿಳಿಸಿದ್ದಾರೆ. ಸದ್ಯ ಪ್ರಗ್ಯಾನ್ ರೋವರ್ ಶಿವಶಕ್ತಿ ಪಾಯಿಂಟ್‌ನ ಸಮೀಪವೇ ತನ್ನ ಅಧ್ಯಯನ ನಡೆಸುತ್ತಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ವಿಕ್ರಮ್‌ನಿಂದ ಪ್ರಗ್ಯಾನ್ ರೋವರ್ ಎಷ್ಟು ದೂರ ಹೋಯ್ತು.. ಶಿವಶಕ್ತಿ ಪಾಯಿಂಟ್‌ನ ಲೇಟೆಸ್ಟ್‌ ಮಾಹಿತಿ ಇಲ್ಲಿದೆ

https://newsfirstlive.com/wp-content/uploads/2023/08/ISRO-Pragnana-Rover.jpg

Load More