ಕೊನೆ ಪಂದ್ಯದಲ್ಲಿ ಅಫ್ಘಾನ್ ಗೆದ್ದರೇ ಪಾಕಿಸ್ತಾನಕ್ಕೆ ಸಂಕಷ್ಟ ಆಗುತ್ತಾ?
ಈಗಾಗಲೇ 8 ಪಂದ್ಯಗಳನ್ನು ಸತತವಾಗಿ ಗೆದ್ದಿರುವ ಟೀಮ್ ಇಂಡಿಯಾ
ಸೆಮೀಸ್ ಆಡಬೇಕಾದರೆ ಪಾಕ್ ಕೊನೆ ಪಂದ್ಯ ಯಾರ ಜತೆ ಗೆಲ್ಲಬೇಕು?
ಸೋಲಿಲ್ಲದ ಧೀರನಾಗಿ ಟೀಮ್ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಮುನ್ನುಗ್ಗುತ್ತಿದ್ದು ಈಗಾಗಲೇ ಸೆಮಿಫೈನಲ್ ತಲುಪಿದೆ. ನೆದರ್ಲ್ಯಾಂಡ್ಸ್ ವಿರುದ್ಧದ ಕೊನೆ ಪಂದ್ಯ ಆಡುತ್ತಿರುವ ಭಾರತಕ್ಕೆ ಕೇವಲ ಔಪಚಾರಿಕವಾಗಿದೆ. ಆದ್ರೆ ಸೆಮಿಫೈನಲ್ನಲ್ಲಿ ಭಾರತ-ಪಾಕ್ ಎದುರಾಗಬೇಕಾದ್ರೆ, ಇಂಗ್ಲೆಂಡ್ ಜೊತೆಗಿನ ಪಂದ್ಯವನ್ನು ಬಾಬರ್ ಟೀಮ್ ಗೆದ್ದರೇ ಮಾತ್ರ ಅಭಿಮಾನಿಗಳು ಮತ್ತೆ ಇಂಡೋ-ಪಾಕ್ ಮ್ಯಾಚ್ ಅನ್ನು ಮತ್ತೊಮ್ಮೆ ಕಣ್ಣು ತುಂಬಿಕೊಳ್ಳಬಹುದು.
ವಿಶ್ವಕಪ್ ಪಾಯಿಂಟ್ಸ್ ಟೇಬಲ್ನಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು, ಸೆಮಿಫೈನಲ್ ಮ್ಯಾಚ್ ಅನ್ನು ಟೇಬಲ್ನ 4ನೇ ಸ್ಥಾನದಲ್ಲಿರುವ ತಂಡದ ಜೊತೆ ಆಡಲಿದೆ. ಸದ್ಯಕ್ಕೆ ನಾಲ್ಕನೇ ಪಾಕಿಸ್ತಾನ ಈ 4ನೇ ಸ್ಥಾನಕ್ಕೆ ಬರಬೇಕಾದರೆ ಇಂಗ್ಲೆಂಡ್ ವಿರುದ್ಧದ ಪಂದ್ಯ ತುಂಬಾ ಮಹತ್ವ ಪಡೆದುಕೊಂಡಿದೆ. ಈ ಪಂದ್ಯವನ್ನು ಗೆದ್ದರೇ ಮಾತ್ರ ಈ ಟೂರ್ನಿಯಲ್ಲಿ ಇಂಡಿಯಾ-ಪಾಕ್ ಸೆಮಿಫೈನಲ್ನಲ್ಲಿ ಸೆಣಸಾಟ ನಡೆಸಲಿವೆ.
ಸದ್ಯ ಪಾಕ್, ನ್ಯೂಜಿಲೆಂಡ್ ಮತ್ತು ಅಫ್ಘಾನ್ ತಂಡಗಳು ಎಂಟೆಂಟು ಅಂಕಗಳನ್ನು ಪಡೆದುಕೊಂಡಿವೆ. ಮೂರಕ್ಕೂ ಒಂದೊಂದು ಪಪಂದ್ಯ ಬಾಕಿ ಇದ್ದು ಇದರಲ್ಲಿ ಮೂರು ಟೀಮ್ಗಳು ವಿನ್ ಆಗಿದ್ದೇ ಆದ್ರೆ ತಲಾ ಹತ್ತು ಹತ್ತು ಅಂಕಗಳನ್ನು ಪಡೆದುಕೊಳ್ಳುತ್ತಾರೆ. ಕೊನೆಯದಾಗಿ ಟೂರ್ನಿಯಲ್ಲಿ ಈ ಮೂರು ಪಂದ್ಯಗಳ ನೆಟ್ ರನ್ ರೇಟ್ ಅನ್ನು ಗಣನೆಗೆ ತೆಗೆದುಕೊಂಡು ಸೆಮಿಫೈನಲ್ಗೆ ಹೋಗುವ ತಂಡ ಯಾವುದೆಂದು ನಿರ್ಧಾರ ಮಾಡಲಾಗುತ್ತದೆ. ಸದ್ಯ ಕಿವೀಸ್ 0.398 ನೆಟ್ ರನ್ ರೇಟ್ ಹೊಂದಿದ್ದು ಪಾಕ್, ಅಫ್ಘಾನ್ಗಿಂತ ಉತ್ತಮವಾಗಿದೆ.
ಸದ್ಯ ಟೂರ್ನಿಯಲ್ಲಿ ಬಾಕಿ ಇರುವ ಕೊನೆ ಪಂದ್ಯದಲ್ಲಿ ಕಿವೀಸ್, ಅಫ್ಘಾನ್ ತಂಡಗಳು ಸೋತು ಹೋದರೆ ಪಾಕ್ ಸೆಮಿಸ್ಗೆ ಬರೋದು ಪಕ್ಕಾ. ಒಂದು ವೇಳೆ ಎರಡರಲ್ಲಿ ಒಂದು ಟೀಮ್ ವಿನ್ ಆದ್ರೆ ಪಾಕ್ಗೆ ಸಂಕಷ್ಟ ಗ್ಯಾರಂಟಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ