newsfirstkannada.com

‘ಕಾಂಗ್ರೆಸ್ I.N.D.I.A ಇಂಡಿಯನ್ ಮುಜಾಯಿದ್ದಿನ್‌ಗಿಂತ ಹೇಗೆ ಭಿನ್ನ?’- ಬಿಜೆಪಿ ಸಂಸದ ತೇಜಸ್ವಿ ಸೂರ್ಯ

Share :

26-07-2023

  ಬಂಧನದಲ್ಲಿರುವ ಗಲಭೆಕೋರರ ಬಿಡುಗಡೆಗೆ ತೇಜಸ್ವಿ ಸೂರ್ಯ ಕಿಡಿ

  ಪಿಎಫ್‌ಐ ಮತ್ತು KFD ಕಾರ್ಯಕರ್ತರ ಮೇಲೆ 1700ಕ್ಕೂ ಹೆಚ್ಚು ಕೇಸ್

  ಬಿಡುಗಡೆ ಪ್ರಯತ್ನ ಸಿಎಂ ಸಿದ್ದರಾಮಯ್ಯ ಸರ್ಕಾರದ ಮೊದಲ ಆವೃತ್ತಿ

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಕೋರರ ಬಿಡುಗಡೆ ವಿಚಾರ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಬಂಧನದಲ್ಲಿರುವ ಗಲಭೆಕೋರರ ಬಿಡುಗಡೆ ಬಗ್ಗೆ ಪರಿಶೀಲಿಸಲು ಸೂಚಿಸಿದ್ದಾರೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ಈ ನಡೆಯನ್ನ ಬಿಜೆಪಿ ನಾಯಕರು ತೀವ್ರ ಖಂಡಿಸಿದ್ದಾರೆ. ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಈ ಕುರಿತು ಪ್ರತಿಕ್ರಿಯಿಸಿದ್ದು, ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಹೆಸರಿಗೆ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಹೆಸರಿನಲ್ಲೂ ‘INDIA’ ಇದೆ- ವಿಪಕ್ಷಗಳಿಗೆ ಪ್ರಧಾನಿ ಮೋದಿ ಕೌಂಟರ್

ಒಂದು ವಾರದ ಹಿಂದಷ್ಟೇ ಬೆಂಗಳೂರು ಪೊಲೀಸರು ಐವರು ಶಂಕಿತ ಉಗ್ರರನ್ನ ಬಂಧಿಸಿದ್ದರು. ಇದೀಗ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಂಧನದಲ್ಲಿರುವ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಕೋರರನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈ ಗಲಭೆಕೋರರು ಪೊಲೀಸ್ ಠಾಣೆ ಮತ್ತು ಕಾಂಗ್ರೆಸ್ ದಲಿತ ಶಾಸಕನ ಮನೆಯನ್ನೇ ಸುಟ್ಟು ಹಾಕಿದ್ದರು. ಇದು ಸಿಎಂ ಸಿದ್ದರಾಮಯ್ಯ ಸರ್ಕಾರದ ಮೊದಲ ಆವೃತ್ತಿಯಾಗಿರಬಹುದು. ರಾಜ್ಯದಲ್ಲಿ ಸರಣಿ ಹತ್ಯೆ ಹಾಗೂ ವಿಧ್ವಂಸಕ ಕೃತ್ಯ ನಡೆಸಲು ಸ್ಲೀಪರ್ ಸೆಲ್‌ಗಳನ್ನು ಸೃಷ್ಟಿಸುವ ಪಿಎಫ್‌ಐ ಮತ್ತು KFD ಕಾರ್ಯಕರ್ತರ ಮೇಲೆ 1700ಕ್ಕೂ ಹೆಚ್ಚು ಪ್ರಕರಣಗಳಿವೆ. ಇವರನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬಹುದು ಎಂದು ತೇಜಸ್ವಿ ಹೇಳಿದ್ದಾರೆ. ಈ ಮೂಲಕ ವಿರೋಧ ಪಕ್ಷಗಳ I.N.D.I.A ಇಂಡಿಯನ್ ಮುಜಾಯಿದ್ದಿನ್‌ಗಿಂತ ಹೇಗೆ ಭಿನ್ನ ಎಂದು ಪ್ರಶ್ನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘ಕಾಂಗ್ರೆಸ್ I.N.D.I.A ಇಂಡಿಯನ್ ಮುಜಾಯಿದ್ದಿನ್‌ಗಿಂತ ಹೇಗೆ ಭಿನ್ನ?’- ಬಿಜೆಪಿ ಸಂಸದ ತೇಜಸ್ವಿ ಸೂರ್ಯ

https://newsfirstlive.com/wp-content/uploads/2023/07/Tejaswi-Surya.jpg

Load More