newsfirstkannada.com

ಪ್ರಧಾನಿ ಮೋದಿ ಕನಸಿನ ‘ಆಯುಷ್ಮಾನ್’ ಯೋಜನೆಯಲ್ಲಿ ಭಾರೀ ಗೋಲ್‌ಮಾಲ್‌; ಅಕ್ರಮ ಬಯಲಾಗಿದ್ದು ಹೇಗೆ?

Share :

10-08-2023

    ಬಿಪಿಎಲ್ ಕುಟುಂಬಗಳಿಗೆ ವರ್ಷಕ್ಕೆ 5 ಲಕ್ಷ ಉಚಿತ ಚಿಕಿತ್ಸೆ

    7.5 ಲಕ್ಷ ಫಲಾನುಭವಿಗಳ ಮೊಬೈಲ್ ನಂ. 99999 99999

    ಮೋದಿ ಸರ್ಕಾರದ ಅತಿ ದೊಡ್ಡ ಭ್ರಷ್ಟಾಚಾರ ಎಂದ ವಿಪಕ್ಷ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಆಯುಷ್ಮಾನ್ ಭಾರತ್ ಕೂಡ ಒಂದು. ದೇಶದ ಬಿಪಿಎಲ್ ಕುಟುಂಬಗಳಿಗೆ ವರ್ಷಕ್ಕೆ 5 ಲಕ್ಷ ರೂಪಾಯಿವರೆಗೂ ಉಚಿತವಾಗಿ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ. ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಭಾರೀ ಗೋಲ್‌ಮಾಲ್‌ ನಡೆದಿರೋದು ಇದೀಗ ಬಹಿರಂಗವಾಗಿದೆ. ಸಂಸತ್‌ನಲ್ಲಿ ಈ ಕುರಿತು ಸಿಎಜಿ ವರದಿ ಮಂಡಿಸಲಾಗಿದ್ದು, ಆಯುಷ್ಮಾನ್ ಭಾರತ್ ಯೋಜನೆಯ ಭಾರೀ ಗೋಲ್‌ಮಾಲ್‌ ಬೆಚ್ಚಿ ಬೀಳಿಸಿದೆ. ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ನರೇಂದ್ರ ಮೋದಿ ನೇತೃತ್ವದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿವೆ.

ಸಂಸತ್‌ನಲ್ಲಿ ಮಂಡಿಸಿರುವ ಸಿಎಜಿ ವರದಿಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಗೋಲ್ ಮಾಲ್ ನಡೆದಿರೋದು ಬಹಿರಂಗವಾಗಿದೆ. ಅಡಿಟರ್ ಅಂಡ್ ಕಂಟ್ರೋಲರ್ ಜನರಲ್ ಆಯುಷ್ಮಾನ್ ಭಾರತ್ ಯೋಜನೆಯನ್ನ ಸಂಪೂರ್ಣವಾಗಿ ಪರಿಶೀಲಿಸಿದ್ದು, ಅಕ್ರಮವನ್ನು ಬಯಲಿಗೆ ಎಳೆದಿದೆ. ಸಿಎಜಿ ವರದಿಯ ಪ್ರಕಾರ ದೇಶದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ 7.5 ಲಕ್ಷ ಫಲಾನುಭವಿಗಳ ಮೊಬೈಲ್ ನಂಬರ್ ಒಂದೇ ಆಗಿದೆ ಅನ್ನೋದು ಆಶ್ಚರ್ಯಕರ ಸಂಗತಿ. 7.5 ಲಕ್ಷ ಫಲಾನುಭವಿಗಳ ಮೊಬೈಲ್ ನಂಬರ್‌ 99999 99999 ಎಂದು ನೀಡಲಾಗಿದ್ಯಂತೆ. 7.5 ಲಕ್ಷ ಮೊಬೈಲ್ ಸಂಖ್ಯೆ ಒಂದೇ ಆಗಿರುವುದರಿಂದ ಇಡೀ ದೇಶಾದ್ಯಂತ ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳ ಬಗ್ಗೆಯೇ ಅನುಮಾನ ಮೂಡಿದೆ.

ಆಯುಷ್ಮಾನ್ ಭಾರತ್ ಯೋಜನೆಯ 1.4 ಲಕ್ಷ ಫಲಾನುಭವಿಗಳ ಮೊಬೈಲ್ ನಂಬರ್‌ 88888 88888 ಎಂದು ದಾಖಲಿಸಲಾಗಿದೆ. 96 ಸಾವಿರ ಫಲಾನುಭವಿಗಳ ಮೊಬೈಲ್ ನಂಬರ್ 90000 00000 ಎನ್ನಲಾಗಿದೆ. ಇದರ ಜೊತೆಗೆ 43 ಸಾವಿರ ಕುಟುಂಬಗಳ ಸದಸ್ಯರ ಸಂಖ್ಯೆ 11 ರಿಂದ 50ರವರೆಗೂ ಇರುವುದಾಗಿ ಮಾಹಿತಿ ನೀಡಲಾಗಿದೆ. ಈ ರೀತಿ ಸುಳ್ಳು ಮೊಬೈಲ್ ನಂಬರ್ ದಾಖಲಿಸಿರೋದ್ರಿಂದ ಗೋಲ್‌ಮಾಲ್ ನಡೆದಿರೋದು ಸ್ಪಷ್ಟವಾಗಿದೆ.

ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ದೇಶದ ಬಿಪಿಎಲ್‌ ಕುಟುಂಬಗಳಿಗೆ 5 ಲಕ್ಷ ರೂಪಾಯಿವರೆಗೂ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಸರ್ಕಾರದ ಆರೋಗ್ಯ ವಿಮಾ ಯೋಜನೆಯಲ್ಲಿ ಫಲಾನುಭವಿಗಳು ಸರ್ಕಾರಿ ಆಸ್ಪತ್ರೆಗಳು, ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷ ರೂಪಾಯಿವರೆಗೂ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಈ ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಶಸ್ತ್ರಚಿಕಿತ್ಸೆಗೂ ಅವಕಾಶ ಇದೆ. ಆದರೆ ಈ ಮಹತ್ವದ ಯೋಜನೆಯಲ್ಲೇ ಗೋಲ್ ಮಾಲ್ ನಡೆದಿರೋದು ಅಚ್ಚರಿಯ ಸಂಗತಿಯಾಗಿದೆ. ಕರ್ನಾಟಕದಲ್ಲೂ ಸಾವಿರಾರು ಜನ ಆಯುಷ್ಮಾನ್ ಭಾರತ್ ಯೋಜನೆ ಕಾರ್ಡ್‌ ಮಾಡಿಸಿಕೊಂಡಿದ್ದಾರೆ. ಇದೀಗ ಸಿಎಜಿ ವರದಿಯಲ್ಲಿ ಅಕ್ರಮ ಬಯಲಾಗಿದ್ದು, ಆಮ್ ಆದ್ಮಿ ಪಕ್ಷ ಆರೋಗ್ಯ ವಿಮಾನ ಯೋಜನೆಯಲ್ಲಿ ನಡೆದಿರೋ ಅತಿ ದೊಡ್ಡ ಭ್ರಷ್ಟಾಚಾರ ಇದು ಎಂದು ಕಿಡಿಕಾರಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ಮೋದಿ ಕನಸಿನ ‘ಆಯುಷ್ಮಾನ್’ ಯೋಜನೆಯಲ್ಲಿ ಭಾರೀ ಗೋಲ್‌ಮಾಲ್‌; ಅಕ್ರಮ ಬಯಲಾಗಿದ್ದು ಹೇಗೆ?

https://newsfirstlive.com/wp-content/uploads/2023/08/Ayushman-Bharath-PM-Modi.jpg

Load More