newsfirstkannada.com

Chandrayaan-3: ವಿಕ್ರಮ್‌ ಸೇಫ್ ಲ್ಯಾಂಡ್ ಆಯ್ತು.. ಪ್ರಜ್ಞಾನ್ ಹೊರ ಬರಲು ಎಷ್ಟು ಗಂಟೆ ಬೇಕು? ಮುಂದಿನ 14 ದಿನ ಇನ್ನೂ ರೋಚಕ!

Share :

23-08-2023

    ಚಂದ್ರಯಾನ 2ರಿಂದ ಕಲಿತ ಪಾಠದಿಂದ ಚಂದ್ರಯಾನ-3 ಯಶಸ್ಸು

    ಇಸ್ರೋಗೆ ಮುಂದಿನ 14 ದಿನಗಳು ಬಹಳಷ್ಟು ಇಂಪಾರ್ಟೆಂಟ್ ಗೊತ್ತಾ?

    7 ಅತ್ಯಾಧುನಿಕ ಸಾಧನವನ್ನು ಹೊತ್ತೊಯ್ದಿರುವ ಚಂದ್ರಯಾನ-3 ನೌಕೆ

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದ ಮೇಲೆ ಮೊಟ್ಟ ಮೊದಲ ಬಾರಿಗೆ ಭಾರತ ವಿಜಯಪತಾಕೆ ಮೆರೆದಿದೆ. ವಿಕ್ರಮ್ ಲ್ಯಾಂಡರ್ ಸೇಫ್ ಆಗಿ ಲ್ಯಾಂಡ್ ಮಾಡಿದ ಇಸ್ರೋ ಸಾಧನೆಗೆ ಇಡೀ ವಿಶ್ವವೇ ಕೊಂಡಾಡುತ್ತಿದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸೇಫ್ ಲ್ಯಾಂಡ್ ಆಗಿದ್ದಾಯ್ತು. ಮುಂದೇನು? ಚಂದ್ರಯಾನ-3 ಯಶಸ್ಸಿನ ಬಳಿಕ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಚಂದ್ರಯಾನ-3 ಸಕ್ಸಸ್ ಬಳಿಕ ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಬಹಳ ದಿನಗಳ ಶ್ರಮಕ್ಕೆ ಪ್ರತಿಫಲ ಸಿಗುತ್ತಿದ್ದಂತೆ ವಿಜ್ಞಾನಿಗಳ ತಂಡ, ಇಸ್ರೋ ಸಿಬ್ಬಂದಿ ಖುಷಿಯಲ್ಲಿ ತೇಲಾಡಿದರು. ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಸೋಮನಾಥ್, ಚಂದ್ರನ ದಕ್ಷಿಣ ಧ್ರುವದಲ್ಲಿ ನಾವು ಸಾಫ್ಟ್ ಲ್ಯಾಂಡಿಂಗ್ ಸಾಧನೆ ಮಾಡಿದ್ದೇವೆ. ಚಂದ್ರಯಾನ 2ರಿಂದಲೇ ಸಾಕಷ್ಟು ಕಲಿತಿದ್ದೆವು. ಅದರ ಅನುಭವದ ಆಧಾರದ ಮೇಲೆ‌ ಚಂದ್ರಯಾನ-3ರ ಯಶಸ್ಸು ಸಾಧಿಸಿದ್ದೇವೆ ಎಂದರು.

ಇನ್ನು ಎಲ್ಲರಿಗೂ ಗೊತ್ತಿರುವಂತೆ ಸಾಫ್ಟ್ ಲ್ಯಾಂಡಿಂಗ್ ಅಷ್ಟು ಸುಲಭವಾಗಿರಲಿಲ್ಲ. 2 ಮೀಟರ್ ಪರ್ ಸೆಕೆಂಡ್‌ಗೂ ಕಡಿಮೆ ವೆಲಾಸಿಟಿಯಲ್ಲಿ ಲ್ಯಾಂಡ್ ಆಗಿದೆ. ನಿಮ್ಮೆಲ್ಲರ ಬೆಂಬಲ, ನಿಮ್ಮ ಪ್ರಾರ್ಥನೆಗೆ ಧನ್ಯವಾದಗಳು. ಪ್ರತಿಯೊಬ್ಬ ಭಾರತೀಯನೂ ಈ ಯಶಸ್ಸಿಗಾಗಿ ಹಾರೈಸಿದ್ದಾರೆ. ಹೋಮ, ಪೂಜೆ ಮಾಡಿ ಯಶಸ್ಸಿಗಾಗಿ ಹರಸಿದ್ದಾರೆ. ಹೀಗಾಗಿ ಈ ಜಯವನ್ನ ಎಲ್ಲಾ ದೇಶವಾಸಿಗಳಿಗೆ ಅರ್ಪಿಸಲು ಬಯಸುತ್ತೇನೆ ಎಂದು ಸೋಮನಾಥ್ ಅವರು ಹೇಳಿದ್ದಾರೆ.

‘ಮುಂದಿನ 14 ದಿನಗಳ ತುಂಬಾ ಮುಖ್ಯ’

ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸೇಫ್ ಲ್ಯಾಂಡ್ ಬಳಿಕ ಮುಂದೇನು ಅನ್ನೋದರ ಬಗ್ಗೆಯೂ ಇಸ್ರೋ ಅಧ್ಯಕ್ಷ ಸೋಮನಾಥ್ ಮಾಹಿತಿ ನೀಡಿದ್ದಾರೆ. ಲ್ಯಾಂಡ್ ಆಗಿರುವ ವಿಕ್ರಮ್ ಲ್ಯಾಂಡರ್‌ನಿಂದ ಇನ್ನು ಅಧ್ಯಯನಗಳು ಮುಂದುವರೆಯಲಿವೆ. ಮುಂದಿನ 14 ದಿನಗಳು ಸಾಕಷ್ಟು ಕುತೂಹಲದಿಂದ ಇದ್ದೇವೆ. ಪ್ರಜ್ಞಾನ್ ರೋವರ್ ಲ್ಯಾಂಡರ್‌ರಿಂದ ಹೊರಬರಲು ಮುಂದಿನ ನಾಲ್ಕರಿಂದ ಐದು ಗಂಟೆ ಕಾಲಾವಕಾಶ ಬೇಕು. ಇದು 4-5 ಗಂಟೆಗಳ ಬದಲು ಒಂದು ದಿನಗಳು ಸಮಯವನ್ನು ತೆಗೆದುಕೊಳ್ಳಬಹುದು. ವಾತಾವರಣದ ಮೇಲೆ ಅದು ನಿರ್ಧಾರವಾಗುತ್ತೆ. ಇದಾದ ಬಳಿಕ ನಾವು ಅಧ್ಯಯನ ಶುರು ಮಾಡುತ್ತೇವೆ ಎಂದು ಸೋಮನಾಥ್ ಹೇಳಿದ್ದಾರೆ.

ಇದನ್ನೂ ಓದಿ: BREAKING: ಕೊನೆಗೂ ಚಂದ್ರನ ಅಂಗಳಕ್ಕೆ ಕಾಲಿಟ್ಟ ಚಂದ್ರಯಾನ-3; ಹೊಸ ಇತಿಹಾಸ ನಿರ್ಮಿಸಿದ ಭಾರತ

ಚಂದ್ರನ ಮೇಲೆ ಯಾವ್ಯಾವ ಅಧ್ಯಯನ ನಡೆಯುತ್ತೆ?

ಚಂದ್ರಯಾನ-3 ನೌಕೆಯು ಏಳು ಅತ್ಯಾಧುನಿಕ ಸಾಧನವನ್ನು ಹೊತ್ತೊಯ್ದಿದೆ. ಇದರಿಂದ 7 ರೀತಿಯ ಅಧ್ಯಯನಗಳನ್ನ ಇಸ್ರೋ ವಿಜ್ಞಾನಿಗಳು ನಡೆಸಲಿದ್ದಾರೆ. ಆ ಏಳು ಅಧ್ಯಯನಗಳು ಯಾವುವು ಅನ್ನೋ ವಿವರ ಇಲ್ಲಿದೆ ನೋಡಿ.

ಅಧ್ಯಯನ 01- ಎಲ್‌ಐಬಿಎಸ್‌-ಚಂದ್ರನ ಮಣ್ಣಿನಲ್ಲಿನ ಖನಿಜಾಂಶಗಳ ಬಗ್ಗೆ

ಅಧ್ಯಯನ 02- ಎಪಿಎಕ್ಸ್‌ಎಸ್‌-ಚಂದ್ರನ ಮೇಲ್ಮೈಯಲ್ಲಿರುವ ಬಂಡೆಗಳ ಬಗ್ಗೆ

ಅಧ್ಯಯನ 03- ರಾಂಬಾ-ಚಂದ್ರನ ಮೈಲ್ಮೈಯಲ್ಲಿರುವ ಅನಿಲ, ವಾತಾವರಣ ಬಗ್ಗೆ

ಅಧ್ಯಯನ 04- ಚೇಸ್ಟ್‌- ಚಂದ್ರನ ದಕ್ಷಿಣ ಧ್ರುವದಲ್ಲಿನ ತಾಪಮಾನ ಏರಿಳಿತದ ಬಗ್ಗೆ

ಅಧ್ಯಯನ 05- ಇಲ್ಸಾ- ಚಂದ್ರನ ಮೇಲ್ಮೈಯಲ್ಲಿ ನಡೆಯುವ ಕಂಪನಗಳ ಕುರಿತು ಅಧ್ಯಯನ

ಅಧ್ಯಯನ 06- ಎಲ್‌ಆರ್‌ಎ-ಚಂದ್ರನಿಂದ ಭೂಮಿಗೆ ಇರುವ ನಿಖರ ಅಂತರ ಬಗ್ಗೆ

ಅಧ್ಯಯನ 07- ಎಸ್‌ಹೆಚ್‌ಎಪಿಇ- ಬಾಹ್ಯಾಕಾಶದಲ್ಲಿರುವ ಎಕ್ಸೋ ಪ್ಲಾನೆಟ್‌ಗಳ ಬಗ್ಗೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Chandrayaan-3: ವಿಕ್ರಮ್‌ ಸೇಫ್ ಲ್ಯಾಂಡ್ ಆಯ್ತು.. ಪ್ರಜ್ಞಾನ್ ಹೊರ ಬರಲು ಎಷ್ಟು ಗಂಟೆ ಬೇಕು? ಮುಂದಿನ 14 ದಿನ ಇನ್ನೂ ರೋಚಕ!

https://newsfirstlive.com/wp-content/uploads/2023/08/Chandrayaana-3-Isro.jpg

Load More