/newsfirstlive-kannada/media/post_attachments/wp-content/uploads/2024/11/STAIR-CLIMBING.png)
ಆಫೀಸ್​ ಹಾಗೂ ಅಪಾರ್ಟ್​ಮೆಂಟ್​ಗಳಲ್ಲಿ ಈಗ ಮೆಟ್ಟಿಲು ಹತ್ತುತ್ತಾ ನಮ್ಮ ಸ್ಥಳವನ್ನು ಮುಟ್ಟುವುದು ಹೊಸ ರೂಢಿಯಾಗಿ ಬೆಳೆದಿದೆ. ಮೆಟ್ಟಿಲು ಹತ್ತುವುದರಿಂದ ಹೆಚ್ಚು ಫಿಟ್ ಹಾಗೂ ಆ್ಯಕ್ಟಿವ್ ಆಗಿ ಇರುತ್ತಾರೆ ಅನ್ನುವುದು ಕೂಡ ಒಂದು ಕಾರಣ. ಆದ್ರೆ ಇದರಿಂದ ಇನ್ನೊಂದು ಅನುಕೂಲವೂ ಕೂಡ ಇದೆ. ಅದು ತೂಕ ಇಳಿಸಿಕೊಳ್ಳುವುದು. ದಿನಕ್ಕೆ ಎಷ್ಟು ಮೆಟ್ಟಿಲು ಹತ್ತುವುದರಿಂದ ನಮ್ಮ ತೂಕ ಇಳಿಕೆಯಾಗಲಿದೆ ಎನ್ನುವುದರ ಬಗ್ಗೆ ಇಂಟರ್​ನ್ಯಾಷನಲ್ ಜರ್ನಲ್ ಆಫ್ ಪಿಜಿಕಲ್ ಎಜ್ಯುಕೇಷನ್, ಸ್ಪೊರ್ಟ್ಸ್ ಹೆಲ್ತ್​ 2023 ಎಂಬ ಅಧ್ಯಯನ ಹೃದಯ ಸಂಬಂಧಿ ಕಾಯಿಲೆ ನಿವಾರಣೆಗೆ ಮೆಟ್ಟಿಲು ಹತ್ತುವುದು ದೊಡ್ಡ ವ್ಯಾಯಾಮವಾಗಿ ಪರಿಣಮಿಸುತ್ತದೆ ಎಂದು ಹೇಳಲಾಗಿದೆ. ಮೆಟ್ಟಿಲು ಹತ್ತುವುದು ಕೂಡ ಒಂದು ವ್ಯಾಯಾಮದ ರೀತಿಯೇ. ಅದು ಕೂಡ ದೇಹದಲ್ಲಿರುವ ಕ್ಯಾಲರೀಸ್​ಗಳನ್ನು ತೊಡೆದು ಹಾಕುವಲ್ಲಿ ಸಹಾಯವಾಗುತ್ತದೆ.
/newsfirstlive-kannada/media/post_attachments/wp-content/uploads/2024/11/DATING-WITH-TREE-2-1.jpg)
ಮೆಟ್ಟಿಲು ಹತ್ತುವುದು ಕೂಡ ನಿತ್ಯ ಬೆಳಗ್ಗೆ ನಾವು ಮಾಡುವ ವಾಕ್​​ನಂತೆಯೇ ಸಾಧಾರಣವಾದ ಒಂದು ವ್ಯಾಯಾಮ. ಇದು ಕ್ಯಾಲರೀಸ್​ಗಳನ್ನು ಬರ್ನ್ ಮಾಡಲು ಹಾಗೂ ಹಾರ್ಟ್​ರೇಟ್ ಹೆಚ್ಚು ಮಾಡಲು ಸಹಾಯವಾಗುತ್ತದೆ. ನೀವು ಒಂದು ನಿಮಿಷ ಮೆಟ್ಟಿಲು ಹತ್ತುವ ವ್ಯಾಯಾಮದಲ್ಲಿ ನಿರತರಾದರೆ. ಅದು ನಿಮ್ಮ ದೇಹದಲ್ಲಿರುವ 8 ರಿಂದ 11 ಕ್ಯಾಲರೀಸ್​ಗಳನ್ನು ಬರ್ನ್​ ಮಾಡುತ್ತದೆ. ಅದು ಕೂಡ ನಿಮ್ಮ ದೇಹದ ತೂಕ ಹಾಗೂ ನಿಮ್ಮ ನಿತ್ಯ ಚಟುವಟಿಕೆಗಳ ಮೇಲೆ ಅವಲಂಬಿತವಾಗಿರುತ್ತದೆ. ಇದನ್ನು ನಿತ್ಯ ನೀವು ಮಾಡುವುದರಿಂದ ನಿಮ್ಮ ದೇಹದ ತೂಕ ಇಳಿಕೆ ಮಾಡಿಕೊಳ್ಳಬಹುದು.
ಇದನ್ನೂ ಓದಿ:ನಿರೀಕ್ಷೆಗೂ ಮೀರಿದ ಆರೋಗ್ಯ ಲಾಭ! ಚಳಿಗಾಲದಲ್ಲಿ ನಿತ್ಯ ಕ್ಯಾರೆಟ್​ ಜ್ಯೂಸ್ ತಪ್ಪಿಸಬೇಡಿ!
ವಾರದಲ್ಲಿ ಐದು ದಿನ ನೀವು ಅರ್ಧಗಂಟೆ ಮೆಟ್ಟಿಲು ಹತ್ತುವ ವ್ಯಾಯಾಮದಲ್ಲಿ ತೊಡಗಿದಲ್ಲಿ ನೀವು ಅತ್ಯಂತ ಕಡಿಮೆ ವೇಳೆಯಲ್ಲಿ ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಬಹುದು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಈ ಅರ್ಧಗಂಟೆ ಮೆಟ್ಟಿಲು ಹತ್ತುವ ಸಮಯದಲ್ಲಿ ನಾವು 500 ರಿಂದ 700 ಮೆಟ್ಟಿಲುಗಳನ್ನು ಕವರ್ ಮಾಡಿರುತ್ತೇವೆ ಎಂದು ಹೇಳಲಾಗಿದೆ.
ಬರೀ ಮೆಟ್ಟಿಲು ಹತ್ತುವುದರಿಂದ ಮಾತ್ರವಲ್ಲ ಅದಕ್ಕೆ ಅದರ ಜೊತೆಗೆ ಇನ್ನು ಕೆಲವು ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಗಿಡಗಳನ್ನು ಏರುವುದು ಮತ್ತೆ ಇಳಿಯುವುದು ಕೊಂಚ ವಿರಾಮ ತೆಗೆದುಕೊಳ್ಳುವುದು ಮತ್ತೆ ಏರುವುದು ಹೀಗೆ ಅರ್ಧ ಗಂಟೆ ಮಾಡಿದರೆ ತೂಕವನ್ನು ಸರಳವಾಗಿ ಇಳಿಸಿಕೊಳ್ಳಬಹುದು.
ಇದನ್ನೂ ಓದಿ:ಅಳತೆ ಮೀರಿ ಉಪ್ಪು ತಿನ್ನುವ ತಪ್ಪು ಮಾಡಲೇಬೇಡಿ.. ಬಿಪಿ ಮಾತ್ರವಲ್ಲ ಹಲವು ರೋಗಗಳಿಗೆ ನೀಡುತ್ತೆ ಆಹ್ವಾನ!
ನಿಮ್ಮ ವ್ಯಾಯಾಮದ ವೇಗವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳಬೇಕು. ಮೆಟ್ಟಿಲು ಹತ್ತುವ ವೇಗ ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳಬೇಕು.
ಹೀಗೆ ಮೆಟ್ಟಿಲು ಹತ್ತುವುದರ ಜೊತೆಗೆ ಹಲವು ವ್ಯಾಯಾಮಗಳನ್ನು ನಾವು ಮಾಡಿದರೆ ನಾವು ನಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us