newsfirstkannada.com

Tiger day: ಕರ್ನಾಟಕದಲ್ಲಿರೋ ಹುಲಿಗಳ ಸಂಖ್ಯೆ ಏರಿಕೆ; ದೇಶದ ಗಣತಿಯಲ್ಲಿ ಈ ಬಾರಿ ಯಾವ ರಾಜ್ಯ ನಂಬರ್ ಒನ್?

Share :

29-07-2023

  ಇವತ್ತು ಅಂತಾರಾಷ್ಟ್ರೀಯ ಹುಲಿಗಳ ದಿನ ಹಿನ್ನೆಲೆ ಸಂಖ್ಯೆ ಬಿಡುಗಡೆ

  ಕೇಂದ್ರ ಸರ್ಕಾರದ ಪ್ರಕಾರ ಇಡೀ ದೇಶದಲ್ಲಿ ಒಟ್ಟು 3,682 ಹುಲಿಗಳು

  2018ರಲ್ಲಿ ಕರ್ನಾಟಕ ರಾಜ್ಯದಲ್ಲಿ 404 ಹುಲಿಗಳು ಪತ್ತೆಯಾಗಿದ್ದವು

ಇವತ್ತು ಅಂತಾರಾಷ್ಟ್ರೀಯ ಹುಲಿಗಳ ದಿನ. ಜಾಗತಿಕವಾಗಿ ಹುಲಿಗಳನ್ನು ಅಳಿವಿನ ಅಂಚಿನಲ್ಲಿರುವ ಪ್ರಾಣಿ ಎಂದು ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಹುಲಿಗಳ ಸಂರಕ್ಷಣೆ ಅತ್ಯಗತ್ಯ. ಹುಲಿಗಳಿಗೆ ಕಾಡು ಎಷ್ಟು ಮುಖ್ಯವೋ ಅಷ್ಟೇ ಕಾಡಿಗೂ ಹುಲಿಗಳೂ ಅಷ್ಟೇ ಮುಖ್ಯ.

ಅಂತಾರಾಷ್ಟ್ರೀಯ ಹುಲಿಗಳ ದಿನದ ಹಿನ್ನೆಲೆ ಇಂದು ಕೇಂದ್ರದ ಅರಣ್ಯ, ಪರಿಸರ ಇಲಾಖೆಯು ಹುಲಿ ಗಣತಿಯ ಅಂಕಿ ಅಂಶ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ಪ್ರಕಾರ ದೇಶದಲ್ಲಿ ಒಟ್ಟು 3,682 ಹುಲಿಗಳಿವೆ ಎನ್ನಲಾಗಿದೆ. ಮಧ್ಯಪ್ರದೇಶದಲ್ಲಿರುವ ಹುಲಿಗಳ ಸಂಖ್ಯೆ 785 ಕ್ಕೇರಿಕೆಯಾಗಿದೆ. ಈ ಮೂಲಕ ಹುಲಿಗಳ ವಾಸಸ್ಥಾನದಲ್ಲಿ ಮಧ್ಯಪ್ರದೇಶ ರಾಜ್ಯ ನಂಬರ್ ಒನ್ ಪಟ್ಟ ಅಲಂಕರಿಸಿದೆ. ಇದಾದ ಬಳಿಕ 2ನೇ ಸ್ಥಾನದಲ್ಲಿ ಕರ್ನಾಟಕವಿದೆ.

ಟಾಪ್ 4 ರಾಜ್ಯದಲ್ಲಿರುವ ಹುಲಿಗಳ ಸಂಖ್ಯೆ

ಮಧ್ಯಪ್ರದೇಶ (785)

ಕರ್ನಾಟಕ (563)

ಉತ್ತರಾಖಂಡ (560)

ಮಹಾರಾಷ್ಟ್ರ (444)

ಕರ್ನಾಟಕದ ಹುಲಿಗಳ ಸಂತತಿಯಲ್ಲೂ ಭಾರೀ ಏರಿಕೆಯಾಗಿದೆ. 2018ರಲ್ಲಿ 524 ಇದ್ದ ಹುಲಿಗಳ ಸಂಖ್ಯೆ 2022ರಲ್ಲಿ 563 ಕ್ಕೇರಿಕೆ ಆಗಿದೆ. 2018ರಲ್ಲಿ ನಡೆದಿದ್ದ ಅಖಿಲ ಭಾರತ ಹುಲಿ ಗಣತಿಯ ಪ್ರಕಾರ ಕರ್ನಾಟಕದಲ್ಲಿ 404 ಹುಲಿಗಳು ಪತ್ತೆಯಾಗಿದ್ದವು. ವನ್ಯಜೀವಿ ಸಂಖ್ಯಾಶಾಸ್ತ್ರದ ಪ್ರಕಾರ ವಿಶ್ಲೇಷಿಸಿದಾಗ ರಾಜ್ಯದಲ್ಲಿ 475 ರಿಂದ 573 ಹುಲಿಗಳು ಇರಬಹುದು ಎಂದು ವಿಶ್ಲೇಷಿಸಲಾಗಿತ್ತು. 2022ರಲ್ಲಿ ನಡೆದ ಕ್ಯಾಮರಾ ಟ್ರ್ಯಾಪ್‌ನಲ್ಲಿ ರಾಜ್ಯದಲ್ಲಿ ಹುಲಿಗಳ ಸಂಖ್ಯೆ 563 ಕ್ಕೇರಿಕೆ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tiger day: ಕರ್ನಾಟಕದಲ್ಲಿರೋ ಹುಲಿಗಳ ಸಂಖ್ಯೆ ಏರಿಕೆ; ದೇಶದ ಗಣತಿಯಲ್ಲಿ ಈ ಬಾರಿ ಯಾವ ರಾಜ್ಯ ನಂಬರ್ ಒನ್?

https://newsfirstlive.com/wp-content/uploads/2023/07/Tigers.jpg

Load More