newsfirstkannada.com

10, 20, 50 ಅಲ್ಲ.. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸೀಜ್ ಆದ ಸಾಕ್ಷ್ಯಗಳು ಎಷ್ಟು? ದರ್ಶನ್ ಗ್ಯಾಂಗ್‌ಗೆ ಶಿಕ್ಷೆ ಫಿಕ್ಸ್‌!

Share :

Published June 19, 2024 at 12:45pm

    ಕೊಲೆ ಪ್ರಕರಣದಲ್ಲಿ ನಿರಂತರ ಮಹಜರು ಮಾಡಿರುವ ಪೊಲೀಸರು

    ಸಣ್ಣ ಸಾಕ್ಷಿಯನ್ನು ಬಿಡದೇ ಕಲೆ ಹಾಕಿರುವ ಪೊಲೀಸ್ ಅಧಿಕಾರಿಗಳು

    ಸಿಕ್ಕಿರುವ ಸಾಕ್ಷ್ಯಗಳನ್ನು ನೋಡಿ ದರ್ಶನ್ ಗ್ಯಾಂಗ್‌ಗೆ ಶಿಕ್ಷೆ ಕೊಡಿಸಲು ಪಟ್ಟು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಮಾಡಿರೋ ಕ್ರೌರ್ಯ ಒಂದೆರಡಲ್ಲ. ತನಿಖೆ ನಡೆಸುತ್ತಿರುವ ಪೊಲೀಸ್ ಕೊಲೆಯ ಇಂಚಿಂಚು ಮಾಹಿತಿಯನ್ನ ಕಲೆ ಹಾಕಿದ್ದಾರೆ. ಆರೋಪಿಗಳ ವಿಚಾರಣೆ, ಪಟ್ಟಣಗೆರೆ ಶೆಡ್‌ನಲ್ಲಿ ಕೊಲೆಗೆ ಸಂಬಂಧಪಟ್ಟ ನೂರಾರು ವಸ್ತುಗಳನ್ನ ಜಪ್ತಿ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಏನೆಲ್ಲಾ ಜಪ್ತಿ ಮಾಡಲಾಗಿದೆ ಅನ್ನೋ ಕಂಪ್ಲೀಟ್‌ ಮಾಹಿತಿ ನ್ಯೂಸ್ ಫಸ್ಟ್‌ಗೆ ಲಭ್ಯವಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹಜರು ಮಾಡಿರುವ ಪೊಲೀಸರು ಈವರೆಗೆ ಪ್ರತಿಯೊಂದು ವಸ್ತುಗಳನ್ನು ಸೀಜ್ ಮಾಡಿದ್ದಾರೆ. ಈವರೆಗೆ ಪೊಲೀಸರು ಸುಮಾರು 118 ವಸ್ತುಗಳನ್ನು ಸೀಜ್​​​ ಮಾಡಿರೋದು ಅಚ್ಚರಿಗೆ ಕಾರಣವಾಗಿದೆ. ಸೀಜ್ ಆದ ವಸ್ತುಗಳ ಬಗ್ಗೆ ರಿಮ್ಯಾಂಡ್ ಕಾಪಿಯಲ್ಲಿ ಪೊಲೀಸರು ಉಲ್ಲೇಖ ಮಾಡಿದ್ದಾರೆ.

ಕೊಲೆ ಕೇಸ್‌ನಲ್ಲಿ ಏನೆಲ್ಲಾ ಸೀಜ್?
ನಟ ದರ್ಶನ್ ಅಂಡ್ ಗ್ಯಾಂಗ್​ನಿಂದ ಕೊಲೆಯಾದ ಪ್ರಕರಣದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಂಡು ಬಂದ ವಸ್ತುಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಮಾಡುವಾಗ ಬಳಸಿದ ವಸ್ತುಗಳು, ಆರೋಪಿಗಳು ಧರಿಸಿದ್ದ ಬಟ್ಟೆ, ಶೂ, ಚಪ್ಪಲಿ, ವಾಹನಗಳನ್ನು ಸೀಜ್ ಮಾಡಲಾಗಿದೆ. ಈವರೆಗೆ ಜಪ್ತಿ ಮಾಡಿದ ಮಾಲುಗಳ ಸಂಖ್ಯೆ 118ಕ್ಕೆ ಏರಿಕೆಯಾಗಿದೆ. ಈ ವಸ್ತುಗಳೇ ಪ್ರಮುಖವಾದ ಸಾಕ್ಷ್ಯಗಳಾಗಿದ್ದು, ರಿಮ್ಯಾಂಡ್ ಕಾಪಿಯಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳ ವಿವರವನ್ನು ಪೊಲೀಸರು ದಾಖಲಿಸಿದ್ದಾರೆ.

ಇದನ್ನೂ ಓದಿ: ಕಲೆಗಳು.. ರಕ್ತದ ಕಲೆಗಳು.. ಸೆಕ್ಯುರಿಟಿ ಗಾರ್ಡ್​ ಬಿಚ್ಚಿಟ್ಟ ರೇಣುಕಾಸ್ವಾಮಿ ಹತ್ಯೆಯ ಬಗೆಗಿನ ಸ್ಫೋಟಕ ಮಾಹಿತಿ 

ಈ ಎಲ್ಲಾ ಮಾಹಿತಿಯನ್ನು ಪೊಲೀಸರು ಕಳೆದ ಜೂನ್ 15ರಂದೇ ಆರೋಪಿಗಳನ್ನು ಹಾಜರುಪಡಿಸಿದಾಗ ಕೋರ್ಟ್‌ಗೆ ನೀಡಿದ್ದಾರೆ. ಇದರಲ್ಲಿ ಆರೋಪಿಗಳು ಕೃತ್ಯಕ್ಕೆ ಬಳಸಿದ ವಸ್ತುಗಳು, ಕಾರುಗಳು, ಆರೋಪಿಗಳು ಧರಿಸಿದ ಬಟ್ಟೆಗಳು, ಸಿಸಿಟಿವಿ ವಿಶ್ಯುಲ್ಸ್ ಎಲ್ಲವೂ ಸೇರಿದೆ. ಈ ಎಲ್ಲಾ ಸಾಕ್ಷಿಗಳಿಂದ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಆಗಲೇಬೇಕು ಎಂದು ಖಾಕಿ ಪಡೆ ಪಣ ತೊಟ್ಟಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

10, 20, 50 ಅಲ್ಲ.. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸೀಜ್ ಆದ ಸಾಕ್ಷ್ಯಗಳು ಎಷ್ಟು? ದರ್ಶನ್ ಗ್ಯಾಂಗ್‌ಗೆ ಶಿಕ್ಷೆ ಫಿಕ್ಸ್‌!

https://newsfirstlive.com/wp-content/uploads/2024/06/darshan11.jpg

Load More