newsfirstkannada.com

ಬೆಂಗಳೂರು ಅಭಿವೃದ್ಧಿಗೆ ಎಷ್ಟು ಅನುದಾನ ಮೀಸಲಿಡಲಾಗಿದೆ​? ಇಲ್ಲಿದೆ ಮಾಹಿತಿ

Share :

07-07-2023

    ರಾಜ್ಯ ಬಜೆಟ್​ನಲ್ಲಿ ಬೆಂಗಳೂರಿಗೆ ಕೊಟ್ಟ ಕೊಡುಗೆಗಳೇನು?

    ರಸ್ತೆ ಅಭಿವೃದ್ಧಿ, ನಗರೋತ್ಥಾನ, ತಾಜ್ಯ ನಿರ್ವಹಣೆಯತ್ತ ಚಿತ್ತ

    ಬಿಬಿಎಂಪಿ ಮೂಲಭೂತ ಸೌಕರ್ಯಕ್ಕೆ 12 ಸಾವಿರ ಕೋಟಿ

ಈ ಬಾರಿ ರಾಜ್ಯ ಬಜೆಟ್​ನಲ್ಲಿ ಬೆಂಗಳೂರಿಗೆ 45 ಸಾವಿರ ಕೋಟಿ ಅನುದಾನ ಘೋಷಿಸಲಾಗಿದೆ. ಬೆಂಗಳೂರು ವೈಟ್‌ ಟಾಪಿಂಗ್​, ರಸ್ತೆ ಅಭಿವೃದ್ಧಿ, ನಗರೋತ್ಥಾನ, ತಾಜ್ಯ ನಿರ್ವಹಣೆ, , ಮೆಟ್ರೋ, ಬೆಂಗಳೂರು ಉಪನಗರ ರೈಲ್ವೆ ಯೋಜನೆ, ರಾಜಕಾಲುವೆ ತೆರವು & ದುರಸ್ತಿಗೆ ಅನುದಾನ ಘೋಷಿಸಲಾಗಿದೆ. ಅದರಲ್ಲಿ ಯಾವ್ಯಾವ ಅಭಿವೃದ್ಧಿಗೆ ಎಷ್ಟು ಕೋಟಿ ಅನುದಾನ ನೀಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.

ಸಿಎಂ ಸಿದ್ದರಾಮಯ್ಯನವರು 14ನೇ ಬಾರಿಗೆ ಬಜೆಟ್​ ಮಂಡಿಸಿದ್ದಾರೆ. ಅದರಲ್ಲಿ ಬೆಂಗಳೂರಿಗೆ ಅನುದಾನ ಮೀಸಲಿದ್ದಾರೆ. ಅದರಂತೆಯೇ ಬಿಬಿಎಂಪಿ ಮೂಲಭೂತ ಸೌಕರ್ಯಕ್ಕೆ 12 ಸಾವಿರ ಕೋಟಿ ರೂಪಾಯಿ ಮಿಸಲು. ಮೆಟ್ರೋಗೆ 30 ಸಾವಿರ ಕೋಟಿ ಮತ್ತು ನೋಂದಣಿ ಮತ್ತು ಮುದ್ರಾಂಕ ತೆರಿಗೆ 15 ಸಾವಿರ ಕೋಟಿ. ತ್ಯಾಜ್ಯ ನಿರ್ವಹಣೆಗಾಗಿ 1,411 ಕೋಟಿ.

ನೈರುತ್ಯ ರೈಲ್ವೇ ಇಲಾಖೆಯವರು ಬೈಯ್ಯಪ್ಪನಹಳ್ಳಿ ಪ್ರದೇಶದಲ್ಲಿ ನಿರ್ಮಿಸಿರುವ ಸರ್​ ಎಂ ವಿಶ್ವೇಶರಯ್ಯ ಟರ್ಮಿನಲ್​​ ತಲುಪಲು ಅನುಕೂಲವಾಗಲೆಂದು 263 ಕೋಟಿ ವೆಚ್ಚದ ಮೇಲ್ಸೇತುವೆ ನಿರ್ಮಾಣ. 2023-24 ಸಾಲಿನಲ್ಲಿ 800 ಕೋಟಿ ರೂಪಾಯಿ ವೆಚ್ಚದಲ್ಲಿ 100 ಕಿ.ಮೀ ಉದ್ದದ  ಮುಖ್ಯರಸ್ತೆಗಳಿಗೆ ವೈಟ್​ ಟಾಪ್​ ಮಾಡಲು ಅನುದಾನ ಮೀಸಲಿಡಲಾಗಿದೆ.

ಇನ್ನು ಹೈ ಡೆನ್ಸಿಟಿ ಕಾರಿಡಾರ್​ಗಾಗಿ 273 ಕೋಟಿ. ಪಾರಂಪರಿಕ ಮತ್ತು ದ್ರವ ತ್ಯಾಜ್ಯದ ಸಮರ್ಪಕ ನಿರ್ವಣೆಗಾಗಿ ಒಟ್ಟಾರೆ 3,400 ಕೋಟಿ ಅನುದಾನ. ಬಿಬಿಎಂಪಿ ಸೇರಿದಂತೆ ರಾಜ್ಯದ 314 ನಗರ ಸ್ಥಳೀಯ ಸಂಸ್ಥೆಗಳಿಗೆ 4,500 ಕೋಟಿ. ಇಂದಿರಾ ಕ್ಯಾಂಟೀನ್​  ದುರಸ್ತಿ, ನಿರ್ವಹಣೆಗೆ 100 ಕೋಟಿ ಅನುದಾನ ಮೀಸಲಿಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಅಭಿವೃದ್ಧಿಗೆ ಎಷ್ಟು ಅನುದಾನ ಮೀಸಲಿಡಲಾಗಿದೆ​? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2023/07/bangalore-Cirty.jpg

Load More