newsfirstkannada.com

VIDEO: ವಿದೇಶಿ ಲಿಕ್ಕರ್, ಹಣ, ಬಂಗಾರ, ದುಬಾರಿ ವಾಚ್‌ಗಳು; ತಹಶೀಲ್ದಾರ್ ಅಜಿತ್ ರೈ ಮನೆಯಲ್ಲಿ ಸಿಕ್ಕ ಅಕ್ರಮ ಸಂಪತ್ತು ಎಷ್ಟು?

Share :

28-06-2023

    30 ಕಾಸ್ಟ್ಲಿ ವಾಚ್‌ಗಳು, ಕಾರುಗಳು, ಚಿನ್ನಾಭರಣ, ಲಕ್ಷ, ಲಕ್ಷ ನಗದು

    ತಹಶೀಲ್ದಾರ್‌ ಮನೆಯಲ್ಲಿ ದುಬಾರಿ ಬೆಲೆಯ ವಿದೇಶಿ ಲಿಕ್ಕರ್ ಬಾಟಲ್‌

    ಬಿಲ್ಡರ್‌ಗಳಿಂದ ಹಣ ಪಡೆದು ಅಕ್ರಮ ಆಸ್ತಿ ಸಂಪಾದನೆ ಆರೋಪ

ಬೆಂಗಳೂರು: ಇವತ್ತು ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಕಾಲಿಂಗ್ ಬೆಲ್ ಒತ್ತಿದ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳನ್ನ ಬಡಿದೆಬ್ಬಿಸಿದ್ದಾರೆ. ಅಕ್ರಮ ಆಸ್ತಿ ಗಳಿಸಿರೋ ಆರೋಪದಲ್ಲಿ ಏಕಕಾಲಕ್ಕೆ ಮಿಂಚಿನ ದಾಳಿ ನಡೆಸಿದ್ದು, ಕೋಟಿ, ಕೋಟಿ ಅಕ್ರಮ ಆಸ್ತಿಯ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇವತ್ತಿನ ಲೋಕಾಯುಕ್ತ ದಾಳಿಯಲ್ಲಿ ಬೆಂಗಳೂರಿನ KR ಪುರಂ ತಹಶೀಲ್ದಾರ್ ಅಜಿತ್ ರೈಗೆ ಸಂಬಂಧಪಟ್ಟ ಮನೆ ಮೇಲೆ ನಡೆದಿರೋ ಕಾರ್ಯಾಚರಣೆಯೇ ಹೆಚ್ಚು ಗಮನ ಸೆಳೆದಿದೆ.

ಕೆ.ಆರ್ ಪುರಂನಲ್ಲಿ ರಿಯಲ್ ಎಸ್ಟೇಟ್ ಜೋರಾಗಿ ನಡೆಯುತ್ತಿದ್ದ ವೇಳೆ ಅಜಿತ್ ರೈ ಇಲ್ಲಿನ ತಹಶೀಲ್ದಾರ್ ಆಗಿದ್ದರು. ರಾಜಕಾಲುವೆ ಒತ್ತುವರಿ ಸಮಯದಲ್ಲಿ‌ ಬಿಲ್ಡರ್‌ಗಳ ಆಸ್ತಿ‌ ಬಿಟ್ಟು ಬೇರೆ ಕಡೆ ತೆರವು ಕಾರ್ಯ ನಡೆಸಿದ ಆರೋಪ ಇವರ ಮೇಲಿದೆ. ಅಲ್ಲದೇ ಬಿಲ್ಡರ್‌ಗಳಿಂದ ಅಕ್ರಮ ಹಣ ಪಡೆದು ಸಾಕಷ್ಟು ಅಕ್ರಮ ಆಸ್ತಿ ಗಳಿಸಿರುವ ಆರೋಪ ಅಜಿತ್ ರೈ ಅವರ ಮೇಲಿತ್ತು.

ಲೋಕಾಯುಕ್ತ ಡಿವೈಎಸ್ಪಿ ಪ್ರಮೋದ್ ನೇತೃತ್ವದಲ್ಲಿ ಇಂದು ತಹಶೀಲ್ದಾರ್ ಅಜಿತ್ ರೈ ಮನೆ ಮೇಲೆ ದಾಳಿ ಮಾಡಲಾಗಿದೆ. ಇಂದು ಮುಂಜಾನೆ ಅಜಿತ್ ರೈ ವಾಕಿಂಗ್ ಹೋಗಿದ್ರೆ, ತಪ್ಪಿಸಿಕೊಳ್ಳುವ ಸಾಧ್ಯತೆ ಇತ್ತು. ಹೀಗಾಗಿ ಬೆಳಗಿನ ಜಾವ 4.30ಕ್ಕೆ ಅಜಿತ್ ರೈ ಮನೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸುಮಾರು 18ಕ್ಕೂ ಹೆಚ್ಚು ಅಧಿಕಾರಿಗಳಿಂದ ಮನೆ ಪರಿಶೀಲನೆ ನಡೆದಿದೆ.

ಕೆ.ಆರ್ ಪುರಂ ತಹಶೀಲ್ದಾರ್ ಅಗಿದ್ದ ವೇಳೆ ಅಜಿತ್ ರೈ ಬೆಂಗಳೂರಲ್ಲಿ ಹಲವು ಐಷಾರಾಮಿ ‌ಮನೆಗಳನ್ನು ಖರೀದಿ ಮಾಡಿದ್ದಾರೆ. ಹಲವು ಐಷಾರಾಮಿ ಕಾರುಗಳು, ರಾಜ್ಯಾದ್ಯಂತ ಆಸ್ತಿ ಪಾಸ್ತಿ ಹೊಂದಿರೋ ಆರೋಪದ ಮೇಲೆ ಅಜಿತ್ ರೈ ಅವರ ಮೇಲೆ ಲೋಕಯುಕ್ತ ದಾಳಿ ಮಾಡಲಾಗಿದೆ. ಮನೆಗೆ ದಾಳಿ ಮಾಡಿರೋ ಅಧಿಕಾರಿಗಳು ಮನೆಯ ಪಾರ್ಕಿಂಗ್‌ನಲ್ಲಿರೋ ಬೈಕ್ ಹಾಗೂ ಕಾರುಗಳ ತಪಾಸಣೆ ನಡೆಸಿದರು. ಎಲ್ಲಾ ಕಾರುಗಳ ಕೀ ಪಡೆದುಕೊಂಡ ಅಧಿಕಾರಿಗಳು, ತಾರ್ ಜೀಪ್ ಹಾಗೂ ಫಾರ್ಚ್ಯೂನರ್ ಕಾರಿನ ಪೋಟೋ ಕ್ಲಿಕಿಸಿಕೊಂಡಿದ್ದಾರೆ.

ತಹಶೀಲ್ದಾರ್ ಅಜಿತ್ ರೈ ಅವರ ಸಹಕಾರ ನಗರದ ಮನೆಯಲ್ಲಿ ದೊಡ್ಡ ಮಟ್ಟದ ವಿದೇಶಿ ಮದ್ಯದ ಬಾಟಲ್‌ಗಳು ಪತ್ತೆಯಾಗಿದೆ. ವಿದೇಶಿ ಲಿಕ್ಕರ್ ಬಾಟಲ್‌ಗಳನ್ನು ಕಲೆ ಹಾಕಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಬೆಳಗಿನ ಜಾವ 4.30ಕ್ಕೆ ಶುರುವಾದ ಲೋಕಾಯುಕ್ತ ದಾಳಿ ಸತತ 7 ಗಂಟೆಗಳಿಂದ ಮುಂದುವರಿದಿದೆ. ಈ ದಾಳಿ ವೇಳೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಭರಣ, ನಗದು ಪತ್ತೆಯಾಗಿದೆ. ಲಕ್ಷಾಂತರ ರೂಪಾಯಿ ‌ಬೆಲೆ ಬಾಳುವ 30ಕ್ಕೂ ಹೆಚ್ಚು ವಾಚ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ವಿದೇಶಿ ಲಿಕ್ಕರ್, ಹಣ, ಬಂಗಾರ, ದುಬಾರಿ ವಾಚ್‌ಗಳು; ತಹಶೀಲ್ದಾರ್ ಅಜಿತ್ ರೈ ಮನೆಯಲ್ಲಿ ಸಿಕ್ಕ ಅಕ್ರಮ ಸಂಪತ್ತು ಎಷ್ಟು?

https://newsfirstlive.com/wp-content/uploads/2023/06/K-R-Puram-Tahashildar.jpg

Load More