newsfirstkannada.com

ಜೈಸ್ವಾಲ್​ ಬ್ಯಾಟಿಂಗ್ ಹಿಂದೆ ಮೂವರು ಮಾಸ್ಟರ್ಸ್​.. ಧೋನಿ, ರೋಹಿತ್ ಬಗ್ಗೆ ಯಂಗ್​​ ಗನ್ ಹೇಳೋದೇನು..?

Share :

15-07-2023

  ಮೂವರು ದಿಗ್ಗಜರು ಯಶಸ್ವಿ ಜೈಸ್ವಾಲ್ ಶತಕಕ್ಕೆ ನೆರವಾದರೇ?

  ಡೆಬ್ಯು ಮ್ಯಾಚ್​ಲ್ಲಿ ಎಲ್ಲರ ಕಣ್ಣು ತೆರೆಯಿಸಿದ ಯಶಸ್ವಿ ಜೈಸ್ವಾಲ್

  ಯಶಸ್ವಿ ಜೈಸ್ವಾಲ್​​​ ಟೀಮ್ ಇಂಡಿಯಾದ ನಯಾ ತೂಫಾನ್..!

ಯಶಸ್ವಿ ಜೈಸ್ವಾಲ್​​ ಡೆಬ್ಯು ಟೆಸ್ಟ್​​ನಲ್ಲೇ ಧೂಳೆಬ್ಬಿಸಿದ್ದಾರೆ. ಇವರ ಶತಕಕ್ಕೆ ಕ್ರಿಕೆಟ್​ ಲೋಕವೇ ದಂಗಾಗಿದೆ. ಇವರ ಟೆಂಪರ್​​ಮೆಂಟ್​ಗೆ ಹ್ಯಾಟ್ಸ್​ ಅಪ್ ಹೇಳಬೇಕು. ಈಗಿನ್ನೂ ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಕಣ್ಣು ಬಿಡುತ್ತಿರುವ ಜೈಸ್ವಾಲ್​​ ಡೆಬ್ಯು ಟೆಸ್ಟ್​​ನಲ್ಲೇ ಎಲ್ಲರ ಕಣ್ಣು ತೆರೆಸಿದ್ದಾರೆ. ಅದು ಹೇಗೆ ಸಾಧ್ಯವಾಯಿತು?

ಯಶಸ್ವಿ ಜೈಸ್ವಾಲ್​​​ ಟೀಮ್ ಇಂಡಿಯಾದ ನಯಾ ತೂಫಾನ್​​​. ಈ ತೂಫಾನ್ ಆರ್ಭಟಕ್ಕೆ, ವೆಸ್ಟ್ ​​ಇಂಡೀಸ್ ಬೆಚ್ಚಿ ಬಿದ್ದಿದೆ. ಡೆಬ್ಯು ಟೆಸ್ಟ್​​ನಲ್ಲೇ ಭರ್ಜರಿ ಬ್ಯಾಟಿಂಗ್ ನಡೆಸಿರುವ ಜೈಸ್ವಾಲ್, ಕ್ರಿಕೆಟ್ ಲೋಕವನ್ನೇ ಬೆಚ್ಚಿ ಬೀಳಿಸಿದ್ದಾರೆ. ಸಿಕ್ಕ ಮೊದಲ ಅವಕಾಶದಲ್ಲೇ ನಂಬಿಕೆ ಉಳಿಸಿಕೊಂಡ ಕ್ಲಾಸಿ ಲೆಫ್ಟ್ ಹ್ಯಾಂಡೆಡ್ ಬ್ಯಾಟ್ಸ್​​ಮನ್​ ಬಗ್ಗೆ, ಕ್ರಿಕೆಟ್ ವಲಯದಲ್ಲಿ ಇನ್ನಿಲ್ಲದ ನಿರೀಕ್ಷೆಗಳು ಗರಿಗೆದರಿವೆ.

ಆಡಿದ್ದು ಮೊದಲ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯ. ಯಂತವರಿಗಾದ್ರು ಸ್ವಲ್ಪನಾದ್ರು ನರ್ವಸ್​​​​ ಇರುತ್ತೆ. ಆದ್ರೆ 21ರ ಆಂಗ್ರಿ ಯಂಗ್​ಮ್ಯಾನ್​​​​​​​ನಲ್ಲಿ ಭೀತಿ ಅನ್ನೋದೆ ಕಾಣಲಿಲ್ಲ. ಅದೆಂಥಾ ಟೆಂಪರ್​ಮೆಂಟ್ ಅಂತೀರಾ. ರಿಯಲಿ ನೆಕ್ಸ್ಟ್​ ಲೆವೆಲ್​ ಪರ್ಫಾಮೆನ್ಸ್​​. ಜೈಸ್ವಾಲ್​​ರಿಂದ ಇಂತಹ ಫೆಂಟಾಸ್ಟಿಕ್​​ ಇನ್ನಿಂಗ್ಸ್ ಮೂಡಿ ಬರಲು ಕಾರಣ, ಈ ತ್ರಿಮೂರ್ತಿ ದಿಗ್ಗಜರು.

ಕಿಂಗ್ ಕೊಹ್ಲಿ ಪಾಠ.. ಜೈಸ್ವಾಲ್​ ಶತಕದ ಆರ್ಭಟ..!

ಸರಣಿ ಶುರುವಿಗೂ ಮುನ್ನವೇ ಕಿಂಗ್ ಕೊಹ್ಲಿ ಯುವ ಬ್ಯಾಟ್ಸ್​​​ಮನ್​​​ ಯಶಸ್ವಿ ಜೈಸ್ವಾಲ್​​ಗೆ, ಕ್ರಿಕೆಟ್​ ಪಾಠ ಮಾಡಿದರು. ನೆಟ್ಸ್​​ನಲ್ಲಿ ಜೈಸ್ವಾಲ್​ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದ ವಿರಾಟ್​ ಉಪಯುಕ್ತ ಟಿಪ್ಸ್ ನೀಡಿದರು. ರನ್ ಮಷಿನ್​ ಹೇಳಿದ್ದ ಸಲಹೆಯನ್ನ ಗಂಭೀರವಾಗಿ ತೆಗೆದುಕೊಂಡ ಜೈಸ್ವಾಲ್​​​​ ಡೊಮಿನಿಕಾದಲ್ಲಿ ಸೆಂಚುರಿ ಬಾರಿಸಿ ಟಾಕ್​ ಆಫ್ ದಿ ಟೌನ್ ಆಗಿದ್ದಾರೆ.

ಮುಂಬೈಕರ್​​ಗೆ ಧೈರ್ಯ ತುಂಬಿದ ರೋಹಿತ್​​​

ಇನ್ನು ಆನ್​ ಫೀಲ್ಡ್​​ನಲ್ಲಿ ಕ್ಯಾಪ್ಟನ್ ರೋಹಿತ್​​ ಶರ್ಮಾ ಹೇಳಿದ ಮಾತುಗಳು ಜೈಸ್ವಾಲ್ ಸೆಂಚುರಿ​ಗೆ ಪ್ರೇರಣೆಯಾಯಿತು. ವಿಕೆಟ್ ಹೇಗೆ ವರ್ತಿಸುತ್ತೆ, ಹೇಗೆ ರನ್​ ಗಳಿಸಬೇಕು ಅಂತೆಲ್ಲ ಹೇಳಿದರು. ಹಿಟ್​ಮ್ಯಾನ್​ ಹೇಳಿದ್ದನ್ನ ಜೈಸ್ವಾಲ್ ಚಾಚು ತಪ್ಪದೇ ಪಾಲಿಸಿದರು.

ರೋಹಿತ್​​​​​​ ಶರ್ಮಾ​ ಜೊತೆ ತುಂಬಾ ಸಮಯ ನಂತರ ಆಡಿದೆ. ಈ ವೇಳೆ ಅವರು ಈ ವಿಕೆಟ್​​ನಲ್ಲಿ ಹೇಗೆ ಆಡಬೇಕು, ಹೇಗೆ ರನ್​ ಗಳಿಸಬೇಕು ಅನ್ನೋದನ್ನ ಹೇಳಿಕೊಟ್ರು. ಪಂದ್ಯ ಆರಂಭಕ್ಕೂ ಮುನ್ನ ಮಾತನಾಡಿದಾಗ, ನೀನು ಖಂಡಿತ ಅಂದುಕೊಂಡಿದ್ದನ್ನ ಮಾಡುವೆ. ಅದಕ್ಕೆ ಅರ್ಹನಾಗಿರುವೆ ಎಂದರು. ಇದರಿಂದ ನಾನು ಸಾಕಷ್ಟು ಕಲಿತೆ. ಇದನ್ನೇ ಮುಂದುವರಿಸುವೆ.

ಯಶಸ್ವಿ ಜೈಸ್ವಾಲ್​​, ಭಾರತದ ಯುವ ಕ್ರಿಕೆಟಿಗ

ಗುರು ಧೋನಿ ಸಲಹೆ..ಶಿಷ್ಯನಿಂದ ಸೆಂಚುರಿಯೋತ್ಸವ..!

ಇನ್ನು ಜೈಸ್ವಾಲ್​ರ​​​​ ಅಲ್ಟಿಮೇಟ್​​ ಶತಕದ ಹಿಂದೆ, ಲೆಜೆಂಡ್​​​ ಎಂಎಸ್ ಧೋನಿಯ ಪ್ರಭಾವವು ದೊಡ್ಡದಿದೆ. 2023ರ ಐಪಿಎಲ್ ವೇಳೆ ಜೈಸ್ವಾಲ್, ಧೋನಿಯನ್ನ ಭೇಟಿ ಮಾಡಿದರು. ಮಾಹಿ ಜೊತೆಗಿನ ಸಂವಹನ, ಜೈಸ್ವಾಲ್​ರಲ್ಲಿ ಹೊಸ ಕಿಚ್ಚನ್ನ ಹಚ್ಚಿತು.

‘ನಿನ್ನನ್ನ ನೀನು ನಂಬು’

ಮೊದಲ ಬಾರಿ ನಾನು ಧೋನಿ ಅವರನ್ನ ನೇರವಾಗಿ ಭೇಟಿಯಾಗಿದ್ದೆ. ಅದು ನನ್ನ ಜೀವನದ ಶ್ರೇಷ್ಠ ಘಳಿಗೆ. ಹೆಚ್ಚು ತಲೆಕೆಡಿಸಿಕೊಳ್ಳದೇ ನಿನ್ನ ಆಟದ ಮೇಲೆ ಗಮನ ಹರಿಸು. ನಿನ್ನನ್ನ ನೀನು ಹೆಚ್ಚಾಗಿ ನಂಬು ಮತ್ತು ಶಾಂತತೆ ಬೆಳೆಸಿಕೋ. ನಿನ್ನ ಕ್ರಿಕೆಟ್​ ಬೆಳವಣಿಗೆಗೆ ಸಹಕಾರಿ ಆಗಲಿದೆ ಎಂದು ಧೋನಿ ಹೇಳಿದ್ದರು.

ಯಶಸ್ವಿ ಜೈಸ್ವಾಲ್​​, ಟೀಮ್ ಇಂಡಿಯಾ ಕ್ರಿಕೆಟಿಗ

ದಿಗ್ಗಜರೆನಿಸಿಕೊಂಡ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಎಂಎಸ್ ಧೋನಿ ಯಶಸ್ವಿಯ ಯಶಸ್ಸಿಗೆ ಕಾರಣ ಆಗಿದ್ದಾರೆ. ಈ ಎಡಗೈ ಬ್ಯಾಟ್ಸ್​​ಮನ್ ಆರ್ಭಟ ಹೀಗೆ ಮುಂದುವರಿಯಲಿ. ಟೀಮ್ ಇಂಡಿಯಾದ ಫ್ಯೂಚರ್ ಸ್ಟಾರ್ ಆಗಿ ಹೊರ ಹೊಮ್ಮುವಂತಾಗಲಿ ಎಂಬುದು ನಮ್ಮ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಜೈಸ್ವಾಲ್​ ಬ್ಯಾಟಿಂಗ್ ಹಿಂದೆ ಮೂವರು ಮಾಸ್ಟರ್ಸ್​.. ಧೋನಿ, ರೋಹಿತ್ ಬಗ್ಗೆ ಯಂಗ್​​ ಗನ್ ಹೇಳೋದೇನು..?

https://newsfirstlive.com/wp-content/uploads/2023/07/YASHASWI_JAISWAL-2.jpg

Load More