newsfirstkannada.com

ಹಲ್ಲುಗಳನ್ನು ಕಾಪಾಡಿಕೊಳ್ಳುವುದು ಹೇಗೆ? ನಿಮ್ಮ ಹಲ್ಲುಗಳಿಗೆ ಆಯಸ್ಸು ಜಾಸ್ತಿ ಆಗಬೇಕೆ, ಅದಕ್ಕೆ ಇಲ್ಲಿವೆ 9 ಟಿಪ್ಸ್​

Share :

28-06-2023

  ಹಲ್ಲುಗಳ ಆರೋಗ್ಯಕ್ಕಾಗಿ ಜ್ಯೂಸ್​ ಕುಡಿಯೋದು ಒಳ್ಳೆಯದಾ..?

  ಸೂಕ್ಷ್ಮಾಣು ಜೀವಿಗಳು ನೇರ ಬಾಯಿಗೆ ಹೋದರೆ ಅಪಾಯ ಗ್ಯಾರಂಟಿ

  ಹಣ್ಣುಗಳನ್ನು ನೈಸರ್ಗಿಕವಾಗಿ ಹೇಗಿರುತ್ತೋ ಹಾಗೇ ತಿಂದರೆ ಉತ್ತಮ

ಮನುಷ್ಯನಿಗೆ ಹಲ್ಲು ತುಂಬಾ ಮುಖ್ಯ. ಮುಖ ಅಂದವಾಗಿ ಕಾಣುವುದರಿಂದ ಹಿಡಿದು ಆಹಾರ ಸೇವನೆ ಮಾಡುವುದರವರೆಗೆ ಹಲ್ಲುಗಳು ಪ್ರಮುಖ ಪಾತ್ರ ವಹಿಸುತ್ತಾವೆ. ಮಗುವಾಗಿದ್ದಾಗ ಹಲ್ಲು ಹುಟ್ಟುವುದು ಎಷ್ಟು ಸಾಮಾನ್ಯನೋ ಅದೇ ರೀತಿ ವಯಸ್ಸು ಆದಾಗ ಹಲ್ಲು ಉದುರುವುದು ಅಷ್ಟೇ ಸಾಮಾನ್ಯ. ಆದರೆ ಇಳಿ ವಯಸ್ಸಿನಲ್ಲೂ ಹಲ್ಲು ಕೊಂಚ ಉದುರದಂತೆ ಕಾಪಾಡಿಕೊಳ್ಳಲು ಮುಂಚಿತವಾಗಿ ಯೌವನದಲ್ಲಿಯೇ ಹಲ್ಲುಗಳ ಆರೋಗ್ಯದ ಕಡೆ ನಾವು ಗಮನ ಹರಿಸಬೇಕು. ಇದರಿಂದ ಹಲ್ಲುಗಳನ್ನು ಇನ್ನಷ್ಟು ಉತ್ತಮವಾಗಿ ಬಲಿಷ್ಠವಾಗಿರುವಂತೆ ಹೆಚ್ಚು ವರ್ಷಗಳವರೆಗೆ ಕಾಪಾಡಿಕೊಳ್ಳಬಹುದು.

ಹಲ್ಲುಗಳನ್ನು ದಾಳಿಂಬೆ ಹಣ್ಣಿನ ಜೊತೆ ಹೋಲಿಸಲಾಗುತ್ತದೆ. ಏಕೆಂದರೆ ಕೆಲವೊಬ್ಬರ ಹಲ್ಲುಗಳು ಅಷ್ಟೊಂದು ಚಂದವಾಗಿರುತ್ತವೆ. ಅಂತಹ ಹಲ್ಲುಗಳನ್ನು ನೋಡಿದಾಗ ನಮ್ಮ ಮನಸ್ಸಿನ ಗಮನಕ್ಕೆ ಬರುವುದೇ ದಾಳಿಂಬೆ ಹಣ್ಣು ಎಂದು. ಆದರೆ ಇತ್ತೀಚೆನ ದಿನಗಳಲ್ಲಿ ಮಕ್ಕಳಲ್ಲೂ ಹಲ್ಲುಗಳು ಕಪ್ಪಾಗುವುದು, ಹುಳು ತಿನ್ನುವುದು ಸೇರಿದಂತೆ ಉದುರಿ ಕೂಡ ಹೋಗುತ್ತೀವೆ. ಇದಕ್ಕೆ ಮೂಲ ಕಾರಣ ಅವರು ಸೇವಿಸುತ್ತಿರುವ ಆಹಾರ. ಬೇಕರಿ, ಅಂಗಡಿ ದಿನಸಿಗಳನ್ನು ಹೆಚ್ಚಾಗಿ ತಿಂದು ಸರಿಯಾಗಿ ಬಾಯಿ ತೊಳೆದುಕೊಳ್ಳದೇ ಇರುವುದೇ ಇದಕ್ಕೆ ಕಾರಣ ಎನ್ನಬಹುದು.

ನಿಮ್ಮ ಹಲ್ಲುಗಳನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕಾದ್ರೆ ಈ ಮಾರ್ಗಗಳನ್ನ ಅನುಸರಿಸಲೇಬೇಕು. ಅವುಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ.

 1. ಹಲ್ಲುಗಳನ್ನು ದಿನದಲ್ಲಿ 2 ಬಾರಿ ಉಜ್ಜುವುದರಿಂದ ಹಲ್ಲಿನ ಸ್ವಚ್ಚತೆ ಕಾಪಾಡಬಹುದು. ಜೊತೆಗೆ ಹಲ್ಲಿನ ಸಂಧಿಗಳಲ್ಲಿ ಸಿಕ್ಕಿಕೊಳ್ಳುವ ಆಹಾರವು ಬಹು ಬೇಗ ಸ್ವಚ್ಚವಾಗುತ್ತದೆ.
 2. ಯಾವುದೇ ಹಣ್ಣುಗಳನ್ನು ತಿನ್ನುವಾಗ ಅದು ನೈಸರ್ಗಿಕವಾಗಿ ಹೇಗಿರುತ್ತೋ ಹಾಗೇ ತಿನ್ನುವುದರಿಂದ ಹಲ್ಲುಗಳಿಗೆ ಒಳ್ಳೆಯದು. ಅದಕ್ಕೆ ಸಕ್ಕರೆ ಸೇರಿಸಿ ಜ್ಯೂಸ್ ಮಾಡಿ ಕುಡಿಯುವುದು ಹಲ್ಲುಗಳಿಗೆ ಒಳ್ಳೆಯದಲ್ಲ.
 3. ಹಲ್ಲಿನ ಸಂಧಿಗಳಲ್ಲಿ ಆಹಾರ ಸಿಕ್ಕಿ ಹಾಕಿಕೊಂಡರೇ ಅದು ಕೆಲವೊಮ್ಮೆ ಹೊರಗೆ ಬರವುದಿಲ್ಲ. ಇಂತಹ ಸಮಯದಲ್ಲಿ ಯಾವುದೇ ಪಿನ್ನು, ಸೂಜಿ ಅಥವಾ ಚೂಪಾದ ವಸ್ತುಗಳನ್ನು ಬಳಸದೇ ದಾರಗಳನ್ನು ಬಳಸಬೇಕು. ಹಲ್ಲನ್ನು ಸ್ವಚ್ಚಗೊಳಿಸುವ ದಾರಗಳು ಮಾರ್ಕೆಟ್​ನಲ್ಲಿ ಲಭ್ಯ ಇವೆ.
 4. ತಂಪಾಗಿರುವ ಆಹಾರವನ್ನು ಸೇವಿಸುವುದು ಹಲ್ಲುಗಳಿಗೆ ಉತ್ತಮವಲ್ಲ. ವಸಡಿನಲ್ಲಿ ನೋವು ಕಾಣಿಸಬಹುದು. ಹೀಗಾಗಿ ಆದಷ್ಟು ಅತೀ ತಂಪಾಗಿರುವ ಆಹಾರದಿಂದ ನಾವು ದೂರವಿರಬೇಕು.
 5. ದಿನ ಬೆಳಗಾದರೆ ಸಾಕು ನಿದ್ದೆಯಿಂದ ಎದ್ದಾಗ ಕಾಫಿ, ಟೀ ಕುಡುಯುವುದು ಎಲ್ಲರಿಗೂ ವಾಡಿಕೆ ಆಗಿದೆ. ದಿನಕ್ಕೆ 2 ಬಾರಿಗಿಂತ ಹೆಚ್ಚು ಬಾರಿ ಟೀ, ಕಾಫಿ ಸೇವನೆ ಮಾಡಿದರೆ ಅದು ಹಲ್ಲಿನ ಮೇಲೆ ಪರಿಣಾಮ ಬೀರುತ್ತದೆ. ಈ ಪಾನೀಯಗಳಲ್ಲಿ ಆಮ್ಲೀಯ ಗುಣ ಇರುವುದರಿಂದ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.

6. ಯಾವ ಹಣ್ಣು, ಆಹಾರ, ಪಾನಿಯದಲ್ಲಿ ವಿಟಮಿನ್​- ಸಿ ಇರುತ್ತದೋ ಅಂತಹಗಳನ್ನು ತಿನ್ನುವುದರಿಂದ ಹಲ್ಲುಗಳಿಗೆ ಉತ್ತಮ. ಏಕೆಂದರೆ ಅವು ಆಂಟಿ ಆಕ್ಸಿಡೆಂಟ್‍ಗಳನ್ನು ಒಳಗೊಂಡಿರುತ್ತವೆ.

7. ಹಲ್ಲುಜ್ಜಲು ಬ್ರಶ್​ ಅನ್ನು ಉಪಯೋಗಿಸುವಾಗ ನಿಧಾನವಾಗಿಯೇ ಉಜ್ಜಬೇಕು. ಹಲ್ಲು ಫಳ ಫಳ ಹೊಳೆಯುತ್ತಾವೆಂದು ಸ್ಪೀಡ್​ ಆಗಿ ಉಜ್ಜಿದ್ರೆ ಹಲ್ಲಿನ ಮೇಲ್ಪದರ ಸವೆಯುತ್ತದೆ. ಹೀಗಾಗಿ ಹಲ್ಲಿನ ದೃಢತೆ ಕಡಿಮೆಯಾಗಿ ಬೇಗ ಉದುರಿ ಹೋಗಬಹುದು.

8. ಕೆಲವೊಬ್ಬರಿಗೆ ಉಗುರು ಕಚ್ಚುವುದು ಅಭ್ಯಾಸ ಇರುತ್ತದೆ. ಇದು ಹಲ್ಲಿನ ಅನಾರೋಗ್ಯಕ್ಕೆ ಕಾರಣ ಆಗುತ್ತೆ. ಹೇಗೆಂದರೆ ಉಗುರಿನಿಂದ ಸೂಕ್ಷ್ಮಾಣು ಜೀವಿಗಳು ನೇರ ಬಾಯಿಗೆ ಹೋಗಿ ಅಲ್ಲಿ ಹಲ್ಲಿನ ಮೇಲೆ ಪ್ರಭಾವ ಬೀರುತ್ತಾವೆ. ಇದರಿಂದ ಉಗುರು ಕಚ್ಚುವುದು ಇಂದೇ ಬಿಟ್ಟೆ ಬಿಡಿ.

9. ಹಲ್ಲನ್ನು ಆರೋಗ್ಯವಾಗಿಡುವಲ್ಲಿ ನೀರು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚಾಗಿ ನೀರನ್ನು ಕುಡಿಯುವುದರಿಂದ ಹಲ್ಲಿನಲ್ಲಿ ಹಾಗೂ ಬಾಯಲ್ಲಿರುವ ಆಹಾರದ ಸಣ್ಣ ತುಣುಕುಗಳು ಹಾಗೂ ಇತರೆ ರಾಸಾಯನಿಕಗಳು ಸ್ವಚ್ಚವಾಗುತ್ತವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಲ್ಲುಗಳನ್ನು ಕಾಪಾಡಿಕೊಳ್ಳುವುದು ಹೇಗೆ? ನಿಮ್ಮ ಹಲ್ಲುಗಳಿಗೆ ಆಯಸ್ಸು ಜಾಸ್ತಿ ಆಗಬೇಕೆ, ಅದಕ್ಕೆ ಇಲ್ಲಿವೆ 9 ಟಿಪ್ಸ್​

https://newsfirstlive.com/wp-content/uploads/2023/06/ANUSHKA_SHARMA_TEETH.jpg

Load More