ಸ್ಟಾರ್ ನಟರ ಕಾಂಬಿನೇಷನ್ನಲ್ಲಿ ಮೂಡಿ ಬರ್ತಿರೋ ಹೊಸ ಸೀರಿಯಲ್
ದೃಷ್ಟಿಬೊಟ್ಟು ಸೀರಿಯಲ್ನಲ್ಲಿ ಕಾಣಿಸಿಕೊಂಡಿರೋ ಅಗ್ನಿಸಾಕ್ಷಿ ನಟ ವಿಜಯ್
ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟ ಹೊಸ ಪ್ರತಿಭೆ ಅರ್ಪಿತಾ ಮೋಹಿತೆ
ವಿಭಿನ್ನ ಕಾನ್ಸೆಪ್ಟ್ನೊಂದಿಗೆ ತೆರೆ ಮೇಲೆ ಬರೋದಕ್ಕೆ ದೃಷ್ಟಿಬೊಟ್ಟು ಸೀರಿಯಲ್ ತಂಡ ಸಜ್ಜಾಗಿದೆ. ಈಗ ಮತ್ತೊಂದು ಪ್ರೊಮೋ ರಿಲೀಸ್ ಆಗಿದ್ದು, ತಮ್ಮನಿಗೆ ತನ್ನ ಬಟ್ಟೆಯಿಂದಲೇ ವಿಶೇಷವಾಗಿ ರಾಖಿ ತಾಯಾರಿಸಿ ಕಟ್ಟಿದ್ದಾಳೆ ದೃಷ್ಟಿ. ಸಖತ್ ಇಂಟ್ರಸ್ಟಿಂಗ್ ಆಗಿ ಮೂಡಿ ಬರುತ್ತಿದೆ. ಇನ್ನೂ ವಿಶೇಷ ಎಂದರೆ ಬ್ಲಾಕ್ ಬಾಸ್ಟರ್ ಹಿಟ್ ಕೊಡೋಕೆ ಅಗ್ನಿಸಾಕ್ಷಿ ಸೀರಿಯಲ್ ನಟ ವಿಜಯ ಸೂರ್ಯ ಸಜ್ಜಾಗಿದ್ದಾರೆ.
ದತ್ತಾ ಭಾಯ್ ಪಾತ್ರದಲ್ಲಿ ನಟ ವಿಜಯ್ ಸೂರ್ಯ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ವಿಜಯ್ಗೆ ಜೋಡಿಯಾಗಿ ಅರ್ಪಿತಾ ಮೋಹಿತೆ ಬಣ್ಣ ಹಚ್ಚುತ್ತಿದ್ದಾರೆ. ಈ ಹಿಂದೆ ದೃಷ್ಟಿಬೊಟ್ಟು ನಾಯಕಿ ಬಗ್ಗೆ ಸೀರಿಯಲ್ ತಂಡ ಯಾವುದೇ ರೀತಿಯಲ್ಲೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ನಟಿಯ ಹೆಸರು ರಿವೀಲ್ ಮಾಡಿದೆ ಸೀರಿಯಲ್ ತಂಡ. ಈ ಸೀರಿಯಲ್ನಲ್ಲಿ ಅಭಿನಯಿಸುತ್ತಿರೋ ಹೊಸ ಪ್ರತಿಭೆ ಹೆಸರು ಅರ್ಪಿತಾ ಮೋಹಿತೆ.
ಇದನ್ನೂ ಓದಿ: ದೃಷ್ಟಿಬೊಟ್ಟು ಸೀರಿಯಲ್ನಲ್ಲಿರೋ ದೃಷ್ಟಿಗೊಂಬೆ ಯಾರು ಗೊತ್ತಾ..? ಅರ್ಪಿತಾ ಮೋಹಿತೆ ಹಿನ್ನೆಲೆ ಏನು?
ಇದೇ ಮೊಟ್ಟ ಮೊದಲ ಬಾರಿಗೆ ಕಿರುತೆರೆಗೆ ನಾಯಕಿಯಾಗಿ ದೃಷ್ಟಿಬೊಟ್ಟು ಮೂಲಕ ಲಾಂಚ್ ಆಗಿದ್ದಾರೆ. ಅರ್ಪಿತಾ ಮೋಹಿತೆ ಅವರು ಈಗಾಗಲೇ ಬಿಕಾಂ ಮುಗಿಸಿದ್ದಾರೆ. ಅರ್ಪಿತಾ ಮೋಹಿತೆ ಅವರು ಹುಟ್ಟಿ ಬೆಳೆದಿದ್ದು ಎಲ್ಲಾ ಕನಕಪುರದಲ್ಲಿ. ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಬಿಕಾಂ ಮುಗಿಸಿದ ಬಳಿಕ ನನಗೆ ಸಾಕಷ್ಟು ಅವಕಾಶಗಳು ಅರಸಿ ಬರುತ್ತಿದ್ದವು. ಅದರಲ್ಲಿ ಈ ಸೀರಿಯಲ್ಗೆ ಆಯ್ಕೆ ಆಗಿದ್ದೇನೆ ಅಂತ ನ್ಯೂಸ್ ಫಸ್ಟ್ಗೆ ಹೇಳಿಕೊಂಡಿದ್ದಾರೆ.
ಹೀಗೆ ಮಾತು ಮುಂದುವರೆಸಿದ ಅವರು.. ಮೊದ ಮೊದಲು ನನಗೆ ಹಾಗೇ ಌಕ್ಟ್ ಮಾಡಲು ಹೇಳಿದ್ರು. ಬಳಿಕ ಮೇಕಪ್ಮಾಡಿದ್ರು ಆಗ ಗೊತ್ತಾಯ್ತು ನಾನು ಹೇಗೆ ಕಾಣುತ್ತೇನೆ ಅಂತ. ಕಿರುತೆರೆಯಲ್ಲಿ ಯಾವ ನಟಿಯರು ಮಾಡದ ಸಾಹಸ ನಾನು ಮಾಡುತ್ತಿದ್ದೇನೆ. ನಾನು ನಾರ್ಮಲ್ ಆಗಿ ಬಂದ್ರೆ ಯಾರೂ ಗುರುತು ಹಿಡಿಯುವುದಿಲ್ಲ. ದೃಷ್ಟಿ ಲುಕ್ನಲ್ಲಿ ಬಂದ್ರೆ ಮಾತ್ರ ಅಬ್ಬಾ ದೃಷ್ಟಿ ಬಂದ್ಲು ಅಂತ ಮಾತಾಡುತ್ತಾರೆ.
ಮೊದಲು ಮೇಕ್ಅಪ್ ಮಾಡುವಾಗ 10 ರಿಂದ 15 ಶೇಡ್ನಲ್ಲಿ ಫೌಂಡೇಶನ್ ಯೂಸ್ ಮಾಡಿದ್ರು, ದೃಷ್ಟಿ ಲುಕ್ನ ಕ್ರಿಯೇಟ್ ಮಾಡೋದಕ್ಕೆ ಸೀರಿಯಲ್ ತಂಡ ತುಂಬಾ ಕಷ್ಟ ಪಟ್ಟಿದೆ. ಐಬ್ರೋ, ಕೈ ಹಾಗೂ ಮುಖಕ್ಕೆ ಒಂದೇ ರೀತಿಯಲ್ಲಿ ಮೇಕ್ಅಪ್ ಮಾಡಿದ್ದಾರೆ ಅಂತ ಹೇಳಿಕೊಂಡಿದ್ದಾರೆ.
ಕತೆಗೆ ಬರೋದಾದ್ರೆ ಬಡತನಕ್ಕೆ ಸೌಂದರ್ಯ ಶಾಪವಾಗಿ ಹೇಗೆ ಕಾಡುತ್ತೆ? ಹೆಣ್ಮಕ್ಕಳ ರಕ್ಷಣೆಗೆ ಇರ್ಬೇಕಾದವ್ರು ಬಕ್ಷಕರಾದ್ರೆ ಏನೆಲ್ಲಾ ಅನಾಹುತ ಆಗುತ್ತೆ ಅನ್ನೋದ್ರ ಸುತ್ತ ಕತೆ ಸಾಗಲಿದೆ. ಸ್ಟಾರ್ ನಟರ ಕಾಂಬಿನೇಷನ್ನಲ್ಲಿ ಬರ್ತಿರೋ ದೃಷ್ಟಿಬೊಟ್ಟು ಧಾರಾವಾಹಿ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇರೋದಂತೂ ಸತ್ಯ. ಅದರಲ್ಲೂ ನಟ ವಿಜಯ್ ಅವರ ಲುಕ್ಗೆ ಫ್ಯಾನ್ಸ್ ಫುಲ್ ಫಿದಾ ಆಗಿಬಿಟ್ಟಿದ್ದಾರೆ.
ಶ್ರೀ ಸಾಯಿ ಆಂಜನೇಯ ಕಂಪನಿ ಪ್ರೆಜೆಂಟ್ಸ್ ಸಂಸ್ಥೆ ಅಡಿ ದೃಷ್ಟಿಬೊಟ್ಟು ಧಾರಾವಾಹಿಯ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ ನಿರ್ಮಾಪಕ ರಕ್ಷ್. ಸ್ಟಾರ್ ನಟರ ಕಾಂಬಿನೇಷನ್ನಲ್ಲಿ ಬರ್ತಿರೋ ದೃಷ್ಟಿಬೊಟ್ಟು ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದ್ದು, ಸೆಪ್ಟೆಂಬರ್ 9 ಸೋಮವಾರ ಸಂಜೆ 6:30ಕ್ಕೆ ವೀಕ್ಷಕರ ಮನೆಗೆ ಬರಲಿದೆ. ಮುಂದಿನ ದಿನಗಳಲ್ಲಿ ಸೀರಿಯಲ್ ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗ್ತಾರೆ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ