ಧರೆಯಿಂದ 15 ಲಕ್ಷ ಕಿ.ಮೀ ದೂರದಲ್ಲಿ ಲಾಗ್ರೇಂಜ್ ಪಾಯಿಂಟ್
ಆದಿತ್ಯ ಎಲ್-1 ಉಪಗ್ರಹ ಬರೋಬ್ಬರಿ 1,500 ಕೆಜಿ ತೂಕ!
ಇಸ್ರೋ ಯಶಸ್ವಿ ಸೂರ್ಯ ಶಿಕಾರಿ.. 15 ವರ್ಷಗಳಿಂದ ತಯಾರಿ
ಭಾರತದ ಚೊಚ್ಚಲ ಸೌರ ಮಿಷನ್ ಆದಿತ್ಯ-ಎಲ್ 1 ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ವಿಕ್ರಮ ರಜನೀಕರನ ಅಂಗಳ ಸ್ಪರ್ಶಿಸಿದ ಬಳಿಕ ಪ್ರಭಾಕರನತ್ತ ಇಸ್ರೋ ವಿಜ್ಞಾನಿಗಳ ಯಾನ ಹೊರಟಿದೆ. ಬೆಂಕಿ ಚೆಂಡು ಸೂರ್ಯನ ಕುರಿತ ಸಹಸ್ರ ವರ್ಷಗಳ ಸಂಶಯಗಳನ್ನು ಶೋಧಿಸಲಿದೆ ಆದಿತ್ಯ ಎಲ್-1 ಮಿಷನ್ ಭಾರತೀಯರ ಹೆಮ್ಮೆ, ನಮ್ಮ ಇಸ್ರೋ ಮತ್ತೊಮ್ಮೆ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ.
ಇಸ್ರೋ ಯಶಸ್ವಿ ಸೂರ್ಯ ಶಿಕಾರಿ.. 15 ವರ್ಷಗಳಿಂದ ತಯಾರಿ!
ಭಾರತದ ಸೂರ್ಯಯಾನ ಹಿಂದಿದೆ ಅದೊಂದು ಮಹತ್ವದ ಗುರಿ!
ಖಗೋಳಜ್ಞಾನದ ಅನ್ವೇಷಣೆಯಲ್ಲಿ ಐತಿಹಾಸಿಕ ಸಾಧನೆಯತ್ತ ಇಸ್ರೋ ಮತ್ತೊಂದು ಹೆಜ್ಜೆ ಇಟ್ಟಿದೆ. ಜಗವ ಬೆಳಗುವ ಸೂರ್ಯನಲ್ಲಿ ಏನಿದೆ ಅಂತ ಸಂಶೋಧನೆ ಮಾಡಲು ಇಸ್ರೋ ತನ್ನ ಮೊದಲ ಬಾಹ್ಯಾಕಾಶಯಾನವನ್ನ ವಿಜಯಶಾಲಿಯಾಗಿ ಆರಂಭಿಸಿದೆ. ಪಿಎಸ್‌ಎಲ್‌ವಿ-ಸಿ57 ರಾಕೆಟ್‌ನಲ್ಲಿ ಆಂಧ್ರದ ಶ್ರೀಹರಿಕೋಟದಿಂದ ಹೊತ್ತೊಯ್ದ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯು ಯಶಸ್ವಿಯಾಗಿ ಬೇರ್ಪಟ್ಟಿದ್ದು, 125 ದಿನಗಳ ಪ್ರಯಾಣದಲ್ಲಿ ಸೂರ್ಯನ ಕಡೆಗೆ ತನ್ನ ಪ್ರಯಾಣವನ್ನು ಮುಂದುವರಿಸಲಿದೆ. ಆದಿತ್ಯನ ಅಧ್ಯಯನ ಅಷ್ಟು ಸುಲಭ ಇಲ್ಲ. ಬೆಂಕಿಯುಗುಳುವ ಉರಿ ಉಂಡೆಯನ್ನು ಭೂಮಿ ಮೇಲೆ ನಿಂತು ನೋಡಲು ಸಾಧ್ಯವಿಲ್ಲ. ಹಾಗಿದ್ರೆ 15 ಲಕ್ಷ ಕಿ.ಮೀ ಆಚೆಗೆ ಹೇಗಿರುತ್ತದೆ ಎಂಬುದು ಎಲ್ಲರ ಕೂತುಹಲ ಆಗಿದೆ. ನಮ್ಮ ಭೂಮಿಯ ಲಕ್ಷ ಲಕ್ಷ ಸಸ್ಯಗಳು, ಪ್ರಾಣಿಗಳು, ಇಡೀ ಮನುಕುಲದ ಸೃಷ್ಟಿ, ಸ್ಥಿತಿ ಲಯಕ್ಕೂ ಕಾರಣೀಕರ್ತ ದಿವಾಕರ. ಸೌರವ್ಯೂಹದ 8 ಗ್ರಹಗಳು ಸುಮಾರು 182 ಉಪಗ್ರಹಗಳು. ಲಕ್ಷ ಕೋಟಿ ಕಲ್ಲುಂಡೆಗಳು, ಲಕ್ಷ ಲಕ್ಷ ಧೂಮಕೇತುಗಳು ಎಲ್ಲವನ್ನೂ ಅವುಗಳದೇ ಅಕ್ಷಗಳಲ್ಲಿ ತಿರುಗಿಸಿ ಕುಣಿಸುತ್ತಾನೆ ಭಾಸ್ಕರ.
ಸೂರ್ಯಯಾನದಿಂದ ರವಿಯ ಭೂತ, ಭವಿಷ್ಯ, ವರ್ತಮಾನಗಳ ಕುರಿತು ಮಾಹಿತಿ ತಿಳಿಯವುದು, ಸೂರ್ಯನ ಹೊರ ವಲಯ ಕರೋನಾದ ಅಧ್ಯಯನ ಮಾಡುವುದು, ಸೌರ ಬಿರುಗಾಳಿಗಳು ಹೇಗೆ ಉಂಟಾಗುತ್ತೆ ಎಂಬ ಬಗ್ಗೆ ಅಧ್ಯಯನ ಹಾಗೂ ಸೌರಮಾರುತಗಳು ಭೂಮಿಗೆ ಅಪ್ಪಳಿಸುವ ಏನೇನು ಮುನ್ನೆಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ತಿಳಿಯುವುದು, ಸೂರ್ಯನ ವರ್ತನೆ, ಭೂಮಿಯ ವಾತಾವರಣದ ಪ್ರಭಾವಗಳು, ಗ್ರಹಣದ ಸಮಯದಲ್ಲಿ ಸೂರ್ಯ ಅಷ್ಟು ಕೆಂಪಾಗಿ ಗೋಚರಿಸುವ ರಹಸ್ಯವನ್ನು ಭೇದಿಸುವುದು, ಸೌರ ಮಾರುತಗಳಿಂದ ಜೀವರಾಶಿಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನ ಮತ್ತು ಗಗನಯಾತ್ರಿಗಳಿಗೆ ಸೌರ ಬಿರುಗಾಳಿ ಸೃಷ್ಟಿಸುವ ಅಪಾಯದ ಮುನ್ನೆಚ್ಚರಿಕೆ ಬಗ್ಗೆ ಅಧ್ಯಯನ ಹಾಗೂ ಪ್ರಕೃತಿ ವಿಕೋಪ, ಬರಗಾಲ, ಪ್ರಳಯ ಮಳೆ, ಪ್ರವಾಹ ಬಗ್ಗೆ ಸಂಶೋಧನೆ ಮಾಡಲಿದೆ.
ಆದಿತ್ಯ ಎಲ್1 ಮುಂದಿನ 125 ದಿನಗಳ ಕಾಲ ದೀರ್ಘ ಪ್ರಯಾಣವನ್ನು ನಡೆಸಲಿದೆ. ಇಂದಿನಿಂದ 16 ದಿನಗಳ ಕಾಲ ಆದಿತ್ಯ-ಎಲ್1 ಭೂಮಿಗೆ ಸುತ್ತುವರಿದ ಕಕ್ಷೆಯಲ್ಲಿ ಉಳಿಯುತ್ತದೆ, ಈ ಸಮಯದಲ್ಲಿ ಅದು ಸೂರ್ಯನ ಕಡೆಗೆ ತನ್ನ ಪ್ರಯಾಣಕ್ಕೆ ಅಗತ್ಯವಾದ ವೇಗವನ್ನು ಪಡೆಯಲು ಐದು ತಂತ್ರಗಳಿಗೆ ಒಳಗಾಗುತ್ತದೆ.
ಇನ್ನು ಭೂಮಿಯಿಂದ ಸೂರ್ಯನ ಅಂತರ 159 ಮಿಲಿಯನ್ ಕಿ.ಮೀ ಇದೆ. ಸೂರ್ಯನ ಬೆಳಕು ಭೂಮಿಗೆ ತಲುಪಲು ಸುಮಾರು 8.6 ನಿಮಿಷ ಬೇಕು. ಸಹಸ್ರ ಶಾಖಾನ್ವಿತ ಸಂಭವಾತ್ಮ, ಸಹಸ್ರ ರಶ್ಮಿಗಳ ರವಿಯಲ್ಲಿ ಅಡಗಿರುವ ಕುತೂಹಲಗಳ ಬಗ್ಗೆ ಸಹಸ್ರಾರು ವರ್ಷಗಳಿಂದ ಮಾನವ ಪ್ರಯತ್ನ ನಡೆಯುತ್ತಲೇ ಇದೆ. ಆದ್ರೆ ಉರಿಯುವ ಸೂರ್ಯನತ್ತ ಸಮೀಪಿಸಲು ಆಗದಂತಾಗಿತ್ತು. ಹೀಗಾಗಿ ಇಸ್ರೋ ಕೈಗೊಂಡಿರುವ ಸೂರ್ಯಯಾನದಿಂದ ಭಾಸ್ಕರನ ಭೂತ, ಭವಿಷ್ಯ ಹಾಗೂ ವರ್ತಮಾನಗಳ ಕುರಿತಾದ ಮಹತ್ವದ ಮಾಹಿತಿಗಳು ಲಭ್ಯವಾಗುವ ನಿರೀಕ್ಷೆ ಗರಿಗೆದರಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ