newsfirstkannada.com

ಧರ್ಮಸ್ಥಳದಿಂದ ಘಾಟಿ ಸುಬ್ರಮಣ್ಯ, ಅಪ್ಪು ಸ್ಮಾರಕ; ಈ ವೀಕೆಂಡ್‌ ಫ್ರೀ ‘ಶಕ್ತಿ’ ಸಂಚಾರ ಸಿಕ್ಕಾಪಟ್ಟೆ ಡಿಫರೆಂಟ್‌

Share :

25-06-2023

    ರಾಜ್ಯದಲ್ಲಿ ಮಹಿಳಾ ಮಣಿಯರ ‘ಶಕ್ತಿ’ ದರ್ಬಾರ್​ ಜೋರು

    ಸಿಲಿಕಾನ್​ ಸಿಟಿ ಸುತ್ತ ಮುತ್ತ ನಾರಿಯರ ಟ್ರಿಪ್​ ದರ್ಬಾರ್​

    ವೀಕೆಂಡ್ ಹಿನ್ನಲೆ ಇವತ್ತೂ ಬಸ್​ಗಳು ಫುಲ್ ರಶೋ ರಶು

ಫ್ರೀ ಸಾರಿಗೆಯ ಶಕ್ತಿ ಯೋಜನೆ ಜಾರಿಯಾದ ಮೊದಲ ವಾರ ಧರ್ಮಸ್ಥಳ ಬಸ್​ ಏರಿ ರೈಟ್​ ರೈಟ್​ ಎಂದಿದ್ದ ಬೆಂಗಳೂರಿನ ನಾರಿಮಣಿಯರು ಈ ವಾರ ಚಿಕ್ಕಬಳ್ಳಾಪುರ ಬಸ್​ಗಳ ಬೆನ್ನು ಬಿದ್ದಿದ್ದರು. ಶಕ್ತಿಯೊಂದಿಗೆ ಸಂಚರಿಸಿ ಈಶ ಫೌಂಡೇಶನ್​, ಘಾಟಿ ಸುಬ್ರಮಣ್ಯನ ದರ್ಶನ ಪಡೆದು ಪುನೀತರಾದರು. ಈ ಮಧ್ಯೆ ಅಪ್ಪು ಸ್ಮಾರಕದಲ್ಲೂ ಮಹಿಳೆಯರ ಕಲರವ ಕಂಡು ಬಂತು. ಅಪ್ಪು ಅಜರಾಮರ ಅಂತಾ ಕರ್ನಾಟಕ ರತ್ನನ ನೆನಪನ್ನ ಮೆಲುಕು ಹಾಕಿದರು.

ಕರುನಾಡಿನ ದಕ್ಷಿಣದಿಂದ ಉತ್ತರದವರೆಗೆ. ಪೂರ್ವದಿಂದ ಪಶ್ಚಿಮದವರೆಗೆ ಪಸರಿಸಿರೋ ಶಕ್ತಿ ಯೋಜನೆ ಈ ವೀಕೆಂಡ್​ನಲ್ಲೂ ಸದ್ದು ಮಾಡಿದೆ. ಶಕ್ತಿಯ ಸವಾರಿ ಮಾಡಿ ದೇವರ ದರ್ಶನ ಪಡೆದು ಪುನೀತರಾಗೋಣ ಅಂತ ನಾರಿಮಣಿಯರು ಸರ್ಕಾರಿ ಬಸ್​ಗಳ ಬೆನ್ನು ಬಿದ್ದಿದ್ದಾರೆ. ವಾರಾಂತ್ಯದ ಹಿನ್ನಲೆ ಸರ್ಕಾರಿ ಬಸ್​ಗಳು ಫುಲ್ ರಶ್​ ಆಗಿದ್ದು, ರೈಟ್​ ರೈಟ್​ ಅಂತ ನಾರಿಯರು ತಮಗಿಷ್ಟವಾದ ತಾಣಗಳಿಗೆ ಜಾರಿದ್ದಾರೆ.

ಸಿಲಿಕಾನ್​ ಸಿಟಿ ಸುತ್ತ ಮುತ್ತ ನಾರಿಯರ ಟ್ರಿಪ್​ ದರ್ಬಾರ್​!

ವೀಕೆಂಡ್​ ಹಿನ್ನಲೆ ಬೆಂಗಳೂರಿನ ಮೆಜೆಸ್ಟಿಕ್​ನಿಂದ ಅಕ್ಕಪಕ್ಕದ ಪ್ರವಾಸಿ ತಾಣಗಳಿಗೆ ಹೊರಡುವ ಕೆಎಸ್​ಆರ್​ಟಿಸಿ ಬಸ್​ಗಳಿಗೆ ಡಿಮ್ಯಾಂಡ್​ ಹೆಚ್ಚಾಗಿತ್ತು. ಈಶಾ ಫೌಂಡೇಶನ್, ಘಾಟಿ ಸುಬ್ರಮಣ್ಯ, ನಂದಿ ಬೆಟ್ಟ ನೋಡಲು ನಾರಿಯರು ಸರ್ಕಾರಿ ಬಸ್​ ಏರಿದ್ರು. 1000ಕ್ಕೂ ಹೆಚ್ಚು ಮಹಿಳೆಯರು ಇಂದು ಮೆಜೆಸ್ಟಿಕ್​ನಿಂದ ಚಿಕ್ಕಬಳ್ಳಾಪುರದ ಈಶಾ ಫೌಂಡೇಶನ್​ ಕಡೆ ಪ್ರಯಾಣ ಬೆಳೆಸಿದ್ರು. ಇನ್ನೂ ಕಳೆದ ವಾರ ಜನಜಾತ್ರೆಗೆ ಸಾಕ್ಷಿಯಾಗಿದ್ದ ಮೆಜೆಸ್ಟಿಕ್ ಬಸ್​ ನಿಲ್ದಾಣದ ಧರ್ಮಸ್ಥಳ ಪ್ಲಾಟ್​ ಫಾರ್ಮ್​ ಇಂದು ಖಾಲಿ ಖಾಲಿಯಾಗಿತ್ತು. ಉಚಿತ ಬಸ್​ ಪ್ರಯಾಣದ ಎಫೆಕ್ಟ್​ ಕರ್ನಾಟಕ ರತ್ನ ಪುನೀತ್​ ರಾಜ್​ಕುಮಾರ್​ ಅವರ ಸ್ಮಾರಕದ ಮೇಲೂ ತಟ್ಟಿತ್ತು. ಉಚಿತ ಬಸ್​ ಪ್ರಯಾಣ ಇರೋದ್ರಿಂದ ಮಹಿಳೆಯರು ಇಂದು ಅಪ್ಪು ಸಮಾಧಿ ನೋಡಲು ಮುಗಿಬಿದ್ದಿದ್ರು. ರಾಜ್ಯದ ಬೇರೆ ಬೇರೆ ಭಾಗದಿಂದ ಬಂದಿರುವ ಮಹಿಳೆಯರು ಅಪ್ಪು ಸಮಾಧಿಯ ದರ್ಶನ ಪಡೆದ್ರು.. ಈ ವೇಳೆ ಓರ್ವ ಮಹಿಳೆ ಹಾಡು ಹಾಡಿ ಅಪ್ಪು ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿ ಕಣ್ಣೀರಿಟ್ಟರು.

ಬಸ್​-ಲಾರಿ ನಡುವೆ ಅಪಘಾತ.. ಮಹಿಳೆ ಸ್ಥಿತಿ ಗಂಭೀರ

ಉಚಿತ ಬಸ್​ ಪ್ರಯಾಣ ಅಂತ ಸರ್ಕಾರಿ ಬಸ್ ಏರಿ ಟ್ರಿಪ್​ ಹೊರಟಿದ್ದ ಕೆಲ ಮಹಿಳೆಯರಿಗೆ ಅಪಘಾತವೊಂದು ಉಂಟುಮಾಡಿದೆ.. ಮೈಸೂರಿನ ನಂಜನಗೂಡಿನ ಬಸವರಾಜಪುರದ ಗೇಟ್ ಬಳಿ ಕೆಸ್​ಆರ್​ಟಿಸಿ ಬಸ್​ಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್​ನಲ್ಲಿ ಕಿಟಕಿ ಪಕ್ಕ ಕುಳಿತಿದ್ದ ಮಹಿಳೆ ಕೈ ಕಟ್ ಆಗಿದೆ.. ಘಟನೆಯಲ್ಲಿ ಮತ್ತೋರ್ವ ಮಹಿಳೆಗೆ ಗಂಭೀರ ಗಾಯಗಳಾಗಿದೆ.

ಕಳೆದ ವಾರಕ್ಕೆ ಹೋಲಿಸಿದ್ರೆ ಈ ವಾರ ‘ಶಕ್ತಿ’ ಸಂಚಾರ ಹೆಚ್ಚಳ!

ಕಳೆದ ವಾರಕ್ಕೆ ಹೋಲಿಕೆ ‌ಮಾಡಿದ್ರೆ ಈ ವಾರ ಉಚಿತ ಬಸ್​ ಪ್ರಯಾಣದಲ್ಲಿ ಏರಿಕೆ ಕಂಡಿದೆ.. 1 ಕೋಟಿ ಮಹಿಳಾ ಪ್ರಯಾಣಿಕರು ಈ ವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸಿದ್ದಾರೆ.. ಈ ವಾರ ದಿನಕ್ಕೆ ಸರಾಸರಿ 60 ಲಕ್ಷ ನಾರಿಯರು ಉಚಿತ ಪ್ರಯಾಣದ ಪ್ರಯೋಜನ ಪಡೆದಿದ್ದಾರೆ. ಕಳೆದ ವಾರ ದಿನಕ್ಕೆ 50 ಲಕ್ಷ ಸಂಚರಿಸುತ್ತಿದ್ದ ಮಹಿಳೆಯರ ಪ್ರಮಾಣ ಪ್ರತೀ ದಿನ 10 ಲಕ್ಷದಂತೆ ಏರಿಕೆಯಾಗಿದೆ. ಇನ್ನೂ ಉಚಿತ ಪ್ರಯಾಣದ ಹಿನ್ನಲೆ ದೇಗುಲಗಳಿಗೆ ಸಂಚರಿಸುವ ಮಹಿಳೆಯರ ಸಂಖ್ಯೆ ಸಹ ಹೆಚ್ಚಾಗಿದೆ.. ಹೀಗಾಗಿ ರಾಜ್ಯದಲ್ಲಿ ಪ್ರವಾಸೋದ್ಯಮ ಕೊಂಚ ಚೇತರಿಕೆ ಸಹ ಕಂಡಿದೆ. ಎರಡನೇ ವಾರವೂ ರಾಜ್ಯದಲ್ಲಿ ಶಕ್ತಿ ಸಂಚಾರ ಜಬರ್ದಸ್ತ್​ ಆಗಿ ಸಾಗಿದ್ದು ಯೋಜನೆಗೆ ಡಿಮ್ಯಾಂಡ್​ ಹೆಚ್ಚಾಗಿದೆ. ಹೊಸ ಹುರುಪಿನಲ್ಲಿ ಶಕ್ತಿ ಸವಾರಿ ಮಾಡ್ತಿರೋ ಮಹಿಳೆಯರು ಮುಂದಿನ ವಾರ ಯಾವ ದಿಕ್ಕಿಗೆ ಟ್ರಿಫ್​ ಪ್ಲಾನ್ ಮಾಡ್ತಾರೆ ಅಂತಾ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಧರ್ಮಸ್ಥಳದಿಂದ ಘಾಟಿ ಸುಬ್ರಮಣ್ಯ, ಅಪ್ಪು ಸ್ಮಾರಕ; ಈ ವೀಕೆಂಡ್‌ ಫ್ರೀ ‘ಶಕ್ತಿ’ ಸಂಚಾರ ಸಿಕ್ಕಾಪಟ್ಟೆ ಡಿಫರೆಂಟ್‌

https://newsfirstlive.com/wp-content/uploads/2023/06/appu.jpg

Load More