newsfirstkannada.com

ಫಿಟ್​​ನೆಸ್​ ಟಾರ್ಗೆಟ್​ ಮಾಡಿದ ಬಿಸಿಸಿಐ.. ಪ್ಲೇಯರ್ಸ್​ ತಪ್ಪಿಸಿಕೊಳ್ಳೋ ಚಾನ್ಸೇ ಇಲ್ಲ!

Share :

25-08-2023

    ಟೀಂ ಇಂಡಿಯಾದಲ್ಲಿ ರೆಸ್ಟ್​ನಲ್ಲಿದ್ದವರಿಗೆ ಸ್ಪೆಷಲ್​ ಟಾಸ್ಕ್​ ನೀಡಿದ್ದ BCCI

    ವಿಶ್ವಕಪ್​, ಏಷ್ಯಾಕಪ್​ಗೂ ಮುನ್ನ ಆಟಗಾರರಿಗೆ ರಿಯಲ್​ ‘ಟೆಸ್ಟ್​​’.!

    ಫಿಟ್​​ನೆಸ್​​ ಟೆಸ್ಟ್​ ಪಾಸ್​ ಆದ್ರೆ ಮಾತ್ರ ಏಕದಿನ ವಿಶ್ವಕಪ್​ ಟಿಕೆಟ್​

ಐಸಿಸಿ ಟೂರ್ನಿಗಳಲ್ಲಿ ಈ ಹಿಂದೆ ಅನುಭವಿಸಿದ್ದ ಹಿನ್ನಡೆಗಳಿಂದ ಬಿಸಿಸಿಐ ಕೊನೆಗೂ ಎಚ್ಚೆತ್ತುಕೊಂಡಿದೆ. ತಂಡಕ್ಕೆ ಕಾಡ್ತಿರೋ ಇಂಜುರಿ ಕಂಟಕಕ್ಕೆ ಬ್ರೇಕ್​ ಹಾಕಲು ಹೊಸ ದಾಳ ಉರುಳಿಸಿದೆ. ಬಿಸಿಸಿಐ ಬಾಸ್​ಗಳ ಪ್ಲಾನ್​ ಏನು, ಆಟಗಾರರಿಗೆ ನೀಡಿರೋ ಟಾಸ್ಕ್​ ಏನು?

ಕಳೆದ ಕೆಲ ವರ್ಷಗಳಿಂದ ಟೀಮ್​ ಇಂಡಿಯಾವನ್ನ ಇಂಜುರಿ ಅನ್ನೋ ಪೆಡಂಭೂತ ಬಿಟ್ಟು ಬಿಡದೇ ಕಾಡಿದೆ. ಮೇಜರ್​​ ಟೂರ್ನಿಗಳಲ್ಲೂ ಇಂಜುರಿ ಕಂಟಕ ತಂಡಕ್ಕೆ ಹಿನ್ನಡೆಯುಂಟು ಮಾಡಿದೆ. ಕೊನೆಗೂ ಇದ್ರಿಂದ ಬಿಸಿಸಿಐ ಬಾಸ್​ಗಳು, ಈಗ ಫಿಟ್​​ನೆಸ್​​ ವಿಚಾರದಲ್ಲಿ ನೋ ಕಾಂಪ್ರಮೈಸ್​ ಅಂತಿದ್ದಾರೆ.

ವಿಕೆಟ್ ಪಡೆದ ಕ್ಷಣ ಸಂಭ್ರಮಿಸಿದ ಆಟಗಾರರು

ಫಿಟ್​ನೆಸ್​ ವಿಚಾರದಲ್ಲಿ ನೋ ಕಾಂಪ್ರಮೈಸ್​​​.!

2013ರ ಬಳಿಕ ಐಸಿಸಿ ಟೂರ್ನಿಗಳಲ್ಲಿ ಟೀಮ್​ ಇಂಡಿಯಾ ಮುಖಭಂಗ ಅನುಭವಿಸಿದೆ. ಹೀಗಾಗಿ ಮುಂಬರೋ ಏಷ್ಯಾಕಪ್​, ವಿಶ್ವಕಪ್​ ಸಮರವನ್ನ ಬಿಸಿಸಿಐ ಪ್ರತಿಷ್ಟೆಯ ಕದನವನ್ನಾಗಿ ಪರಿಗಣಿಸಿದೆ. ಸದ್ಯ ಬಿಗ್​ ಟಾರ್ಗೆಟ್​ ಸೆಟ್​ ಮಾಡಿಕೊಂಡಿರೋ ಬಾಸ್​ಗಳಿಗೆ ತಲೆನೋವಾಗಿರೋದು ಆಟಗಾರರ ಇಂಜುರಿ. ಹೀಗಾಗಿ ಫಿಟ್​​ನೆಸ್​ ಅನ್ನೇ ಟಾರ್ಗೆಟ್​ ಮಾಡಿರೋ ಬಿಸಿಸಿಐ, ಆಟಗಾರರಿಗೆ ರಿಯಲ್​ ಟೆಸ್ಟ್​ ನಡೆಸ್ತಿದೆ.

ಚಾನ್ಸ್​ ತಗಳೋ ಮಾತೇ ಇಲ್ಲ.! ಸ್ಟಾರ್​​ಗಳಿಗೂ ಇಲ್ಲ ಎಕ್ಸ್‌ಕ್ಯೂಸ್​​​.!

ಕೆಲ ದಿನಗಳ ಹಿಂದೆ ನಾಡಾ ರಿಲೀಸ್​​ ಮಾಡಿದ್ದ ವರದಿ ಪ್ರಕಾರ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟರ್​​ಗಳು ಡೋಪಿಂಗ್​ ಟೆಸ್ಟ್​ ಭಾಗವೇ ಆಗಿರಲಿಲ್ಲ. ಇದೀಗ ಸ್ಟಾರ್​ಗಳು ಸೇರಿದಂತೆ ಎಲ್ಲ ಆಟಗಾರರ ಮೇಲೆ ಹದ್ದಿನ ಕಣ್ಣಿಟ್ಟಿರೋ ಬಾಸ್​ಗಳು, ಬೆಂಗಳೂರಿನ ಎನ್​​ಸಿಎನಲ್ಲಿ ವಿವಿಧ ಟೆಸ್ಟ್​​ ನಡೆಸ್ತಿದ್ದಾರೆ.

ಎನ್​​ಸಿಎನಲ್ಲಿ ಬ್ಲಡ್​, ಬಾಡಿ ಫುಲ್​ ಚೆಕಪ್​.!

ಏಷ್ಯಾಕಪ್​ ಪೂರ್ವ ತಯಾರಿಯ ಕ್ಯಾಂಪ್​ಗಾಗಿ ಟೀಮ್​ ಇಂಡಿಯಾ ಆಟಗಾರರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಇಂದಿನಿಂದ ಅಭ್ಯಾಸದ ಕಣಕ್ಕೆ ಆಟಗಾರರು ಧುಮುಕಲಿದ್ದಾರೆ. ಅದಕ್ಕೂ ಮುನ್ನ ಅಂದ್ರೆ, ನ್ಯಾಷನಲ್​ ಕ್ರಿಕೆಟ್​ ಅಕಾಡೆಮಿಯಲ್ಲಿ ಆಟಗಾರರು ವಿವಿಧ​​ ಟೆಸ್ಟ್​ಗೆ ಒಳಗಾಗಿದ್ರು. ಯೋ ಯೋ ಟೆಸ್ಟ್​​ ಸೇರಿದಂತೆ ಕೆಲ ಫಿಟ್ನೆಸ್​ ಟೆಸ್ಟ್​​​ಗಳ ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಬ್ಲಡ್​ ಚೆಕಪ್​ ಕೂಡ ಮಾಡಲಾಗಿದೆ.

ಆಟಗಾರರಿಗೆ 13 ದಿನಗಳ ವಿಶೇಷ ಫಿಟ್​​ನೆಸ್​​ ಪ್ಲಾನ್​.!

ವೆಸ್ಟ್​ ಇಂಡೀಸ್​ ವಿರುದ್ಧ ಪ್ರವಾಸದ ಬಳಿಕ ತವರಿಗೆ ಮರಳಿದ್ದ ಟೀಮ್​ ಇಂಡಿಯಾ ಆಟಗಾರರು ರಿಲ್ಯಾಕ್ಸ್​ ಮೂಡ್​ನಲ್ಲಿದ್ದಾರೆ ಅಂತಾ ಎಲ್ರೂ ಅಂದು ಕೊಂಡಿದ್ರು. ಆದ್ರೆ, ರೆಸ್ಟ್​ನಲ್ಲಿದ್ದ ಆಟಗಾರರಿಗೆ ಸ್ಪೆಷಲ್​ ಟಾಸ್ಕ್​ ನೀಡಲಾಗಿತ್ತು. ಎನ್​ಸಿಎನ ಫಿಸಿಯೋಥೆರಪಿಸ್ಟ್​ ಹಾಗೂ ಟ್ರೈನರ್ಸ್​​ ಜೊತೆಗೂಡಿ ರೂಪಿಸಿದ್ದ ಫಿಟ್​ನೆಸ್​ ಪ್ಲಾನಿಂಗ್​ ಅನ್ನ ಆಟಗಾರರು ಅಗಸ್ಟ್​ 9ರಿಂದ 22ರವರೆಗೆ ಪಾಲಿಸ್ತಾ ಇದ್ರು.

ಭಾರತದ ಕ್ರಿಕೆಟ್ ತಂಡ

NCAನ ಸ್ಪೆಷಲ್​​ ಫಿಟ್​ನೆಸ್​​ ಟಾಸ್ಕ್​ 

  • ದಿನಲೂ 9 ಗಂಟೆಗಳ ಕಾಲ ನಿದ್ದೆ
  • ಪ್ರತಿನಿತ್ಯ ವಾಕಿಂಗ್, ರನ್ನಿಂಗ್​, ಜಿಮ್ ಸೆಷನ್​
  • ಬಳಿಕ ಕಡ್ಡಾಯವಾಗಿ ಯೋಗ, ಸ್ವಿಮ್ಮಿಂಗ್​​​
  • ದಿನವೂ ಅಗತ್ಯ ಪ್ರೋಟಿನ್​ ಸೇವನೆ
  • ಬ್ಯಾಟ್ಸ್​ಮನ್​, ಬೌಲರ್​ಗೆ ಪ್ರತ್ಯೇಕ ವರ್ಕೌಟ್​ ಪ್ಲಾನ್​
  • ವರ್ಕೌಟ್​​ ಮುಗಿದ ಬಳಿಕ ಮಸಾಜ್​ ಥೆರಪಿ

ಟೆಸ್ಟ್​ ಪಾಸ್​ ಆದ್ರೆ ಮಾತ್ರ ಏಕದಿನ ವಿಶ್ವಕಪ್​ ಟಿಕೆಟ್​.!

ಸದ್ಯ ಎನ್​ಸಿಎನಲ್ಲಿ ನಿನ್ನೆ ನಡೆದಿರೋ ಫಿಟ್​​ನೆಸ್​ ಟೆಸ್ಟ್​ನಲ್ಲಿ ಹೈ ಸ್ಟ್ಯಾಂಡರ್ಡ್​ ಮೆಂಟೇನ್​ ಮಾಡಿದವರಿಗಷ್ಟೇ, ಏಕದಿನ ವಿಶ್ವಕಪ್​ ತಂಡದಲ್ಲಿ ಸ್ಥಾನ ಕನ್​ಫರ್ಮ್​. ಫೇಲ್​ ಆದವರು ಏಷ್ಯಾಕಪ್​ ತಂಡದಲ್ಲಿದ್ರೂ, ವಿಶ್ವಕಪ್​ಗೆ ಚಾನ್ಸ್​ ಸಿಗೋದು ಅನುಮಾನವೇ ಅನ್ನೋದು ಬಿಸಿಸಿಐ ಮೂಲದ ಮಾತಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಫಿಟ್​​ನೆಸ್​ ಟಾರ್ಗೆಟ್​ ಮಾಡಿದ ಬಿಸಿಸಿಐ.. ಪ್ಲೇಯರ್ಸ್​ ತಪ್ಪಿಸಿಕೊಳ್ಳೋ ಚಾನ್ಸೇ ಇಲ್ಲ!

https://newsfirstlive.com/wp-content/uploads/2023/08/TEAM_INDIA-1.jpg

Load More