newsfirstkannada.com

×

ಗ್ರೇಟ್ ಕ್ಯಾಪ್ಟನ್!! ಕೋಪಿಸಿಕೊಳ್ಳಲಿಲ್ಲ.. ಪ್ರೀತಿಯಿಂದ ಅಪ್ಪಿ ವಿಶ್ವದ ಹೃದಯಗೆದ್ದ ಪಾಂಡ್ಯ..!

Share :

Published May 30, 2023 at 6:32am

    ಗುಜರಾತ್ ಟೈಟ್ಸನ್​ ಬಗ್ಗು ಬಡಿದು CSK ವಿಜಯೋತ್ಸವ

    ಸೋತರೂ ಕ್ರೀಡಾ ಸ್ಫೂರ್ತಿ ಮೆರೆದು ದೊಡ್ಡವರಾದ್ರು ಪಾಂಡ್ಯ

    ಇದು ಕ್ರೀಡಾಸ್ಫೂರ್ತಿ! ಕ್ರೀಡಾಪಟುಗಳಿಗೆ ದಾರಿದೀಪವಾಗುವ ವಿಡಿಯೋ ಇಲ್ಲಿದೆ

ಹಾರ್ದಿಕ್ ಪಾಂಡ್ಯ. ಐಪಿಎಲ್​ ಫ್ರಾಂಚೈಸಿ ಗುಜರಾತ್ ತಂಡದ ಕ್ಯಾಪ್ಟನ್. ಚೊಚ್ಚಲ ಆವೃತ್ತಿಯಲ್ಲೇ ಫ್ರಾಂಚೈಸಿಗೆ ಐಪಿಎಲ್​ ಟ್ರೋಫಿ ತಂದುಕೊಟ್ಟ ಹಿರಿಮೆ ಅವರದ್ದು. ಕಳೆದ ಬಾರಿ ಅದ್ಭುತ ಆಟವನ್ನಾಡಿ ಕಪ್​ಗೆ ಮುತ್ತಿಟ್ಟಿದ್ದ, ಪಾಂಡ್ಯ ಟೀಂ ಈ ವರ್ಷವೂ ದಿಟ್ಟ ಪ್ರದರ್ಶನ ನೀಡಿತ್ತು.

ಅದಕ್ಕೆ ಕಾರಣ ಪಾಂಡ್ಯರಲ್ಲಿರುವ ನಾಯಕತ್ವದ ಗುಣ. ನಿನ್ನೆ ಕೂಡ ಸಿಎಸ್​ಕೆ ವಿರುದ್ಧ ಗೆದ್ದು ಟ್ರೋಫಿ ಎತ್ತಿಬಿಡ್ತು ಅನ್ನುವಷ್ಟರಲ್ಲಿ ಎದುರಾಳಿ ತಂಡದ ಆಟಗಾರ ದೊಡ್ಡ ಪವಾಡವನ್ನೇ ಸೃಷ್ಟಿಸಿಬಿಟ್ಟಿದ್ದರು. ಕೈಗೆ ಬಂದಿದ್ದ ತುತ್ತು ಬಾಯಿಗೆ ಸಿಗಲಿಲ್ಲ ಅನ್ನೋ ರೀತಿಯ ಧರ್ಮಸಂಕಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಪಾಂಡ್ಯ ನಡೆದುಕೊಂಡ ರೀತಿ, ಅವರಲ್ಲಿರುವ ಕ್ರೀಡಾ ಸ್ಫೂರ್ತಿಯ ಪ್ರಜ್ಞೆ ಎಲ್ಲರನ್ನೂ ಮೆಚ್ಚುವಂತೆ ಮಾಡಿದೆ.

ಅಷ್ಟಕ್ಕೂ ಆಗಿದ್ದು ಏನು..?
ಎರಡನೇ ಇನ್ನಿಂಗ್ಸ್​ನಲ್ಲಿ ಮಳೆ ಬಂದ ಪರಿಣಾಮ DLS ನಿಯಮದ ಪ್ರಕಾರ ಸಿಎಸ್​​ಕೆಗೆ 15 ಓವರ್​​ನಲ್ಲಿ 171 ರನ್​ ಬೇಕಿತ್ತು. ಅದರಂತೆ ಅದ್ಭುತವಾಗಿ ಆಡಿದ್ದ ಸಿಎಸ್​ಕೆಗೆ ಕೊನೆಯ 15ನೇ ಓವರ್​ನಲ್ಲಿ 13 ರನ್ ಬೇಕಿತ್ತು. ಅಂತಿಮ ಓವರ್ ಎಸೆಯಲು ಗುಜರಾತ್ ಟೈಟನ್ಸ್​ ತಂಡದಿಂದ ಮೋಹಿತ್ ಶರ್ಮಾ ಬಂದಿದ್ದರು. ಮೊದಲನೇ ಬಾಲ್​ನಲ್ಲಿ ಯಾವುದೇ ರನ್ ಬರಲಿಲ್ಲ. ಎರಡನೇ ಬಾಲ್​ನಲ್ಲಿ ಶಿವಂ ದುಬೆ ಒಂದು ರನ್ ಗಳಿಸುವಲ್ಲಿ ಯಶಸ್ವಿಯಾದರು. ಮೂರನೇ ಬಾಲ್​​ನಲ್ಲಿ ಜಡೇಜಾ ಒಂದು ರನ್ ಪಡೆದ್ರೆ, ನಾಲ್ಕನೇ ಬಾಲ್​ನಲ್ಲೂ ಒಂದು ರನ್ ಸಿಎಸ್​ಕೆ ಬಂದಿತ್ತು.

ಹೀಗಿರುವಾಗ ಗುಜರಾತ್ ಗೆದ್ದೇಬಿಡ್ತು ಅನ್ನೋ ಭಿಗುಮಾನದಲ್ಲಿತ್ತು. ಯಾಕಂದ್ರೆ ಸಿಎಸ್​ಕೆಗೆ ಗೆಲ್ಲಲು 10 ರನ್​​ಗಳ ಅಗತ್ಯ ಇತ್ತು. ಆದರೆ ಐದನೇ ಬಾಲ್​ನಲ್ಲಿ ಜಡೇಜಾ ಅದ್ಭುತ ಸಿಕ್ಸರ್ ಬಾರಿಸಿದರು. ಕೊನೆಯ ಬಾಲ್​ ಅನ್ನು ಬೌಂಡರಿಗೆ ಕಳುಹಿಸುವ ಮೂಲಕ ಟ್ರೋಫಿ ಗೆಲ್ಲಿಸಿಕೊಟ್ಟರು. ಇದರಿಂದ ಬೌಲರ್ ಮೋಹಿತ್ ಶರ್ಮಾ ವಿಚಲಿತರಾದರು.

ಗೆಲುವಿನ ನಗಾರಿ ಬಾರಿಸುತ್ತಿದ್ದಂತೆಯೇ ಸಿಎಸ್​​ಕೆ ಕ್ಯಾಂಪ್ ಸಂಭ್ರಮದಲ್ಲಿ ಮುಳುಗಿತ್ತು. ಗುಜರಾತ್ ತಂಡದ ಬೌಲರ್ ಆಘಾತಕ್ಕೆ ಒಳಗಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ, ಮೋಹಿತ್ ಶರ್ಮಾ ಮೇಲೆ ಕೋಪಿಸಿಕೊಳ್ಳಲಿಲ್ಲ. ಬದಲಾಗಿ ಓಡೋಡಿ ಬಂದು ಅವರನ್ನು ತಂಬಿಕೊಂಡು ಸಂತೈಸುತ್ತಾರೆ. ಧೈರ್ಯ ತುಂಬುತ್ತಾರೆ. ಭಾವನಾತ್ಮಕವಾಗಿರುವ ಈ ವಿಡಿಯೋ ಎಂಥವ ಹೃದಯಕ್ಕೂ ನಾಟುವಂತಿದೆ. ಅಂದ್ಹಾಗೆ ಮೋಹಿತ್ ಶರ್ಮಾ ನಿನ್ನೆ 3 ಓವರ್ ಮಾಡಿ 36 ರನ್​ ನೀಡಿ ಮೂರು ವಿಕೆಟ್ ಪಡೆದು ಎಸ್​ಕೆಗೆ ಮುಗ್ಗಲು ಮುರಿಯುವಲ್ಲಿ ಯಶಸ್ವಿಯಾಗಿದ್ದರು.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಗ್ರೇಟ್ ಕ್ಯಾಪ್ಟನ್!! ಕೋಪಿಸಿಕೊಳ್ಳಲಿಲ್ಲ.. ಪ್ರೀತಿಯಿಂದ ಅಪ್ಪಿ ವಿಶ್ವದ ಹೃದಯಗೆದ್ದ ಪಾಂಡ್ಯ..!

https://newsfirstlive.com/wp-content/uploads/2023/05/HARDIK_PANDYA.jpg

Load More