newsfirstkannada.com

ಹೆಮ್ಮೆಯ ಸಂಗತಿ! ಹೊಯ್ಸಳರ ವಾಸ್ತುಶಿಲ್ಪ ಕಲೆಗೆ ವಿಶ್ವ ಪಾರಂಪರಿಕ ಗರಿಮೆ.. ಯುನೆಸ್ಕೋ ಪಟ್ಟಿಗೆ ಸೇರಿದ ಭಾರತದ 43ನೇ ತಾಣ

Share :

19-09-2023

    ಸೆಪ್ಟೆಂಬರ್ 16 ರಿಂದ ಆರಂಭ ಆಗಿರುವ ಸಮಿತಿ ಸಭೆ

    ಯುನೆಸ್ಕೋ ವಿಶ್ವ ಪಾರಂಪರಿಕ ಸಮಿತಿಯ ತೀರ್ಮಾನ

    ಯುನೆಸ್ಕೋ ಪಟ್ಟಿಗೆ ಸೇರಿದ ಭಾರತದ 43ನೇ ತಾಣ

ವಿಶ್ವದ ಅತ್ಯಂತ ಪ್ರಾಚೀನ ಮತ್ತು ಶ್ರೀಮಂತ ನಾಗರಿಕತೆಗಳಲ್ಲಿ ಒಂದಾದ ಭಾರತೀಯ ನಾಗರಿಕತೆ ಮನುಕುಲಕ್ಕೆ ವಾಸ್ತುಶಿಲ್ಪದ ಅದ್ಭುತಗಳನ್ನು ನೀಡಿದೆ. ಹಲವಾರು ರಾಜವಂಶಗಳಿಂದ ಆಳಲ್ಪಟ್ಟ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಗತವೈಭವಕ್ಕೆ ಸಾಕ್ಷಿಯಾಗಿದೆ. ಸಾಂಸ್ಕೃತಿಕ ಭವ್ಯಪರಂಪರೆಯ ಭಾರತಕ್ಕೆ ಮತ್ತೊಮ್ಮೆ ವಿಶ್ವ ಮಾನ್ಯತೆ ಸಿಕ್ಕಿದೆ. ಅದರಲ್ಲೂ ಕನ್ನಡಿಗರು ಹೆಮ್ಮೆ ಪಡುವ ಸುದ್ದಿಯೊಂದು ಹೊರಬಿದ್ದಿದೆ.

ಯುನೆಸ್ಕೋ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ.. 16ನೇ ನವೆಂಬರ್ 1945ರಲ್ಲಿ ಸ್ಥಾಪಿತವಾದ ವಿಶ್ವಸಂಸ್ಥೆಯ ಒಂದು ವಿಶಿಷ್ಟವಾದ ಸಂಸ್ಥೆ. ಪ್ರತಿ ವರ್ಷಕ್ಕೊಮ್ಮೆ ಸಭೆ ಸೇರಲಿರುವ ಈ ಸಮಿತಿ ನಾಮಕರಣಗೊಂಡ ತಾಣಗಳನ್ನು ವಿಶ್ವಪರಂಪರಾ ಪಟ್ಟಿಗೆ ಸೇರಿಸಬೇಕೇ ಬೇಡ್ವೇ ಎಂಬ ನಿರ್ಣಯ ತೆಗೆದುಕೊಳ್ಳುತ್ತೆ. ಈ ಬಾರಿ ಸಭೆಯಲ್ಲಿ ಭಾರತೀಯ ವಾಸ್ತುಶಿಲ್ಪದ ಭವ್ಯಪರಂಪರೆಯ ತಾಣವೊಂದನ್ನು ಯುನೆಸ್ಕೋ ವಿಶ್ವಪಾರಂಪರಿಕ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

ಹೊಯ್ಸಳರ ವಾಸ್ತುಶಿಲ್ಪ ಕಲೆಗೆ ವಿಶ್ವ ಪಾರಂಪರಿಕ ಗರಿಮೆ

ಕನ್ನಡ ನಾಡು ಕಲೆಗಳ ಬೀಡು. ಕರ್ನಾಟಕದಲ್ಲಿ ಆಳಿದ ರಾಜವಂಶಗಳು ಕಲೆ, ವಾಸ್ತುಶಿಲ್ಪಕ್ಕೆ ಕೊಟ್ಟಂತಹ ಕೊಡುಗೆ ಅಪಾರವಾದುದು. ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಗಂಗರು, ಹೊಯ್ಸಳರು ನೀಡಿರುವ ವಾಸ್ತುಶಿಲ್ಪದ ಕೊಡುಗೆಗಳು ವಿಶ್ವಮಟ್ಟದಲ್ಲಿ ಕೀರ್ತಿ ತಂದಿವೆ. ಸದ್ಯ ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಕರ್ನಾಟಕದ ಹೊಯ್ಸಳ ದೇವಾಲಯಗಳಾದ ಬೇಲೂರಿನ ಚನ್ನಕೇಶವ ದೇಗುಲ, ಹಳೇಬೀಡಿನ ಹೊಯ್ಸಳೇಶ್ವರ ದೇಗುಲ ಹಾಗೂ ಸೋಮನಾಥಪುರ ಕೇಶವ ದೇಗುಲಗಳು ಸೇರ್ಪಡೆಯಾಗಿವೆ.

ಸೌದಿ ಅರೇಬಿಯಾದಲ್ಲಿ ನಡೆದ ಯುನೆಸ್ಕೋ 45ನೇ ಸಭೆ

ಸೌದಿ ಅರೇಬಿಯಾದಲ್ಲಿ ನಡೆದ ಯುನೆಸ್ಕೋ ವಿಶ್ವ ಪಾರಂಪರಿಕ ಸಮಿತಿಯ 45ನೇ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಸಭೆ ಸೆಪ್ಟೆಂಬರ್ 16 ರಿಂದ ನಡೆಯುತ್ತಿದ್ದು ಭಾರತದ ಹೊಯ್ಸಳ ಮಂದಿರಗಳ ಬಗ್ಗೆ ಚರ್ಚೆ ನಡೆದಿತ್ತು. ಸುದೀರ್ಘ ಚರ್ಚೆ ಬಳಿಕ ಹೊಯ್ಸಳ ಮಂದಿರಗಳನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ ಮಾಡಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಹೊಯ್ಸಳರ ದೇಗುಲಗಳು ಯುನೆಸ್ಕೋ ಪಟ್ಟಿಗೆ ಸೇರಿದ ಭಾರತದ 43ನೇ ತಾಣ ಎನಿಸಿವೆ.

ಅಂದಹಾಗೆ 2022-23ನೇ ಸಾಲಿನಲ್ಲಿ ಹೊಯ್ಸಳರ 3 ದೇವಾಲಯಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸಬೇಕು ಅಂತ ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡಿತ್ತು. ‘ಹೊಯ್ಸಳರ ಪವಿತ್ರ ತಾಣಗಳು’ ಎಂಬ ಹೆಸರಿನನಲ್ಲಿ ನಾಮಿನೇಷನ್ ಸಲ್ಲಿಸಿತ್ತು. 2015ರಿಂದಲೂ ತಾತ್ಕಾಲಿಕ ಪಟ್ಟಿಯಲ್ಲಿದ್ದ 3 ತಾಣಗಳನ್ನು ಸದ್ಯ ಯುನೆಸ್ಕೋ ಪರಿಗಣಿಸಿದೆ. ಇನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಭಾರತದ ಬಿಡ್​ ಅನ್ನು ಹಲವು ದೇಶಗಳು ಬೆಂಬಲಿಸಿವೆ. ಜಪಾನ್, ಇಟಲಿ, ರಷ್ಯಾ,ದಕ್ಷಿಣ ಆಫ್ರಿಕಾ ಸೇರಿ ಹಲವು ದೇಶಗಳು ಭಾರತವನ್ನು ಬೆಂಬಲಿಸಿವೆ.

ಯುನೆಸ್ಕೋ ಪಟ್ಟಿಗೆ ಹೊಯ್ಸಳ ದೇವಾಲಯಗಳು ಸೇರ್ಪಡೆಗೆ ಪ್ರಧಾನಿ ಮೋದಿ ಹರ್ಷ

ಯುನೆಸ್ಕೋ ಪಟ್ಟಿಗೆ ಹೊಯ್ಸಳ ದೇವಾಲಯಗಳು ಸೇರ್ಪಡೆಗೆ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.. ಇದರಿಂದ ಜಾಗತಿಕ ಭೂ ಪಟದಲ್ಲಿ ಹೊಯ್ಸಳರ ಮಂದಿರಗಳು ರಾರಾಜಿಸುತ್ತವೆ. ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತದೆ. ವಿಶ್ವ ಪಾರಂಪರಿಕ ನಿಧಿಯಿಂದ ನೆರವು ದೊರೆಯಲಿದೆ. ವಿಶ್ವದ 600 ಸಾಂಸ್ಕೃತಿಕ ನೆಲೆಗಳು ಈ ಪಟ್ಟಿಯಲ್ಲಿ ಸೇರಿವೆ. ಕ್ಷೇತ್ರದ ಸಂರಕ್ಷಣೆಗೆ ಮಹತ್ವ ದೊರೆಯಲಿದೆ ಅಂತ ಟ್ವೀಟ್ ಮಾಡಿದ್ದಾರೆ.

ಇದು ಖುಷಿಯ ಜೊತೆಗೆ ಹೆಮ್ಮೆಯ ಸಂಗತಿ ಅಂತ ಸಿಎಂ ಟ್ವೀಟ್!

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರುನಾಡಿನ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆಗೊಂಡಿರುವುದು ಖುಷಿಯ ಜೊತೆಗೆ ಹೆಮ್ಮೆಯ ಸಂಗತಿ ಕೂಡ. ನಾಡಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಶ್ವಮಟ್ಟದ ಮೂಲಸೌಲಭ್ಯ ಮತ್ತು ಸುರಕ್ಷತೆ ಒದಗಿಸಲು ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಅಂತ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಯುನೆಸ್ಕೋ ಪಟ್ಟಿ ಸೇರಿದ್ದು ಅತೀವ ಸಂತಸ ತಂದಿದೆ ಎಂದ ಹೆಚ್​​ಡಿಡಿ!

ಬೇಲೂರು, ಹಳೇಬೀಡು ಹೊಯ್ಸಳ ದೇವಾಲಯಗಳು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ನನಗೆ ಅತೀವ ಸಂತಸ ತಂದಿದೆ. ಈ ದೇವಾಲಯಗಳು ಇರುವ ಕರ್ನಾಟಕದ ಹಾಸನ ಜಿಲ್ಲೆಯವನು ಎಂಬುದಕ್ಕೆ ನಾನು ಹೆಮ್ಮೆಪಡುತ್ತೇನೆ ಅಂತ ಟ್ವೀಟ್ ಮೂಲಕ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಮೂರು ದೇಗುಲಗಳು ಯುನೆಸ್ಕೋ ಪಟ್ಟಿಗೆ ಸೇರ್ಪಡೆಯಾಗಿರೋದು ಕರ್ನಾಟಕ ಹಾಗೂ ಎಲ್ಲಾ ಭಾರತೀಯರು ಸಂತೋಷ ಪಡುವ ವಿಚಾರ. ಇದಕ್ಕೆ ಭಾರತೀಯ ಪುರಾತತ್ವ ಇಲಾಖೆ ಹಾಗೂ ಕೇಂದ್ರ ಸರ್ಕಾರಕ್ಕೆ ಕೆಎಸ್​ಓಯುನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಡಾ.ಶಲ್ವಪಿಳ್ಳೈ ಅಯ್ಯಂಗಾರ್​ ಧನ್ಯವಾದ ಸಲ್ಲಿಸಿದ್ದಾರೆ.

ಇನ್ನು ಮೊನ್ನೆ ರವೀಂದ್ರನಾಥ ಟಾಗೋರರ ಶಾಂತಿನಿಕೇತನ ಯುನೆಸ್ಕೋ ಪಟ್ಟಿಗೆ ಸೇರ್ಪಡೆ ಘೋಷಣೆ ಬೆನ್ನಲ್ಲೇ ಹೊಯ್ಸಳ ದೇಗುಲಗಳು ಕೂಡ ಸೇರ್ಪಡೆಗೊಂಡಿದೆ. ಭಾರತದ ಒಟ್ಟು 42 ತಾಣಗಳು ಪಟ್ಟಿಗೆ ಸೇರ್ಪಡೆಯಾದಂತಾಗಿದ್ದು ವಿಶ್ವಮಟ್ಟದಲ್ಲಿ ಭಾರತದ ಹೆಮ್ಮೆಯನ್ನು ಹೆಚ್ಚಿಸಿದೆ.

ಶಾಂತಿನಿಕೇತನ
ಶಾಂತಿನಿಕೇತನ

9ನೇ ಶತಮಾನದಿಂದ 1346ರವರೆಗೆ ಹೊಯ್ಸಳರು ಆಳ್ವಿಕೆ ನಡೆಸಿದ್ದು ಕ್ರಿ.ಶ 1117ರಲ್ಲಿ ಬೇಲೂರಿನ ಚನ್ನಕೇಶವ ದೇಗುಲವನ್ನ ರಾಜ ವಿಷ್ಣುವರ್ಧನನ ಕಾಲದಲ್ಲಿ ನಿರ್ಮಾಣವಾಗಿತ್ತು. ವಿಷ್ಣುವರ್ಧನನ ಕಾಲದಲ್ಲಿ ಆರಂಭವಾಗಿದ್ದ ಹಳೇಬೀಡು ದೇಗುಲ ಬಳಿಕ 1160ರಲ್ಲಿ ವೀರನರಸಿಂಹ ಕಾಲದಲ್ಲಿ ನಿರ್ಮಾಣ ಪೂರ್ಣಗೊಂಡಿತ್ತು. 1258ರಲ್ಲಿ ಸೋಮನಾಥಪುರದಲ್ಲಿರುವ ಕೇಶವ ದೇಗುಲ 3ನೇ ನರಸಿಂಹನ ಕಾಲದಲ್ಲಿ ನಿರ್ಮಾಣವಾಗಿದ್ದ ದೇವಾಲಯ ಆಗಿದ್ದು ಮೈಸೂರು ಜಿಲ್ಲೆಯಲ್ಲಿದೆ. ಈ ಮೂರು ದೇಗುಲಗಳು ಸೂಕ್ಷ್ಮಾತಿಸೂಕ್ಷ್ಮ ಶಿಲ್ಪಕಲೆಯ ಕೌಶಲ್ಯ ಹೊಂದಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಮ್ಮೆಯ ಸಂಗತಿ! ಹೊಯ್ಸಳರ ವಾಸ್ತುಶಿಲ್ಪ ಕಲೆಗೆ ವಿಶ್ವ ಪಾರಂಪರಿಕ ಗರಿಮೆ.. ಯುನೆಸ್ಕೋ ಪಟ್ಟಿಗೆ ಸೇರಿದ ಭಾರತದ 43ನೇ ತಾಣ

https://newsfirstlive.com/wp-content/uploads/2023/09/BELURU.jpg

Load More