newsfirstkannada.com

ನಾಚಿಕೆಯಾಗಬೇಕು ನಿನಗೆ.. ಹೃತಿಕ್ ರೋಷನ್ ವಿರುದ್ಧ ಸಿಡಿದೆದ್ದ ಅಭಿಮಾನಿಗಳು; ಕಾರಣ ಈ ವಿಡಿಯೋ!

Share :

Published August 28, 2024 at 9:24pm

    ಬಾಲಿವುಡ್ ನಟ ಹೃತಿಕ್ ರೋಷನ್ ವಿರುದ್ಧ ಸಿಡಿದೆದ್ದ ಅಭಿಮಾನಿಗಳು

    ಯುವತಿಯನ್ನು ಪ್ರೈವೇಟ್ ಏರ್​ಪೋರ್ಟ್​ಗೆ ಡ್ರಾಪ್ ಮಾಡಲು ಹೋದ ನಟ

    ಬಾಲಿವುಡ್ ಸ್ಟಾರ್ ಹೃತಿಕ್ ಈ ರೀತಿಯ ಬದುಕನ್ನು ಬದುಕುವುದು ಸರಿಯಲ್ಲ

ಮುಂಬೈ: ಹೃತಿಕ್ ರೋಷನ್, ಬಾಲಿವುಡ್​ ಅತ್ಯಂತ ಸ್ಪುರದ್ರೂಪಿ ನಟ. ಗಂಡು ಮಕ್ಕಳಿಗೂ ಕೂಡ ಒಮ್ಮೊಮ್ಮೆ ಅವನ ಮೇಲೆ ಕ್ರಶ್ ಆಗಿ ಬಿಡಬಹುದೆನೋ ಅನ್ನುವಷ್ಟು ಎತ್ತರದ ನಿಲುವು ಮುದ್ದು ಮುಖ, ಕಡೆದಿಟ್ಟಂತಹ ಹುರಿಗೊಳಿಸಿದ ದೇಹ. ಹೃತಿಕ್ ​ರೋಷನ್ ಅಂದ್ರೆ ಕೇವಲ ಹುಡುಗಿಯರ ಫೇವರೆಟ್ ಮಾತ್ರವಲ್ಲ, ಹುಡುಗರಿಗೂ ಕೂಡ ಫೇವರೆಟ್​. ಹೃತಿಕ್​ಗೆ ದೇಶಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಆರಾಧಿಸುವವರು ಇದ್ದಾರೆ. ಆದ್ರೆ ಆ ಒಂದೇ ಒಂದು ಜಾಹೀರಾತು ಮಾಡಿದ್ದಕ್ಕೆ ಹೃತಿಕ್ ವಿರುದ್ಧ ಫ್ಯಾನ್ಸ್​ಗಳು ಸಿಡಿದೆದ್ದಿದ್ದಾರೆ.

ಇದನ್ನೂ ಓದಿ: ತರುಣ್​ ಸುಧೀರ್​ ಪಡೆಯೋಕೆ ನಾನು ತುಂಬಾ ಪುಣ್ಯ ಮಾಡಿದ್ದೆ.. ಸೋನಲ್ ಸ್ವೀಟ್ ಮಾತು; ಏನಂದ್ರು?​

ಇತ್ತೀಚೆಗೆ ಹೃತಿಕ್ ರೋಷನ್ ಪಾನ್ ಮಸಲಾ ಒಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳನ್ನು ಸಿಡಿದೇಳುವಂತೆ ಮಾಡಿದೆ. ಪಾನ್ ಮಸಾಲ ಬ್ರ್ಯಾಂಡ್​ವೊಂದರ  ಪ್ರಾಡಕ್ಟ್ ಪ್ರಮೋಟ್ ಮಾಡುವ ವಿಡಿಯೋವೊಂದು ಇತ್ತೀಚೆಗೆ ಆನ್​​ಲೈನ್​ನಲ್ಲಿ ಹರಿದಾಡುತ್ತಿದೆ. ಇದರಲ್ಲಿ ಹೃತಿಕ್ ರೋಷನ್ ಕೂಡ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಹೃತಿಕ್ ರೋಷನ್ ಟಾಮ್ ಕ್ರೂಸ್​ನ ಟಾಪ್ ಗನ್ ಹಾಗೂ ಮಿಷನ್ ಇಂಪಾಸಿಬಲ್ ಸಿನಿಮಾದ ರೀತಿ ಹುಡುಗಿಯೊಬ್ಬಳು ಇಂಪ್ರೆಸ್ ಆಗುತ್ತಾಳೆ. ಹೃತಿಕ್ ಅವಳನ್ನು ಒಂದು ಪ್ರೈವೇಟ್ ಏರ್​ಪೋರ್ಟ್​ಗೆ ಡ್ರಾಪ್ ಮಾಡಲು ಹೋಗುತ್ತಿರುತ್ತಾನೆ. ಆಗ ಹುಡುಗಿಗೆ ಹೃತಿಕ್ ತನ್ನ ಜೊತೆ ಇಟ್ಟುಕೊಂಡಿರುವ ಸಿಲ್ವರ್ ಕೊಟೆಡ್ ಬಾಕ್ಸ್ ಕದಿಯುವ ಇರಾದೆಯಿದೆ ಎಂದು ಅರಿಯುತ್ತಾನೆ. ಇದೇ ಗಡಿಬಿಡಿಯಲ್ಲಿ ಅವಳು ತನ್ನ ಬ್ಯಾಗ್​ನ್ನು ಹೃತಿಕ್ ಕಾರಿನಲ್ಲಿಯೇ ಮರೆತು ಹೋಗುತ್ತಾಳೆ. ಹೃತಿಕ್ ಅದನ್ನು ಅವಳಿಗೆ ಹಿಂದಿರುಗಿಸಲು ಹೋಗುವಾಗ ಒಂದು ಸ್ಪೂನ್ ಆ ಪಾನ್​ ಮಸಾಲದ ಎಲಕ್ಕಿ ಬಾಯಲ್ಲಿ ಹಾಕಿಕೊಳ್ಳುತ್ತಾನೆ.

ಇದನ್ನೂ ಓದಿ: Bigg Boss Kannada: ಕೊನೆಗೂ ಬಂತು ಬಿಗ್‌ಬಾಸ್‌ ಕಾರು.. ವಿನ್ನರ್ ಕಾರ್ತಿಕ್ ಮಹೇಶ್ ಬಿಗ್ ಅಪ್ಡೇಟ್‌!

ಪಾನ್​ ಮಸಲಾ ಪ್ರಮೋಟ್ ಮಾಡುವ ಈ ವಿಡಿಯೋ ತುಂಬಾ ಇಂಪ್ರೆಸ್ಸಿವ್ ಆಗಿಯೇ ಬಂದಿದೆ. ಆದರೆ ಈ ಜಾಹೀರಾತಿನಲ್ಲಿ ಹೃತಿಕ್ ಕಾಣಿಸಿಕೊಂಡಿದ್ದಕ್ಕೆ ಫ್ಯಾನ್ಸ್​ ಕೆಂಡಾಮಂಡಲರಾಗಿದ್ದಾರೆ. ಹೃತಿಕ್ ಈ ಜಾಹೀರಾತನ್ನು ಮಾಡಲು ಹೇಗೆ ಒಪ್ಪಿಕೊಂಡ್ರು ಅನ್ನೋ ಮಾತುಗಳು, ಪ್ರತಿಕ್ರಿಯೆಗಳು ಆ ಜಾಹೀರಾತಿನ ವಿರುದ್ಧ ಬರುತ್ತಿವೆ. ಹೃತಿಕ್ ಒಬ್ಬ ಅದ್ಭುತ ಇಮೇಜ್ ಇರುವ ನಟ, ಆದ್ರೆ ಈಗ ಅವನು ನನ್ನ ದೃಷ್ಟಿಯಲ್ಲಿ ಬಿದ್ದು ಹೋಗಿದ್ದಾನೆ ಎಂದು ಫ್ಯಾನ್ ಒಬ್ಬ ಕಮೆಂಟ್ ಮಾಡಿದ್ದಾನೆ. ಹೃತಿಕ್ ಈ ರೀತಿಯ ಬದುಕನ್ನು ಬದುಕುವುದು ಸರಿಯಲ್ಲ. ಇದು ನಿಜಕ್ಕೂ ನಾಚಿಕೆಗೇಡಿನ ಕೆಲಸ ಎಂದಿದ್ದಾರೆ. ಇನ್ನೂ ಕೆಲವರು ಏನಿದು ಹೃತಿಕ್, ನೀನು ಇದೆಲ್ಲದಕ್ಕಿಂತ ಉತ್ತಮ ನಟ, ಈ ರೀತಿಯ ಜಾಹೀರಾತು ಬೇಡ ಎಂದು ಸಲಹೆಯನ್ನೂ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಚಿಕೆಯಾಗಬೇಕು ನಿನಗೆ.. ಹೃತಿಕ್ ರೋಷನ್ ವಿರುದ್ಧ ಸಿಡಿದೆದ್ದ ಅಭಿಮಾನಿಗಳು; ಕಾರಣ ಈ ವಿಡಿಯೋ!

https://newsfirstlive.com/wp-content/uploads/2024/08/Hritik-Roshan.jpg

Load More