newsfirstkannada.com

ಇಂದು CSK vs GT ಅಗ್ನಿಪರೀಕ್ಷೆ; ಎರಡು ತಂಡದವರಿಗೂ ಕಾಡ್ತಿದೆ ಇವಿಷ್ಟು ಸಮಸ್ಯೆಗಳು!

Share :

28-05-2023

    ಮಿಸ್ಟರ್​ ಕೂಲ್​​ಗೆ ಮಿಡಲ್ ಆರ್ಡರ್​​ದ್ದೇ ಟೆನ್ಶನ್​...!

    ಬೌಲಿಂಗ್​ನಲ್ಲಿ ತ್ಯಾಗಮಯಿ ತುಷಾರ್​..!

    ಮತ್ತಷ್ಟು ಸೌಂಡ್ ಮಾಡಬೇಕು ಧೋನಿ ಬ್ಯಾಟ್

ಇಂದು ಗೆಲ್ಲೋ ಹಠಕ್ಕೆ ಬಿದ್ದಿರೋ ಗುಜರಾತ್ ಟೈಟನ್ಸ್​ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ಗೆ, ಕೆಲವೊಂದಿಷ್ಟು  ನ್ಯೂನ್ಯತೆಗಳು ಕಾಡ್ತಿವೆ. ಇವೇ ಸಮಸ್ಯೆಗಳು ಫೈನಲ್ಸ್​ನಲ್ಲಿ ಚಾಂಪಿಯನ್ ಪಟ್ಟದ ಕನಸನ್ನೇ ಚಿದ್ರಗೊಳಿಸುವ ಆತಂಕಕ್ಕೆ ದೂಡಿವೆ. ಹಾಗಾದ್ರೆ, ಫೈನಲಿಸ್ಟ್​​ಗಳಿಗೆ ಕಾಡ್ತಿರೋ ಸಮಸ್ಯೆಯಾದರೂ ಏನು..?

ಐಪಿಎಲ್​ನ ಲೀಗ್​ ಸ್ಟೇಜ್​ನಲ್ಲಿ ಘಟಾನುಘಟಿ ತಂಡಗಳನ್ನೇ ಬಗ್ಗುಬಡೆದ ಚೆನ್ನೈ ಹಾಗೂ ಗುಜರಾತ್​, ಪ್ಲೇಆಫ್​ನಲ್ಲೇ ದೈತ್ಯರನ್ನೇ ಸಂಹಾರ ಮಾಡಿವೆ. ಆ ಮೂಲಕ ಫೈನಲ್ಸ್​ಗೆ ಗ್ರ್ಯಾಂಡ್ ಎಂಟ್ರಿ ನೀಡಿರೋ ಯೆಲ್ಲೋ ಆರ್ಮಿ ಹಾಗೂ ಗುಜರಾತ್ ಟೈಟನ್ಸ್​, ಕಪ್​ ಗೆಲ್ಲೋಕೆ ಜಸ್ಟ್​ ಒಂದೇ ಒಂದು ಹೆಜ್ಜೆ ಬಾಕಿಯಿದೆ. ಆದ್ರೆ, ಈ ಹೈವೋಲ್ಟೇಜ್​ ಮ್ಯಾಚ್​ನಲ್ಲೇ ಈ ಉಭಯ ತಂಡಗಳಿಗೆ ಕೆಲ ಸಮಸ್ಯೆಗಳು ತಲೆದೂರಿದೆ. ಈ ಕೊರತೆಗಳೇ ಇಂದು ಚಾಂಪಿಯನ್​ ಪಟ್ಟದ ಕನಸು ಭಗ್ನಗೊಳಿಸುವ ಆತಂಕಕ್ಕೆ ದೂಡಿದೆ.

ಮಿಸ್ಟರ್​ ಕೂಲ್​​ಗೆ ಮಿಡಲ್ ಆರ್ಡರ್​​ದ್ದೇ ಟೆನ್ಶನ್​…!

ಹೌದು! ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡಿರೋ ಚೆನ್ನೈಗೆ, ಮಿಡಲ್ ಆರ್ಡರ್​ ಬ್ಯಾಟರ್​​ಗಳದ್ದೇ ಹೆಚ್ಚು ಚಿಂತೆಯಾಗಿದೆ. ಯಾಕಂದ್ರೆ, ಚೆನ್ನೈ ಆರಂಭಿಕರ ಅಬ್ಬರದ ನಡುವೆ ಮಿಡಲ್ ಆರ್ಡರ್​ಗೆ ಟೂರ್ನಿಯಲ್ಲಿ ಹೆಚ್ಚು ಆವಕಾಶವೇ ಸಿಕ್ಕಿಲ್ಲ. ಇದಕ್ಕೆ ಕಾರಣ ರುತುರಾಜ್, ಡಿವೋನ್ ಕಾನ್ವೆ, ಶಿವಂ ದುಬೆ ಹೆಚ್ಚೆಚ್ಚು ಕ್ರೀಸ್​ನಲ್ಲಿ ಕಳೆದಿದ್ದೇ ಆಗಿದೆ.

ಮಿಡಲ್ ಆರ್ಡರ್​ಗೆ ಆಗೊಮ್ಮೆ ಈಗೊಮ್ಮೆ ಚಾನ್ಸ್​ ಸಿಕ್ಕರೂ, ಪೂರ್ಣ ಪ್ರಮಾಣ ತಾಕತ್ತು ತೋರಿಸಲು ಆಗಿಲ್ಲ. ಆರಂಭದಲ್ಲಿ ಇಂಪ್ಯಾಕ್ಟ್​ ತೋರಿದ್ದ ಅಜಿಂಕ್ಯಾ, ಈಗ ಫುಲ್ ಸೈಲೆಂಟ್ ಆಗಿದ್ದಾರೆ. ಅಂಬಾಟಿ ಅಬ್ಬರ ನಡೆಯುತ್ತಿಲ್ಲ. ಮೋಯಿನ್ ಮ್ಯಾಜಿಕ್ ಕೂಡ ಮಾಯವಾಗಿದೆ. ಹೀಗಾಗಿ ಇವರು ಇಂದು ಅಗ್ನಿಪರೀಕ್ಷೆಗೆ ರೆಡಿಯಾಗಿರಬೇಕಿದೆ.

ಬೌಲಿಂಗ್​ನಲ್ಲಿ ತ್ಯಾಗಮಯಿ ತುಷಾರ್​..!

ಚೆನ್ನೈ ಪರ ತುಷಾರ್ ದೇಶಪಾಂಡೆ ಟಾಪ್ ವಿಕೆಟ್ ಟೇಕರ್ ಆಗಿದ್ದಾರೆ ನಿಜ. ಆದ್ರೆ, ರನ್ ನೀಡೋದ್ರಲ್ಲಿ ತುಷಾರ್ ದೇಶಪಾಂಡೆ ತ್ಯಾಗಮಯಿ ಆಗ್ತಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಶೈನ್ ಆಗಬೇಕಿದ್ದ ದೇಶಪಾಂಡೆ, ತಂಡಕ್ಕೆ ಟ್ರಬಲ್ ಆಗ್ತಿದ್ದಾರೆ. ಇದು ಚೆನ್ನೈಗೆ ನುಂಗಲಾರದ ತುತ್ತಾಗಿದೆ. ಇಷ್ಟೇ ಅಲ್ಲ.! ರವೀಂದ್ರ ಜಡೇಜಾರ ಇನ್​ಕನ್ಸಿಸ್ಟೆನ್ಸಿ, ಮತೀಶಾ ಪತಿರಣರ ಎಕ್ಸ್​ಟ್ರಾ  ರನ್ಸ್​ ತಂಡಕ್ಕೆ ಆಪತ್ತೇ ಆಗಲಿದೆ. ಹೀಗಾಗಿ ದೀಪಕ್ ಚಹರ್ ಮಾದರಿ ಶೈನ್ ಆಗಬೇಕಾದ ಅನಿವಾರ್ಯತೆ ಇವರಿಗೆ ಇದ್ದೇ ಇದೆ.

ಮತ್ತಷ್ಟು ಸೌಂಡ್ ಮಾಡಬೇಕು ಧೋನಿ ಬ್ಯಾಟ್

ನಾಯಕನಾಗಿ ಸ್ಮಾರ್ಟ್​ ಆಗಿ ಕೆಲ್ಸ ಮುಗಿಸ್ತಿರೋ ಧೋನಿ, ವಿಕೆಟ್ ಹಿಂದೆಯೋ ಮ್ಯಾಜಿಕ್ ಮಾಡ್ತಿದ್ದಾರೆ. ಆದ್ರೆ, ಲಾಸ್ಟ್​ ಮಿನಿಟ್​ನಲ್ಲಿ ಅಂಗಳಕ್ಕಿಳಿಯೋದು ನಿಜಕ್ಕೂ ಚೆನ್ನೈಗೆ ಡಿಸ್ ಅಡ್ವಾಂಟೇಜ್​.. ಯಾಕಂದ್ರೆ, ಧೋನಿಗಿಂತ ಮುಂದೆ ಕ್ರೀಸ್​ ಗಿಳಿಯೋ ಅಂಬಾಟಿ ರಾಯುಡು ಭಾರೀ ನಿರಾಸೆ ಮೂಡಿಸ್ತಿದ್ದಾರೆ. ಹೀಗಾಗಿ ಈ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್​​ಗೆ ಇಳಿದ್ರೆ, ಚೆನ್ನೈಗೆ ಮತ್ತಷ್ಟು ಅಡ್ವಾಂಟೇಜ್ ಆಗೋದು ಪಕ್ಕ.

ಗಿಲ್​ ಬಿಟ್ರೆ.. ಕ್ರೀಸ್​ನಲ್ಲಿ ನಿಲ್ಲಲ್ಲ ಉಳಿದ್ಯಾರು..!

ಚೆನ್ನೈ ಟಾಪ್​ ತ್ರಿ ಮೇಲೆ ಡಿಪೆಂಡ್ ಆದಂತೆಯೇ, ಗುಜರಾತ್​ ಕೂಡ ಗಿಲ್ ಮೇಲೆಯೇ ಹೆಚ್ಚು ಅವಲಂಬನೆ ಆಗಿದೆ. ಇನ್​ಫ್ಯಾಕ್ಟ್​_ ಆಗೊಮ್ಮೆ ಈಗೊಮ್ಮೆ ವೃದ್ದಿಮಾನ್ ಸಾಹ, ವಿಜಯ್ ಶಂಕರ್,  ಸಾಯಿ ಸುದರ್ಶನ ಬಿಟ್ಟರೆ, ಮಿಕ್ಕವರ ಪರ್ಫಾಮೆನ್ಸ್ ಅಷ್ಟಕ್ಕೆ ಅಷ್ಟೇ.. ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ, ಗುಜರಾತ್ ತಂಡದಲ್ಲಿರೋ ಬಿಗ್ ಮ್ಯಾಚ್​ ವಿನ್ನರ್​ಗಳಾದ ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಅದರಲ್ಲೂ ನಾಯಕ ಹಾರ್ದಿಕ್, ನಾಯಕತ್ವಕ್ಕೆ ಮಾತ್ರವೇ ಸಿಮೀತವಾಗ್ತಿರೋದು ಗುಜರಾತ್​ಗೆ ಪೆಟ್ಟು ನೀಡಿದರೂ ಅಚ್ಚರಿ ಇಲ್ಲ.

ದುಬಾರಿಯಾಗ್ತಿದ್ದಾರೆ ಶಮಿ-ರಶೀದ್..!

ಹೌದು! ಬೌಲಿಂಗ್​ನಲ್ಲಿ ಶಮಿ ಹಾಗೂ ರಶೀದ್ ಖಾನ್​ರನ್ನೇ ನಂಬಿಕೊಂಡಿರುವ ಗುಜರಾತ್​ಗೆ, ಈಗ ಅವರೇ ವಿಲನ್ ಆಗೋ ಸಾಧ್ಯತೆ ಇದೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್.. ಲೀಗ್ ಸ್ಟೇಜ್​​​​​​​​​​​​​​ನ ಕೊನೆ ಪಂದ್ಯದ ಬಳಿಕ ಇವರು ನೀಡ್ತಿರೋ ಪರ್ಫಾಮೆನ್ಸ್. ಅದರಲ್ಲೂ ಏಕಾನಮಿ ಕಾಯ್ದುಕೊಂಡಿದ್ದ ಪರ್ಪಲ್ ಕ್ಯಾಪ್ ಹೀರೋ ಶಮಿ, ಕಳೆದ್ಮೂರು ಪಂದ್ಯಗಳಿಂದ ದಂಡನೆಗೆ ಒಳಗಾಗ್ತಿದ್ದಾರೆ. ಇವರ ಹಾದಿಯಲ್ಲೇ ರಶೀದ್ ಖಾನ್ ಹೆಜ್ಜೆ ಹಾಕ್ತಿದ್ದಾರೆ. ಇದು ಇಂದಿನ ಪಂದ್ಯದಲ್ಲೂ ಮುಂದುವರೆದ್ರೆ,  ಹಾಲಿ ಚಾಂಪಿಯನ್ಸ್​ ಮಾಜಿಗಳು ಆಗೋದು ಕನ್ಫರ್ಮ್..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು CSK vs GT ಅಗ್ನಿಪರೀಕ್ಷೆ; ಎರಡು ತಂಡದವರಿಗೂ ಕಾಡ್ತಿದೆ ಇವಿಷ್ಟು ಸಮಸ್ಯೆಗಳು!

https://newsfirstlive.com/wp-content/uploads/2023/05/CSK-vs-GT-2.jpg

Load More