newsfirstkannada.com

ಟೀಂ ಇಂಡಿಯಾದ ಈ ಬ್ಯಾಟ್ಸ್​ಮನ್​ ಆಸಿಸ್​ಗೆ ಪಾಲಿಗೆ ವಿಲನ್​! ಯಾಕಂದ್ರೆ? ಈ ಸ್ಟೋರಿ ಓದಿ

Share :

06-06-2023

  ಅದೊಂದು ಭಯದಲ್ಲಿದ್ದಾರೆ ಆಸಿಸ್​ ಆಟಗಾರರು

  ಈ ಆಟಗಾರನ ಮೇಲಿದೆ ಕಾಂಗರೂಗಳ ಕಣ್ಣು

  ಯಾರಾಗ್ತಾರೆ ಟೀಂ ಇಂಡಿಯಾದ ಗೇಮ್​ ಚೇಂಜರ್​

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಗೆಲ್ಲೋದ್ಯಾರು ಅನ್ನುವುದರ ಜೊತೆ ಜೊತೆಗೆ ಗೇಮ್​ ಚೈಂಜರ್​​ ಯಾರಾಗ್ತಾರೆ ಅನ್ನೋ ಚರ್ಚೆ ಜೋರಾಗಿದೆ. ಈ ಪ್ರಶ್ನೆಗೆ ನಿರೀಕ್ಷೆಯಂತೆ ವಿರಾಟ್​ ಕೊಹ್ಲಿ ಹೆಸರನ್ನ ಬಹುತೇಕರು ಹೇಳ್ತಿದ್ದಾರೆ. ಆದ್ರೆ, ಇನ್ನು ಕೆಲವರು ಅಚ್ಚರಿಯೆಂಬಂತೆ ರವೀಂದ್ರ ಜಡೇಜಾ ಹೆಸರನ್ನ ಹೇಳ್ತಿದ್ದಾರೆ. ಹಾಗೇ ಹೇಳ್ತಿರೋದಕ್ಕೆ ಕಾರಣವೂ ಇದೆ. ಏನ್​ ಕಾರಣ? ಈ ಸ್ಟೋರಿ ಓದಿ.

ಅಲ್ಟಿಮೆಟ್​ ಟೆಸ್ಟ್​ ಕದನಕ್ಕೆ ಕಠಿಣ ಅಭ್ಯಾಸ ನಡೆಸ್ತಿರೋ ಟೀಮ್​ ಇಂಡಿಯಾ ಚಾಂಪಿಯನ್​ ಪಟ್ಟಕ್ಕೇರೋ ರಣೋತ್ಸಾಹದಲ್ಲಿದೆ. ಕಳೆದ ಬಾರಿ ಜಸ್ಟ್​ ಮಿಸ್​​ ಆದ ಮೆಸ್​ ಅನ್ನ ಈ ಬಾರಿ ಗೆದ್ದೇ ಗೆಲ್ಲಬೇಕೆಂದು ಪಣ ತೊಟ್ಟಿದೆ. ಈ ಮೂಲಕ ಐಸಿಸಿ ಚಾಂಪಿಯನ್​ಶಿಪ್​ ಗೆಲುವಿನ ಬರಕ್ಕೆ ಬ್ರೇಕ್​ ಹಾಕೋ ಲೆಕ್ಕಾಚಾರದಲ್ಲಿದೆ.

ಯಾರಾಗ್ತಾರೆ ಟೀಮ್ಇಂಡಿಯಾ ಗೇಮ್ಚೇಂಜರ್.?

ಅಸಲಿ ಫೈಟ್​ ಆರಂಭಕ್ಕೂ ಮುನ್ನವೇ ಪ್ರಿಡಿಕ್ಷನ್​ಗಳು ಜೋರಾಗಿವೆ. ಯಾರು ಗೆಲ್ತಾರೆ ಅನ್ನೋದ್ರ ಜೊತೆಗೆ ಗೇಮ್​ ಚೇಂಜರ್​ ಯಾರಾಗ್ತಾರೆ ಅನ್ನೋ ಪ್ರಶ್ನೆಯೂ ಸಖತ್​​ ಸದ್ದು ಮಾಡ್ತಿದೆ. ವಿರಾಟ್​ ಕೊಹ್ಲಿಯೇ ಫೈನಲ್​ ಫೈಟ್​​ನಲ್ಲಿ ಅಬ್ಬರಿಸೋದು ಅಂತಾ ಹಲವರು ಹೇಳ್ತಿದ್ರೆ, ಆಲ್​​ರೌಂಡರ್​ ಜಡೇಜಾ ಪಂದ್ಯಕ್ಕೆ ಟ್ವಿಸ್ಟ್​​ ಕೊಡ್ತಾರೆ ಅಂತಾ ಇನ್ನು ಕೆಲವರು ಹೇಳ್ತಿದ್ದಾರೆ.

ಸಾಲಿಡ್ಫಾರ್ಮ್ನಲ್ಲಿ ಕಿಂಗ್ಕೊಹ್ಲಿ, ಆಸಿಸ್​​ಗೆ ನಡುಕ.!

ಕಳೆದ ಕೆಲ ತಿಂಗಳಿನಿಂದ ಕಿಂಗ್​ ಕೊಹ್ಲಿಯ ಮೇನಿಯಾ ನಡೀತಿದೆ. ಏಷ್ಯಾಕಪ್​ನಲ್ಲಿ ಕೊಹ್ಲಿ ಸೆಂಚುರಿ ಸಿಡಿಸಿದ್ದೇ ಸಿಡಿಸಿದ್ದು.., ಟಿ20, ಏಕದಿನ, ಟೆಸ್ಟ್​ ಮೂರೂ ಮಾದರಿಯಲ್ಲಿ ದರ್ಭಾರ್ ನಡೆಸ್ತಿದ್ದಾರೆ. ಸೆಂಚುರಿ ಮೇಲೆ ಸೆಂಚುರಿ ಸಿಡಿಸಿ ಘರ್ಜಿಸಿರುವ ಕೊಹ್ಲಿ, ಇದೀಗ ವರ್ಲ್ಡ್​ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲೂ ಆರ್ಭಟಿಸೋ ವಿಶ್ವಾಸದಲ್ಲಿದ್ದಾರೆ. ಕೊಹ್ಲಿಯ ಫಾರ್ಮ್​ ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ ಆತ್ಮಿವಿಶ್ವಾಸ ಹೆಚ್ಚಿಸಿದ್ರೆ, ಆಸಿಸ್​ ಕ್ಯಾಂಪ್​ನಲ್ಲಿ ನಡುಕ ಹುಟ್ಟುವಂತೆ ಮಾಡಿದೆ.

ಬಿಗ್​​ ಸ್ಟೇಜ್, ಹೈ ಪ್ರೆಶರ್​​.. ಕೊಹ್ಲಿ ಡೋಂಟ್​​ಕೇರ್​​.!

ವಿರಾಟ್​​ ಕೊಹ್ಲಿ ಸುಮ್​ ಸುಮ್ನೆ ಕಿಂಗ್​ ಕೊಹ್ಲಿ ಅನ್ನೋ ಬಿರುದುಕೊಂಡಿಲ್ಲ.. ಇಡೀ ವಿಶ್ವದ ಮೂಲೆ ಮೂಲೆಯಲ್ಲೂ ರನ್​​ ಕೊಳ್ಳೆ ಹೊಡೆದು, ಘಟಾನುಘಟಿ ಬೌಲರ್​ಗಳನ್ನ ಚಿಂದಿ ಉಡಾಯಿಸಿದ ಮೇಲೆ ಈ ಫೇಮ್​ ಬಂದಿರೋದು. ಅದ್ರಲ್ಲೂ ಒತ್ತಡದ ಸಂದರ್ಭದಲ್ಲಿ, ಬಿಗ್​​ಸ್ಟೇಜ್​​, ಬಿಗ್​ ಟೀಮ್​ಗಳ ಎದುರು ಆಡೋದಂದ್ರೆ ಕೊಹ್ಲಿಗೆ ಅದೇನೊ ಖುಷಿ. ಇದೀಗ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಸಮರಕ್ಕೂ ಮುನ್ನವೂ ಅದೇ ಕಾನ್ಫಿಡೆನ್ಸ್​ನಲ್ಲಿ ಕೊಹ್ಲಿ ಇದಾರೆ.

ಆಲ್​​​ರೌಂಡ್​​ಆಟಕ್ಕೆ ಸರ್.ಜಡೇಜಾ ರೆಡಿ..!

ಕಿಂಗ್​ ಕೊಹ್ಲಿ ಮಾತ್ರವಲ್ಲ, ತನ್ನ ಆಲ್​​ರೌಂಡ್​ ಆಟದಿಂದಲೇ ಮೋಡಿ ಮಾಡೋಕೆ ರವೀಂದ್ರ ಜಡೇಜಾ ಕೂಡ ಸಜ್ಜಾಗಿದ್ದಾರೆ. ಬ್ಯಾಟ್ಸ್​ಮನ್​ ಆಗಿ ಸಿಂಗಲ್​ ಹ್ಯಾಂಡೆಡ್ಲಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಜಡೇಜಾಗಿದೆ. ಸಂದರ್ಭವನ್ನ ಅರ್ಥಮಾಡಿಕೊಂಡು ತಾಳ್ಮೆ ಹಾಗೂ ಎಚ್ಚರಿಕೆಯಿಂದ ಇನ್ನಿಂಗ್ಸ್​ ಮಾಡಬಲ್ಲ ಟ್ಯಾಲೆಂಟ್​​ ಜಡ್ಡುಗಿದೆ. ಇನ್ನು, ಬೌಲಿಂಗ್​ನಲ್ಲೂ ಇಂತಾ ಘಟಾನುಘಟಿಗಳನ್ನ ಖೆಡ್ಡಾಗೆ ಕೆಡವೋದ್ರಲ್ಲಿ ಜಡ್ಡು ಪಂಟರ್​. ಅದ್ರಲ್ಲೂ, ಸೆಟಲ್​ ಆದ ಬ್ಯಾಟ್ಸ್​ಮನ್​ಗಳನ್ನ ಬಲಿ ಹಾಕಿ ಬ್ರೇಕ್​ ಥ್ರೂ ನೀಡೋದಕ್ಕೆ ಜಡೇಜಾ ಬೆಸ್ಟ್​​ ಆಯ್ಕೆಯಾಗಲಿದ್ದಾರೆ.

ಕಾಂಗರೂಗಳ ಪಾಲಿಗೆ ಜಡೇಜಾನೇ ವಿಲನ್.!

ರವೀಂದ್ರ ಜಡೇಜಾ.. ಆಸ್ಟ್ರೇಲಿಯನ್ನರ ಪಾಲಿಗೆ ಒಬ್ಬ ಕ್ರಿಕೆಟರ್​ ಥರಾ ಅನ್ನಿಸ್ತಾನೆ.. ಒಬ್ಬ ಮ್ಯಾಜಿಶಿಯನ್​ ಅನ್ನಿಸಿ ಬಿಟ್ಟಿದ್ದಾರೆ. ಅಷ್ಟರಮಟ್ಟಿಗೆ ತನ್ನ ಆಟದಿಂದಲೇ ಜಡ್ಡು, ಆಸಿಸ್​ ಪಡೆಯನ್ನ ದಂಗು ಬಡಿಸಿದ್ದಾರೆ. ಬ್ಯಾಟಿಂಗ್​, ಬೌಲಿಂಗ್​ ಬಿಡಿ.. ಜಡೇಜಾ ಫೀಲ್ಡಿಂಗ್​​ ನಿಂತ ಕಡೆ ಬಾಲ್​ ಹೋದ್ರೆ, ರನ್​ ಓಡೋಕು ಕಾಂಗರೂ ಪಡೆ ಹಿಂದೆ ಮುಂದೆ ನೋಡುತ್ತೆ. ಯಾಕೇ ಅಂತಾ ನಿಮಗೆ ಡೌಟ್​ ಇದ್ರೆ, ಸ್ಟೀವ್​ ಸ್ಮಿತ್​ ಮಕ್ಕರ್​ ಆದ ಪರಿಯನ್ನ ನೀವೆ ನೋಡಿ.

ವಿರಾಟ್​ ಕೊಹ್ಲಿ –  ರವೀಂದ್ರ ಜಡೇಜಾ.. ಇವರಿಬ್ರೂ, ತಮ್ಮ ರೆಡ್​ ಹಾಟ್​ ಫಾರ್ಮ್​ನಿಂದಲೇ ಆಸಿಸ್​​ ಕ್ಯಾಂಪ್​ನಲ್ಲಿ ನಡುಕ ಹುಟ್ಟಿಸಿದ್ದಾರೆ. ಇವರಿಬ್ಬರೂ ಫೈನಲ್​ ಫೈಟ್​ನಲ್ಲಿ ಕಣಕ್ಕಿಳಿಯೋದು ಕನ್​ಫರ್ಮ್​.! ಆದ್ರೆ, ಮ್ಯಾಚ್​​ ವಿನ್ನರ್​ ಯಾರಾಗ್ತಾರೆ ಅನ್ನೋದೇ ಸದ್ಯ ಕುತೂಹಲ ಹುಟ್ಟುಹಾಕಿರೋ ವಿಚಾರವಾಗಿದೆ. ಅದೇನೆ ಇರಲಿ.. ಅಲ್ಟಿಮೇಟ್​​ ಫೈಟ್​ನಲ್ಲಿ ಇಬ್ಬರೂ ಅಲ್ಟಿಮೇಟ್​ ಪ್ರದರ್ಶನ ನೀಡಲಿ.. ಭಾರತ ಚಾಂಪಿಯನ್​ ಪಟ್ಟಕ್ಕೇರಲಿ ಅನ್ನೋದು ಎಲ್ಲರ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಂ ಇಂಡಿಯಾದ ಈ ಬ್ಯಾಟ್ಸ್​ಮನ್​ ಆಸಿಸ್​ಗೆ ಪಾಲಿಗೆ ವಿಲನ್​! ಯಾಕಂದ್ರೆ? ಈ ಸ್ಟೋರಿ ಓದಿ

https://newsfirstlive.com/wp-content/uploads/2023/06/Team-India-1.jpg

Load More