newsfirstkannada.com

11 ತಿಂಗಳು ಮಗು, ಗಂಡನ ಬಿಟ್ಟು ಪ್ರಿಯಕರನೊಂದಿಗೆ ಪತ್ನಿ ಫ್ರೀ ಬಸ್​​ನಲ್ಲಿ ಪರಾರಿ.. ಪತಿ ಗಾಬರಿ..!

Share :

15-06-2023

    ಫ್ರೀ ಬಸ್​ನಲ್ಲಿ ದಿನದಿಂದ ದಿನಕ್ಕೆ ಅಚ್ಚರಿ ಸುದ್ದಿಗಳು ಕೇಳಿ ಬರುತ್ತಿವೆ

    ಮಹಿಳೆಯನ್ನು ಹುಡುಕಿಕೊಂಡು ಪುತ್ತೂರು ತಲುಪಿದ ಕುಟುಂಬಸ್ಥರು

    ಈ ಮಹಿಳೆಗೆ ಮಗು ಬಿಟ್ಟು ಹೋಗಲು ಮನಸಾದರೂ ಹೇಗೆ ಬಂತು?

ಬೆಳಗಾವಿ: ಆಧಾರ್ ಲಿಂಕ್ ಮಾಡಿಸಿ ಬರುತ್ತೇನೆಂದು ಗಂಡನಿಗೆ ಹೇಳಿ ಹೋದ ಪತ್ನಿ ಸರ್ಕಾರದ ಶಕ್ತಿ ಯೋಜನೆಯ ಬಸ್​ನಲ್ಲಿ ಹುಬ್ಬಳ್ಳಿಯಿಂದ ಪುತ್ತೂರಿಗೆ ಬಂದು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಪ್ರಿಯಕರನೊಂದಿಗೆ ಪರಾರಿಯಾಗಿರುವ ವಿವಾಹಿತ ಮಹಿಳೆಯು ತನ್ನ 11 ತಿಂಗಳ ಮಗವನ್ನು ಬಿಟ್ಟು ಹೋಗಿದ್ದಾಳೆ. ಬಸ್​ನಲ್ಲಿ ತನ್ನ ಆಧಾರ್ ಕಾರ್ಡ್ ತೋರಿಸಿ ಹುಬ್ಬಳ್ಳಿಯಿಂದ ಪುತ್ತೂರಿಗೆ ಬಂದಿದ್ದಾಳೆ. ಪತ್ನಿ ಕಾಣೆಯಾದ ಸಂಬಂಧ ಗಂಡನ ಮನೆಯವರು ಹಾಗೂ ಆಕೆಯ ತವರು ಮನೆಯವರು ಹುಡುಕಿಕೊಂಡು ಪುತ್ತೂರಿಗೆ ಬಂದಿದ್ದಾರೆ. ಇವರು ಬಂದಿದ್ದನ್ನು ತಿಳಿದುಕೊಂಡ ಜೋಡಿ ಬೇರೆಡೆಗೆ ಪರಾರಿಯಾಗಿದೆ.

ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಬದಿನಾರ್ ಅವರು ಇಬ್ಬರನ್ನು ಹುಡುಕಿಕೊಂಡು ಬಂದ ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದಾರೆ. ಟವರ್ ಲೊಕೇಶನ್ ಮೂಲಕ ಪತ್ತೆ ಹಚ್ಚಿದಾಗ ಪುತ್ತೂರಿನಿಂದ ಸಿದ್ಧಕಟ್ಟೆಗೆ ಜೋಡಿ ಪರಾರಿಯಾದ ಮಾಹಿತಿ ಸಿಕ್ಕಿದೆ. ಪ್ರಿಯಕರ ಕೋಡಿಂಬಾಡಿ ಸಮೀಪದಲ್ಲಿ ತೋಟದ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

11 ತಿಂಗಳು ಮಗು, ಗಂಡನ ಬಿಟ್ಟು ಪ್ರಿಯಕರನೊಂದಿಗೆ ಪತ್ನಿ ಫ್ರೀ ಬಸ್​​ನಲ್ಲಿ ಪರಾರಿ.. ಪತಿ ಗಾಬರಿ..!

https://newsfirstlive.com/wp-content/uploads/2023/06/HUBBALLI_MISSING_WOMAN_1.jpg

Load More