Advertisment

ಹುಬ್ಬಳ್ಳಿಯಲ್ಲಿ ಪೊಲೀಸ್ ಗುಂಡಿನ ಸದ್ದು; ಇಬ್ಬರು ನಟೋರಿಯಸ್ ದರೋಡೆಕೋರರಿಗೆ ಗುಂಡೇಟು​

author-image
Ganesh
Updated On
ಹುಬ್ಬಳ್ಳಿಯಲ್ಲಿ ಪೊಲೀಸ್ ಗುಂಡಿನ ಸದ್ದು; ಇಬ್ಬರು ನಟೋರಿಯಸ್ ದರೋಡೆಕೋರರಿಗೆ ಗುಂಡೇಟು​
Advertisment
  • ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದವ್ರ ಕಾಲಿಗೆ ಗುಂಡೇಟು
  • ಕಾರು ಅಡ್ಡಗಟ್ಟಿ ದರೋಡೆ ಮಾಡಿದ್ದ ಭರತ್ ಮತ್ತು ಫಾರೂಕ್
  • ನಿನ್ನೆ ಸ್ಥಳ ಮಹಜರು ವೇಳೆ ಪೊಲೀಸ್ರ ಮೇಲೆ ಹಲ್ಲೆಗೆ ಯತ್ನ

ಹುಬ್ಬಳ್ಳಿ-ಧಾರವಾಡದಲ್ಲಿ ಗುಂಡಿನ ಸದ್ದು ಕೇಳಿಸಿದೆ. ಪೊಲೀಸ್ರಿಗೆ ಬೇಕಾಗಿದ್ದ ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಫೈರಿಂಗ್ ಮಾಡ್ಲಾಗಿದೆ. ಫಾರೂಕ್, ಭರತ್ ಗುಂಡೇಟು ತಿಂದವರು.

Advertisment

ಪೊಲೀಸರ ಮೇಲೆ ಹಲ್ಲೆಗೆ ಯತ್ನ
ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸ್ರಿಗೆ ಬೇಕಾಗಿದ್ದ ಖತರ್ನಾಕ್‌ ದರೋಡೆಕೋರರ ಬಂಧನದ ವೇಳೆ ಹೈಡ್ರಾಮಾ ನಡೆದಿದೆ. ಇಷ್ಟು ದಿನ ಪೊಲೀಸ್ರಿಗೆ ಚಳ್ಳೆಹಣ್ಣು ತಿನ್ನಿಸ್ತಿದ್ದ ಇವ್ರ ನಸೀಬು ಕೆಟ್ಟಿತ್ತು. ಖಾಕಿ ಮೇಲೆ ಹಲ್ಲೆ ಯತ್ನಿಸಿ ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದಾರೆ. ಇಬ್ಬರು ಅಂತಾರಾಜ್ಯ ದರೋಡೆಕೋರರ ಮೇಲೆ ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸ್ರು ಫೈರಿಂಗ್ ಮಾಡಿದ್ದಾರೆ.

ಇದನ್ನೂ ಓದಿ:ಅಂದು ಪ್ರತಿಷ್ಠಿತ ಕಂಪನಿಯಲ್ಲಿ ಟೆಕ್ಕಿ, ಇಂದು ಭಿಕ್ಷುಕ.. ಬೆಂಗಳೂರಲ್ಲಿ ಒಂದು ಕರುಣಾಜನಕ ಸ್ಟೋರಿ! Video

ನಟೋರಿಯಸ್ ಫಾರೂಕ್ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ 17ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಅಲ್ಲದೇ ಹೊರ ರಾಜ್ಯದಲ್ಲೂ ಕೇಸ್​ಗಳಿವೆ. ಮತ್ತೊಬ್ಬ ಭರತ್ ಮೇಲೂ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಹಲವು ಕೇಸ್‌ಗಳಲ್ಲಿ ಬೇಕಾಗಿದ್ದ ಇವ್ರೀಗ ಪೊಲೀಸ್ರ ಅತಿಥಿಗಳಾಗಿದ್ದಾರೆ.

Advertisment

ರಾಬರ್ಸ್ ಕಾಲಿಗೆ ಗುಂಡೇಟು!
ಭರತ್ ಹಾಗೂ ಫಾರೂಕ್ ಮೂಲತಃ ಮಂಗಳೂರು ಮೂಲದವ್ರು. ಕಾರು ಅಡ್ಡಗಟ್ಟಿ ಭರತ್ ಮತ್ತು ಫಾರೂಕ್ ದರೋಡೆ ಮಾಡಿದ್ರು. ಸಾಂಗ್ಲಿ ಮೂಲದ ರಾಹುಲ್ ಸುರ್ವೇ ಅವ್ರನ್ನ ದರೋಡೆ ಮಾಡ್ಲಾಗಿತ್ತು. ನವೆಂಬರ್ 8ರಂದು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಘಟನೆ ನಡೆದಿತ್ತು. ಮಂಗಳೂರಲ್ಲಿ 15 ಜನರ ಗ್ಯಾಂಗ್‌ನಲ್ಲಿ ಇಬ್ಬರನ್ನ ಬಂಧಿಸಲಾಗಿತ್ತು. ನಿನ್ನೆ ಸ್ಥಳ ಮಹಜರು ವೇಳೆ ಪೊಲೀಸ್ರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಆರೋಪಿಗಳ ಕಾಲಿಗೆ ಸಿಸಿಬಿ ಪೊಲೀಸ್ರು ಫೈರಿಂಗ್ ಮಾಡಿದ್ದಾರೆ.

ಇದನ್ನೂ ಓದಿ:ರಷ್ಯಾ ಅಧ್ಯಕ್ಷನ ಆಸ್ತಿ ಎಷ್ಟು? ಅಂತಾ ಕೇಳಿದ್ರೆ ಶಾಕ್​​ ಆಗ್ತೀರಾ; ಪುಟಿನ್​​​ ಎಷ್ಟು ಕೋಟಿ ಒಡೆಯ?

ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ. ಗಾಯಾಳುಗಳಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡ್ಲಾಗಿತ್ತು, ಕಿಮ್ಸ್ ಆಸ್ಪತ್ರೆಗೆ ಪೊಲೀಸ್ ಕಮಿಷನರ್ ಭೇಟಿ ಕೊಟ್ಟು ಪೊಲೀಸ್ ಸಿಬ್ಬಂದಿ ಆರೋಗ್ಯ ವಿಚಾರಿಸಿದ್ರು. ತಪ್ಪು ಮಾಡಿ ಸಿಕ್ಕಿಹಾಕಿಕೊಂಡ್ರು ಸುಮ್ನಿರದೇ ಪೊಲೀಸ್ರ ಮೇಲೇರಿ ಹೋದವ್ರು ಇದೀಗ ಆಸ್ಪತ್ರೆ ಸೇರಿ ನರಳುವಂತಾಗಿದೆ. ಮುಂದೆ ಕಂಬಿ ಎಣಿಸೋದು ಪಕ್ಕಾ ಆಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment